ಧಾರಾವಾಹಿ ಸಂಗಾತಿ ಅರ್ಜುನ ಉವಾಚ ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಹಯ ಹೆಣ್ಣಾಯಿತು; ಹುಲಿಯಾಯಿತು ಧರ್ಮರಾಯನಿದ್ದ ಪುರಕ್ಕೆ ಬಂದ ದಾನವಾಂತಕ ಚಂಪಕಾನಗರಿಯ ಸಮಸ್ತ ವಿಚಾರಗಳನ್ನು ಅವನಿಗೆ ಹೇಳಿದ. ಹಂಸಧ್ವಜ ಕೊಟ್ಟಿದ್ದ ಸಕಲ ಸಂಪದಗಳನ್ನು ಯುದಿಷ್ಠಿರನಿಗಿತ್ತ.ನಮ್ಮ ಯಾಗದ ಕುದುರೆಯದು ಈಗ ಉತ್ತರ ದಿಕ್ಕಿನಲ್ಲಿದ್ದ ಪಥವನ್ನು ಹಿಡಿದಿತ್ತು. ಆಗ ಗ್ರೀಷ್ಮ ಕಾಲ. ಬೇಸಿಗೆಯ ಬಿಸಿ ಸಂಪೂರ್ಣ ಧರೆಯನ್ನು ಇನ್ನಿಲ್ಲದಂತೆ ಸುಡತೊಡಗಿತ್ತು. ನಮಗೆ ಕಾಣುತ್ತಿದ್ದುದು ಸೂರ್ಯನುರಿಗೆ ಕಂಗೆಟ್ಟುಹೋಗಿದ್ದ ಕನಕಾಚಲ. ತನ್ನ ಕಣ್ಣಿಗೆ ಬೀಳದ ಹಾಗೆ ಈ ಪರ್ವತ ಮರೆಯಾಗಿನಿಂತಿದೆ ಎಂದು ಕ್ರೋಧಗೊಂಡ ಸೂರ್ಯ ಅದನ್ನು ಉರಿಸಿಹಾಕುವ ಸನ್ನಾಹದಲ್ಲಿದ್ದಾನೋ ಎನ್ನುವಂತೆ ಬಿರುಬಿಸಿಲು ಕನಕಾಚಲ ಪರ್ವತವನ್ನು ಬಿಸಿಬಿಸಿಯಾಗಿಸಿತ್ತು.ಸೂರ್ಯನ ಬಿಸಿ ತಾಪವನ್ನು ಹೊತ್ತು ಮೆರೆಯುತಿರುವ ತೇರು, ನೀರಿದೆಯೇನೋ ಎಂಬ ಭ್ರಮೆ ಹುಟ್ಟಿಸುವ ಬಿಸಿಲು ಕುದುರೆ, ಗಾಳಿಯನ್ನು ಹೊತ್ತುತರುತ್ತಿರುವ ಸೈನಿಕರು, ಬಿಸಿಲೆಂಬ ಆನೆ ಇವೆಲ್ಲವೂ ಗ್ರೀಷ್ಮರಾಜನ ಚತುರಂಗ ಬಲದಂತೆ ತೋರುತ್ತಿದ್ದವು.ಧರ್ಮಶಾಲೆಯಲ್ಲಿದ್ದ ಸುಂದರ ನೀರೆಯರು ದಾರಿಹೋಕರ ಕರಗಳಿಗೆ ನೀರನ್ನೆರೆಯುತ್ತಾ ಅವರ ದಾಹವನ್ನು ತಣಿಸುತ್ತಿದ್ದರು. ಬಯಲಿನಲ್ಲಿದ್ದ ತೊರೆಗಳು ಬಾಯಾರಿಕೆಯಿಂದ ಬಳಲಿದ್ದ ಮೃಗಗಳ ತೃಷೆಯನ್ನು ಮಣಿಸುತ್ತಿದ್ದವು. ಉಪ್ಪರಿಗೆಗಳ ಮೇಲೆ ಚೆಲುವೆಯರ ಜೊತೆ ದೇಹಸುಖವನ್ನು ಪಡೆಯುತ್ತಿದ್ದ ಕೆಲವರು ಸುಂದರಿಯರ ತುಟಿಗಳಿಂದ ಜಿನುಗುತ್ತಿದ್ದ ಅಮೃತದ ರುಚಿ ನೋಡುತ್ತಿದ್ದರು.ಪ್ರದ್ಯುಮ್ನ, ವೃಷಕೇತು, ಯೌವನಾಶ್ವ, ನೀಲಧ್ವಜ, ಅನುಸಾಲ್ವ ಈ ಐದು ಮಂದಿ ನನಗೆ ಸಹವರ್ತಿಗಳಾಗಿದ್ದರು. ನನ್ನ ಜೊತೆಜೊತೆಗೇ ಹೆಜ್ಜೆ ಹಾಕುತ್ತಿದ್ದರು. ಈಗ ಹಂಸಧ್ವಜನೂ ನಮ್ಮೊಡನೆ ಸೇರಿಕೊಂಡಿದ್ದ.ಹಾಗೆಯೇ ಮುಂದೆ ಮುಂದೆ ಹೋದ ಹಯವೀಗ ಪಾರಿಪ್ಲವ ಎಂಬ ಹೆಸರಿನ ದೇಶವನ್ನು ತಲುಪಿತ್ತು. ಅಲ್ಲಿಯ ನೆಲದ ಮೇಲೆ ಕುದುರೆ ಕಾಲಿಟ್ಟ ಕ್ಷಣದಲ್ಲಿಯೇ ನಾವೆಲ್ಲರೂ ವಿಸ್ಮಯಕ್ಕೀಡಾಗುವ ಪ್ರಸಂಗವದು ಎದುರಾಯಿತು. ಯಾಗಕ್ಕೆ ನಾವು ಆರಿಸಿದ ವಿಶೇಷಕುದುರೆಯದು ಗಂಡಾಗಿತ್ತು. ಪಾರಿಪ್ಲವದ ನೆಲದ ಸ್ಪರ್ಶವಾದೊಡನೆಯೇ ಹೆಣ್ಣುಗುದುರೆಯಾಗಿ ಬದಲಾಯಿತು. ಅಲ್ಲೇ ಇದ್ದ ಸರೋವರದ ನೀರನ್ನು ಕುಡಿದ ತಕ್ಷಣವೇ ಹುಲಿಯಾಯಿತು. ಇದಾವ ಬಗೆಯ ಮಾಯೆಯಿದು ಎಂದು ನಾವೆಲ್ಲರೂ ಸೋಜಿಗಪಟ್ಟೆವು. ನನ್ನಲ್ಲಿ ಆ ಕ್ಷಣಕ್ಕೆ ಮೂಡಿದ್ದು ಕೃಷ್ಣ ಸ್ಮರಣೆ. ನೆನೆದೆ ಶ್ರೀಹರಿಯನ್ನು. ಮೊದಲಿನಂತೆಯೇ ಗಂಡು ಕುದುರೆಯಾಯಿತು ನಮ್ಮ ಯಜ್ಞಾಶ್ವ. ಹೀಗೆ ನಮ್ಮ ಅಶ್ವವದು ತಕ್ಷಣದಲ್ಲಿಯೇ ಎರಡು ರೂಪಗಳನ್ನು ಹೊಂದುವುದಕ್ಕೆ ಕಾರಣವಿತ್ತು.ಹಿಂದೊಮ್ಮೆ ಪರ್ವತರಾಜನ ಮಗಳಾದ ಪಾರ್ವತಿದೇವಿ ಶಿವನನ್ನು ಪೂರ್ಣಮನಸ್ಸಿನಿಂದ ಅರ್ಚಿಸುವೆನೆಂಬ ನಿರ್ಧಾರ ಮಾಡಿದಳು. ತನ್ನ ತಪಸ್ಸಿಗೆ ಸರಿಹೊಂದುವ ತಾಣವೆಲ್ಲಿದೆ ಎಂದು ಹುಡುಕಾಟ ಆರಂಭಿಸಿದಳು. ಪ್ರಶಾಂತಮಯವಾದ, ಚಿತ್ತಾಕರ್ಷಕವಾದ ಸ್ಥಳವನ್ನು ಅವಳ ಮನಸ್ಸು ಬಯಸುತ್ತಿತ್ತು.ಹೀಗೆ ಅರಸಿ ಬರುತ್ತಿದ್ದ ಶಿವನರಸಿಗೆ ಕಾಣಿಸಿದ್ದು ನಯನಮನೋಹರವೆನಿಸುವ ಒಂದು ಸರೋವರ. ಹಂಸಗಳು ಜಲದಲ್ಲಿ ಈಜುತ್ತಿದ್ದವು. ದುಂಬಿಗಳು ಹಾರಾಡುತ್ತಿದ್ದವು. ಕಮಲಗಳು ಅರಳಿನಿಂತಿದ್ದವು. ಕೋಗಿಲೆಗಳ ಮಧುರ ಧ್ವನಿಯದು ಕೇಳಿಬರುತ್ತಿತ್ತು. ಹೊಳೆವ ಶುಭ್ರ ಜಲವದು ರತ್ನದಿಂದ ನಿರ್ಮಿಸಲಾದ ಹಾಸಿಗೆಯಂತೆ ತೋರುತ್ತಿತ್ತು. ಸುಂದರವಾದ ಮೀನುಗಳಿದ್ದವು. ಸರೋವರದ ಸವಿನೀರನ್ನು ಸವಿಯುವ ಚಕ್ರವಾಕ ಪಕ್ಷಿಗಳಿದ್ದವು. ಮೊಸಳೆಗಳಿದ್ದವು. ಸುಗಂಧಭರಿತವಾದ ಗಾಳಿ ಅಲ್ಲೆಲ್ಲಾ ಬೀಸುತ್ತಿತ್ತು. ತಂಪುತAಪಾದ ವಾತಾವರಣವಿತ್ತು. ಹೀಗೆ ಕಣ್ಣಿಗೆ ಶೋಭಾಯಮಾನವಾಗಿ ಕಾಣುತ್ತಿತ್ತು ಆ ಸರೋವರ.ಕಮಲದೆಲೆಗಳ ಹಸಿರು ಕಾಂತಿ. ಕೆಂದಾವರೆಗಳ ಕೆಂಪು ಕಾಂತಿ. ಬಿಳಿದಾವರೆಗಳ ಬಿಳುಪಿನ ಕಾಂತಿ. ಹೊಂದಾವರೆಗಳ ಹಳದಿ ಕಾಂತಿ. ಹೀಗೆ ಹಲವು ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತಿದ್ದ ಆ ಸರೋವರ ಕಾಮನಬಿಲ್ಲಿನ ನೆನಪನ್ನು ತರುವಂತಿತ್ತು.ಶಿವಧ್ಯಾನಕ್ಕಿದು ಸೂಕ್ತ ಸ್ಥಳ ಎಂದು ತೋರಿತು ಗಿರಿಜೆಗೆ. ಸರೋವರವಿದ್ದ ತಾಣವನ್ನು ತನ್ನ ತಪಸ್ಸಿನ ಸ್ಥಾನವಾಗಿ ಆಯ್ಕೆ ಮಾಡಿದಳು. ಹೀಗೆ ಅಂದು ಪಾರ್ವತಿ ಆರಿಸಿದ ತಾಣವದು ಈಗ ನಮ್ಮ ಯಾಗದ ಕುದುರೆ ಪ್ರವೇಶಿಸಿದ್ದ ಪಾರಿಪ್ಲವ ದೇಶ.ಆಶ್ರಮವೊಂದನ್ನು ನಿರ್ಮಿಸಿಕೊಂಡಳು ಪಾರ್ವತಿ. ಈಶ್ವರನ ಅನುಮೋದನೆಯೂ ದೊರಕಿತು. “ನಿನ್ನ ತಪಸ್ಸಿಗೆ ಯಾವ ತೊಂದರೆಯೂ ಎದುರಾಗದು ಇಲ್ಲಿ” ಎಂದು ಗಿರಿಜೆಯನ್ನು ಆಶೀರ್ವದಿಸಿದ ಗೌರೀರಮಣ. ಆ ತಾಣವೇ ಅನುದಿನದ ತಾಣವಾಯಿತು ಅವಳಿಗೆ. ತಪಸ್ಸಿನಲ್ಲಿ ಸುಖ ಕಂಡುಕೊಳ್ಳುವ ಯೋಗಿನಿಯಂತಾದಳು ಶಿವನ ಮಡದಿ. ಇದು ನಿಜಕ್ಕೂ ವಿಸ್ಮಯ. ಶಿವನ ಅರ್ಧ ಶರೀರ ಎನಿಸಿಕೊಂಡಿದ್ದ ಪಾರ್ವತಿ ಅವನಿದ್ದ ತಾಣವನ್ನು ತೊರೆದು ಇಲ್ಲಿಗೆ ಬಂದು ಮತ್ತೆ ಅವನನ್ನೇ ಧ್ಯಾನಿಸುವುದೆಂದರೆ, ಪೂಜಿಸುವುದೆಂದರೆ ಅದು ಭಕ್ತಿ ಪ್ರಕಟಣೆಯ ಇನ್ನೊಂದು ರೀತಿ. ದೇಹಗಳ ಅಂತರ ಅಧಿಕವಾದಾಗ ಪ್ರೀತಿ ಹೆಚ್ಚುವಂತೆ ಭಕ್ತಿಯೂ ಹೆಚ್ಚುವುದು ಎಂಬ ತತ್ವವನ್ನು ಸ್ವಯಂ ಮನಗಾಣಲು ಬಯಸಿದ್ದಳೋ ಏನೋ ಆ ಪಾರ್ವತಿದೇವಿ!ಸರೋವರದ ನೀರಿನಲ್ಲಿ ಜಳಕ. ಬಳಿಕ ಶಿವಜಪದ ಪುಳಕ. ಇದು ಗಿರಿಜೆಯ ಅನುದಿನದ ಬದುಕಾಗಿಹೋಯಿತು.ಅವಳ ತಪಜಪಗಳು ಆರಂಭಗೊAಡ ನಂತರ ಪೂರ್ಣ ವಾತಾವರಣವದು ಸುಂದರತೆಯನ್ನು ಪಡೆಯಿತು. ಬಿಸಿಗಾಳಿ ಬೀಸಲಿಲ್ಲ. ಗಿಡಮರಗಳು ಒಣಗಲಿಲ್ಲ. ನೀರ ಮೂಲಗಳು ಅಳಿಯಲಿಲ್ಲ. ಸದಾಕಾಲ ತಂಪುತಂಪಾದ ವಾತಾವರಣ. ಇಂಪುಇಂಪಾದ ಧ್ವನಿಯ ಅನುರಣನ. ಪಾರ್ವತಿಯಿದ್ದ ಕಾರಣದಿಂದಾಗಿ ಅಲ್ಲಿಯ ಪ್ರಾಣಿ ಪಕ್ಷಿಗಳು ತಮ್ಮ ವೈರತ್ವವನ್ನು ಮರೆತವು. ಶಿವಪೂಜೆಯನ್ನು ಅತೀವ ಭಕ್ತಿಭಾವದಿಂದ ನಡೆಸುತ್ತಿದ್ದಳು ಪಾರ್ವತಿ. ಜಗನ್ಮಾತೆಯಾದ ಪಾರ್ವತಿಗೇಕೆ ಶಿವನ ತಪಸ್ಸಿನ ಕಡು ಒಲವು! ಎಂದು ದೇವವೃಂದವೇ ಅಚ್ಚರಿಪಡುವ ರೀತಿಯಲ್ಲಿ ತ್ರಿನೇತ್ರನನ್ನು ಅರ್ಚಿಸುತ್ತಿದ್ದಳು ಭಕ್ತಿಭಾವನೇತ್ರೆ.ಅದೊಂದು ದಿನ ಎಂದಿನಂತೆ ಪಾರ್ವತಿದೇವಿ ಶಿವಧ್ಯಾನದಲ್ಲಿದ್ದಳು. ಆಗಲೇ ಅಲ್ಲಿ ಕಾಣಿಸಿದ್ದು ರಾಕ್ಷಸನೊಬ್ಬನ ದೈತ್ಯ ನೆರಳು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ”
ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” ಸೂರ್ಯ ಉದಯಿಸುತ್ತಾನೆಈಗ ಕೋಳಿ ಕೂಗುವದಿಲ್ಲ.ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿರೈಲು ಬಸ್ ಆಟೋದಲ್ಲಿ ಪಯಣಕಾರ್ಖಾನೆಗೆ ಜನರ ಜಂಗುಳಿ.ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್ಜನರು ಮುಖ ಕೆಳಗಿಟ್ಟು ಬದುಕುತ್ತಾರೆ.ನಗುವುದೇ ಕಡಿಮೆ .ದುಗುಡು ತಳಮಳ ಆತಂಕ .ದೇಶದಲ್ಲಿ ಬರ ಬಡತನ ‘ಸುದ್ಧಿ ಮಾಧ್ಯಮಗಳ ಅಬ್ಬರ .ದಿನಸಿ ಅಂಗಡಿಯ ಮುಂದೆ ಸಾಲು.ಗುಡಿ ಮಸೀದೆ ಚರ್ಚು ಭಿಕ್ಷುಕರು.ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ.ಕಳೆದುಕೊಂಡಿದ್ದೇವೆ ಜೀವ ಜಾಲವಕಾಣುತ್ತಿಲ್ಲ ಸಂತಸ ನೆಮ್ಮದಿ ದಿನಗಳು.ಹುಡುಕುತ್ತಿರುವೆ ನನ್ನ ನಾನುಹೊಲದ ಗದ್ದೆಯ ಮಧ್ಯೆಅಚ್ಚ ಹಸುರಿನ ಪೈರುಕೆರೆ ತುಂಬಿದ ನೀರು .ಪಕ್ಷಿ ಇಂಚರ ಧ್ವನಿಯ ಕೊರಳು .ಹುಡುಕುತ್ತಿರುವೆ ಹುಡುಕುತ್ತಲೇ ಇರುವೆ ಡಾ.ಶಶಿಕಾಂತ.ಪಟ್ಟಣ ಪುಣೆ
ಡಾ.ಶಶಿಕಾಂತ.ಪಟ್ಟಣ ಪುಣೆ “ಹುಡುಕುತ್ತಿರುವೆ” Read Post »
ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು”
ಕಾವ್ಯ ಸಂಗಾತಿ ಸವಿತಾ ದೇಶಮುಖ “ಕಾಡಿನ ಕಣ್ಣೀರು” ಕಾನನಳ ಕಂಗಾಲ ಕಂಗಳ ಕಣ್ಣೀರುಕಾಣದಾದರೆ ಇಹದ ಮನುಜ ಕುಲದವರುಆಧುನಿಕ ಭರ ಭರಾಟೆಯಲಿ ನಿಂದವರು!!೧!! ಕಾಡಮ್ಮಳ ಒಡಲು ಪಶು ಪಕ್ಷಿ ಪ್ರಾಣಿವನ್ಯಜೀವಿ ಮರ ಗಿಡ ಗುಡ್ಡ-ಹಳ್ಳ ಕೊಳ್ಳಅವಳ ಬೆಚ್ಚನೆಯ ಗರ್ಭವೇ ಅವರ ತಾಣ!!೨!! ಸಕಲ ಜೀವ ರಾಶಿಗಳಿಗೆ ಉಸಿರಾಗಿಅಮೃತ ನಿಯುತ ನಿಂದಿಹಳು ಹಸಿರಾಗಿಸಕಲ ಪ್ರಾಣಿ ಪ್ರಾಣ ಸಂಜೀವಿನಿಯಾಗಿ !!೩!! ಹಚ್ಚ ಹಸಿರು ಬೆಚ್ಚನೆ ಸೌಖ್ಯದ ಹೊದಿಕೆಹೊಚ್ಚಿ ,ಕೊಡುತಿಹಳು ಪೋಷಣೆ ಪುಷ್ಟಿಕೆಸರ್ವರನು ಬೆಳೆಸಿ ತನ್ನೊಳಗೆ ಹುದುಗಿಸಿ !!೪!! ಸಾವಿರಾರು ಗಿರಿ-ಪರ್ವತಗಳ ತೊಟ್ಟಜಲ-ಹಣ್ಣು ಹಂಪಲ ಆಸರೆ ಕೊಟ್ಟುತಾಯಿಯಾಗಿ ನಿಂದವಳ ಕಟ್ಟಿಹರು ಚಟ್ಟ!!೫!! ಇಂದು ಬಾಡಿ ಒಣಗಿ ನಸಿಸುತಿಹಳುಲೆಕ್ಕವಿರದ ಪಶುಗಳ ಮರಗಿಡಗಳುಉರುಳಿತಿವೆ ನಿರ್ದಾಕ್ಷಣೆ ಮತಿಗೇಡಿತನದಿ!!೬!! ಎನಿತು ಪೇಳುಲಿ..ವೇದನೆಲಿ ಮರಗುತಿವೆಕರುಣೆ ತೋರಿ ನಿಲ್ಲಿಸಿ ನಾಶ ಕನವರಿಸುತ್ತಿವೆನದಿ ಹಳ್ಳ ಕೊಳ್ಳ ಬತ್ತುತಿವೆ ಬರಡಾಗುತಿವೆ!!೭!! ಕಾಡಿನ ಕಂಗಳಂಚಿನಲ್ಲಿ ಕಣ್ಣಿರ ಹನಿಹನಿಸುರಿಯುತ್ತಿವೆ ಬರಗಾಲದ ನೊರೆಯಾಗಿಮನುಕುಲದ ವಿನಾಶದ ಕರೆ ಓಲೆಯಾಗಿ !!೮!! ಇನ್ನಾದರೂ ಎಚ್ಚೆತ್ತಲೇಬೇಕು- ಸಂರಕ್ಷಿಸು,ಮನವಿಟ್ಟು ಒನವ ಸೀರಿಯ ಉಳಿಸಿಬೆಳಿಸುಸ್ವಾರ್ಥ ಬಿಟ್ಟು- ಮುಂದಿನ ಪೀಳಿಗೆ ನೆನಸು!!೯!! ತಾಂತ್ರಿಕತೆ ಮುಂದುವರೆವ ವ್ಯವಹಾರದಿಅನಿವಾರ್ಯತೆ ಒಡ್ಡಿದರೂ,ಮರ ಕೆಡವಿದರೆವಿನಾಶ ನಿಶ್ಚಿತತೆ ಪರಿಜ್ಞಾನದ ಅರಿವು..!!೧೦!! ಇಲ್ಲವೇ ನಮ್ಮಲಿ..!! ಬನ್ನಿ ಕೈಗೂಡಿಸೋಣಒಂದು ಮರ ಕೆಡವಿದರೆ ಎರಡು ಮರವ ನೆಟ್ಟಿ…, ನಮ್ಮ ಕೃತಜ್ಞತೆ ಸಲ್ಲಿಸೋಣ!!೧೧!! ಅವಳ ಉಸಿರಿಗೆ ನಾವು ಉಸಿರಾಗದ ಹೊರತು ನಮ್ಮ ಉಸಿರು ಉಳಿಯದು !!೧೨!! ತಿಳಿದು ಎಚ್ಚರದಿ ಮುನ್ನಡೆದರೆ ಮಾತ್ರ ಉಳಿವು ನಿಮ್ಮದು..ನಮ್ಮ ಪ್ರತಿಯೊಬ್ಬರದು ಸವಿತಾ ದೇಶಮುಖ
ಸವಿತಾ ದೇಶಮುಖ ಅವರ ಕವಿತೆ “ಕಾಡಿನ ಕಣ್ಣೀರು” Read Post »
ಎನ್.ಜಯಚಂದ್ರನ್ ಅವರ ಕವಿತೆ “ಅಂತರ”
ಕಾವ್ಯ ಸಂಗಾತಿ -ಎನ್.ಜಯಚಂದ್ರನ್ “ಅಂತರ” ಒಂದೇ ಊರು, ಒಂದೇ ಗಾಳಿ,ಆದರೂ ಮನಸುಗಳು ದೂರದ ದ್ವೀಪಗಳು. ಮುಖದಲ್ಲಿ ನಗುಗಳ ಹೂವಿದ್ದರೂ,ಒಳಗೆ ನೋವಿನ ಮಳೆ ಸುರಿಯುತ್ತದೆ. ಕೈಗಳು ಕೈ ಹಿಡಿಯುವ ಕಾಲದಲ್ಲಿ,ಹೃದಯಗಳು ಏಕೆ ದೂರವಾಗಿವೆ? ಮಾತುಗಳು ಸಾವಿರ ಹರಿದರೂ,ಅರ್ಥಗಳು ಮಧ್ಯೆ ಕಣ್ಮರೆಯಾಗಿವೆ. ಗೋಡೆಗಳು ಮನೆಗಳಲ್ಲಿ ಮಾತ್ರವಲ್ಲ,ಮನಸ್ಸಿನೊಳಗೂ ಎತ್ತರವಾಗಿವೆ. ಸ್ವಾರ್ಥದ ನೆರಳು ಬೆಳೆದಂತೆ,ಸಂಬಂಧಗಳ ಬೆಳಕು ಮಂಕಾಗಿದೆ. ಒಬ್ಬರ ನೋವು ಮತ್ತೊಬ್ಬರಿಗೆ,ಕೇವಲ ಸುದ್ದಿಯ ಸಾಲಾಗುತ್ತಿದೆ. ಪ್ರೀತಿಯ ನದಿ ಒಣಗಿದ ಜಾಗದಲ್ಲಿ,ಅಹಂಕಾರದ ಮರಳು ಬೀಸುತ್ತಿದೆ. ಆದರೂ ಎಲ್ಲೋ ಒಂದು ಮೂಲೆದಲ್ಲಿ,ಮಾನವೀಯತೆ ಇನ್ನೂ ಉಸಿರಾಡುತ್ತಿದೆ. ಮನಸು ಮನಸಿಗೆ ಸೇರುವ ದಿನದಲ್ಲಿ,ಈ ಭೀಕರ ಅಂತರ ಕರಗಿಹೋಗುತ್ತದೆ. ಎನ್.ಜಯಚಂದ್ರನ್
ಎನ್.ಜಯಚಂದ್ರನ್ ಅವರ ಕವಿತೆ “ಅಂತರ” Read Post »
ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ”
ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಕಂಗಳ ಕಾಟ ಗೆಳತಿ……ಕಥೆಯ ನೂರುಬಯಕೆಗಳ ಬೇಡಲು ಸಾವಿರಅದೇನೊ ಕಾಡಿತು ಸವಿಯ ಸಾರಹೊಳೆವ ನಿನ್ನಯ ಕಂಗಳ ಕಾಟದಲಿಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,! ಗೆಳತಿ…ವ್ಯಥೆಯು ನೂರುಕಥೆಯ ಕವನ ಬರೆಯಲುಪ್ರಣಯದಾಟ ಪ್ರೀತಿ ಬೆಸೆದುಕಪ್ಪು ಪರದೆಯೊಳಗೆ ಮಿಟುಕಿದಕಂಗಳ ನೋಟವು ನನ್ನ ಸೆಳೆಯಿತು.!! ಹಮೀದ್ ಹಸನ್ ಮಾಡೂರು.
ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ” Read Post »
ಅಶ್ಫಾಕ್ ಪೀರಜಾದೆ ಅವರ ಗಜಲ್
ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ ಗಜಲ್ ಕಲರವರದ ನಂತರ ಕಲಹ ಮತ್ತೆ ಕಾಡಿದೆಎದೆಯ ಒಳಗಿನ ಗಾಯ ಮತ್ತೆ ಚಿಗುರಿದೆ ನೋವ ತೆರೆತೆರೆಯಾಗಿ ಸಾಗರ ಸೇರುತಿರೆನೀರಿನಲಿ ಮೀನ ಹೆಜ್ಜೆ ಮತ್ತೆ ಮೂಡಿದೆ ತಾವರೆಗಳು ಅಪರಾತ್ರಿ ಬಿಕ್ಕಳಿಸುತಿವೆತಂಗಾಳಿ ನಿಂತು ಬೆಂಕಿ ಮತ್ತೆ ಸುರಿದಿದೆ ಬರೆದುಕೊಂಡ ಬಂದ ಹಣೆಬರ ಇದುತಪ್ಪಿಸಬೇಕೆಂದ್ರೂ ತಪ್ಪದೆ ಮತ್ತೆ ಬರುತಿದೆ ದೂರದಿ ಶಾಂತವಾಗಿ ಕಾಣುವ ಸಮುದ್ರಕುದಿಯುವ ಲಾವಾರಸ ಮತ್ತೆ ತುಂಬಿದೆ ಕಲ್ಲಿಗೆ ಹೃದಯವಲ್ಲ ಕಣ್ಣು ಬಂದರೆ ಸಾಕುಅಪೀಯ ಪಾಡು ಹಾಡಾಗಿ ಮತ್ತೆ ಬಂದಿದೆ ಅಶ್ಫಾಕ್ ಪೀರಜಾದೆ.
ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »
ಧಾರಾವಾಹಿ ಸಂಗಾತಿ-119 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಒಳತೋಟಿ ಹೇಗೋ ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಮಹಾನುಭಾವರಿಗೆ ವಂದಿಸಿ ಕ್ಷಮೆ ಯಾಚಿಸಿದಳು. ನಂತರ ಹೇಗೋ ಯಾಂತ್ರಿಕವಾಗಿ ರಸ್ತೆಯನ್ನು ದಾಟಿ ಅಲ್ಲಿಂದ ನೇರವಾಗಿ ಅನಾಥಾಶ್ರಮಕ್ಕೆ ಬಂದಳು. ಅನಾಥಾಶ್ರಮಕ್ಕೆ ಬಂದಾಗ ಮಕ್ಕಳೆಲ್ಲರೂ ಅದಾಗಲೇ ಶಾಲೆಯಿಂದ ಬಂದಿದ್ದರು. ಅವಳ ಜೊತೆಗೆ ಸಹಾಯಕ್ಕಾಗಿ ಹೊಸದಾಗಿ ಬಂದ ಅವಳದೇ ವಯಸ್ಸಿನ ಹುಡುಗಿಯು ಇವಳನ್ನು ಕಂಡೊಡನೆ ಹತ್ತಿರ ಬಂದು…. ಏನಾಯ್ತು?…. ನಿನ್ನ ಮುಖ ಪೂರ್ತಿ ಕಳೆಗುಂದಿದೆ…. ಮಧ್ಯಾಹ್ನದ ಊಟ ಮಾಡಿಲ್ಲವೇ? ಎಂದು ಕೇಳಿದಳು. ಇಲ್ಲವೆಂಬಂತೆ ತಲೆ ಆಡಿಸಿ ತನ್ನ ರೂಮಿನೊಳಗೆ ಹೋದಳು. ಆ ಹುಡುಗಿ ಆಕೆಯನ್ನು ಹಿಂಬಾಲಿಸಿ ಬಂದಳು. ಅವಳ ಹೆಗಲ ಮೇಲೆ ಕೈಯಿಟ್ಟು…. ಏನಾಯ್ತು ಹೇಳು…. ಬಂದಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ….. ಇಷ್ಟೊಂದು ಹತಾಶಳಾಗಿ ನಿನ್ನನ್ನು ಕಂಡಿದ್ದೇ ಇಲ್ಲ…. ಏನಾಯ್ತು…. ಎಂದು ಕೇಳಲು, ಅಲ್ಲಿಯವರೆಗೂ ಅವಳು ತಡೆಹಿಡಿದಿದ್ದ ಮನಸ್ಸಿನ ಭಾರ ಒಮ್ಮೆಲೆ ಹೊರಗೆ ಬರುತ್ತಿರುವಂತೆ ಅವಳಿಗನಿಸಿತು. ಇವಳು ಆ ಹುಡುಗಿಯ ಹೆಗಲ ಮೇಲೆ ತಲೆ ಇಟ್ಟಳು. ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಆಚೆ ಬರಲಿಲ್ಲ. ಅಳಬೇಕೆಂದು ಪ್ರಯತ್ನ ಪಟ್ಟರೂ ಅಳು ಗಂಟಲಲ್ಲಿ ಉಳಿದು ಹೋಯಿತು. ಅವಳ ಆ ಸ್ಥಿತಿಯನ್ನು ಗಮನಿಸಿದಾಗ ಪರಿಸ್ಥಿತಿಯು ಗಂಭೀರವಾಗಿದೆ ಎಂಬುದು ಅವಳ ಜೊತೆಗಿದ್ದ ಹುಡುಗಿಗೆ ಅರ್ಥವಾಯಿತು. ಒಂದು ಲೋಟ ನೀರು ತರುವಂತೆ ಮಕ್ಕಳಿಗೆ ಹೇಳಿ ಆ ಹುಡುಗಿಯು ಇವಳನ್ನು ಅಲ್ಲಿದ್ದ ಬೆಂಚಿನ ಮೇಲೆ ಕುಳ್ಳಿರಿಸಿದಳು. “….ಏನಾಯ್ತು ಹೇಳು”…. ಎಂದಾಗ, ವೈದ್ಯರು ಹೇಳಿದ ಅಷ್ಟೂ ವಿಷಯಗಳನ್ನು ಆ ಹುಡುಗಿಗೆ ತಿಳಿಸಿದಳು. ಆ ಹುಡುಗಿಯು ಕೊಡಗಿನ ನಿವಾಸಿಯಾಗಿದ್ದಳು. ಹಾಸನದಲ್ಲಿ ದಾದಿಯರ ತರಬೇತಿಗೆಂದು ಬಂದವಳಾಗಿದ್ದಳು. ಆ ವರ್ಷದ ಅಡ್ಮಿಶನ್ ಅವಧಿ ಮುಗಿದಿದ್ದ ಕಾರಣ ಸ್ವಲ್ಪ ದಿನ ಅನಾಥಾಶ್ರಮದಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮುಂದಿನ ವರ್ಷದ ನರ್ಸಿಂಗ್ ತರಬೇತಿಗೆ ಸೇರಲು ತೀರ್ಮಾನಿಸಿದ್ದಳು. ಈ ಹುಡುಗಿಯು ಬಂದಿದ್ದು ಸುಮತಿಯ ಮಗಳಿಗೆ ಬಹಳ ಸಹಾಯಕವಾಗಿತ್ತು. ಅಡುಗೆಯ ಕೆಲಸವನ್ನು ಚೆನ್ನಾಗಿ ಬಲ್ಲವಳಾಗಿದ್ದ ಅವಳು ರುಚಿಕರವಾದ ಅಡುಗೆಯನ್ನು ಮಾಡಿ ಸುಮತಿಯ ಮಗಳಿಗೂ ಅನಾಥಾಶ್ರಮದ ಮಕ್ಕಳಿಗೂ ಉಣ ಬಡಿಸುತ್ತಿದ್ದಳು. ಬಹಳ ಬೇಗ ಇಬ್ಬರೂ ಸ್ನೇಹಿತೆಯರಾಗಿ ಬಿಟ್ಟಿದ್ದರು. ಅಲ್ಲದೆ ಅನಾಥಾಶ್ರಮದ ಮೇಲೆ ಇರುವ ಕಟ್ಟಡದ ವನಿತಾ ಹಾಸ್ಟಲ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯರು ಕೂಡಾ ಸುಮತಿಯ ಮಗಳಿಗೆ ಸ್ನೇಹಿತೆಯರಾಗಿದ್ದರು. ಕೆಲವೊಮ್ಮೆ ಅಪರೂಪಕ್ಕೆ ಹಾಸ್ಟೆಲ್ ಗೆ ಹೋಗಿ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ಸುಮತಿಯ ಮಗಳು ಮಧುರವಾಗಿ ಹಾಡುಗಳನ್ನು ಹಾಡುತ್ತಿದ್ದ ಕಾರಣ ಆ ಯುವತಿಯರೆಲ್ಲರಿಗೂ ಬಹಳ ಇಷ್ಟವಾಗಿದ್ದಳು. ಅವಳ ತಾಯಿಯ ಆರೋಗ್ಯ ಸರಿ ಇಲ್ಲದಿರುವುದು ಆ ಯುವತಿಯರಿಗೂ ತಿಳಿದಿತ್ತು. ಹಾಗಾಗಿ ಸುಮತಿಯ ಮಗಳನ್ನು ಕಂಡು ಮಾತನಾಡಿಸಿಕೊಂಡು ಹೋಗಲು ಆ ಯುವತಿಯರು ಅನಾಥಾಶ್ರಮದ ಒಳಗೆ ಬಂದರು. ಸುಮತಿಯ ಮಗಳ ಸ್ಥಿತಿಯನ್ನು ಕಂಡು ಹಾಗೂ ಅವಳ ಮಾತುಗಳನ್ನು ಆಲಿಸಿ, ಅವಳ ತಾಯಿಗೆ ಗಂಭೀರವಾದ ಸಮಸ್ಯೆ ಇರುವುದನ್ನು ಮನಗಂಡರು. ಸಾಧ್ಯವಾದಷ್ಟು ಸಾಂತ್ವನ ಹೇಳಿ, ಮೇಲಿನ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೆ ಹಣ್ಣಿನ ಪಾನಕವನ್ನು ಕೊಟ್ಟರು. ಎಲ್ಲರ ಸಾಂತ್ವನದ ಮಾತುಗಳು ಮತ್ತು ಕಾಳಜಿ ಅವಳಿಗೊಂದಿಷ್ಟು ಸಮಾಧಾನವನ್ನು ಕೊಟ್ಟಿತು. ಅವಳ ಜೊತೆಗಿದ್ದ ಹುಡುಗಿಯಂತೂ ಅವಳ ಬಲಗೈಯಂತೆ ಅವಳಿಗೆ ಸಹಾಯ ಮಾಡುತ್ತಿದ್ದಳು. ಸುಮತಿಗೆ ರಾತ್ರಿ ಊಟಕ್ಕೆ ಬೇಕಾದ ಅಡುಗೆಯನ್ನು ಮಾಡಿ ಸ್ಟೀಲ್ ಡಬ್ಬಿಯಲ್ಲಿ ತುಂಬಿ, ತನ್ನ ಸ್ನೇಹಿತರಿಗೂ ಊಟ ಬಡಿಸಿ ಸ್ವಲ್ಪವಾದರೂ ತಿನ್ನುವಂತೆ ಬಲವಂತ ಮಾಡಿದರು. ಅವಳ ಕಾಳಜಿಯನ್ನು ನೋಡಿ ಊಟ ಸೇರದಿದ್ದರೂ ಒಂದೆರಡು ತುತ್ತು ತಿಂದು, ರಾತ್ರಿ ತಾಯಿಯ ಜೊತೆ ಆಸ್ಪತ್ರೆಯಲ್ಲಿ ಮಲಗಲು ಹೊರಟಳು. ತನಗೆ ಸಹಾಯಕಿ ಹಾಗೂ ಸ್ನೇಹಿತೆ ಅನಾಥಾಶ್ರಮದಲ್ಲಿ ಇರುವುದರಿಂದ ಅವಳಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರು ಅನುಮತಿಯನ್ನು ನೀಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದಳು. ಅನಾಥಾಶ್ರಮದಿಂದ ಹೊರಟವಳು ಬೇಗ ಬೇಗನೆ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದಳು. ಅಲ್ಲಿ ಬಂದಾಗ ತನ್ನ ದಾರಿಯನ್ನೇ ಕಾಯುತ್ತಿದ್ದ ಸುಮತಿಯನ್ನು ಕಂಡಳು. ಇನ್ನೂ ಹದಿನಾರರ ಹರೆಯದ ಮೂರನೇ ಮಗಳು ಒಬ್ಬಳೇ ಊರಲ್ಲಿರುವುದರಿಂದ ಸುಮತಿ ಚಿಂತಾಕ್ರಾಂತಳಾಗಿದ್ದಳು. ಮಂಗಳೊಂದಿಗೆ ತನ್ನ ಮನದ ದುಗುಡವನ್ನು ಹೇಳಿಕೊಂಡಳು. ಅಕ್ಕ ಪಕ್ಕದಲ್ಲಿ ಮನೆಗಳಿದ್ದರೂ ಹೆಣ್ಣು ಮಗಳು ಒಬ್ಬಳೇ ಅಲ್ಲಿರುವಳಲ್ಲ ಎನ್ನುವ ಚಿಂತೆ ಸುಮತಿಯ ಮನಸ್ಸನ್ನು ಕೊರೆಯುತ್ತಿತ್ತು. ತಾಯಿಯ ಚಿಂತೆಯನ್ನು ಅರಿತು ಮಗಳು…. ಅಮ್ಮಾ …..ಹಾಗೆಲ್ಲ ಚಿಂತಿಸಬೇಡ…. ಅವಳು ಧೈರ್ಯವಂತಳು….ಅವಳು ಅಲ್ಲಿದ್ದು ಶಾಲೆಗೆ ಹೋದರೆ ತಾನೇ ನಿನ್ನ ತಿಂಗಳಿನ ಸಂಬಳ ನಮಗೆ ಸಿಗುವುದು…. ಆ ಸಂಬಳ ಇರದಿದ್ದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ ಅಲ್ಲವೇ?…. ಎಂದು ಕೇಳಿದಳು. ಮಗಳು ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಸುಮತಿಗೆ ತಿಳಿದಿದೆ ಆದರೂ ಒಳ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಸುಮತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ತಾಯಿಗೆ ರಾತ್ರಿ ಊಟವನ್ನು ಕೊಟ್ಟು, ನರ್ಸ್ ಕೊಟ್ಟ ಗುಳಿಗೆಗಳನ್ನು ನುಂಗಿಸಿ, ಮಲಗಲು ಹೇಳಿ ಪ್ರೀತಿಯಿಂದ ತಲೆಯನ್ನು ಸವರಿ…. “ಅಮ್ಮಾ …..ನಾನು ಇಲ್ಲಿಯೇ ವಾರ್ಡಿನ ಹೊರಗೆ ಆಸ್ಪತ್ರೆಯ ಉದ್ಯಾನದ ಕಾರಂಜಿಯ ನಡುವೆ ಇರುವ ವಿದ್ಯುತ್ ದೀಪದ ಬೆಳಕಿನಲ್ಲಿ ನನ್ನ ಪಠ್ಯಪುಸ್ತಕಗಳನ್ನು ಓದುತ್ತಿರುತ್ತೇನೆ…. ಇನ್ನೇನು ವಾರ್ಷಿಕ ಪರೀಕ್ಷೆಯು ಹತ್ತಿರ ಬರುತ್ತಿದೆ…. ಎಂದಳು. ಸುಮತಿ ಮಗಳ ಮುಖವನ್ನು ಒಮ್ಮೆ ನೋಡಿದಳು. ನನ್ನ ಮಕ್ಕಳಿಗೆ ಈ ಚಿಕ್ಕ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿಗಳು? ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ಏಕೆ ಇಂತಹಾ ಒಳ್ಳೆಯ ಮಕ್ಕಳನ್ನು ಹುಟ್ಟಿಸಿದೆ ದೇವರೇ. ನನ್ನ ಮಕ್ಕಳು ಜೀವನದ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಸುಮತಿ ವ್ಯಥೆ ಪಟ್ಟಳು.
ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಒಮ್ಮೆಬರುವೆಯಾ?” ನನ್ನ ಪ್ರಾಣದ ಇನಿಯಎಲ್ಲಿರುವೆ ಬರುವೆಯಾಬಿಳಿ ಗೋಡೆಯ ನಡುವೆ ನಾನುನೆರಳಾಗಿ ಕರಗುತ್ತಿರುವೆ ಒಮ್ಮೆ ನನ್ನ ಕಣ್ಣೊಳಗೆಚಂದ್ರ ಬೆಳಕು ಹುಡುಕಿದವನು ನೀನುಇಂದು ಒಣಗಿದ ಹೂವಿನಂತೆನನ್ನನ್ನು ದಾರಿಯಂಚೆ ಬಿಟ್ಟೆ ಕೂದಲು ಉದುರಿದ ರಾತ್ರಿಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲಬೆಂಕಿಗೆ ಬಿದ್ದ ಕನಸೊಂದುನಿಧಾನವಾಗಿ ಬೂದಿಯಾಗುತ್ತಿತ್ತು ಔಷಧದ ವಾಸನೆಯ ನಡುವೆನನ್ನ ಉಸಿರು ಮುಳ್ಳಿನ ಹಾಸಿಗೆಸಾವಿಗಿಂತ ಹೆಚ್ಚು ಕಾಡಿದ್ದುನೀ ಮೌನವಾಗಿ ದೂರಾದ ಹೆಜ್ಜೆ ನನ್ನ ಎದೆಯೊಳಗೆ ಈಗರಕ್ತವಲ್ಲ ವಿರಹ ಹರಿಯುತ್ತಿದೆಕಣ್ಣೀರಲ್ಲ ಇದುಒಡೆದ ಹೃದಯ ಕರಗಿದ ಶಬ್ದ ಒಮ್ಮೆ ಅಪ್ಸರೆ ಎಂದ ತುಟಿಗಳುಇಂದು ನನ್ನ ಹೆಸರನ್ನೇ ಮರೆತಿವೆನಾನು ಒಣ ಮರದ ನೆರಳುನೀ ಬೇಸತ್ತ ಹಕ್ಕಿಯ ಹಾರಾಟ ಕಿಟಕಿಯಾಚೆ ಚಂದ್ರ ಸುಡುತ್ತಾನೆಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆನೀ ಬಾರದ ಪ್ರತಿರಾತ್ರಿನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ ನನ್ನ ಪ್ರಾಣದ ಇನಿಯಒಮ್ಮೆ ಬರುವೆಯಾಕೊನೆಯ ಉಸಿರ ತುದಿಯಲ್ಲಿನಿನ್ನ ಹೆಸರೇ ಇನ್ನೂ ತೂಗುತ್ತಿದೆ ಡಾ. ಹೆಚ್. ನಟರಾಜ್ ಆರ್ಯ.
ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?” Read Post »
“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.” ಗೊರೂರು ಅನಂತರಾಜು
ರಂಗ ಸಂಗಾತಿ ಗೊರೂರು ಅನಂತರಾಜು “ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.” ಮೊನ್ನೆ ಭಾನುವಾರ ಅರಕಲಗೂಡಿನಲ್ಲಿ ಶ್ರೀ ವೇಣುಗೋಪಾಲ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹಾರ್ಮೋನಿಯಂ ಮಾಸ್ಟರ್ ಜಿ..ಜಿ.. ಕೇಶವ ಗರಿಘಟ್ಟ ಇವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು. ನಾಟಕ ವೀಕ್ಷಿಸಲು ಹೋಗಿದ್ದ ನನಗೆ ಸೂತ್ರಧಾರಿ ಪಾತ್ರಧಾರಿ ಹಾಡಿದ ರಂಗಗೀತೆ ಅದೇ ಪ್ರಥಮ ಬಾರಿ ಕೇಳಿ ಬಹಳ ಇಷ್ಟವಾಯಿತು. ಪ್ರೇಕ್ಷಕರು ಕೂಡ ಸೂತ್ರದಾರಿ ಹಾಡಿUÉ ಚಪ್ಪಾಳೆ ಬಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಗೀತೆಯಲ್ಲಿ ಏನೆಲ್ಲಾ ಕನ್ನಡ ಕಲಾ ಸಾರಸ್ವತ ಲೋಕವನ್ನು ತೆರೆದಿಟ್ಟಿದ್ದಾರೆ ಕವಿ ಎಂದರೆ.. ಕನ್ನಡ ನಾಡಿನ ಕಲೆ ಮಕ್ಕಳೇ ಅಳಿಯದೆ ಉಳಿಯಲಿ ನಮ್ಮೀ ಕಲೆಎ¯Éèಲ್ಲೂ ಬೆಳಗಲಿ ನಮ್ಮೀಕಲೆ ಪಂಪ ರನ್ನ ಜನ್ಮ ಪೊನ್ನರಾಮಾನುಜ ತೀರ್ಥಂಕರ ಬೇಲೂರುಹಳೇಬೀಡು ಕಲೆಗಳ ತವರೂರುಸುಬ್ಬಯ್ಯ ನಾಯ್ಡುವಿನ ನಟನಾ ಕಲೆ ನಾಟಕ ರತ್ನ ಗುಬ್ಬಿ ವೀರಣ್ಣ ನಟಸಾರ್ವಭೌಮ ರಾಜಕುಮಾರ ಅಭಿನವ ಭಾರ್ಗವ ಶಿರೋಮಣಿ ಮಲ್ಲಪ್ಪ ನಟನಾ ಕಲೆ.. ಶ್ರೀ ಕೇಶವರವರು ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ ವಿಚಾರ ಕೂಡ ಶಿಕ್ಷಕರು ಪಿ. ನಂದಕುಮಾರರಿಂದ ತಿಳಿಯಿತು. 1997ರ ಕಾಲಘಟ್ಟದಲ್ಲಿ ನಾನು (ಗೊರೂರು ಅನಂತರಾಜು) ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡು ಅಕ್ಷರ ಅಭಿಷೇಕ ನವ ಸಾಕ್ಷರರ ಪಠ್ಯ ಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ.. ಈ ಒಂದು ಆಸಕ್ತಿಯಲ್ಲಿ ಕೇಶವರವರಿಗೆ ತಮ್ಮ ಒಂದು ಕಲಾ ಪರಿಚಯವನ್ನು ಬರೆಯಲು ಬಯಸಿ ಸಂಪರ್ಕಿಸಿದೆ.. ಅವರು ಹೇಳಿದರು. ಅನಂತರಾಜ್ ಸಾರ್,, ನಾನು ನಿಮ್ಮನ್ನು ಬಲ್ಲೆನು. ಆದರೆ ನನ್ನ ಪರಿಚಯ ನಿಮಗಿಲ್ಲ ಅಷ್ಟೇ..ನಾನು ಕೇಶವ ಜಿ. ಜಿ. ಹುಟ್ಟಿದ ಊರು ಗರೀಘಟ್ಟ.ಇದು ಅರಕಲಗೋಡು ತಾಲೂಕಿಗೆ ಸೇರಿದೆ. ಹಾಸನ ಜಿಲ್ಲೆಯಲ್ಲಿ ಬರುತ್ತದೆ. ನನ್ನ ಜನ್ಮ ದಿನಾಂಕ 04.06.1979. ನಾನು ಪ್ರಾಥಮಿಕ ಶಿಕ್ಷಣವನ್ನುಗರೀಘಟ್ಟದಲ್ಲಿ ಹಾಗೂ ಹೊನ್ನವಳ್ಳಿಯ ಹೇಮಾವತಿ ಪ್ರೌಢಶಾಲೆಯಲ್ಲಿ ಹೈಸ್ಕೂಲು ವ್ಯಾಸಂಗ ªÀÄÄV¹ ಪಿ.ಯು.ಸಿ ಮತ್ತು ಬಿ.ಎ. ಪದವಿ ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಮಾಡಿದೆ. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಿಕೆ, ರಾಜ್ಯ ಸರ್ಕಾರದ ಸಾಕ್ಷರತಾ ಆಂದೋಲನದಲ್ಲಿ ಸ್ವಯಂಸೇವಕನಾಗಿ ಸೇವೆ. 2005-06ನೇ ಸಾಲಿನಲ್ಲಿ ಪ್ರಾರಂಭವಾದ ಸಾಕ್ಷರತಾ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮದಲ್ಲಿ ಕ್ರಮವಾಗಿ ಪ್ರೇರಕ ಹಾಗೂ ನೋಡಲ್ ಪ್ರೇರಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಸಾಕ್ಷರತಾ ಕಲಾವಿದನಾಗಿ ಸೇವೆ, ಅರಿವು ಕಾರ್ಯಕ್ರಮದಲ್ಲಿ ಬೀದಿ ನಾಟಕ ಹಾಗೂ ಕಲಾಜಾಥಾ ಕಾರ್ಯಕ್ರಮದ ನಿರ್ದೇಶಕನಾಗಿ ಸೇವೆ ಸಲ್ಲಿಕೆ, ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಕೆ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿವಿದ ಕಾರ್ಯಕ್ರಮದಲ್ಲಿ ನಿರೂಪಕನಾಗಿ 2014ರಲ್ಲಿ ರಂಗಭೂಮಿ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ. ಅರಕಲಗೂಡು ಪಟ್ಟಣದಲ್ಲಿ ತಾಲ್ಲೂಕಿನ ವಿವಿಧ ವಿಕಲಚೇತನರನ್ನೊಳಗೊಂಡ ವಿಕಲಚೇತನರ ಸಂಘವನ್ನು ರಚಿಸಿ ವಿಕಲಚೇತನರಿಂದಲೇ ದಾನಶೂರಕರ್ಣ ನಾಟಕ ಪ್ರದರ್ಶನದಲ್ಲಿ ಕರ್ಣನ ಪಾತ್ರದ ಮೂಲಕ ರಂಗಭೂಮಿಗೆ ಪ್ರವೇಶ ಮಾಡಿದೆ. ಶ್ರೀಕೃಷ್ಣ, ಅರ್ಜುನ, ಧರ್ಮರಾಯ, ಸತ್ಯವ್ರತ, ಬೀಷ್ಮ, ದ್ರೋಣ, ದೃತಾರಾಷ್ಟ್ರ, ನಾರದ, ವಿಧುರ, ಭರತ, ವಿಭಿಷಣ, ವಸಿಷ್ಠ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದೆ. ಗುರುಗಳ ಕೈ ನೋಡಿಕೊಂಡು ಹಾರ್ಮೋನಿಯಂ ಕಲಿಕೆ ಪ್ರಾರಂಭಿಸಿದೆ. ಯಾವ ಗುರುಗಳ ಬಳಿಯೂ ಅಭ್ಯಾಸ ಮಾಡದೆ ತರಬೇತಿಯೂ ಇಲ್ಲದೇ ಸ್ವತಃ ಹಾರ್ಮೋನಿಯಂ ನುಡಿಸುವುದನ್ನು ಅಭ್ಯಾಸ ಮಾಡಿಕೊಂಡು ಮೊದಲಬಾರಿಗೆ 2023ರಲ್ಲಿ ರಾಜ ವಿಕ್ರಮ ನಾಟಕದ ನಿರ್ದೇಶನ ಮಾಡಿ ಆ ದಿನದಿಂದ ಈವರೆಗೆ ರಾಜಾವಿಕ್ರಮ, ರಾಜ ಸತ್ಯವ್ರತ, ದಾನಶೂರಕರ್ಣ, ಕುರುಕ್ಷೇತ್ರ ಹೀಗೆ 12 ನಾಟಕಗಳ ನಿರ್ದೇಶನ ಮಾಡಿರುವೆ. ಹರಿಕಥೆ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿರುವೆ . ನನ್ನ ಈ ಸೇವೆ ಗಮನಿಸಿ ಕೆಲವು ಸಂಘ ಸಂಸ್ಥೆಗಳು ರಂಗರತ್ನ, ಹೊಯ್ಸಳರತ್ನ, ಕಲಾಬೀಷ್ಮ, ರಂಗ ಕುಸುಮ, ರಂಗರತ್ನಾಕರ ಹೀಗೆ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಇದುವರೆಗೂ ಸರಿಸುಮಾರು 400ಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿರುತ್ತೇನೆ, ಗ್ರಾಮೀಣ ಭಾಗದ ವಿಕಲಚೇತನರಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಸವಲತ್ತುಗಳ ಮಾಹಿತಿ ನೀಡುವ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಸ್ಥಾಪಿಸಿ ಅ ಮೂಲಕ ರಂಗ ಕಲೆಯನ್ನು ಉಳಿಸುವ ಪೋಷಿಸುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸಂಘಟಿಸಿರುವೆ. ಇವರ ಸಂಪರ್ಕ ವಿಳಾಸ:ಕೇಶವ ಜಿ. ಜಿ. ರಂಗನಿರ್ದೇಶಕರು, ಗರೀಘಟ್ಟ, ಕಸಬಾ ಹೋಬಳಿ, ಅರಕಲಗೂಡು ತಾ. ಹಾಸನ ಜಿಲ್ಲೆ. ಮೊ ಸಂಖ್ಯೆ 9880183485 ಗೊರೂರು ಅನಂತರಾಜು
“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.” ಗೊರೂರು ಅನಂತರಾಜು Read Post »
ಚಹಾಯಣ…ದ ರಾಮಾಯಣ(ಕಿರು ಪ್ರಬಂಧ) ಡಾ.ವೈ ಎಂ.ಯಾಕೊಳ್ಳಿ
ಪ್ರಬಂಧ ಸಂಗಾತಿ ಡಾ.ವೈ ಎಂ.ಯಾಕೊಳ್ಳಿ ಚಹಾಯಣ…ದ ರಾಮಾಯಣ ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು ಕರೆಯುವದೂ ಇದೆ.ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.ಬಂದ ಅತಿಥಿಗಳಿಗೆ ನಾವು ಏನುಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್ ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ. ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ. ಎಂಥ ಹಿರಿತನಗಳೂ ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ ಆರಂಭ ಮತ್ತು ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ ಪದ್ಧತಿ. ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ ಕರೆಯಬಹುದು. ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದುಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ ಮೇಲೊಂದರಂತೆ ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ. ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು. ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ. ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ it (ಇದು) ಉಳಿಯುತ್ತದೆ.I ಹೋದಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ. ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅಂತೂ ಚಹಾ ಇಲ್ಲದೆ ಬದುಕುವ ಭಾರತಿಯರ ಸಂಖ್ಯೆ ತೀರಾ ಕಡಿಮೆ..ಚಹಾ ಕುಡಿಯುವ ಚಟ ಇಲ್ಲದವರು ಒಂದು ರೀತಿಯಲ್ಲಿ ನಮಗೆ ದೇವತೆಗಳ ಹಾಗೆ ಕಾಣಿಸುವದು ಸುಳ್ಳಲ್ಲ.ಎಲ್ಲರಿಗೂ ಚಹಾ ದಿನದ ಶುಭಾಶಯಗಳು ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು ಕರೆಯುವದೂ ಇದೆ.ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.ಬಂದ ಅತಿಥಿಗಳಿಗೆ ನಾವು ಏನುಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್ ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ. ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ. ಎಂಥ ಹಿರಿತನಗಳೂ ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ ಆರಂಭ ಮತ್ತು ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ ಪದ್ಧತಿ. ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ ಕರೆಯಬಹುದು. ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದುಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ ಮೇಲೊಂದರಂತೆ ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ. ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು. ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ. ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ it (ಇದು) ಉಳಿಯುತ್ತದೆ.I ಹೋದಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ. ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಚಹಾಯಣ…ದ ರಾಮಾಯಣ(ಕಿರು ಪ್ರಬಂಧ) ಡಾ.ವೈ ಎಂ.ಯಾಕೊಳ್ಳಿ Read Post »









