ಕಾವ್ಯಯಾನ

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಧುಮ್ಮಿಕ್ಕಿ ಇಳಿದು ಬಾ ಜಲಧಾರೆಯಂತೆ ಕರೆವೆ ನನ್ನೊಳಗೆ ಒತ್ತಾಸೆಯಾಗಿ ನಿಲ್ಲು ಬಾ ನದಿ ದಂಡೆಗಳಂತೆ ಹರಿವೆ ನಿನ್ನೊಳಗೆ ನನ್ನ ನೆರಿಗೆ ನೆರಿಗೆಯೊಳಗೂ ಹುದುಗಿ ಹೀಗೆ ಕಾಡುವುದೇಕೆ ಚಿತ್ತಾರದಂಚಿನ ಸೆರಗಾಗಿ ಬೀಸಿ ಬಾ ತೊನೆವೆ ತೆಕ್ಕೆಯೊಳಗೆ ಮುಸ್ಸಂಜೆ ಮಾಧುರ್ಯ ಮಗುಚಿ ಬಿದ್ದಿದೆ ಇಲ್ಲಿ ನೀನಿಲ್ಲದೆ ಸಂಪ್ರೀತಿ ಕೊಡವ ಹೊತ್ತು ಬಾ ಮಧು ಸುರಿವೆ ಒಳಗೊಳಗೆ ಸುರಚಾಪದಲ್ಲೇನಿಹುದು ಬಿಡು ಅಂಥ ಬಣ್ಣ ಬಣ್ಣದ ಆಟೋಪ ರಂಗಿನೋಕುಳಿಯ ಎರಚಿ ಬಾ ಆಡೋಣವೆ ಕಣ್ ಕಣ್ಣೊಳಗೆ ಜೀವ ಸೊಬಗನ್ನೆಲ್ಲ ಒಂದೇ ಗುಕ್ಕಿನಲ್ಲಿ […]

ಕಾವ್ಯಯಾನ

ಹಮ್ಮು ಬಿ.ಎಸ್.ಶ್ರೀನಿವಾಸ್ ಬಲ್ಲವನೆಂಬ ಭ್ರಾಮಕ ಹಮ್ಮು ತಲೆತಿರುಗಿಸುವ ಅಮಲು ಏನೂ ಅರಿಯದ ಪಾಮರನ ಪ್ರಾಮಾಣಿಕ ಅಳಲು ಅಮಾಯಕತ್ವವೆ ಮೇಲು ಅಗ್ಗದ ಉಪದೇಶಕ್ಕಿಂತ ನಡೆದು ತೋರಿಪುದು ಮೇಲು ನಿಜಸಾಧಕರಿಗೆ ಸವಾಲು ಸಲ್ಲದು, ನಾ ಕಂಡಿದ್ದೇ ಸತ್ಯವೆಂಬುದು ಅಹಮಿಕೆ ಡೌಲು ಬಲ್ಲವರು ಹೇಳುವರು ಸತ್ಯ ಒಂದೇ ಆದರೂ ಧೃಷ್ಟಿಕೋನ ನೂರಾರು ಹಿಮಾಲಯದ ಶಿಖರಕ್ಕೂ ಏರುವ ದಾರಿ ಹಲವಾರು ಮಾತಿನೀಟಿಯಲಿ ಪರರ ಘಾತಿಸುತ ಸಮನಾರಿಲ್ಲ ಎನಗೆಂದು ಬಿಂಕದಿ ಮೆರೆದು ಬೀಗಿದರೆ ಮೆಚ್ಚುವನೆ ಪರಮಾತ್ಮನು ಮೇಲೇರಿದರೆ ಕೆಳಗಿನದು ಕುಬ್ಜವಾಗುವುದು ಸಹಜ ಕೆಳಗಿರುವವರ ಕೈಹಿಡಿದು […]

ಪುಸ್ತಕ ವಿಮರ್ಶೆ

ಕಾಮೋಲವೆಂಬ ಅಂತರಂಗದ ಶೋಧ. ಸ್ಮಿತಾ ಅಮೃತರಾಜ್ ಕೃತಿ: ಕಾಮೋಲ (ಕಥಾ ಸಂಕಲನ) ಲೇಖಕ: ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ  ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ  ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು.   ಅವರ  ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ. ಈಗಷ್ಟೇ ಓದಿ […]

ಕಾವ್ಯಯಾನ

ಗಝಲ್ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರ ವೆಂದರೆ ಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇ ಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ ಎಷ್ಟೊಂದು ವೇಷ ಭಾಷೆ ಸಂಸ್ಕೃತಿ ವೈವಿಧ್ಯಗಳು ಎಲ್ಲರೆದೆ ಹೂಗಳನು ಪೋಣಿಸುವ ನೀತಿ ಗಣತಂತ್ರವೆಂದರೆ ಸಮಾನ ಆಶೋತ್ತರಗಳು ಸುರಾಜ್ಯದ ಕನಸು ಎಲ್ಲರ ಮುಗಿಲುಗಳ ವಿಸ್ತರಿಸುವ ಪ್ರಣತಿ ಗಣತಂತ್ರವೆಂದರೆ ಹೊರಗಿನ ಶತ್ರುಗಳ ಜೊತೆಗೆ ಒಳಗಿನ ವಿಕೃತಿಗಳು ಹುಸಿಗಳ ಮೀರುವ ನಿಜ ಬದುಕಿನ ಕಾಂತಿ ಗಣತಂತ್ರವೆಂದರೆ ನಮ್ಮ ರಾಷ್ಟ್ರ ನಮ್ಮ ಜೀವ ಭಾವ ಸದಾ […]

ಹೊತ್ತಾರೆ

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಕ್ಕಯ್ಯನೆಂಬ ಯಶೋಧೆ ನಾನು ಆಗತಾನೇ ಬೈಕಿನಿಂದಿಳಿದು ಹೆಲ್ಮೆಟ್ ತೆಗೆಯುತ್ತಿದ್ದೆ. ಹೊಲದ ಕಡೆ ಹೊರಟಿದ್ದ ರಂಗಪ್ಪಣ್ಣ ನನ್ನನ್ನು ನೋಡಿ ತಕ್ಷಣ ಗುರುತಿಸಲಾಗದೇ, ಹಾಗೆಯೇ ಸ್ವಲ್ಪ ಹೊತ್ತು ನಿಂತರು. “ ಓಹೋಹೋಹೋಹೋ… ಏನ್ ಅಳಿಮಯ್ಯಾ, ಅಪ್ರೂಪದಂಗೆ….. ಎಷ್ಟೊಂದ್ ವರ್ಷ ಆಗಿತ್ತಲ್ಲ ನಿಮ್ಮನ್ನ ನೋಡಿ, ಹಾಂ?” ಅಂತ ತನ್ನದೇ ರಾಗದಲ್ಲಿ ರಂಗಪ್ಪಣ್ಣ ಮಾತಾಡಿಸಿ ಹೆಗಲಮೇಲೆ ಹೊತ್ತಿದ್ದ ನೇಗಿಲನ್ನೂ ಇಳಿಸದಂತೆ ಹಾಗೆಯೇ ನೋಡುತ್ತಾ ನಿಂತರು. “ಏನ್ ಮಾಡೋದು ರಂಗಪ್ಪಣ್ಣ? ಹೊಟ್ಟೆಪಾಡು, ಊರುಬಿಟ್ಟು ಊರಿಗೆ ಹೋದ ಮೇಲೆ ಅಪರೂಪವೇ […]

ಪ್ರಸ್ತುತ

ವಿವೇಕಾನಂದರ ಆಶಯ ಗಣೇಶಭಟ್ ಶಿರಸಿ ಸ್ವಾಮಿ ವಿವೇಕಾನಂದರ ಆಶಯಗಳು ವಾಸ್ತವವಾಗುವ ಬಗೆ…… ಪ್ರತಿವರ್ಷದಂತೆ ಈ ವರ್ಷವೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಅವರ ಫೋಟೊ ಇಟ್ಟು, ಹೂ ಹಾಕಿ, ಅವರ ಆದರ್ಶಗಳನ್ನು ಪಾಲಿಸಿ ಎಂದು ಭಾಷಣಗಳ ಸುರಿಮಳೆಯೂ ಆಯಿತು. ಆದರೆ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಾಸ್ತವವಾಗಿಸುವ ಬಗೆ ಹೇಗೆಂದು ಯಾವೊಬ್ಬ ಭಾಷಣಕಾರರೂ ಹೇಳಲಿಲ್ಲ. ಅವರ ಹೆಸರಿನಲ್ಲಿ ತಮ್ಮ ಸಂಘಟನೆಗಳನ್ನು ಬಲಪಡಿಸಿಕೊಳ್ಳುತ್ತಿರುವವರೂ ಸಹ ಸ್ವಾಮೀಜಿಯ ಉನ್ನತ ಆದರ್ಶಗಳನ್ನು ಭೂಮಿಗಿಳಿಸುವ ವ್ಯವಹಾರಿಕ ಚಿಂತನೆಯ ಕುರಿತಾಗಿ ಎಂದೂ ಹೇಳುವುದಿಲ್ಲ. ಯಾಕೆಂದರೆ, ವಿವೇಕಾನಂದರ […]

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ನಿನ್ನ ಕಣ್ಣೋಟ ತಾಕಿ ಇಲ್ಲಿ ಬೆಳಕು ಹರಿದಿದೆ ನಿನ್ನ ಕರಸ್ಪರ್ಶದಲ್ಲಿ ಪುಲಕ ಹೊನಲಾಗಿದೆ ಮಿಂಚು ಗೂಳಿ ಮೈಯನಿಡೀ ಉತ್ತು ಬಿತ್ತಿದೆ ಫಸಲು ಹೇಗಿರಬಹುದು ಕಾತರ ಕುಡಿಯಾಗಿದೆ ಎಂತಹ ಕರಿ ದುಗುಡ ಮಡುವಾಗಿತ್ತಿಲ್ಲಿ ನಿನ್ನ ಕೈ ಸೋಕಿದ್ದೇ ತಡ ಎಲ್ಲ ಬದಲಾಗಿದೆ ಸುಧೆಯನುಂಡವರು ಮಾತ್ರ ಅಮರರೇನು ನೀನು ತಂದ ಅನುರಾಗಕ್ಕೆ ಸಾವೆಲ್ಲಿದೆ ಹಿಗ್ಗನ್ನು ಬಿತ್ತಿ ಸುಗ್ಗಿ ಮಾಡುವ ರೀತಿ ನಿನ್ನದೇ ಸೌದಾಮಿನಿ ನೀನು ಈಗ ಕಣಜ ತುಂಬಿದೆ ************

ಅವ್ಯಕ್ತಳ ಅಂಗಳದಿಂದ

ಅರಿವು ಅವ್ಯಕ್ತ ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ ಸಿಕ್ಕಿ […]

ಕಾವ್ಯಯಾನ

ಒಲವಿನಾಟ ಮಧುವಸ್ತ್ರದ್ ಕೃಷ್ಣಾ..ಒಲವಿನಾಟವ ಆಡು ಬಾ ಕಾದಿರುವಳು ಬೆಡಗಿ.. ಹೃದಯ ಕಸಿದು ಮನವ ಬೆಸೆದು ಎಲ್ಲಿರುವೆ ನೀ ಅಡಗಿ.. ಕರ್ಪೂರಗೊಂಬೆ ರೂಪಸಿ ರಂಭೆ ಕಾಯುತಿಹಳು ಸೊರಗಿ.. ಸೋಕಿದೊಡೆ ನಿನ್ನ ಪ್ರೇಮಜ್ವಾಲೆ ನೀರಾಗುವಳು ಕರಗಿ.. ಸನಿಹ ನೀನಿರೆ ಮೆಲ್ಲುಸಿರಾಯ್ತು ಪ್ರಣಯ ಕವನ‌.. ಸೂಸಿತು ತಂಗಾಳಿ ಹಾಡುತಲಿ ಒಲವಿನ ಸವಿಗಾನ.. ತರುಲತೆ ತೂಗಿಬಾಗಿ ನೀಡಿಹವು ಪ್ರೇಮ ಸಿಂಚನ‌‌.. ವನದೇವಿ ನಕ್ಕು ಹಾರೈಸಿಹಳು ನಮ್ಮ ಶುಭಮಿಲನ.. ತನುಮನ ಕಾತರದಿ ಕಾದಿಹವು ನಿನ್ನಾಗಮನದ ಕ್ಷಣ.. ಹೊಳೆದಿಹ ಕೆಂದಾವರೆ ಮೊಗಕೆ ಮುತ್ತಿನಾಭರಣ.. ಬಳುಕುವ ದೇಹಸಿರಿಗೆ […]

ಅನುವಾದ ಸಂಗಾತಿ

“ಗಂಡು ಪ್ರೇಮದಲ್ಲಿದ್ದಾಗ” ಸಿರಿಯನ್ ಕವಿ: ನಿಜಾರ್ ಕಬ್ಬಾನಿ ಕನ್ನಡಕ್ಕೆ:ಕಮಲಾಕರ ಕಡವೆ ಗಂಡಸು ಪ್ರೇಮದಲ್ಲಿದ್ದಾಗಹಳೆಯ ಶಬ್ದಗಳ ಹೇಗೆ ಉಪಯೋಗಿಸಿಯಾನು?ಪ್ರೇಮಿಯ ಅಪೇಕ್ಷೆಯಲ್ಲಿಇರುವ ಹೆಣ್ಣುಭಾಷಾತಜ್ಞರು, ವ್ಯಾಕರಣತಜ್ಞರುಗಳಜೊತೆ ಮಲಗ ಬೇಕೇನು? ನಾನು ಏನೂ ಹೇಳಲಿಲ್ಲನನ್ನ ಪ್ರೀತಿಯ ಹೆಣ್ಣಿಗೆ.ಬದಲಿಗೆ, ಪ್ರೇಮಕ್ಕೆ ಇರುವ ವಿಶೇಷಣಗಳನ್ನುಸೂಟಕೇಸಿನಲ್ಲಿ ತುಂಬಿಕೊಂಡುಎಲ್ಲ ಭಾಷೆಗಳಿಂದ ದೂರ ಓಡಿಹೋದೆ. ಮೂಲ: WHEN A MAN IS IN LOVE” When a man is in lovehow can he use old words?Should a womandesiring her loverlie down withgrammarians and […]

Back To Top