ಕಾವ್ಯಯಾನ
ಹೆರಳನ್ನೊಮ್ಮೆ ಬಿಚ್ಚಿಬಿಡು ವಿಜಯಶ್ರೀ ಹಾಲಾಡಿ ಆ ಬೆಚ್ಚನೆ ರಾತ್ರಿಗಳಲ್ಲಿಈ ತಣ್ಣನೆ ಹಗಲುಗಳಲ್ಲಿನಿನ್ನ ಪಾದಕ್ಕೆ ತಲೆಯೂರಿಮಲಗಿದ ಬೆಕ್ಕನ್ನೊಮ್ಮೆನೋಡು …. ಕರುಣೆಯ ಕತ್ತಲುಹಣ್ಣುತುಂಬಿದ ಮರಹಗುರ ತುಂಬೆ ಹೂ..ಹೆರಳನ್ನೊಮ್ಮೆ ಬಿಚ್ಚಿಬಿಡು ಸುತ್ತುವ ಭೂಮಿಯನ್ನುನಿಲ್ಲಿಸು ಅಥವಾಮತ್ತಷ್ಟು ವೇಗವಾಗಿಸುತ್ತಿಸುಹೊಸ ಹೆಜ್ಜೆಕಚ್ಚಿಕೊಳ್ಳಬೇಕಿದೆ ನಿಹಾರಿಕೆ ಉಲ್ಕೆಗಳುಸಾಗರ ಸುನಾಮಿಗಳುಅಪ್ಪಳಿಸಲಿಇಲ್ಲವೇಬ್ರಹ್ಮಾಂಡದಾಚೆಕರೆದೊಯ್ಯಲಿ …. ಮಧುಶಾಲೆಗೂ ನನಗೂಸಂಬಂಧವಿಲ್ಲನೋವನ್ನೇ ಬಟ್ಟಲಿಗಿಳಿಸಿಗಟಗಟನ ಕುಡಿಯುತ್ತಿದ್ದೇನೆ ………! *******************
ನಿಮ್ಮೊಂದಿಗೆ
ಕವಿ-ಕವಿತೆ ಕುರಿತು ವಿಜಯಶ್ರೀ ಹಾಲಾಡಿ ಗೆಳೆಯರೆ, ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ. ಕು.ಸ.ಮದುಸೂದನ ಬರೆಹಗಾರರಲ್ಲಿ ೩ ವರ್ಗ. […]
ಅನುವಾದ ಸಂಗಾತಿ
“ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಮೂಲ: ಆನಾ ಎನ್ರಿಕೇಟಾ ತೇರಾನ್ (ವೆನಿಜುವೆಲಾ) ಕನ್ನಡಕ್ಕೆ: ಕಮಲಾಕರ ಕಡವೆ “ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಕವಯಿತ್ರಿ ತಾತ್ಕಾಲಿಕ ಗಿಡಮೂಲಿಕೆಗಳ ಒಟ್ಟುಮಾಡಿಕೊಳ್ಳುತ್ತಾಳೆಹಳತಾದ ಬ್ರೆಡ್ಡು, ಚೂರಿಗೆ ಸರಿಯಾದ ಬೂದಿ,ಫಲಿತಾಂಶಕ್ಕೆ ಮತ್ತು ಮೊದಲ ಆಚರಣೆಗಳಿಗೆ ಬೇಕಾದ ನಾರುಬೇರು.ಬಹುಶಃ ಅವಳಿಗೆ ಬಲಾಢ್ಯರು ತಮ್ಮದೆನುವ ಪರಂಪರೆ ಇಷ್ಟಅಧ್ಯಯನಶೀಲ ತಂಡ, ಕೈ ಖಾಲಿ, ಮುಚ್ಚಿದ ಎದೆ.ಯಾರು, ಅವನೋ, ಅವಳೋ? ಪ್ರಮಾಣಕ್ಕೆ ಬದ್ಧ, ಭವಿಷ್ಯಮುಖಿ:ಶಬ್ದಕ್ಕೆಂದು ಕಾದಿರುವ ನಾಯಿಯ ಕುಡಿ, ಸಂತನೆಡೆತಲುಪುವುದು ಹೇಗೆಂದು ಯಾಚಿಸುತ್ತ, ಅವಳ […]
ಕಾವ್ಯಯಾನ
ಕೊಂದು ಕೊಳ್ಳುವೆ ವಿಜಯಶ್ರೀ ಹಾಲಾಡಿ ಕಣ್ಣೀರು ಕೆನ್ನೆಗಿಳಿವಾಗಲೇನಗುತ್ತೇನೆ ಮಣ್ಣ ಘಮಕ್ಕೆ ಸೋತಾಗಅರಳುವುದೇ .. ಕಡಲು ಸೋಕಬೇಕೆಂದಿಲ್ಲಜೀವಕೋಶದೊಳಗಿದೆ ಅಪರಿಚಿತನೆಂದು ಬೀಗಬೇಡಮಾತು ಸುಮ್ಮನೇ ಗೋರಿ ಮೇಲೆ ಹೂ ಅರಳಿದ್ದುಲೋಕರೂಢಿ ಸಾಯುವೆನೆಂದು ಗೋಳಿಡಬೇಡಬೇಕಾದರೆ ಕೊಂದುಕೊಳ್ಳುವೆ **************************
ಕಾವ್ಯಯಾನ
ಕರಿನೆರಳು ಪ್ಯಾರಿಸುತ ಕರಿನೆರಳು ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ ಹಗಲಿನಲ್ಲಿ ಸುಡು ನೆಲದ ಮೇಲೆ ರಾತ್ರಿಯಲ್ಲಿ ಕಪ್ಪು ನೆಲದಮೇಲೆ ಹೆಜ್ಜೆಗೊಂದು ಹಜ್ಜೆ ಹಾಕಿ ಅಷ್ಟು ಬೈದರೂ ಲಜ್ಜೆ ಹೊಸಕಿ ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು ಎತ್ತ ಹೋದರು ಭೂತದಂತೆ..! ದೇಗುಲಕೂ, ಆಶ್ರಮಕೂ ಬರುತಲಿತ್ತು ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು ನಾನು ಏಕೆ ಇವರಿಗೆ ಅಂಟು…? ನನಗೂ ಇವರಿಗೂ ಯಾವ ನಂಟು…? ಜೀವ ಇರುವ ನೀನು ಭಾವ ಮೆರೆವ ನಾನು ಜೀವಕೊಂದು ಜೀವವಿರಲು ನನಗೂ […]
ಹಾಸ್ಯಲೇಖನ
ನಾ ಮಾಡಿದ ಉಪ್ಪಿಟ್ಟು ಗೋಪಿನಾಥ್ ನಾ ಮಾಡಿದ ಉಪ್ಪಿಟ್ಟು ರೀ ಒಂದ್ ಸಲ ಸೌಟು ಹಿಡಿದು ನೋಡಿ ಗೊತ್ತಾಗುತ್ತೆ ಅಡಿಗೆ ಮಾಡುವುದು ಏನು ಮಹಾ ಅಂತಿರಲ್ಲಾ, ಮೂವತ್ತು ಅಂಕ ಗಳಿಸಿ ಸಾಕೆಂದಳು ! ನಾ ಅವಳ ಚಾಲೆಂಜ್ ಒಪ್ಪಿಕೊಂಡೆ..ಆದರೆ ಒಂದ್ ಕಂಡಿಷನ್. ನೀನು ಯಾವುದೇ ಕಾರಣಕ್ಕೂಅಡಿಗೆಮನೆಯೊಳಗೆ ಬರಬಾರದು ! ಅವಳು ಖುಷಿಯಿಂದ ನಿಮ್ಮಗ್ರಹಚಾರಕ್ಕೆ ನಾನೇನು ಮಾಡಲಾದೀತೆಂದು ರೂಮು ಸೇರಿದಳು. ನಾನು ಬಹಳ ಹುಮ್ಮಸ್ಸಿನಲ್ಲಿದ್ದೆ, ಅಡಿಗೆ ಮನೆಗೆ ಹೋಗಿ ಸೌಟು ಕೈಲಿ ಹಿಡಿದು ಕೈ ಚೌಕವನ್ನು ಹೆಗಲಿಗೇರಿಸಿ ನಳಮಹರಾಜನ […]
ಕವಿತೆ ಕಾರ್ನರ್
ಬಾ ಮಗುವೆ ಬಾ! ಕು.ಸ.ಮಧುಸೂದನ ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರುಮತ್ತುನಾನೇನು? ಯಾವ ದಾರಿಯೂ ನನ್ನದಾಗಲಿಲ್ಲಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರುಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರುಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವುಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯಎಂದು […]
ಪ್ರಸ್ತುತ
ಶಿವ ಒಂದುವಿಶ್ಲೇಷಣೆ ಗಣೇಶ ಭಟ್ ಶಿರಸಿ ಪ್ರತಿವರ್ಷ ಶಿವರಾತ್ರಿ ಬಂದೊಡನೆ ಶಿವನ ಆರಾಧನೆ ಜೋರಾಗುತ್ತದೆ; ಶಿವನ ಕುರಿತಾಗಿ ಲೇಖನಗಳು, ಪುಸ್ತಕಗಳು ಬರುತ್ತವೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ಎರಕಹೊಯ್ದಂತಿರುತ್ತವೆ. ನಾನಿಲ್ಲಿ ಹೇಳಹೊರಟಿರುವದು ಶಿವನ ಕುರಿತಾದ ಒಂದು ವಿಶಿಷ್ಟ ಪುಸ್ತಕದ ಕುರಿತು. ಅದರ ಹೆಸರೇ ನಮಃ ಶಿವಾಯ ಶಾಂತಾಯ. ಶ್ರೀ ಶ್ರೀ ಆನಂದಮೂರ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುವ ಶ್ರೀ ಪ್ರಭಾತ ರಂಜನ್ ಸರ್ಕಾರರು 1982 ರ ಎಪ್ರಿಲ್ 11 ರಿಂದ ಪ್ರಾರಂಭಿಸಿ 13 ಅಗಸ್ಟ್ 1982 ರವರೆಗೆ […]
ಕಾವ್ಯಯಾನ
ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ […]
ಕಾವ್ಯಯಾನ
ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******