ಹಾಸ್ಯಲೇಖನ

ನಾ ಮಾಡಿದ ಉಪ್ಪಿಟ್ಟು 

ಗೋಪಿನಾಥ್

ನಾ ಮಾಡಿದ ಉಪ್ಪಿಟ್ಟು 

ರೀ ಒಂದ್ ಸಲ ಸೌಟು ಹಿಡಿದು ನೋಡಿ ಗೊತ್ತಾಗುತ್ತೆ ಅಡಿಗೆ ಮಾಡುವುದು ಏನು ಮಹಾ
ಅಂತಿರಲ್ಲಾ, ಮೂವತ್ತು ಅಂಕ ಗಳಿಸಿ ಸಾಕೆಂದಳು !


ನಾ ಅವಳ ಚಾಲೆಂಜ್ ಒಪ್ಪಿಕೊಂಡೆ..ಆದರೆ ಒಂದ್
ಕಂಡಿಷನ್. ನೀನು ಯಾವುದೇ ಕಾರಣಕ್ಕೂಅಡಿಗೆಮನೆಯೊಳಗೆ ‌ಬರಬಾರದು ! ಅವಳು
ಖುಷಿಯಿಂದ ನಿಮ್ಮಗ್ರಹಚಾರಕ್ಕೆ ನಾನೇನು ಮಾಡಲಾದೀತೆಂದು ರೂಮು ಸೇರಿದಳು. ನಾನು
ಬಹಳ ಹುಮ್ಮಸ್ಸಿನಲ್ಲಿದ್ದೆ, ಅಡಿಗೆ ಮನೆಗೆ ಹೋಗಿ ಸೌಟು ಕೈಲಿ ಹಿಡಿದು ಕೈ ಚೌಕವನ್ನು ಹೆಗಲಿಗೇರಿಸಿ ನಳಮಹರಾಜನ ಹಾಗೆ ಪೋಸ್ ಕೊಟ್ಟು ಸೆಲ್ಫೀ
ತೆಗೆದುಕೊಂಡೆ..ನಾಳೆ‌ ಇವಳು ಅಲ್ಲಗೆಳದರೆ ?!

ಏನು ಮಾಡುವುದು ಒಪ್ಪಿಕೊಂಡಾಗಿದೆ  T.V.
ತಿರುಗಿಸಿದೆ, ಮೊದಲಿಗೆ ಕಂಡಿದ್ದು ಪಾಕಶಾಲೆಯ ಕಾರ್ಯಕ್ರಮ ಖುಷಿ ಇಂಗಿಹೋಯಿತು ಅಂದು
ಭಾನುವಾರ ಬಾಡೂಟ ನಮಗೆ ಲಾಯ್ಕಲ್ಲಂತ.. ಹಾಗೆ ಎಲ್ಲ ಚಾನಲ್ಗಳ ಪಾಕ ನಿಪುಣೆಯರನ್ನು ನೆನಸಿಕೊಂಡು ಧೈರ್ಯವಾಗಿ ಮುಂದಡಿಯಿಟ್ಟೆ.
ತಲೆಯಲ್ಲಿ ಅವರುಗಳು ಹೇಳಿದ್ದು ಮೆಲಕು ಹಾಕುತ್ತಾ…

‘ಮೊದಲಿಗೆ ಅಡಿಗೆ ಮನೆಗೆ ಹೋಗಬೇಕು, ಸರಿ
ಅಡಿಯಿಟ್ಟೆ..ಮುಂದೆ ? ಒಲೆಗೆ ಬೆಂಕಿ ಹಚ್ಚಬೇಕು ! ಛೇ ಅಲ್ಲ, ಒಲೆಹಚ್ಚಬೇಕೂ..ಬಾಣಲೆ ಒಲೆ ಮೇಲೆ ಇಡಬೇಕು, ಆಮೇಲೆ ಮುಂದೆ ? ಅವಳು‌ರೂಮಿನಿಂದ ಬೊಬ್ಬೆ ಹೊಡೆದಳು ‘ಏನದು ಸೀದ ವಾಸನೆ ? ಬಾಣಲೆ ಸೀದಿತ್ತು ಕೈಕಾಲಾಡದೆ ಸ್ಟವ್ ಆಫ್ ಮಾಡಿದೆ, ಆ..ಈಗ ಜ್ಞಾಪಕ ಬಂತು ಎಣ್ಣೆ ಹಾಕಬೇಕು. ಹೌದು ಏನೆಣ್ಣೆ ಹಾಕುತ್ತಾರೆ ?
ಸಂದೇಹ ನಿವಾರಿಸಿಕೊಳ್ಳುವ ಸಲುವಾಗಿ ‘ಲೇ.. ಎಣ್ಣೆ ಕಾಣುತ್ತಿಲ್ಲಾಂದೆ, ಸುಮ್ಮನೆ ಹೇಳಬೇಕಲ್ಲವಾ ?‌ ‘ನೀವು ಎಣ್ಣೆ ಹಾಕುವ ಸಮವಿನ್ನೂ ಇದೆ ರಾತ್ರಿಯಾಗಿಲ್ಲ ! ಆ…ಮತ್ತೆ ಕಡಲೆಕಾಯಿ ಎಣ್ಣೆ ಎರಡನೇ ಅಟ್ಟದಲ್ಲಿದೆ. ಸರಿ ಎಣ್ಣೆ ಹಾಕಿದೆ ಬಾಣಲೆಗೆ ಧಗ ಧಗ ಬೆಂಕಿ..ಬಾಣಲೆ ಅಷ್ಟು ಕಾದಿತ್ತು..’ರೀ ಮನೆಗೇ ಬೆಂಕಿ ಹಚ್ಚಿದರೇನು ? ‘ಇಲ್ಲ ಮಹರಾಯಿತಿ ಗಾಬರಿಯಾಗ ಬೇಡ ಎಂದು ಅವಳಿಗೆ ಹೇಳಿ ಹಣೆ ಮೇಲಿನ ಬೆವರನ್ನು ಒರಸಿಕೊಂಡೆ, ಹೆಚ್ಚಿಕೊಂಡ  ಈರುಳ್ಳಿ, ಹಸಿ ಮೆಣಸಿಕಾಯಿ, ಕೊತ್ತಂಬರಿ,  ಕರಿಬೇವು ಮೂರು ನಾಲ್ಕು ಬೇಳೆಗಳು ಎಲ್ಲವನ್ನು ಒಟ್ಟಿಗೆ ಹಾಕಿದೆ‌ ಚಿನಕುರಳಿ ಪಟಾಕಿ ಸದ್ದು..ಮತ್ತೆ ಏನೋ ಬಿಟ್ಟೆ ಎಂದು ನೆನಪಾಗಿ ಒಂದಿಷ್ಟು ಉಪ್ಪು ಸುರಿದೆ..ಈಗ ನೀರು ಹಾಕ ಬೇಕು ಎನಿಸಿ ನೀರು ಹಾಕಿದೆ, ಕೊತ ಕೊತ ಕುದಿಯುವಾಗ ರವೆ
ಹಾಗೆನೆ..ಸ್ವಲ್ಪ ಹೊತ್ತು ತಟ್ಟೆಯನ್ನು
ಮುಚ್ಚಿಡಬೇಕು. ಅಬ್ಬಾ ಎಲ್ಲಾ ಸರಿಯಾಗಿ ಮಾಡಿದೀನಿ ಎನಿಸಿ ಪರೀಕ್ಷೆ ಮುಗಿಸಿ‌ ವಿಜಯ ಧ್ವಜವನ್ನು ಹಾರಿಸಿದಷ್ಟು ಖುಷಿಯಾಗಿತ್ತು. ‘ಲೇ ಆಯಿತು ಬಂದು ನೋಡು ಎಂದು ದರ್ಪವಾಗಿ ಹೇಳಿದೆ..ಆದರೆ ನನ್ನ ಮೂಗನ್ನೇ ನಂಬದಾದೆ ಸೀದ ಬಗ್ಗಡದ ವಾಸನೆ..ಸ್ಟವ್ ಆರಿಸುವುದನ್ನೇ ಮರೆತಿದ್ದೆ, ರವೆ ಹುರಿದಿರಲಿಲ್ಲ‌. 

ಇವಳು ಒಳಗೆ ಬರದೆಯೇ ಅಲ್ಲಿಂದಲೇ ಹೇಳಿದಳು
‘ಹಿತ್ತಲ ನಲ್ಲಿ ಕೆಳಗೆ‌ ಬಾಣಲೆಯಿಟ್ಟು ಜೋರಾಗಿ
ನೀರು ಬಿಟ್ಟು ಬನ್ನಿ. ‘ಏನಾಯಿತೆಂದು‌ ನಾ ಕೇಳಲೇ
ಇಲ್ಲ, ನಾನು ಫಸ್ಟ್‌ ಕ್ಲಾಸಲ್ಲಿ ಫೇಲಾಗಿದ್ದೆ. ಬಾಗಿಲ ಬೆಲ್ ಆಯಿತು..ಹೊರಗೆ ಹೋಟೆಲ್
ಹುಡುಗ ಪಾರಸಲ್ ಹಿಡಿದು ನಿಂತಿದ್ದ.

**************************************

4 thoughts on “ಹಾಸ್ಯಲೇಖನ

Leave a Reply

Back To Top