ಮಕ್ಕಳ ಕಥೆ

ಮಕ್ಕಳ ಕಥೆ

ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ […]

ಅನುವಾದ ಸಂಗಾತಿ

ಅಂಚು ಮೂಲ: ಸಿಲ್ವಿಯಾ ಪ್ಲಾತ್(ಅಮೇರಿಕಾ) ಕನ್ನಡಕ್ಕೆ: ಕಮಲಾಕರ ಕಡವೆ “ಅಂಚು” ಪರಿಪೂರ್ಣಗೊಂಡಿರುವ ಹೆಣ್ಣು.ಅವಳ ಸತ್ತ ದೇಹ ಧರಿಸಿದೆ ಸಾಧನೆಯ ನಸುನಗುವ,ಗ್ರೀಕರ ಭ್ರಮೆಯೊಂದು ಹರಿದಿದೆ ಅವಳ ಮೇಲುಡಿಪಿನ ಪದರುಗಳಲ್ಲಿ.ಅವಳ ನಗ್ನ ಪಾದಗಳು ಹೇಳುವಂತಿದೆನಾವು ಇಷ್ಟು ದೂರ ಬಂದಿದ್ದೇವೆ, ಇನ್ನು ಮುಗಿಯಿತು. ಸತ್ತ ಪ್ರತಿ ಮಗುವನ್ನೂ ಸುತ್ತಿಟ್ಟುಕೊಂಡು, ಬಿಳಿ ಸರ್ಪದಂತೆ,ಒಂದೊಂದೂ ಈಗ ಖಾಲಿಯಾದ ಚಿಕ್ಕ ಹಾಲಿನ ಕೊಡಕ್ಕೆ ತಾಗಿ,ಅವಳು ಮಡಿಚಿ ಕೊಂಡಿದ್ದಾಳೆ ಅವರನ್ನು ತನ್ನ ದೇಹದೊಳಕ್ಕೆ, ಮುಚ್ಚಿಕೊಂಡ ಗುಲಾಬಿಯಪಕಳೆಗಳಂತೆ, ಸೆಟೆದುಕೊಂಡ ಹೂದೋಟದಲ್ಲಿ, ರಾತ್ರಿ ಹೂವಿನಆಳ ಗಂಟಲಿನಿಂದ ಸಿಹಿ ಕಂಪು ಸ್ರಾವಿಸಿದೆ. […]

ಲಹರಿ

ಪ್ರೀತಿಯ ಆಸುಪಾಸು… ಚಂದ್ರಪ್ರಭ ಪ್ರೀತಿಯ ಆಸುಪಾಸು… ಒಮ್ಮೊಮ್ಮೆ ಹೇಳುತ್ತೇವೆ, ” ನಿನ್ನ ನಾ ಪ್ರೀತಿಸುತ್ತೇನೆ, ಆದರೆ..” ಈ ‘ಆದರೆ’ ಪ್ರೀತಿಸುತ್ತೇನೆ ಎನ್ನುವ ಸತ್ಯವನ್ನೇ ಹೊಡೆದುರುಳಿಸುತ್ತದೆ. ಪ್ರೀತಿಯಲ್ಲಿ ಹಾಗಿದ್ದಲ್ಲಿ, ಹೀಗಿದ್ದಲ್ಲಿ,ಆದರೆ ಗಳಿಗೆ ಜಾಗವಿಲ್ಲ. ಅಲ್ಲಿ ಆರಂಭ ಅಂತ್ಯವೂ ಇಲ್ಲ. ಅಲ್ಲಿ ಪ್ರೀತಿ ಇದೆ ಅಷ್ಟೇ.. ಎಂದೆಂದಿಗೂ. ಭಾವನೆಗಳ ಕಲಸುಮೇಲೋಗರದಲ್ಲಿ ಹೀಗೆ ಬಂದು ಹಾಗೆ ಹೋಗುವ ಕ್ಷಣದ ಚಂಚಲತೆ, ಉತ್ಕಟತೆ ಅದಲ್ಲ. ಆರಂಭ ಅಂತ್ಯಗಳಿಲ್ಲದ ಷರತ್ತುಗಳಿಲ್ಲದ ಎದೆಯ ತುಡಿತ ಪ್ರೀತಿ. ಎದೆಯೆ ಅದರ ಮನೆ.. ದೇವರ ಗುಡಿ ಅದಕ್ಕೆ. ಎದೆಯ […]

ಕಾವ್ಯಯಾನ

ಶಾಪ ಡಾ.ಗೋವಿಂದ ಹೆಗಡೆ ಶಾಪ ಸಣ್ಣ ಪುಟ್ಟವು ಸಾಲುವುದಿಲ್ಲ ಅಂತ ದೊಡ್ಡ ಹಂಡೆ, ಬಾನಿ, ಕೊಪ್ಪರಿಗೆ ಗಳನ್ನೇ ಆಳಕ್ಕಿಳಿಸಿದೆ ಕವಿತೆಗಳ ತುಂಬಿ- ಕೊಂಡು ಬರಲೆಂದು ಒಡಲ ತುಂಬ ಖಾಲಿ ಖಾಲಿ ಹೊರಳಿ ಬಂದಿವೆ ಬಾವಿಲಿ ಜಲ ಬತ್ತಿ ಹೋಯ್ತೆ ಈಗ ನಡೆದಿದೆ ಕವಿತೆಯ ಸುಳಿವೇ ಇರದ ಪೊಳ್ಳು ಪದಗಳ ಸಂತೆ ( ಇದೂ ಅವುಗಳಲ್ಲಿ ಒಂದಂತೆ?!) ** ಭಾರೀ ಜರಿ ಪೋಷಾಕು ಆಳೆತ್ತರದ ಹೂ ಹಾರ ಮಸ್ತು ಗುಲಾಲು ಬಾಜಾ ಬಜಂತ್ರಿ ಗಳಲ್ಲಿ ನಡೆದಿದೆ ಶವದ ಮೆರವಣಿಗೆ […]

ಕಾವ್ಯಯಾನ

ಯಾಕಿಷ್ಟು ಬೇಸರ? ದೀಪಿಕಾ ಬಾಬು ಯಾಕಿಷ್ಟು ಬೇಸರ ಈ ಮನಸಿಗೆ ನೀ ಬಾರದೆ ಹೋದರೆ ನನ್ನ ಕನಸಿಗೆ..! ಉಳಿಗಾಲ ವಿಲ್ಲ ಈಗ ಆ ನಿದೆರೆಗೆ ನೀ ಬೇಗ ಬರುವೆಯಾ ನನ್ನ ಮನಸಿಗೆ…!! ದೂರದ ‌ಪರಿಚಯ ನಮ್ಮದು ಆದೇವೂ ಆತ್ಮೀಯರಿಂದು, ಕಾರಣವೇ ಬೇಕೆಯೆಂದು ಬಯಸದು ಮನಸಿದು ಇಂದು..!! ನಮ್ಮಯ ಸಲ್ಲಾಪದ ಪ್ರೀತಿಗೆ ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ ಮದುವೆ ದಿಬ್ಬಣದ ಹೊತ್ತಿಗೆ ಆಗುವೆವು ಆದರ್ಶದ ಜೋಡಿಗೆ..!! ಮೋಡಿ ಯದು ಮಾಡಿದೆ ನೋಡು ನಿ‌ನ್ನೆದೆಯ ಉಸಿರಿನ ಹಾಡು..! ಹಿಡಿದಿರುವ ಪ್ರೀತಿಯ ಜಾಡು […]

ಕಾವ್ಯಯಾನ

ಸಾಲಿನ ಜಾಡು ಹಿಡಿದು ಡಾ.ಗೋವಿಂದ ಹೆಗಡೆ “ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…” ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು. ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ. […]

ಪ್ರಸ್ತುತ

ಕೇಂದ್ರದ ಬಜೆಟ್ ಗಣೇಶ್ ಭಟ್ ಶಿರಸಿ ಕೇಂದ್ರ ಬಜೆಟ್ 2020 ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ. ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ […]

ಕಾವ್ಯಯಾನ

ಬೇಕಿತ್ತ..? ಮದುಸೂದನ ಮದ್ದೂರು ಬೇಕಿತ್ತ..? ತಂಗಾಳಿಗೆ ಮೈಯೊಡ್ಡಿದೆ ಬಿರು ಬಿಸಿಲಲಿ ಬಸವಳಿದೆ ತೆರೆದ ಮನದ ಕಿಟಕಿಗಳ ಮುಚ್ಚಿದೆ ಹಳೆಯ ನೆನಪುಗಳ ಕಸ ಗುಡಿಸಿದೆ ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ ಕಂಬಳಿ ಕವುಚಿ ಕಣ್ಮುಚ್ಚಿದೆ ನಿದ್ದೆ ಬರುತ್ತಿಲ್ಲ….. ಹೃದಯದೀ ನಿನ್ನ ಪಿಸುದನಿ ಮಾರ್ದನಿ ನೆನಪುಗಳ ಮೆರವಣಿಗೆ ನಿನ್ನ ಮರೆವಣಿಕೆಗೆ ಇಷ್ಟೇಲ್ಲಾ ಬೇಕಿತ್ತ…. ಗೊತ್ತಾಗುತ್ತಿಲ್ಲ… ********

ಅನುವಾದ ಸಂಗಾತಿ

ಮೂಲ: ಮೇರಿ ಆಲಿವರ್(ಅಮೇರಿಕನ್) ಕನ್ನಡಕ್ಕೆ: ಕಮಲಾಕರ ಕಡವೆ ಪ್ರಾರ್ಥನೆ ಏನೆಂದು ಅರಿಯೆ ನಾನು” ಪ್ರಾರ್ಥನೆ ಏನೆಂದು ಸರಿಯಾಗಿ ತಿಳಿಯದು ನನಗೆನನಗೆ ತಿಳಿದಿದ್ದೆಂದರೆ, ಹೇಗೆ ಲಕ್ಷ್ಯವಿಟ್ಟು ಕೇಳುವದು, ಹೇಗೆ ಬೀಳುವದುಹುಲ್ಲಿನ ಮೇಲೆ, ಹೇಗೆ ಮಂಡಿಯೂರಿ ಹುಲ್ಲ ಮೇಲೆ ಕೂರುವದುಹೇಗೆ ಸೋಮಾರಿಯಾಗಿದ್ದು ಖುಷಿಯಾಗಿರುವದುಹೇಗೆ ಹೊಲದ ಉದ್ದ ನಡೆಯುವದು, ಇವುಗಳೇ ನಾನು ದಿನವಿಡೀ ಮಾಡುತ್ತಲಿರುವದು.ಹೇಳಿ, ಮತ್ತೇನ ಮಾಡ ಬೇಕಿತ್ತು?ಎಲ್ಲವೂ ಕೊನೆಗೆ ಕೊನೆಯಾಗುತ್ತಾವಲ್ಲವೇ, ಸ್ವಲ್ಪ ಬೇಗನೆ?ಹೇಳಿ, ನೀವೇನ ಮಾಡುವಿರಿ ನಿಮ್ಮ ಇರುವ ಒಂದು ಅಮೂಲ್ಯ ಅಪಕ್ವ ಬಾಳಿನಲ್ಲಿ? “I Don’t Know What […]

ಕಾವ್ಯಯಾನ

ಜೀವಾತ್ಮಕ್ಕೆಲ್ಲ ದೀಪಿಕಾ ಬಾಬು ಮನದುಂಬಿ ಬರೆದಿಹೆನು ಇದನು ನಾನೂ ನೀವು ಓದಿದರೆ ಸಾರ್ಥಕವು, ನನಗೆ ಇನ್ನೂ….!! ನನ್ನ ಬರಹಗಳೆನು ಶ್ರೇಷ್ಠ ಕಾವ್ಯಗಳಲ್ಲಾ, ನೀವೆಳುವ ಮುನ್ನ ತಿಳಿದಿಹೆನು ನಾನೆಲ್ಲಾ….!!. ಬರೆದ ಸಾಲಿನ ನಡುವೆ ಮೂಡಿದ ಭಾವಗಳೆಲ್ಲಾ ನಿಮ್ಮನು ಒಮ್ಮೆ ಹೀಗೆ ತಲ್ಲಣ ಗೊಳಿಸುವವೆಲ್ಲಾ..!! ಅಕ್ಷರ ಪಾತ್ರದ ಒಳಗೆ ನೂರಾರು ದುಗುಡವನೆಲ್ಲಾ ಗೀಚಿಬರದೆ ನಾನು ನಿಕ್ಷಲ್ಮಶ ಹೃದಯದ ಹೊನಲಾ..!! ಏನಿದೇ ನಿನ್ನಯ ಒಳಗೆ ಅರ್ಥವಿರದ ಪದಗಳೆಲ್ಲಾ, ಸಹನೆ ಎಂಬುದೇ ಬೇಕು ತಿಳಿಯುವ ಉದ್ದೇಶವಲ್ಲಾ..!! ನೂರಾರು ಸಾವಿರಾರು ಕಲ್ಪನೆಯ ಕುಸುಮಗಳಿಗೆಲ್ಲಾ ಬರಹದ […]

Back To Top