Category: ಕಥಾಗುಚ್ಛ

ಕಥಾಗುಚ್ಛ

ಮುಕ್ತಿ

ನಾಗಶ್ರೀ ಅವರ ‘ ಮುಕ್ತಿ ‘ ಕತೆ ತುಂಬಾ ಸಹನೆಯಿಂದ , ಜೀವನ ಪ್ರೀತಿಯಿಂದ ಬರೆದ ಕತೆ. ಮುಕ್ತಿ ಓದುವಾಗ ಮಾಸ್ತಿಯವರು ನೆನಪಾದರು. ನಾಗಶ್ರೀ ಕತೆ ಹೇಳುವ ಶೈಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ತರಹ. ಕುಟುಂಬ, ಜೀವನ ಪ್ರೀತಿಯ ಆಯಾಮಗಳು ಈ ಕತೆಯಲ್ಲಿವೆ.
ಕಥನ ಕಲೆ ನಾಗಶ್ರೀಗೆ ಸಿದ್ಧಿಸಿದೆ. ಯಾವ ವಸ್ತುವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಕಲಾತ್ಮಕತೆ ದಕ್ಕಿದೆ ಎನ್ನುತ್ತಾರೆ ಸಹೃದಯಿ ನಾಗರಾಜ್ ಹರಪನಹಳ್ಳಿ.
ಈ ವಾರದ ಸಂಗಾತಿಗಾಗಿ ಈ ಕತೆಯನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ…

ಹೊಸ ಬಿಳಲು….!!

ಕಥೆ ಹೊಸ ಬಿಳಲು….!! ಯಮುನಾ.ಕಂಬಾರ ಚೆನ್ನವ್ವಳ ಕೈಗೆ ಹಚ್ಚಿದ BP ಮೀಟರ ತೆಗೆದು , ನರ್ಸಮ್ಮನಿಗೆ ಸುಗರ ಚೆಕ್ಕ ಮಾಡಲು  ಡಾಕ್ಟರ ‘ಕಿರಣ ‘    ಹೇಳಿದ.  ಚೆನ್ನವ್ವ ಬೆಡ್ಡ ಮೇ ಲಿಂದ ಗಡಬಡಿಸಿ ಎದ್ದು ನರ್ಸ್ಸಮ್ಮ ನನ್ನೇ ನೋಡತೊಡಗಿದಳು. ನರ್ಸ್ಸ ಕೈಯಲ್ಲಿ  ಚಿಕ್ಕದೊಂದು ಸೂಜಿಯಿತ್ತು ಅದರ ಮೇಲೆ ಅಂಟಿಸಿದ ಹಾಳೆ ಮಾಸಿತ್ತು. ಅದರ ಮೇಲೆ  ಅಲ್ಲಲ್ಲಿ ಕಂದು ಕಪ್ಪು ಕಲೆಗಳೂ ಇದ್ದವು . ಚೆನ್ನವ್ವ ತನ್ನ  ಮೈಯ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು   ” ಸೂಜಿ,  ಹೊಸದಿದ್ದ್ರ ಚುಚ್ಚರಿ …..” […]

ಯಾರ ಜೀವನವೆಲ್ಲೋ…

ಕಥೆ ಯಾರ ಜೀವನವೆಲ್ಲೋ… ಟಿ.ಎಸ್‍.ಶ್ರವಣಕುಮಾರಿ ವನಜಾಕ್ಷಿ ಮತ್ತು ಕೃಷ್ಣಮೂರ್ತಿ ಮಗ ಪ್ರಸಾದಿಯೊಂದಿಗೆ ದೇವಪುರಿಗೆ ಹೋಗಲು ಬೆಳಗ್ಗೆ ಆರುಗಂಟೆಯ ಬಸ್ಸಿಗೆ ಬೆಂಗಳೂರಿಂದ ಹೊರಟಿದ್ದರು. ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಯಾವುದಾದರೂ ಬೇರೆ ಪ್ರೈವೇಟ್‌ ಬಸ್ಸಿನಲ್ಲೋ, ಇಲ್ಲವೇ ಮಿನಿಬಸ್ಸಿನಲ್ಲೋ ಅಲ್ಲಿಗೆ ತಲುಪಬೇಕಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಶಿವಮೊಗ್ಗ ತಲುಪಿದರೆ, ತಕ್ಷಣವೇ ಅಲ್ಲಿಗೆ ಹೋಗಲು ವಾಹನ ಸಿಕ್ಕರೆ, ಒಂದರ್ಧ ಗಂಟೆಯ ಪಯಣವಷ್ಟೇ. ಈಗೊಂದು ವಾರದಿಂದ, ಈ ನಿರ್ಣಯ ತೆಗೆದುಕೊಂಡಾಗಿನಿಂದಲೂ ವನಜಾಕ್ಷಿಯ ಮನಸ್ಸಿಗೆ ನೆಮ್ಮದಿಯಿಲ್ಲ. ಕೃಷ್ಣಮೂರ್ತಿಗಳಿಗೆ ತಾನೇ ಏನು, ವಿಧಿಯಿಲ್ಲ, ಕಠಿಣವಾದರೂ ನಿರ್ಧಾರವನ್ನು ತೆಗೆದುಕೊಳ್ಳಲೇ […]

ತವರಿನ ಬೆಟ್ಟ

ಕಥೆ ತವರಿನ ಬೆಟ್ಟ ಶಾಂತಿ ವಾಸು ನಿಮ್ಮವ್ವ ಯೋಳ್ಕೊಟ್ಟಾಳೆನೋ? ಯಾವನ್ತವ ಉಕ್ತೈತೆ ಅಂತ ಮಾಡೀ? ಅವ್ನು ಯಾವನೋ ಮನೆ ಕಟ್ಟುದ್ರೆ ನಿನ್ನನ್ಡ್ಯಾಕೇ ಉರ್ಕಂತೈತೆ ರಂಡೆ?  ಪಿರ್ಯಾದಿ ಯಾಕೆ ಕೊಟ್ಟೆ ಅಂದ್ರೆ ನನ್ನಿಷ್ಟ ಅಂತೀಯ”? ಎನ್ನುತ್ತಾ ಹೆಂಡತಿ ಟಂಕಿಯ ಬೆನ್ನಿನ ಮೇಲೆ ಒಂದೇ ಸಮ ನಾಲ್ಕೈದು ಸಲ ಕುಟ್ಟಿ ಹೊಸ್ತಿಲು ದಾಟಿ ಹೊರಬಂದ ಅಳ್ಳಯ್ಯನಿಗೆ ಎಡಗಡೆಯ ಜಗುಲಿಯ ಮೇಲೆ ಪಟ್ಟಾಪಟ್ಟಿ ಚಡ್ಡಿ, ಮಾಸಿದ ಬನಿಯನ್ನು ತೊಟ್ಟು ಪಕ್ಕದಲ್ಲೇ ಚೌಕದ ಮನೆಗಳ ತೂತು ಬಿದ್ದ ಕಂಬಳಿ ಅದರ ಮೇಲೊಂದು ಕೋಲಿಟ್ಟು, […]

ರೊಟ್ಟಿ ತೊಳೆದ ನೀರು

ಕಥೆ ರೊಟ್ಟಿ ತೊಳೆದ ನೀರು ಶಾಂತಿವಾಸು ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಕಿ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಹೊರಟ ಅರವತ್ತೆಂಟರ ಪಾಂಡುರಂಗಯ್ಯ ಶೆಟ್ಟರು, ಇನ್ನೂ ಮಲಗಿಯೇ ಇದ್ದ ಹೆಂಡತಿ ಲಲಿತಮ್ಮಳೆಡೆ ನೋಡಿದರು. ಇಷ್ಟು ಹೊತ್ತಿಗಾಗಲೇ ಗೇಟಿನ ಹೊರಗೆ ಒಳಗೆಲ್ಲ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ, ಡಿಕಾಕ್ಷನ್ ಹಾಕಿಟ್ಟು ತನ್ನೊಂದಿಗೆ ವಾಕಿಂಗ್ ಹೊರಡುವವಳು ಇನ್ನೂ ಏಕೆ ಎದ್ದಿಲ್ಲವೆಂಬ ಅನುಮಾನವಾಯಿತು. ಉಸಿರಾಡುತ್ತಿದ್ದಾಳೆಯೇ? ಎಂದು ತಿಳಿದುಕೊಳ್ಳುವ ಸಲುವಾಗಿ ತುಸು ಮಂಜಾದ ಕಣ್ಣಿನಿಂದ ಹತ್ತಿರ ಹೋಗಿ ಬಗ್ಗಿ ನೋಡಿದರು. ‘ಬದುಕಿದ್ದಾಳೆ’ ಎಂದು […]

ಸಿನಿಮಾ ಅಲ್ಲ… ಜೀವನ

ಸಿನಿಮಾ ಅಲ್ಲ… ಜೀವನ ಮಧುರಾ ಕರ್ಣಮ್             ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ […]

ಪಾತ್ರೆ ಪಂಡಿತೆ

ಒಂದು ತಿಂಗಳ ನಂತರ ಮನೆಯ ಅಕ್ಕ-ಪಕ್ಕ ಓಡಾಡುತ್ತಾ ನನ್ನ ಗಮನ ಸೆಳೆಯಲು ಯತ್ನಿಸಿದ್ದಳು. ಕುಡುಕರ ಎದುರು ಮರಕ್ಕೆ ನೇತು ಹಾಕಿದ ಹೆಂಡದ ಬಾಟಲಿಯಂತೆ ಗಂಗಾ ನನಗೆ ಕಾಣಲಾರಂಭಿಸಿದಳು.

ಗೋಡೆಯ ಮೂಲೆ

ಶ್ರಮಕುಮಾರ್ ಬರೆಯುತ್ತಾರೆ
ಎಷ್ಟೋ ಹುಡುಗಿಯರು ರಸ್ತೆಯಲ್ಲಿ ನಡೆಯುವಾಗ ಮೂಡುವ ಸೂರ್ಯನಿಗೆ ಎದರಿ ನಡೆಯುತ್ತಾರೆ ಅವಳು ಹಾಗೆ ನಡೆದವಳಿರಲಿಕ್ಕಿಲ್ಲ ಧೈರ್ಯವಾಗಿ ನಗ್ನಳಾಗಿದ್ದವಳು. ಯಾವೊಂದು ಕಲೆಗಳು ಅವಳ ಚರ್ಮಕ್ಕಂಟಿರಲಿಲ್ಲ

ಅತಿ ಮಧುರಾ ಅನುರಾಗ

ಅಮ್ಮಾ ! ದುನಿಯಾ ಬದಲಾಗ್ತಿದೆ. ಈಗ ಇಷ್ಟಪಟ್ಟವರ ಜೊತೆಯಲ್ಲೇ ಮದುವೆಗಳು ಆಗ್ತಿರೋದು. ಇವು ತಪ್ಪು ಸಹ ಅಲ್ಲ. ಅದೆಲ್ಲ ಸರಿ. ನಿಮಗಿಷ್ಟಾನಾ ಇಲ್ಲಾ ಅದ್ ಹೇಳಿ “ ಎಂದಳು.

Back To Top