Category: ಕಥಾಗುಚ್ಛ

ಕಥಾಗುಚ್ಛ

ಹೊಸ ಮಾಡಲ್

ಕಥೆ ಹೊಸ ಮಾಡಲ್ ಗುರುರಾಜ ಶಾಸ್ತ್ರಿ ಅದು ಗಿರಿಜೆಯ ಮದುವೆ ಸಂಭ್ರಮ.  ಮದುವೆಮನೆಯಲ್ಲಂತು ಎಲ್ಲರದೂ ಓಡಾಟವೋ ಓಡಾಟ.  ಏನೋ ಬಹಳ  ಕೆಲಸವಿದೆಯೆಂಬಂತೆ ಮುಖ್ಯ ಆವರಣದ  ಆ ಕಡೆಯಿಂದ ಈಕಡೆಯವರೆಗೂ  ಓಡಾಡುತ್ತಿರುವ ರೇಷ್ಮೆ ಸೀರೆ ಉಟ್ಟ ಮದುವೆಯಾಗದ  ಹೆಣ್ಣುಮಕ್ಕಳು; ಮದುವೆಯಾಗಿದ್ದರೇನಂತೆ, ನಾವೂ ಇನ್ನೂ ಚಿಕ್ಕ ವಯಸ್ಸಿನವರೇ ಎಂದು ಭಾವಿಸುತ್ತಾ ಮದುವೆಯಾಗದ ಹುಡುಗಿಯರಿಗೆ ಸವಾಲೆಂಬಂತೆ ಓಡಾಡುತ್ತಿರುವ ಯುವ  ಗೃಹಿಣಿಯರು; ಅಲ್ಲಲ್ಲಿ ಕಣ್ಣಾಡಿಸುತ್ತಾ ಅವಳು ನೋಡು ಪಾದರಸದಂತೆ, ಇವಳು ನೋಡು, ತಾನೇ ರೂಪವತಿಯೆಂಬ ಅಹಂಕಾರ, ಇನ್ನು ಅವಳು ಮೂಷಂಡಿ ತರಹ ಮೂಲೆಯಲ್ಲಿ […]

ಅಪ್ಸರೆಯ ಮೂರನೆ ಮದುವೆ!

ಕೆಲವರು ಅನೇಕ ಅಂತಸ್ತುಗಳನ್ನು ಭೂದೇವಿಯ ಒಡಲೊಳಗೂ ಕೊರೆದು ನಿರ್ಮಿಸುವ ನಕ್ಷೆಗಳನ್ನು ಸರ್ಕಾರದ ಒಪ್ಪಿಗೆಗೆ ಕೊಟ್ಟರೂ, ಅವು ಅನುಮೋದನೆ ಆಗಲಿಲ್ಲ. ಹಾಗಾಗಿದ್ದರೆ ಭೂಮಿಯ ಗತಿ! ಸ್ವಾರ್ಥ ಬುದ್ಧಿಯ, ದುರಂತ ಮನದ ಖದೀಮರು, ಮನುಷ್ಯನ ಅಸ್ತಿತ್ವ ಭೂಮಿಯಲ್ಲಿ ನಶಿಸುವವರೆಗೂ ಇದ್ದೇ ಇರುವರು, ನಿದರ್ಶನಕ್ಕಾದರು!

ಮಗು ಎದ್ದು ಅತ್ತರೆ…ʼ ಒಂದು ಕ್ಷಣ ಕಾಲು ತಡೆಯಿತು… ಮರುಕ್ಷಣವೇ ಓ ಅಲ್ಲಿ ಶ್ರೀಧರ ಆಗಲೇ ಕಾಯುತ್ತಾ ತುಂಬಾ ಹೊತ್ತಾಗಿರಬಹುದು ಎನ್ನಿಸಿ ಸರಸರ ಹೆಜ್ಜೆ ಹಾಕಿದಳು

ಆಡುತ್ತಿದ್ದ ಮಗುವನ್ನೆತ್ತಿಕೊಂಡು ಎಂದಿನಂತೆ ಬಾಲ್ಕನಿಗೆ ನಡೆದು ತಿನ್ನಿಸತೊಡಗಿದಳು. ʻಇದೇ ನಾನು ಇವ್ನಿಗೆ ತಿನ್ನಿಸ್ತಿರೋ ಕಡೇ ಊಟವಾಗಿದ್ರೆ….ʼ ಅನ್ನಿಸಿ ಮೈಯೆಲ್ಲಾ ನಡುಗಿತು. ಯಾವುದರ ಅರಿವೂ ಇಲ್ಲದ ಪುಟ್ಟ ರಾಮ ಅಮ್ಮನ ಮುಖ ನೋಡಿ ನಕ್ಕಿತು. ಹಾಗೆಯೇ ಮಗುವನ್ನಪ್ಪಿಕೊಂಡವಳ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು.

ಸುಂದರಮ್ಮನೂ ಸುಮ್ಮನಿರಲಾಗದೆ “ವರ ಕೊಟ್ಟ ಹಾಗೆ ಕೊಡ್ತಿದೀಯ. ಇನ್ನೇನು ಗುನುಗು ಅವಳಿಗೆ. ನೀನು ಹೀಗೆ ತಲೆಮೇಲೆ ಕೂರಿಸ್ಕೊಂಡಿದ್ದಕ್ಕೇ ಅವ್ಳು ಹೀಗೆ ಹದಗೆಟ್ಟಿದ್ದು” ಸಿಡುಕಿದರು. ನಿಧಾನವಾಗಿ ಎದ್ದ ಪದ್ಮ ಏನೂ ಮಾತಾಡದೆ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿದಳು.

… ಆದರೂ… ಯೋಚನೆಗಳ ಗೊಂದಲದಲ್ಲಿ ಬಿದ್ದಿರುವಾಗಲೇ ಅವಳ ಜೀವನಕ್ಕೆ ಈ ಹೊಸ ತಿರುವೂ ಸಿಕ್ಕಿತ್ತು… ಇದು ಎಲ್ಲಿಗೆ ಹೋಗಿ ಕೊನೆ ಮುಟ್ಟತ್ತೋ… ಮೂರ‍್ನಾಲ್ಕು ದಿನಗಳಾದರೂ ಮತ್ತೆ ವೆಂಕಟೇಶಯ್ಯನವರು ಈ ಬಗ್ಗೆ ಏನೂ ಮಾತಾಡಿಲ್ಲ. ಇದೂ ಒಂದು ತರಹ ಹೆದರಿಕೆ ಹುಟ್ಟಿಸಿ, ಈ ಮೌನ ಯಾವುದಕ್ಕೆ ಪೀಠಿಕೆಯೋ ಎನ್ನಿಸಿಬಿಟ್ಟಿತು…

ಬಿದ್ದು ಬಿಡುತ್ತಾಳೇನೋ ಎಂದು ಗಟ್ಟಿಯಾಗಿ ಅವಳನ್ನು ಹಿಡಿದುಕೊಂಡವನಿಗೆ ಅವಳನ್ನು ಬಿಡಬೇಕೆನ್ನಿಸಲಿಲ್ಲ. ಅವನು ತನ್ನನ್ನು ಬಿಡಲಿ ಎಂದು ಅವಳಿಗೂ ಅನ್ನಿಸಲಿಲ್ಲ… ಬೇಸಗೆಯ ಮೊದಲ ಮಳೆ ಇದ್ದಕ್ಕಿದ್ದಂತೆ ಶುರುವಾಗಿ ಕಾದ ಭೂಮಿ ನೆಂದು ತಣಿಯತೊಡಗಿತ್ತು

ಗಿಳಿಯು ಪಂಜರದೊಳಿಲ್ಲ

ಸೀನಂಗೆ ಇಪ್ಪತ್ತೈದು ವರ್ಷವಾದಾಗ್ಲಿಂದ ಅವನಿಗೊಂದು ಹುಡುಗಿ ಹುಡುಕಕ್ಕೆ ಶುರುಮಾಡಿದ್ದು. ಆಗ್ಲೇ ಅವ್ನಿಗೆ ನಲವತ್ತರ ಹತ್ತಿರತ್ತಿರ ವಯಸ್ಸೇನೋ ಅನ್ನೋ ಹಾಗೆ ಕಾಣ್ತಿದ್ದ. ಅರ್ಧ ತಲೆಕೂದ್ಲು ನೆರೆತುಹೋಗಿತ್ತು. ಎಷ್ಟು ರೀತೀಲಿ ಹೆಣ್ಣು ಹುಡುಕಿದ್ದು. ಹೊಸ ಸಂಬಂಧಗಳೂ ಕೂಡಿ ಬರ‍್ಲಿಲ್ಲ;

ಹೀಗೊಬ್ಬ ಅಜ್ಜ

ಕಥೆ ಹೀಗೊಬ್ಬ ಅಜ್ಜ ತಮ್ಮಣ್ಣ ಬೀಗಾರ. ಅವನದು ಯಾವಾಗಲೂ ಶಾಂತವಾದ ಮುಖ. ಬೆಳ್ಳಗಿನ ಉರುಟಾದ ಮುಖದಲ್ಲಿ ಬಿಳಿಯ ಮೀಸೆ ಬಿಳಿಯ ಹುಬ್ಬು ನಕ್ಕರೆ ಅಷ್ಟೇ ಬಿಳಿಯದಾಗಿ ಹೊಳೆಯುವ ಹಲ್ಲು ಎಲ್ಲ ಅವನನ್ನು ನೋಡಿದಾಗ ನಮಗೆ ಅವನಲ್ಲಿ ಏನೋ ಆಕರ್ಷಣೆಯಾಗುತ್ತಿತ್ತು. ಮುಖದ ಅಗಲಕ್ಕೆ ಚಿಕ್ಕದೇನೋ ಅನಿಸುವಂತಹ ಕಣ್ಣುಗಳು ಹುಬ್ಬಿನ ಅಡಿಯಲ್ಲಿ ಸ್ವಲ್ಪ ಆಳದಲ್ಲಿ ಎಂಬಂತೆ ಕುಳಿತಿದ್ದವು… ಆದರೆ ಆ ಕಣ್ಣುಗಳ ಹೊಳಪಿನಿಂದಾಗಿ ಅವನ ಮುಖ ನೋಡಿದ ತಕ್ಷಣ ಕಾಣುವ ದಪ್ಪ ಮೀಸೆಯ ಜೊತೆಗೇ ಕಣ್ಣುಗಳೂ ಗಮನ ಸೆಳೆಯುತ್ತದ್ದವು. ಅಯ್ಯೋ, […]

ಮನದ ತುಡಿತ

ಮಾಡಿಟ್ಟ ಅಡುಗೆ ಪಾತ್ರೆಗಳು ಹಾಗೆಯೇ ಇದ್ದವು.ಯಾಕೋ ಖಾಲಿ,ಖಾಲಿಯಂತೆ ಭಾಸವಾಗುತ್ತಿದ್ದ ಆ ಹಾಲಿನಿಂದ ಎದ್ದು ಭಾರವಾದ ಮನಸ್ಸನ್ನು ಹೊತ್ತು ದೇವರ ಮುಂದೆ ಹೋಗಿ ಕುಳಿತಳು ಶ್ರೀಶ.ತಲೆಯೊಳಗೆಲ್ಲ ಏನೇನೋ ಕೆಟ್ಟ ಆಲೋಚನೆಗಳು ಸುಳಿಯತೊಡಗಿದ್ದವು.

Back To Top