ಕವಿತೆ ಕಾರ್ನರ್

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂ ಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನೂ ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದ ಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲುಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನು ಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿ ನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆ ಎಲ್ಲಿ ಹೋದೆ ಯಾರಿರುವರು ಜೊತೆಗೆಕೇಳಬಾರದ ಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರಬಯಲು ಸೀಮೆಯ […]

ಕಾವ್ಯಯಾನ

ಭ್ರೂಣ ಕಳಚುವ ಹೊತ್ತು ಬಿದಲೋಟಿ ರಂಗನಾಥ್ ಭ್ರೂಣ ಕಳಚುವ ಹೊತ್ತು ಗಂಡು ಕೂಸಿಗಾಗಿ ಬಯಕೆ ಬಾಯಾರಿ ಹುಟ್ಟಿದ ಹೆಣ್ಣುಕಂದಮ್ಮಗಳ ಭ್ರೂಣಗಳನ್ನು ಯಾವುದೋ ಗುದ್ದರಗಳಲ್ಲಿ ಹೂತು ಮಣ್ಣೂ ತಿನ್ನಲಾರದೆ ನಾಯಿಗಳು ವಾಸನೆ ಹಿಡಿದು ಎರಡೂ ಕಾಲುಗಳಲ್ಲಿ ಬಗೆ ಬಗೆದು ಕಚ್ಚಿ ಕಚ್ಚಿತಿನ್ನುತ್ತಿವೆ ಇಟ್ಟಾಡಿಕೊಂಡು ಹಸಿಮಾಂಸವೆಂದು.! ರಕ್ತಸೇರಿ ಮಾಂಸ ತುಂಬಿ ಆಕಾರ ಮೂಡಿ ತಾಯಿಯೊಳಗಿನ ಅಂತಃಕರಣ ತುಂಬಿ ಜೀವ ಪಡೆದು ಹೆಣ್ಣು ಕೂಸು ಅಂದಾಕ್ಷಣ ಕಣ್ಣುಗಳಲ್ಲಿ ಬೆಂಕಿಯುಂಡೆ ಉರುಳಿ ಮನಸುಗಳನ್ನು ಸುಡುವ ಮುಟ್ಟಾಳತನ ಅಳುವ ಮಗುವಿನ ದ್ವನಿ ಕೇಳಿಸಿಕೊಳ್ಳುತ್ತಲೇ ಎದೆಯಲ್ಲಿ […]

ಅನುವಾದ ಸಂಗಾತಿ

ಓಂಪ್ರಕಾಶ್ ವಾಲ್ಮೀಕಿ ಉತ್ತರಭಾರತದ ದಲಿತ ಕಾವ್ಯ ಕನ್ನಡಕ್ಕೆ-ಕಮಲಾಕರ ಕಡವೆ ಠಾಕೂರನ ಬಾವಿ ಒಲೆ ಮಣ್ಣಿಂದುಮಣ್ಣು ಕೊಳದ್ದುಕೊಳ ಠಾಕೂರಂದು ಹಸಿವು ರೋಟೀದುರೋಟಿ ರಾಗಿಯದುರಾಗಿ ಗದ್ದೇದುಗದ್ದೆ ಠಾಕೂರಂದು ಎತ್ತು ಠಾಕೂರಂದುನೇಗಿಲು ಠಾಕೂರಂದುನೇಗಿಲ ಮೇಲಿನ ಕೈ ನಮ್ದುಫಸಲು ಠಾಕೂರಂದು ಬಾವಿ ಠಾಕೂರಂದುನೀರು ಠಾಕೂರಂದುಗದ್ದೆ-ಕಣಜ ಠಾಕೂರಂದುರಸ್ತೆಬೀದಿ ಠಾಕೂರಂದುಮತ್ತೆ ನಮ್ದೇನುಂಟು?ಹಳ್ಳಿ?ಪೇಟೆ?ದೇಶ? ********************************* ಮೂಲಕವಿತೆ ठाकुर का कुआँ / ओमप्रकाश वाल्मीकि चूल्‍हा मिट्टी कामिट्टी तालाब कीतालाब ठाकुर का । भूख रोटी कीरोटी बाजरे कीबाजरा खेत काखेत ठाकुर […]

ಕಾವ್ಯಯಾನ

ಈ ಇರುಳು ನೂರುಲ್ಲಾ ತ್ಯಾಮಗೊಂಡ್ಲು ಈ ಇರುಳು ಕಣ್ಣುಗಳಲಿ  ಸೂರ್ಯ ಉರಿಯುತಿದ್ದಾನೆ  ಲಕ್ಷ ಲಕ್ಷ ನಕ್ಷತ್ರಗಳು ದನಿ ಕೂಡಿಸಿವೆ ನವ ಸ್ವಾತಂತ್ರ್ಯದ ಮೊಳಗಿನಲಿ  ನಮ್ಮ ಯಾತನೆಗಳು ದಿಕ್ಕು ದಿಕ್ಕಿಗೂ ಒಯ್ಯುವ ಸಮೀರನೇ ನಿನಗೆ ವಂದನೆ ಅಸಮಾನತೆ ,ಶೋಷಣೆಯಲಿ ನಲುಗಿದೆ ಈ ಹೊತ್ತು ಈ ದೇಶ ನಮ್ಮ ಪಾಡಿನ ಕಿಚ್ಚು ಮೂಡಲಿ ಎಲ್ಲೆಡೆ ಬದುಕು ಶೂನ್ಯವಾಗಿದೆ ಹೆಪ್ಪುಗಟ್ಟಿದ ರಾತ್ರಿಯಲಿ ನೋವಿನ ಹಾಡು ಹೊರಡುತಿದೆ ಇದೊ! ಎದೆ ತಂತಿಯ ನರಳಿಕೆಯಲಿ ಕಣ್ಣ ಪೊರೆ ಮಂಜಾಗಿದೆ ನಾಳಿನ ಚಿಂತೆಯಲಿ ಈ ಸುದೀರ್ಘ […]

ಕೃಷಿಬೆಲೆ ಆಯೋಗ

ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು….. ಗಣೇಶಭಟ್ ಶಿರಸಿ. ಕರ್ನಾಟಕ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಕೊಡಿಸಲು…… ಕರ್ನಾಟಕದ ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ನೇಮಿಸಿರುವ ಕರ್ನಾಟಕ ಕೃಷಿ ಬೆಲೆ ಆಯೋಗವು ಸಕ್ರಿಯವಾಗಿ ಚಿಂತಿಸುತ್ತಿದೆ. ರಾಜ್ಯದ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಮತ್ತು ಸದೃಢ ಮಾರುಕಟ್ಟೆ ಸಿಗಬೇಕೆಂಬ ಉದ್ದೇಶದಿಂದ ಈ ಆಯೋಗವು ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. ಆಯೋಗ ಮಾಡಿರುವ ಪ್ರತಿಯೊಂದು ಶಿಫಾರಸ್ಸಿನಲ್ಲೂ ರೈತರ, ರೈತಾಬಿಯ ಕುರಿತಾದ ಪ್ರಾಮಾಣಿಕ ಕಾಳಜಿ ಎದ್ದುಕಾಣುತ್ತದೆ. ರಾಜ್ಯಸರ್ಕಾರ ಮನಸ್ಸು ಮಾಡಿದರೆ […]

ಸ್ವಾತ್ಮಗತ

ಶಾಂತವೇರಿ ಗೋಪಾಲಗೌಡರು.! ಮಾನವ ಸರಳ-ಸಮಾನತೆಯ, ನಿಮ್ನವರ್ಗದ ನಾಯಕ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಶಾಂತವೇರಿ ಗೋಪಾಲಗೌಡರು.! ಕೆ.ಶಿವು ಲಕ್ಕಣ್ಣವರ ನಾನು ಒಂದಿಷ್ಟು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಮಾಜವಾದಿಗಳ ಬಗೆಗೆ ಬರೆಯುತ್ತಿದಂತೆ ನಮ್ಮ ಎಲ್ಲ ಮಾನವ ಸಮಾನ ಮನಸ್ಕ ಮನುಷ್ಯರ ಬಗೆಗೂ ಒಂದಿಷ್ಟು ಲೇಖನ ಬರೆಯಿರಿ ಎಂದು ಗೆಳೆಯರು ಕಿವಿಮಾತು ಹೇಳಿದರು. ಆಗ ಆ ನಿಟ್ಟಿನಲ್ಲಿ ಯೋಚಿಸಿದಾಗ ಮೊದಲು ಶಾಂತವೇರಿ ಗೋಪಾಲಗೌಡರ ಬಗೆಗೇ ಬರೆಯುವುದೇ ಉತ್ತಮ ಎಂದು ನಮ್ಮ ಶಾಂತವೇರಿ ಗೋಪಾಲಗೌಡರ ಮಾಹಿತಿ ಹೆಕ್ಕಿದೆ. ಇಂತಹ ಸಮಾಜವಾದಿಗಳ ಬಗೆಗೆ ಸಾಕಷ್ಟು […]

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ಅವನು ನನ್ನೊಡನೆ ಇದ್ದಿದ್ದು ಅದೊಂದೇ ಸಂಜೆ ನಾನು ನನ್ನನ್ನೇ ಮರೆತಿದ್ದು ಅದೊಂದೇ ಸಂಜೆ ಹಕ್ಕಿಗಳು ಗೂಡಿಗೆ ಮರಳಿ ಬರುವ ಹೊತ್ತು ಮನಸು ಗರಿಬಿಚ್ಚಿ ಹಾರಿದ್ದು ಅದೊಂದೇ ಸಂಜೆ ಪಡುವಣದ ಕೆನ್ನೆಗೆ ರಂಗು ಬಳಿದಿದ್ದ ಸೂರ್ಯ ಕನಸುಗಳಿಗೆ ಬಣ್ಣ ಏರಿದ್ದು ಅದೊಂದೇ ಸಂಜೆ ಎಷ್ಟೊಂದು ಅಲೆಗಳು ದಡವ ಮುದ್ದಿಟ್ಟವಾಗ ಕಡಲು ಉಕ್ಕುಕ್ಕಿ ಹರಿದಿದ್ದು ಅದೊಂದೇ ಸಂಜೆ ನಮ್ಮ ಬಡಕೋಣೆಯಲಿ ಚಂದ್ರೋದಯವಾಯ್ತು ಮಧುಪ ಮಧುವೆರೆದಿದ್ದು ಅದೊಂದೇ ಸಂಜೆ ಸಂಜೆ ಇರುಳಾಗಿ ಅಯ್ಯೋ ದಿನ ಉರುಳಿತಲ್ಲ ಕಾಡುವ […]

ಕವಿತೆ ಕಾರ್ನರ್

ಮುಂದಾಗಲಿಲ್ಲ ಇಷ್ಟು ವರುಷ ಎದೆಯೊಳಗಡಗಿಸಿಟ್ಟ ಮಾತುಗಳ ಮೂಟೆಗಳ ಬಾರವನ್ನಿಳಿಸಿ ಹಗುರಾಗಲೆಂದೇ ಆ ಬೇಟಿಯನ್ನು ನಿಕ್ಕಿ ಮಾಡಿದ್ದರು ಅಪರಿಚಿತ ಊರಿನ ಜನಸಂದಣಿಯಿರದ ಜಾಗ ಹುಡುಕಿ ಕೂತರು. ಮಾತು ಶುರು ಮಾಡುವುದಾದರೂ ಯಾರೆಂಬುದು ಅರ್ಥವಾಗದೆ ಕುಳಿತೇ ಇದ್ದರೂ ದ್ಯಾನಸ್ಥ ಪ್ರತಿಮೆಗಳಂತೆ ಬೆಳಿಗ್ಗೆ ಬಂದು ಕೂತವರು ಮೊದಲ ಮಾತಾಡುವ ಹೊತ್ತಿಗೆಮದ್ಯಾಹ್ನವಾಗಿತ್ತು ‘ಹೇಳು’ ಕೇಳಿದವನಿಗೇನೆ ಅನುಮಾನವಿತ್ತು ತನ್ನ ದ್ವನಿಯವಳ ಕಿವಿ ತಲುಪಿದ್ದರ ಬಗ್ಗೆ ಅಷ್ಟುಮೆಲುವಾಗಿ ಮಾತಾಡಿದ್ದ ಏನಿದೆ ಹೇಳಲು ಎಲ್ಲ ಮಾಮೂಲು ಇವತ್ತು ಒಂದು ದಿನ ಬಿಡುವು ಮಾಡಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯ್ತು ಎಲ್ಲಿಗೆ […]

Back To Top