ಈ ಇರುಳು
ನೂರುಲ್ಲಾ ತ್ಯಾಮಗೊಂಡ್ಲು
ಈ ಇರುಳು ಕಣ್ಣುಗಳಲಿ
ಸೂರ್ಯ ಉರಿಯುತಿದ್ದಾನೆ
ಲಕ್ಷ ಲಕ್ಷ ನಕ್ಷತ್ರಗಳು ದನಿ ಕೂಡಿಸಿವೆ
ನವ ಸ್ವಾತಂತ್ರ್ಯದ ಮೊಳಗಿನಲಿ
ನಮ್ಮ ಯಾತನೆಗಳು ದಿಕ್ಕು ದಿಕ್ಕಿಗೂ ಒಯ್ಯುವ
ಸಮೀರನೇ ನಿನಗೆ ವಂದನೆ
ಅಸಮಾನತೆ ,ಶೋಷಣೆಯಲಿ ನಲುಗಿದೆ
ಈ ಹೊತ್ತು ಈ ದೇಶ
ನಮ್ಮ ಪಾಡಿನ ಕಿಚ್ಚು ಮೂಡಲಿ ಎಲ್ಲೆಡೆ
ಬದುಕು ಶೂನ್ಯವಾಗಿದೆ
ಹೆಪ್ಪುಗಟ್ಟಿದ ರಾತ್ರಿಯಲಿ
ನೋವಿನ ಹಾಡು ಹೊರಡುತಿದೆ
ಇದೊ! ಎದೆ ತಂತಿಯ ನರಳಿಕೆಯಲಿ
ಕಣ್ಣ ಪೊರೆ ಮಂಜಾಗಿದೆ
ನಾಳಿನ ಚಿಂತೆಯಲಿ
ಈ ಸುದೀರ್ಘ ರಾತ್ರಿಯಲಿ
ಕನಸುಗಳು ತೇಲುತಿವೆ ಉಲ್ಕೆಗಳಾಗಿ
ತೆರೆದು ಮುಚ್ಚುವ ರೆಪ್ಪೆಗಳಲಿ
************
Very nice..