ರೈತನ ಮಗ ನಾ

ರೈತನ ಮಗ ನಾ

ಕವಿತೆ ರೈತನ ಮಗ ನಾ ಚಂದ್ರು.ಪಿ.ಹಾಸನ ನಾನೊಬ್ಬ ನಿಮ್ಮೆಲ್ಲರ ಅಚ್ಚ ಕನ್ನಡಿಗಹಳ್ಳಿಯ ಸೀದಾ ಸಾದಾದ ಹುಡುಗಸಿಂಪಲ್ಲಾಗೈತೆ ರೀ ನನ್ನ ಲೈಫ್ ಸ್ಟೈಲುನೋವಾದ್ರೂ ಕೊಡ್ತೀನೊಂದು ಸ್ಮೈಲು ಯಾವಾಗ್ಲು ನಾನಾಗಿರ್ತೀನಿ ಮೌನಿಒಮ್ಮೊಮ್ಮೆ ಹಿಡಿತಿರ್ತೀನಿ ಲೇಖನಿಬರೆಯೋಕ್ ಕುಂತ್ರೆ ಹುಚ್ಚನಂಗಾಗ್ತೀನಿಸುಮ್ ಸುಮ್ನೆ ತೋಚಿದ್ದು ಗೀಚ್ತೀರ್ತೀನಿ ಏನೇನೋ ಹುಚ್ಚ್ ಹುಚ್ಚಾಸೆ ಇಟ್ಕೊಂಡುಸುಮ್ನಿರ್ತೀನಿ ತಲೆ ತುಂಬಾ ಕೆಡ್ಸ್ಕೊಂಡುಅಣುಕಿಸಿದವರ ಮನಸ್ನಲ್ಲೇ ಬೈಕೊಂಡುಉತ್ತರಿಸೋಕ್ಕೆ ಸಮ್ಯಾನ್ನ ಕಾಯ್ಕೊಂಡು ಹಳ್ಳಿಯ ಸೊಗಡಲ್ಲಿ ದಿಲ್ಲೀಯಾ ಕಾಣ್ತೀನಿಕೊಳ್ಳೀಯಾ ಹಿಡಿದಾದ್ರೂ ಗುರಿ ಮುಟ್ತೀನಿಸೋತೆಜ್ಜೇಗಳೊಂದೇ ಮೆಟ್ಲಾಗುಸ್ಕೊಂಡುಸಾಗ್ತೀನಿ ಎದ್ಯಾಗೊಂದ ಛಲವಿಟ್ಕೊಂಡು ದೇಸಕ್ಕೆ ಅನ್ನ ಕೊಡೋ ರೈತಾನ ಮಗಾನಾಮೋಸಕ್ತಲೆಕೊಡೋದಿಲ್ರೀ ಜಾಯ್ಮಾನಾನಂಜಿಲ್ದಾ […]

ಇದು ದುಃಖದ ಸಂಜೆ

ಅನುವಾದಿತ ಕವಿತೆ ಇದು ದುಃಖದ ಸಂಜೆ ರಘುಪತಿ ಸಹಾಯ್ ಫಿರಾಖ್ ಗೋರಖ್ ಪುರಿ ಕನ್ನಡಕ್ಕೆ : ಆರ್.ವಿಜಯರಾಘವನ್ ಇದು ದುಃಖದ ಸಂಜೆ; ಚತುರೆಯ ಆ ನೋಟವ ಕುರಿತು ಮಾತನಾಡಿಮಾದಕತೆ ಹರಡುತ್ತಿದೆ; ಈಗ ರಹಸ್ಯವ ಕುರಿತು ಏನಾದರೂ ಮಾತನಾಡಿ. ಚತುರೆಯ ಈ ಮೌನ; ಇದು ಹೃದಯದ ರಕ್ತನಾಳಗಳ ಕೀಳುತ್ತಲಿದೆಈ ಮೌನದಲ್ಲಿ, ವಾದ್ಯ ಮುರಿಯುವ ಕುರಿತು ಏನಾದರೂ ಮಾತನಾಡಿ ಹರಡುವ ಕೂದಲಿನ ಘಮಲು! ದುಃಖಕ್ಕೆ ಮುಸುಕ ಹಾಕುವ ಕಥೆ!ಮುಂಜಾನೆ ಬರುವನಕ ಅಂತಹ ವಿಷಯಗಳ ಕುರಿತು ಮಾತನಾಡಿ ಹೃದಯದ ಪ್ರತಿ ರಕ್ತನಾಳವ […]

ನೆರಳು-ಬೆಳಕು

ಕವಿತೆ ನೆರಳು-ಬೆಳಕು ಕಾತ್ಯಾಯಿನಿ ಕುಂಜಿಬೆಟ್ಟು ಕಣ್ಣುಗಳಿಂದ ಉದುರುವನಕ್ಷತ್ರಗಳನ್ನುಆಕಾಶಕ್ಕೆ ಸಿಕ್ಕಿಸುತ್ತಿರುವಶಾಂತ ಇರುಳು… ಮರ ಗಿಡ ಬಳ್ಳಿಗಳುತಮ್ಮ ನೆರಳನು ಬಿಟ್ಟುಲೋಕ ಸಂಚಾರಕೆಹೊರಡುತ್ತವೆ ಕಡಲು ಭೋಗ೯ರೆಯುತಮರಳ ತೀರಕೆನೊರೆನೊರೆ ಹಾಲುಣಿಸುತ್ತನೆರಳಾಗಿಬಿಡುತ್ತದೆ ಹಕ್ಕಿಗಳು ಬೆಳಕು ರೆಕ್ಕೆಗಳನ್ನುಬಿಚ್ಚಿ ಹಾರುತ್ತ ಹಾರುತ್ತಕಪ್ಪು ನೆರಳುಗಳಾಗಿಚುಕ್ಕಿಗಳಾಗಿ ಮರೆಯಾಗುತ್ತವೆ ಈ ದೇಹದಿಂದ ಬೆಳಕೊಂದುಲೋಕ ಸಂಚಾರಕೆ ಹೊರಟಾಗನೆರಳು ನಿದ್ರಿಸುತ್ತದೆಮುಂಜಾನೆ ಮತ್ತೆ ಅದು ಮರಳಿನನ್ನನ್ನು ಪ್ರವೇಶಿಸುವವರೆಗೂ…ಒಂದು ದಿನ ಸಂಚಾರದಲ್ಲೇ ಮೈಮರೆತ ಅದುನನ್ನನ್ನೇ ಮರೆತುಬಿಡಬಹುದುನಾನು ಅದರ ನೆನಪಲ್ಲೇ ಇರುವಾಗಇನ್ನಾರದ್ದೋ ನೆರಳು ಕೊಳ್ಳಿ ಹಿಡಿದುಬೆಳಕು ಹಚ್ಚುವೆನೆಂದು ಬೆಂಕಿ ಹಚ್ಚಬಹುದು ಇರುಳಲ್ಲಿ ಸೂಯ೯ನ ನೆರಳುನಿದ್ರಿಸುತ್ತದೆಭೂಮಿಯ ನೆರಳು ತನ್ನನ್ನು ಭೂಮಿ […]

ನಿನ್ನ ಮೋಹಕೆ

ಕವಿತೆ ನಿನ್ನ ಮೋಹಕೆ ರೇಷ್ಮಾ ಕಂದಕೂರು ನಿನ್ನ ಮೋಹದ ಅರವಳಿಕೆಮೈಮನವ ಮರೆತ ಹಾಗಿದೆಭಾವೋನ್ಮಾದದ ಬೆಸುಗೆಗೆಬಾಚಿ ತಬ್ಬುವ ಇಳೆಯ ಪ್ರೀತಿಯಂತೆ ಸಾಚಾತನಕೆ ಪರಚಿದ ಗಾಯಮಾಸದ ಕಲೆಯ ಸ್ಥಿತಿಬೆಡಗು ಬಿನ್ನಾಣದ ರಿಂಗಣಲಗ್ಗೆ ಹಾಕುವ ನೆರೆಯ ಹಾವಳಿ ಕಣ್ಣ ಹೊಂಬೆಳಕಿನ ಕಿಡಿಹೊತ್ತಿಸಿದೆ ಅನುರಾಗದ ದೀಪ್ತಿಮೌನಕೂ ಕಸಿವಿಸಿಯಾದಂತೆಆಸರೆಯ ಒಡಲಲಿ ತವಕ ಅನುದಿನವು ಬೇಯುತಿದೆಸಹಚರಕೆ ಹಪಹಪಿಸಿದೆ ಕಂಗೆಟ್ಟುಇರುಳ ಬಾನ ತುಂಬಾ ನಗೆಯ ನಕ್ಷತ್ರಚೆಲುವಿನ ಚೈತ್ರಕೂ ಮರುಹುಟ್ಟು ವಿಸ್ಮಿತ ಪ್ರತಿಯ ಸ್ವರೂಪಸ್ವಪ್ನದಿ ಕಾಡಿದೆ ಬೆಂಬಿಡದೆಜ್ವಾಲಾಮುಖಿಯ ಆವೇಗದ ಸಂಚಾರಬೆರಗಿನ ಜಾಡು ಅನವರತ. ****************

ಗಝಲ್

ಗಝಲ್ ಅಮೃತ ಎಂ ಡಿ ನೋವಲ್ಲೂ ನಲಿವಿನ ಟಾನಿಕಿನ ಗುಟುಕುಂಟು ಗಾಲಿಬ್ಬದುಕೆಲ್ಲವು ಹಗದ ಮೇಲೆ ನಡೆದ ಕುರುಹುಂಟು ಗಾಲಿಬ್ ಹೇಳತಿರದ ಬೇಗೆಯೋದು ಸಜೀವ ದಹನ ಮಾಡಿದೆನಗುವಿನ ಮುಖವಾಡ ಧರಿಸಿ ಜೀವಿಸಿದ್ದುಂಟು ಗಾಲಿಬ್ ನನ್ನೊಳಗಿನ ಸಾಮರ್ಥ್ಯವನ್ನೆಲ್ಲಾ ಈ ಪ್ರೀತಿಯು ಕೊಂದಿದೆಗೈರುಹಾಜರಿಯಲ್ಲೂ ನಿರ್ಲಿಪ್ತ ಹಾಜರಿಯುಂಟು ಗಾಲಿಬ್ ನನ್ನರಸ ಮಧುಶಾಲೆಯಲ್ಲೇ ಜೀವನಪೂರ್ತಿ ಕಳೆದುಬಿಟ್ಟಬಾಳ ನೊಗಕ್ಕೆ ಹೆಗಲ್ಕೊಟ್ಟು ಹೈರಾಣಾಗಿದ್ದುಂಟು ಗಾಲಿಬ್ ಅಮ್ಮುವಿನ ನಸೀಬು ಬ್ರಹ್ಮಂಗು ಕಾರುಣ್ಯ ಪರಿಚಯಿಸಿದೆಅನುಗಾಲದ ಹೋರಾಟವು ಚಿರನಿದ್ರೆಯಲ್ಲುಂಟು ಗಾಲಿಬ್ *****************************************

“ಶಾವಾ”ತ್ಮ ಪದಗಳು

ಕವಿತೆ “ಶಾವಾ”ತ್ಮ ಪದಗ ಬಸಿರಿನುಸಿರು ಶಾಂತಿ ವಾಸು ಫಲವತ್ತಾದ ಮುಷ್ಟಿ ಮಣ್ಣು ಬೇಕೆಂದೆ….ಧಾರಿಣಿ, ಹುಟ್ಟಿಸಿ ನೋಡೆಂದಳು…. ನಿರ್ಮಲಾತಿನಿರ್ಮಲ ಜಲ ನೀಡೆಂದೆ….ಧರಿತ್ರಿ, ಹುಟ್ಟಿಸಿ ನೋಡೆಂದಳು…. ತಣಿಸುವ ಮಳೆ ಕಾಣದಾಗಿದೆಯೆಂದೆ…ಇಳೆ, ಹುಟ್ಟಿಸಲಾರೆಯಾ?? ಕೇಳಿದಳು…. ಮಳೆಯ ಎಳೆತರುವ ಕಾನನ ಕೊಚ್ಚಿಹೋಗಿದೆಯೆಂದೆ…ಭೂಮಿಜೆ, ಹುಟ್ಟಿಸಿ ಸಾಕಾಯಿತೇ ಪ್ರಶ್ನಿಸಿದಳು…. ಪ್ರಾಣಿ ಪಕ್ಷಿಗಳು, ಒಂದೊಂದೇ ಅಳಿಯುತ್ತಿವೆಯೆಂದೆ….ಅವನಿ, ಹುಟ್ಟಿಸು ನೋಡೋಣ ಸವಾಲೆಸೆದಳು…. ಮುಂದಿನ ಪರಂಪರೆಗೇನು ಉತ್ತರಿಸಲಿ??? ಎಂದೆ…ಭೂಮಿತಾಯಿ, ಸಕಲವ ಹುಟ್ಟಿಸುವ ಮೊದಲು, ಉಸಿರ “ಪ್ರಕೃತಿ”ಯಲ್ಲಡಗಿಸುವ ಬಸುರಾಗೆಂದಳು *****************************************************************

ಅಂಕಣ ಬರಹ ಸೀಗಲ್ ಸೀಗಲ್ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿಪ್ರ : ಅನನ್ಯ ಪ್ರಕಾಶನಪ್ರ.ವರ್ಷ :೨೦೦೭ಬೆಲೆ :ರೂ.೭೦ಪುಟಗಳು : ೧೦೮ ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ. ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ […]

ನಿನ್ನಿರುವು..

ಕವಿತೆ ನಿನ್ನಿರುವು.. ವೀಣಾ ಪಿ. ನೀನಂದುನನ್ನಮುಡಿಗಿಟ್ಟುಕೊಳಲೆಂದುನಿನ್ನೊಲವಿನಉದ್ಯಾನದಿಂದೆನ್ನಕೈಗಿತ್ತಗುಲಾಬಿಯನುನಾನುಎದೆಗೊತ್ತಿಹೊತ್ತಿಗೆಯಲಿಅವಿತಿಟ್ಟುದಶ ವಸಂತಗಳುರುಳಿನಮ್ಮಿಬ್ಬರ ನಡುವೆತಲುಪಲಾಗದಭುವಿ-ಬಾನಿನಂತರವುಹರವಿಯೂಮಾಸಿಲ್ಲಅದೇಸಮ್ಮೋಹನದೊಲವುಸವಿಪ್ರೇಮ ಪ್ರೇರಣೆಯಕಡುಕೆಂಪಿನಿರುವುಅರಳಲೆಳಸಿಯೂಅರಳದುಳಿದಮೊಗ್ಗಿನಲಿಅಂದಿನಂತೆಯೇ ಇಂದೂ..ನನ್ನ ನವಿರುಭಾವದಾಂತರ್ಯದಲಿನಿನ್ನಿರುವಿನಂತೆ..!! *******************************

ಝೆನ್ ಕವಿತೆಗಳು

ಕವಿತೆ ಝೆನ್ ಕವಿತೆಗಳು ಹುಳಿಯಾರ್ ಷಬ್ಬೀರ್ 01 ನನ್ನದು..ತಾತ್ಸಾರದ ಮೌನವಲ್ಲಏಕಾಕಿತನದ ಮೌನವಲ್ಲಉಡಾಫೆಯ ಮೌನವಲ್ಲನಿರರ್ಥಕ ಮೌನವಲ್ಲಸಂಚಿನ ಮೌನವಲ್ಲಶ್ರದ್ಧೆಯ ಮೌನವಲ್ಲಧಿಕ್ಕರಿಸುವ ಮೌನವಲ್ಲಬುದ್ಧನ ಮುಖದ ಮೇಲಿನಪ್ರಶಾಂತವಾದ ಮೌನದ ಮೌನ. 02 ಶುದ್ಧೋಧನತಂದೆಯಾದರೂಬುದ್ಧನ ಕಾಲಿಗೆರಗಿಶುದ್ಧನಾದ ಬದ್ಧನಾದ. 03 ತುಂಬಿದ ಕೊಳದಲ್ಲಿನಅವನ ಪ್ರತಿಬಿಂಬಅಣಕಿಸುತಿತ್ತುನಿನ್ನಾತ್ಮ…?ಸತ್ತಿದೆ ಎಂದುಕೆಣಕುತಿತ್ತು. 04 ಬುದ್ಧ ನಿನ್ನನಿದ್ದೆಯ ಕದ್ದಿದ್ದುವೈರಾಗ್ಯದಾಸೆಯಮೆಟ್ಟಿಲು. 05 ಬಿಕ್ಕುಗಳೇಚರಿಗೆಗೆ ಹೋಗುವುದುಹೊಟ್ಟೆ ತುಂಬಿಸಿಕೊಳ್ಳುವುದಕ್ಕಲ್ಲಬದುಕಿನ ಅನಾವರಣಕ್ಕೆ ಅರ್ಥಅರ್ಥೈಯಿಸಲು. **************************

ಕೇಳಬೇಕಿತ್ತು..!

ಕವಿತೆ ಕೇಳಬೇಕಿತ್ತು..! ಮುತ್ತು ಬಳ್ಳಾ ಕಮತಪುರ ಸಾವಿನ ಮುನ್ನ ನನ್ನಹೇಳಿಕೆ ದಾಖಲಿಸಿಬೇಕಿತ್ತು …..ತಿರುವು ಮುರು ಮಾಡಿನನ್ನ ಸಾವನ್ನೇ ದಾಖಲಿಸಿದರು ..!ಅವರ ಪೆನ್ನಿನ ನಿಬ್ಬು ಮುರಿದಿತ್ತು… ಕೇಳಬೇಕಿತ್ತುಆಗ ನನ್ನ ಮಾತುಗಳುತೊದಲು ನುಡಿಯಾಗಿ ಕಂಡಿತ್ತುಏನು ಹೇಳಬೇಕಿತ್ತು …?ಅಲ್ಲಿ ಮೊದಲೇ ಹೊಂದಾಣಿಕೆಮಾಡಿಕೊಂಡು ಸಾವಿನೊಂದಿಗೆಅಂತ್ಯಗೊಂಡಿತು….. ಸತ್ತವಳು ನಾನಲ್ಲ ,ಸತ್ತವರು ವ್ಯವಸ್ಥೆಯಲ್ಲಿಇದ್ದು ಮಾತನಾಡದ ನೀವುಗಳುಅಸಹಾಯಕಳ ಮೊರೆ ಆಲಿಸಲುಸರ್ವಸಂಗ ಪರಿತ್ಯಾಗಿಗೂ ಮನಸಿಲ್ಲ…ಇನ್ನೂ ಎಲ್ಲಿಯ ರಾಮರಾಜ್ಯ….. ಸತ್ತ ಮೇಲೆ ಆದರೂಅರಿಸಿಣವಾದರೂ ಹಚ್ಚಿದಫನ್ ಮಾಡಬೇಕಿತ್ತುಹಂಚಿ ತಿಂದ ನನ್ನ ದೇಹಸಾಕ್ಷಿ ನೆಪದಲಿ ಮುಟ್ಟಿದಕೈಗಳು ನಂಜಾಗಬಾರದುಅಲ್ಲವೇ….! ಮೊಂಬತ್ತಿ ಹಚ್ಚಬೇಡಿಕರಗಿದಂತೆ ..!ನಾಳೆ‌ ದಿನ […]

Back To Top