ಕಥಾಯಾನ
ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು… ಆದರೆ ಮೊನ್ನೆ ಸಂಜೆ ಸಿಕ್ಕಾಗ ತುಂಬಾನೇ ಚೆಂದ ಕಾಣಿಸುತ್ತಿದ್ದಳು. ಹದಿನೆಂಟು ವರುಷಗಳ ಹಿಂದೆ ಅವಳಿಗೆ ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ. ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ ಹಿಗ್ಗುವ ಸಂತಸವೇ ಮೊನ್ನೆ ಮತ್ತೆ ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ ಕತೆಗಳಲ್ಲಂತೆ ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ ತರುಬಿದೆ. ಕುದುರೆಯೆಂದರೆ ಕುದುರೆಯಲ್ಲ. ಕಪ್ಪು ಕಲರಿನ ಹೀರೋ ಹೊಂಡಾ…. ಜಾಂಬಳ ವರ್ಣದ ಕಾಟನ್ ಸೀರೆ, […]
ಕಾವ್ಯಯಾನ
ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: […]
ಕಾವ್ಯಯಾನ
ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ ಎಷ್ಟೊಂದು ಮಾತುಗಳ […]
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-13 ಅವರ ಒಡಲು ತಣ್ಣಗಾಗಲಿ.. ಭೂಮಿಯನ್ನು ತಾಯಿ ಎನ್ನುತ್ತೇವೆ. ನಮ್ಮೊಡಲನ್ನು ಅನುದಿನವೂ ತುಂಬಿಸಿಕೊಳ್ಳುವುದು ಭೂಮಿಯಲ್ಲಿ ಬೆಳೆದ ಬೆಳೆಯಿಂದಲೇ.. ವಿವೇಚನಾರಹಿತವಾಗಿ ನಾವು ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ, ರಾಸಾಯನಿಕಗಳಿಂದ , ಕಟ್ಟಡಗಳ ತ್ಯಾಜ್ಯದಿಂದ ನಾನಿನ್ನು ಬೆಳೆಯನ್ನು ಬೆಳೆಸುವ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ಭೂಮಿ ಘೋಷಿಸಿದರೆ ನಾವುಳಿಯಲಾದೀತೆ? ಪ್ರಕೃತಿ ಮನುಜರ ಆಸೆ ಪೂರೈಸುತ್ತದೆ ದಿಟ. ದುರಾಸೆ ಮಾಡುತ್ತಿರುವ ಕಾರಣದಿಂದಲ್ಲವೇ ಇಂತಹ ಲಾಕ್ಡೌನ್ ಎದುರಿಸಬೇಕಾಗಿ ಬಂದಿದ್ದು. ಇದು ಪ್ರಕೃತಿ ನೀಡುತ್ತಿರುವ ಬಲವಾದ […]
ಕಥಾಯಾನ
ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ […]
ಕಾವ್ಯಯಾನ
ಹಬ್ಬ ಗೌರಿ.ಚಂದ್ರಕೇಸರಿ ನಾವು ಸಾಬೀತುಪಡಿಸಿದ್ದೇವೆ. ಪ್ರಾಣಕ್ಕಿಂತ ದೊಡ್ಡದು ಆಚರಣೆಗಳೆಂದು. ನೆತ್ತಿಯ ಮೇಲೆ ತೂಗುತ್ತಿದ್ದರೂ ಕತ್ತಿ ಬಾರಿಸುತ್ತಿದ್ದರೂ ಎಚ್ಚರಿಕೆಯ ಗಂಟೆ ನಡೆದು ಬಿಡುತ್ತೇವೆ ಚೀಲ ಹಿಡಿದು ಸಾವಿನ ಮನೆಯ ಕಡೆಗೆ ಮುಗಿ ಬೀಳುತ್ತೇವೆ ಹೂ ಕಾಯಿ ಹಣ್ಣುಗಳಿಗೆ ತುಂಬಿಕೊಳ್ಳತ್ತೇವೆ ಭವಿಷ್ಯವನ್ನೆಲ್ಲ ಭೂತವೆಂಬ ಚೀಲಗಳಿಗೆ ಹೊತ್ತು ನಡೆಯುತ್ತೇವೆ ತಪ್ಪಿಸಿ ಪೋಲೀಸರ ಕಣ್ಗಾವಲನ್ನು ಬಂದು ಸೇರಿ ಮನೆ ಬೀಗುತ್ತೇವೆ ಚಪ್ಪನ್ನೈವತ್ತಾರು ಕೋಟೆಗಳ ಗೆದ್ದಂತೆ ತಳಿರು ತೋರಣವಿಲ್ಲದ ಸಿಹಿಯಡುಗೆ ಮಾಡದ ನೆರೆಹೊರೆಯವರನ್ನು ನೋಡಿ ನಗುತ್ತೇವೆ ಜೀವವಿದ್ದಲ್ಲಿ ಮಾಡೇವು ನೂರು ಹಬ್ಬ ಹರಿದಿನ ಅವಿವೇಕಿಗಳು […]
ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಗದಗ ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ| ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ|| ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ| ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ|| ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ| ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ|| ಗಡಿಯಾರದಂತೆ ತಿರುಗುವ […]
ಕಾವ್ಯಯಾನ
ಋಜುವಾತು ಮಾಡಬೇಕಿದೆ ರೇಶ್ಮಾಗುಳೇದಗುಡ್ಡಾಕರ್ ನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ನನ್ನೊಳಗಿನ ನಾನು ಋಜುವಾತುಮಾಡಬೇಕಿದೆಎದೆಗೆ ಇಟ್ಟ ಕೊಳ್ಳಿಅರುವ ಮುನ್ನಹರಳುಗಟ್ಟಿದ ನೆನಪುಗಳುಹನಿಯಾಗಿ ಹರಿಯುವ ಮುನ್ನಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ….. ಬಣ್ಣ ಬಣ್ಣದ ನೋಟಗಳುಮನದ ಹಂದರ ಸೇರುವ ಮುನ್ನಮೋಹ ಸಲೆಗೆ ಅಡಿಯಾಳಾಗುವ ಮುನ್ನವಾಸ್ತವದ ತಳಹದಿಯ ಮರೆಮಾಚಿಭ್ರಮರ ಲೋಕಕೆ ಕಾಲಿಡುವ ಮುನ್ನಬಾಂಧವ್ಯ ದ ಆಚೆಗೊಸ್ನೇಹದ ಸೆಳೆತದಾಚೆಗೊ ನನ್ನ ನಾಋಜುವಾತು ಮಾಡಬೇಕಿದೆ …. ಏಳಿಗೆಯ ಬೇರುಗಳ ಕತ್ತರಿಸಿಹಿಂದೆ ಮುಂದೆ ನಿಂದನೆಗೆ ಆಹಾರಮಾಡಿ ನಾಜೂಕು ಮಾತುಗಳಾಡುತನಮ್ಮೊಳಗೆ ಬೇರೆತು ದೂರ ಇರುವವರುಕತ್ತಿಮಸೆಯುವ ಮುನ್ನ ನನ್ನೊಳಗಿನನಾನು […]
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು […]