ಶಿಶು ಗೀತೆ

ಶಿಶು ಗೀತೆ

ಪುಟ್ಟನ ಮನೆ ತೇಜಾವತಿ ಹೆಚ್.ಡಿ. ಒಮ್ಮೆ ಪುಟ್ಟಅಮ್ಮನೊಡನೆಸಾಗರ ನೋಡಲೋದರಾಶಿ ರಾಶಿಉಸುಕು ಕಂಡುಕುಣಿದು ಕುಣಿದು ಹಿಗ್ಗಿದ || ಪುಟ್ಟ ನುಣುಪುಉಸುಕಿನಲ್ಲಿಚಂದ ಮನೆಯ ಕಟ್ಟಿದಅಲೆಯು ಬಂದುಕೊಚ್ಚಿ ಹೊಯ್ದುಅಮ್ಮಾ! ಎಂದು ಕೂಗಿದ || ಅಮ್ಮ ಬಂದುಹೇಳು ಕಂದಏಕೆ ಅಳುವೆ ಎನ್ನಲುನೋವಿನಿಂದಉರುಳಿ ಬಿದ್ದಮನೆಯ ತೋರಿ ಹಲುಬಿದ || ಕೇಳು ಮಗನೆಏಕೆ ಅಳುವೆಮರಳ ಮನೆಯು ಕ್ಷಣಿಕವುನೀನು ಕಟ್ಟುಮನದ ಮನೆಯಆತ್ಮ ಛಲವು ಜೊತೆಗಿದೆ || ಒಡನೆ ಪುಟ್ಟಎದ್ದು ನಿಂತುಅಮ್ಮನಪ್ಪಿ ಹೇಳಿದಬಿಡೆನು ನಾನುನಿನ್ನ ಮಾತಒಪ್ಪಿಕೊಂಡೆ ಎಂದನು || ಮಗನ ನುಡಿಯಕೇಳಿ ಅಮ್ಮಪ್ರೀತಿ ಧಾರೆ ಎರೆದಳುಮಿಂದ ಪುಟ್ಟಮಡಿಲ ಸುಖದಿಹೊಸತು […]

ಅನುವಾದ ಸಂಗಾತಿ

ಗುಟ್ಟು ಮೂಲ: ಶರತ್ ಚಂದ್ರ ಬರ್ (ಬೋಡೊ) ಕನ್ನಡಕ್ಕೆ: ನಾಗರಾಜ ಹರಪನಹಳ್ಳಿ ಯಾವ ಕಣ್ಣೀರಿನಲ್ಲಿಹೃದಯ ಮಿಡಿತದ ಸಂದೇಶವಿಲ್ಲವೋ ಯಾವ ಕಣ್ಣೀರಿನಲ್ಲಿಪವಿತ್ರವಾದ ಸತ್ಯವಿಲ್ಲವೋಯಾವ ಕಣ್ಣೀರಿನಲ್ಲಿಒಡೆದ ಹೃದಯದ ಸದ್ದು ಇಲ್ಲವೋಆ ಕಣ್ಣೀರು ಅಪ್ಪಟ ಕಣ್ಣೀರಲ್ಲ ಯಾವ ನಗುವಿನಲ್ಲಿ ಮೌಲ್ಯದ ಬೆಳಗು ಇಲ್ಲವೋಯಾವ ನಗುಕಲ್ಮಶದ ಪರದೆಯಲ್ಲಿ ಅಡಗಿದೆಯೋಅಂತಹ ನಗು ಸಂತಸದ ನಗುವಲ್ಲ ಯಾವ ಪ್ರೀತಿ ತನ್ನಷ್ಟಕ್ಕೆ ತಾನು ಅರಳುವುದಿಲ್ಲವೋಯಾವ ಪ್ರೀತಿಯಲ್ಲಿ ಬೆಸುಗೆಯ ಗುಣವಿಲ್ಲವೋಅಂತಹ ಪ್ರೀತಿಆದರಣೀಯ ಪ್ರೀತಿಯಲ್ಲ ಯಾವ ಕಾಣಿಕೆಯಲ್ಲಿಮರಳಿ ಪಡೆವ‌ ವ್ಯಾಮೋಹವಿದೆಯೋಯಾವ ಕಾಣಿಕೆಯಲ್ಲಿಪ್ರಶಂಸೆಯನ್ನು ಪಡೆವ‌ ಅಪೇಕ್ಷೆಯಿದೆಯೋಅಂತಹ ಕಾಣಿಕೆ ಕಾಣಿಕೆಯಲ್ಲ………………….. ನಾಗರಾಜ್ ಹರಪನಹಳ್ಳಿ

ಪುಸ್ತಕ ಸಂಗಾತಿ

ಬಣ್ಣದ ಜೋಳಿಗೆ ಬಣ್ಣದ ಜೋಳಿಗೆ ಸ್ನೇಹಾ ಪಬ್ಲಿಕೇಶನ್ಸ್ ಗಾಯಿತ್ರಿ ರಾಜ್ “”ಬಣ್ಣದ ಜೋಳಿಗೆ “” ಗಾಯತ್ರಿ ರಾಜ್ ಅವರ ಮೊದಲ ಕಥಾ ಸಂಕಲನ, ಚೊಚ್ಚಲ ಪುಸ್ತಕ,ಒಂದೇ ದಿನದಲ್ಲಿ ಬರೆಯಬಹುದುದಾದ ಅನಿಸಿಕೆಗೆ ಮೂರು ದಿನಾ ತಗೊಂಡೆ ಅಂದ್ರೆ ನಾನು ಬರೆಯೋದು “ಆರು ಹೆತ್ತೋಳಿಗೆ ಮೂರು ಹೆತ್ತೋಳು ಹದ ಹೇಳಿದಂತೆ”” ಆಗತ್ತೇನೋ ಅನ್ನಿಸಿ, ತಡ ಮಾಡಿದೆ, ನನ್ನ ತಿಳಿವಿನ ಮಟ್ಟಕ್ಕೆ, ಯಾವ ಅತಿಶಯೋಕ್ತಿ ಪೂರ್ವಗ್ರಹ ಇಲ್ಲದೇ ಬರೆದಿರುವೆ, ಗುಣಕ್ಕೆ ಮತ್ಸರ ಏಕೆ?? ಅಲ್ವಾ..ಪೂರ್ಣ ಪ್ರಮಾಣದಲ್ಲಿ ಬರಹಕ್ಕೆ ಕುಳಿತರೆ ಒಳ್ಳೇ ಸಾಹಿತಿ […]

ಪ್ರಬಂಧ

ಸ್ವಚ್ಛ ಭಾರತ ನಂದಿನಿ ಹೆದ್ದುರ್ಗ ಇದು ಸುಮಾರು ಮುವ್ವತ್ತು-ಮುವ್ವತ್ತೈದು ವರ್ಷಗಳ ಹಿಂದಿನ ಮಾತು.ಆಗೆಲ್ಲಾ ಹಳ್ಳಿಗೊಂದು ಪ್ರಾಥಮಿಕ ಶಾಲೆ ಇರುತ್ತಿದ್ದೇ ಹೆಚ್ಚು . ಇನ್ನೂ ಶೌಚಾಲಯ, ಬಿಸಿಯೂಟ ಕನಸಲ್ಲೂ ಯೋಚಿಸುವ ಹಾಗಿಲ್ಲ.ನಾವು ಮೂರೂ ಮಕ್ಕಳು ನಾಲ್ಕನೆ ತರಗತಿ ಮುಗಿದಾಗ ಹತ್ತು ಕಿಮಿ ಆಚೆ ಇರುವ ಸಣ್ಣ ಪಟ್ಟಣಕ್ಕೆ ಮಿಡಲ್ ಸ್ಕೂಲ್ ಗೆ ಹೊಗುತ್ತಿದ್ದೇವೆ.ನಾವು ಮಾತ್ರವಲ್ಲ..ಪ್ರತಿ ಜಿಲ್ಲೆಯ ಸಣ್ಣಸಣ್ಣ ಹಳ್ಳಿಗಳಮಕ್ಕಳದ್ದೂ ಇದೇ ಪಾಡು.ಆಗೆಲ್ಲಾ ದಾರಿಯಲ್ಲಿ ಅವಸರವಾದರೆ ಗಂಡು ಹುಡುಗರನ್ನ ಕಾವಲಿಗೆ ನಿಲ್ಲಿಸಿ ನಾವು ಪಕ್ಕದ ಕಾಫಿ ತೋಟದಲ್ಲಿ ನೀರಾವರಿ ಮುಗಿಸಿ […]

ಕಾವ್ಯಯಾನ

ಗಝಲ್ ಎ ಎಸ್. ಮಕಾನದಾರ ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿಭಾವರಸ ನೊರೆಹಾಲ ತುಂಬುತಿರುವೆ ಪ್ಯಾರಿ ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆಸ್ನೇಹ ಅಚ್ಚುಮೆಚ್ಚೆಂದು ಸಾರುತಿರುವೆ ಪ್ಯಾರಿ ಹಾಯಿದೋಣಿಗೆ ನಾವಿಕನಾಗಿ ಸಾಗುತಿರುವೆಚೂರಾದ ಹೃದಯ ತೋರಣ ಕಟ್ಟಿರುವೆ ಪ್ಯಾರಿ ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆವಿಶ್ವಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ ಅಂತರಂಗ ಜ್ಯೋತಿಗೆ ಧೋಖಾ ಮಾಡದಿರುಸಾಹೇಬ್ ಮಸ್ತಕಕ್ಕೆ ಇಳಿದು ಬರುವೆ ಪ್ಯಾರಿ **********

ಕಾವ್ಯಯಾನ

ಮಗುವಾದ ನೆಲ ಬಿದಲೋಟಿ ರಂಗನಾಥ್ ಬಿತ್ತಿದ ಬೀಜ ಮೊಳಕೆ ಒಡೆದು ನಗುವಾಗಸಿರಿಯು ಮಡಿಲು ತುಂಬಿತುಮಗುವಾದ ನೆಲಮಮತೆಯ ಕರುಳ ಹೂ ಬಿಟ್ಟಿತು ಎದೆಯೊಳಗಿನ ತಲ್ಲಣ ಕಣ್ಣು ಚಾಚಿ ನೋಡುತ್ತಿರಲುಖುಷಿಯ ಸಮುದ್ರ ನಕ್ಕುನಕ್ಷತ್ರಗಳು ಅಂಗೈಯೊಳಗೆ ಆಡಿದವು ಮೊಳಕೆಯ ಕುಡಿ ಸಾಗುತಿರಲುಮಳೆಯ ಸ್ಪರ್ಶಕೆ ಕಳೆಗಟ್ಟಿಮೆದು ನೆಲದ ಭಾವ ಕಲ್ಲುಗಳೊಂದಿಗೆ ಮಾತಾಡಿತು ಬೆವರ ಹನಿಯು ಬಿದ್ದುಬಿತ್ತು ಹುತ್ತ ನೆಲ ಬಸಿರಾಗುವುದೆಂದರೇಹೊಳೆ ಸೀಳಿನಲಿ ಬೊಗಸೆ ನೀರು ಕುಡಿದ ಸಂತಸಮೈಯೊಳಗೆ ಚಂದ್ರ ನಡೆದ ಗುರುತು ***********

ಅನುವಾದ ಸಂಗಾತಿ

ಸೇಡಿನ ಫಲ ಮೂಲ: ವಿಲಿಯಂ ಬ್ಲೇಕ್(ಇಂಗ್ಲೀಷ್) ಕನ್ನಡಕ್ಕೆ: ವಿ.ಗಣೇಶ್ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನು    ತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’  ಎಂದು    ಮಾಯವಾಗಿಯೆ ಹೋಯ್ತು ಕೋಪವಂದು.    ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನು    ಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದು    ಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ    ಹಗೆತನದ ಬೀಜವದು ಮೊಳಕೆಯೊಡೆಯುತ್ತ    ಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತು    ಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲ    ನೀಡುತ್ತ […]

ಅನುವಾದ ಸಂಗಾತಿ

ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ? ಮೂಲ: ನೋಷಿ ಗಿಲ್ಲಾನಿ(ಉರ್ದು) ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನನನ್ನ ತೋಳುಗಳನ್ನ, ನನ್ನ ಕಣ್ಣುಗಳನ್ನ, ನನ್ನ ಮುಖವನ್ನ? ನಾನೊ೦ದು ನದಿ, ಹರಿದು ಬೆರೆಯುತ್ತಿದ್ದೇನೆ ಮತ್ತದೇ ಕಡಲೊಳಗೆ.ಯಾರಾದರೂ ಹರಿಸ ಬಲ್ಲಿರಾ ನನ್ನನ್ನು ಮರುಭೂಮಿಯಲ್ಲಿ? ಸಾಗುತ್ತಿದೆ ಬದುಕು, ಆದರೆ ನನ್ನ ಬಾಲ್ಯ, ನನ್ನ ಮಿಣುಕು ಹುಳು,ನನ್ನ ಗೊ೦ಬೆ ಗಳನಲ್ಲದೇ ಮತ್ತೇನನ್ನೂ ಬೇಡಲಾರೆ ಈ ಬದುಕಿ೦ದ! ಈ ಹೊಸ ಋತು ಯಾಕೋ ಒಗ್ಗುತ್ತಿಲ್ಲ ನನಗೆ.ನನ್ನನ್ನು ಕರೆದೊಯ್ಯಿರಿ ಹಿ೦ದಕ್ಕೆ ನಗರದ ಹಲವು ಮುಖಗಳಲ್ಲಿ […]

ಇತರೆ

ಮರುಕ ಹುಟ್ಟುತ್ತದೆ ವಿದ್ಯಾ ಶ್ರೀ ಎಸ್ ಅಡೂರ್ ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ‍್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ […]

ಕಾವ್ಯಯಾನ

ಗಝಲ್ ಮಾಲತಿ ಹೆಗಡೆ ನೂರು ಆಸೆ ನೂರು ಕನಸ ಹತ್ತಿಕ್ಕುತ ನಡೆದೆಯೇಕೆ?ಕೋಪತಾಪದಲ್ಲಿ ಬಳಲಿ ಬಿಕ್ಕುತ್ತ ನಡೆದೆಯೇಕೆ? ಹೆತ್ತ ಕೂಸಿನ ವಾತ್ಸಲ್ಯವ ಕಳಚಿ ನಿರ್ಮೋಹ ಮೆರೆದೆಉತ್ತರ ಕೊಡದ ಮೌನ ಕಕ್ಕುತ್ತ ನಡೆದೆಯೇಕೆ? ಸಿಕ್ಕ ಬದುಕ ಕಟ್ಟಲರಿಯದೇ ಸಿಕ್ಕು ಸಿಕ್ಕಾಗಿಸಿ ಸೊರಗಿದೆನಕಾರಾತ್ಮಕ ವಿಚಾರದಲ್ಲೇ ಸೊಕ್ಕುತ್ತ ನಡೆದೆಯೇಕೆ? ಹುಟ್ಟಿದವರಿಗೆಲ್ಲ ಒಂದು ದಿನ ಬರುವುದು ಸಾವು ನಿಶ್ಚಿತಅರೆ ಆಯುಷ್ಯದಲ್ಲೇ ಸೋಲು ಮುಕ್ಕುತ್ತ ನಡೆದೆಯೇಕೆ? ಮುದ್ದುಕಂದನಿಗೆ ಅಮ್ಮನಾಗಿ ಹೆಮ್ಮೆಯ ದೇವತೆಯಾಗಿದ್ದೆನಕ್ಷತ್ರವಾಗುವ ಹುಚ್ಚಿನಲಿ ನೋಯುತ್ತ ನಡೆದೆಯೇಕೆ? ************

Back To Top