ಕಾವ್ಯಯಾನ
ಗಝಲ್ ಕಾಫಿ಼ಯಾನಾ…………. ಎ.ಹೇಮಗಂಗಾ ಮಧುಪಾನದ ನಶೆಯಲ್ಲಿ ಭೂತವನ್ನು ಮರೆಯಬೇಕಿದೆ ಬೆಂಬಿಡದೇ ಕಾಡುವ ಕಹಿಕ್ಷಣಗಳಿಗೆ ಗೋರಿ ಕಟ್ಟಬೇಕಿದೆ ಮರೆಯಲಾಗದ ನೋವ ಮರೆವುದಾದರೂ ಹೇಗೆ ಸಾಕಿ? ಅಂತರಂಗದ ಬಿಕ್ಕುಗಳನ್ನು ಅಲ್ಲಲ್ಲಿಯೇ ಹೂಳಬೇಕಿದೆ ನೋವು, ಯಾತನೆಗಳು ಹೊಸದಲ್ಲ ಎಲ್ಲ ಅವಳಿತ್ತ ಕೊಡುಗೆ ಅವಳಿಗೆಂದೇ ಪ್ರತಿಕ್ಷಣ ಮಿಡಿದ ಧಮನಿಗಳ ಸಂತೈಸಬೇಕಿದೆ ಬಾಳು ಪಾಳು ಬಿದ್ದ ಮನೆಯಂತೆ ಭಣಗುಡುತ್ತಲೇ ಇದೆ ಸಾಕಿ ಅವಳನ್ನೇ ಬಯಸುವ ಹುಚ್ಚುಮತಿಗೆ ಅರಿವಳಿಕೆ ನೀಡಬೇಕಿದೆ ಗರಿ ಚಾಮರಗಳು ತೊನೆದಂತೆ ಕಂಡಿವೆ ಮಧುಪಾತ್ರೆಯಲ್ಲಿ ಭ್ರಮೆಯನ್ನೇ ನಿಜವೆಂದು ನಂಬಿದ ಮನಕೆ ತಿಳಿಹೇಳಬೇಕಿದೆ ಕಾಣದ […]
ಕಾವ್ಯಯಾನ
ಗಝಲ್ ಉಮೇಶ ಮುನವಳ್ಳಿ ನೀನು ಬಯಸಿದಂತೆ ಬದಲಾಗಿರುವೆ, ಅದಲುಬದಲಾದದ್ದು ನಿನಗೆ ನೆಮ್ಮದಿಯೇ? ನೀನು ಅಂದುಕೊಂಡಂತೆ ಸಾಕಾರಗೊಂಡಿರುವೆ, ಗುರಿ ನೆರವೇರಿದ್ದು ನಿನಗೆ ನೆಮ್ಮದಿಯೇ? “ನಿನ್ನ ಜೊತೆಗಿನ ಕೆಲಸ ಮುಗಿದು ಹಳೆಮಾತಾಗಿದೆ ಮತ್ತೆ ಪೀಡಿಸದಿರು” ಇದು ನಿನ್ನ ಕೋರಿಕೆ ದುಃಖ ಉಮ್ಮಳಿಸಿ ಕತ್ತು ಹಿಸುಕುತಿದೆ, ಹನಿಯಾಗಿಸದೆ ನಕ್ಕಿದ್ದು ನಿನಗೆ ನೆಮ್ಮದಿಯೇ? “ಪ್ರೀತಿ ಎಂದರೆ ಇದು ಮಾರುಕಟ್ಟೆಯಲ್ಲ, ನನ್ನಲ್ಲಿ ನಿನಗೆ ನಿರೀಕ್ಷೆ ಬೇಡ” ಇದು ನಿನ್ನ ಅಳಲು ಪ್ರೀತಿಯಲಿ ಒಂದಿಷ್ಟು ಸಲುಗೆ ಬೇಡವೆ, ನಾನು ಪರಿಷ್ಕರಣಗೊಂಡಿದ್ದು ನಿನಗೆ ನೆಮ್ಮದಿಯೇ? “ಮಾತು ಮಿತವಾಗಿರಲಿ […]
ನೆನಪು
ವಿ.ಕೆ.ಮೂರ್ತಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬೆಳಕು ನೆರಳುಗಳ ಚಮತ್ಕಾರಕ್ಕಾಗಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ _ ವಿ.ಕೆ.ಮೂರ್ತಿ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಜುಗ್ನು, ಸೂರಜ್, ಲವ್ ಇನ್ ಟೋಕಿಯೊ, ಜಿದ್ದಿ, ಇನ್ನೂ ಅನೇಕ ಹಿಂದಿ ಚಲನಚಿತ್ರಗಳ ಛಾಯಾ ಗ್ರಾಹಕ ವಿ.ಕೆ ಮೂರ್ತಿಯವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ ಎಂದು ಖಂಡಿತವಾಗಿ ಹೇಳಬಹುದು. ಬಹಾರೋ ಫೂಲ್ ಬರ್ಸಾವೊ, ಚೌದವೀಂ ಕಾ ಚಾಂದ್ ಹೊ, ವಕ್ತ್ ನೇ […]
ಪ್ರಸ್ತುತ
ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ… ಇಂಗ್ಲೀಷ್ ಮೂಲ: ಅಜಿತ ಘೋರ್ಪಡೆ ಕನ್ನಡಕ್ಕೆ: ಚಂದ್ರಪ್ರಭ ಬಿ. ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ… ಹೆಣ್ಣು ಮಕ್ಕಳನ್ನು ಕೆಂಪು ಇರುವೆಗೆ ಹೋಲಿಸುವ ಕೆಲವೇ ಕೆಲವು ಜನ ನಮ್ಮ ನಡುವಿದ್ದಾರೆ ಈ ವ್ಯಕ್ತಿಯಿಂದ ತನಗೆ ಅಪಾಯವಿದೆಯೆಂದು ಅರಿತಾಕ್ಷಣ ಆ ವ್ಯಕ್ತಿ ಯಾರೆಂಬುದನ್ನು ನೋಡದೆ ಅವರನ್ನು ಕೆಂಪು ಇರುವೆ ಕಚ್ಚಿಬಿಡುತ್ತದೆ. ಜನರೂ ಅಷ್ಟೇ, ಕೆಂಪು ಇರುವೆಯನ್ನು ಕಂಡೊಡನೆ ವ್ಯಗ್ರರಾಗಿ ಅದನ್ನು ಮುಗಿಸಿ ಬಿಡಲು ಹಾತೊರೆಯುತ್ತಾರೆ. ಅಷ್ಟೇ ಅಲ್ಲ […]
ನಾನು ಓದಿದ ಪುಸ್ತಕ
ವಿರಹಿ ದಂಡೆ ಬಾನಿಗೂ ಭೂವಿಗೂ ಸಾಕ್ಷಿಯಾಗಲಿ ಕಡಲಂಚಿನಾ ವಿರಹಿ ದಂಡೆ…. ಯುಗಯುಗಗಳು ಜಾರಿದರೂಪ್ರೀತಿಯಭಾಷೆಯೆಂದಿಗೂ ಬದಲಾಗದಿರುವುದು ಸರ್ವಕಾಲಿಕ ಸತ್ಯ. ಹಠಾತ್ ಸುರಿದ ಮಳೆಗೆ ದಂಡೆ ನಾಚಿದೆಎಂಬ ಕವಿ ನುಡಿಯಂತೆ ಕಣ್ಣಂಚಿನಕುಡಿನೋಟಅರಿಯುವುದುಎದೆಯುಸಿರಬಡಿತಗಳು…..ಕಂಗಳಿಗೂ ಭಾರವಾದ ಮನ ಹೃದಯದಲ್ಲಿ ಮಿಡಿಯುವುದು..ಎಂಬಂತೆ.. ಬಹುತೇಕ ಮನಸುಗಳು ಮೀನಿನಂತೆ..! ಕಡಲಾಚೆ ದಂಡೆಯಲಿ ವಿಲವಿಲ ಒದ್ದಾಡಿ,ವಿರಹದಲಿ ಬೆಂದಂತೆ..!.. ಆತ್ಮೀಯ ಸಹೃದಯಿ ,ಇದ್ದುದನ್ನು ಇದ್ದ ಹಾಗೆ ವರದಿ ನೀಡಿ ಮನವನ್ನು ಹಗುರಮಾಡಿಕೊಳ್ಳುವ,ಅನ್ಯಾಯದ ವಿರುದ್ಧ ಒಂಟಿಯಾಗಿಯಾದರೂ ಹೋರಾಟಮಾಡುವ,ಮೃದುಸ್ವಭಾವದಮನೋಭಾವಹೊಂದಿರುವಕವಿಮಿತ್ರ,ಪತ್ರಕರ್ತ ಶ್ರೀ ನಾಗರಾಜಹರಪನಹಳ್ಳಿಯವರ ಮುದ್ದಾದಕವನ ಸಂಕಲನ *ವಿರಹಿ ದಂಡೆ** ಕೈಸೇರಿದಾಗ ಕುತುಹಲ… ಎಲೆಗಳು ಉದುರುವ […]
ಕಾವ್ಯಯಾನ
ಜುಲ್ ಕಾಫಿ಼ಯಾ ಗಜ಼ಲ್ ಎ.ಹೇಮಗಂಗಾ ನೀ ಒಪ್ಪಿಗೆಯ ನಗೆ ಬೀರುವವರೆಗೂ ಮನದ ಕಳವಳಕೆ ಕೊನೆಯಿಲ್ಲ ನೀ ಅಪ್ಪುಗೆಯ ಬಿಸಿ ನೀಡುವವರೆಗೂ ಹೃದಯದ ತಳಮಳಕೆ ಕೊನೆಯಿಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಸುರಿದು ಇಂದ್ರಚಾಪ ಮೂಡಿತೇಕೆ ? ನೀ ಬರಡು ಬಾಳಿಗೆ ಹಸಿರಾಗುವವರೆಗೂ ಅಂತರಂಗದ ಹೊಯ್ದಾಟಕೆ ಕೊನೆಯಿಲ್ಲ ಗೋರಿ ಸೇರಿದ ಕನಸುಗಳು ಬಿಡದೇ ಬೇತಾಳನಂತೆ ಹೆಗಲೇರಿವೆ ನೀ ಹೊಸ ಬಯಕೆಗಳ ಬಿತ್ತುವವರೆಗೂ ಅಂತರಾಳದ ನರಳಾಟಕೆ ಕೊನೆಯಿಲ್ಲ ಅಗಲಿಕೆಯ ನೋವೇ ದಾವಾನಲವಾಗಿ ಉಸಿರು ಬಿಸುಸುಯ್ಯುತಿದೆ ನೀ ಸಿಹಿಚುಂಬನದಿ ಕಸುವು ತುಂಬುವವರೆಗೂ ಜೀವದ […]
ನಾನು ಓದಿದ ಪುಸ್ತಕ
ದುರಿತಕಾಲದ ದನಿ ವರ್ತಮಾನದ ಕಷ್ಟಕಾಲದ ಕವಿತೆಗಳು! ಕೃತಿ: ದುರಿತಕಾಲದ ದನಿ ಕವಿ: ಕು.ಸ.ಮಧುಸೂದನ, ರಂಗೇನಹಳ್ಳಿ ಪ್ರಕಾಶನ: ವಿಶ್ವಶಕ್ತಿ ಪ್ರಕಾಶನ ರಾಣೇ ಬೆನ್ನೂರು ಪುಟ: 72 ಬೆಲೆ: 100/- ಕು.ಸ.ಮಧುಸೂದನ ರಂಗೇನಹಳ್ಳಿ ಯವರ ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಬರೆಸಿಕೊಂಡ ಕವಿತೆಗಳ ಸಂಕಲನ. ‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೆ “ಒಂದು ಕಡೆ […]
ಸ್ವಾತ್ಮಗತ
ಮಹಾವೀರ ಜಯಂತಿ ಕೆ.ಶಿವುಲಕ್ಕಣ್ಣವರ ಈ ಲೇಖನ ಮಹಾವೀರ ಜಯಂತಿಯ ವಿಶೇಷದ ವಿಷಯವಾಗಿದೆ. ಸರ್ವಸಂಘ ಪರತ್ಯಾಗಿ ಮತ್ತು ಅಹಿಂಸಾ ಮೂರ್ತಿ ಮಹಾವೀರರು..! ಜಗತ್ತಿನ ಯಾವುದೇ ಧರ್ಮದಲ್ಲಿಯೂ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಹಿಂಸೆಯ ಬೋಧನೆ ಸಹ ಕಂಡುಬರುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಕೊಲೆಗಳಂತಹ ಹೀನಾಯ ಕೃತ್ಯಗಳು ಕೆಲವೆಡೆ ಕಂಡು ಬರುತ್ತಿರುವುದು ವಿಪರ್ಯಾಸ. ರಾಜ್ಯ, ಸಿರಿ, ಸಂಪತ್ತು ಹಾಗೂ ಚಕ್ರವರ್ತಿಯ ಪದವಿಗಾಗಿ ಯುದ್ಧವೇ ಅನಿವಾರ್ಯವೆನ್ನುವ ಪ್ರಸಂಗದಲ್ಲಿಯೂ ಸಹ ಜೀವಹಿಂಸೆ ಮತ್ತು ಆಸ್ತಿ ಪಾಸ್ತಿಗಳ ಹಾನಿಯಾಗದಂತೆ ಅಹಿಂಸಾತ್ಮಕ ಯುದ್ಧವನ್ನು […]
ನಾನು ಓದಿದ ಪುಸ್ತಕ
ಪ್ರೇಮ ತಪಸ್ವಿನಿ ಚಿತ್ರಾoಗದೆ. ಎಸ್.ಪಿ.ವಿಜಯಲಕ್ಷ್ಮಿ “”ಪ್ರೇಮ ತಪಸ್ವಿನಿ ಚಿತ್ರಾoಗದೆ “”–ಲೇಖಕಿ S P ವಿಜಯಲಕ್ಸ್ಮಿ, ಇವರ ಕೆಲವು ಕವಿತೆ ಓದಿರುವೆ, ಪ್ರವಾಸ ಕಥನದ ಲೇಖನಗಳೂ ನನಗೆ ತುಂಬಾ ಇಷ್ಟವಾದವು, ಇದೀಗ ಹೇಳಹೊರಟದ್ದು ಮನಸೂರೆಗೊಂಡ ಚಿತ್ರಾoಗದೆಯ ಬಗ್ಗೆ…. ನಂಗೆ ಪೌರಾಣಿಕ ಕಥನಗಳೆಂದರೆ ಮೊದಲಿಂದಲೂ ತೀರದ ಆಕರ್ಷಣೆ, ಮತ್ತೆ ಮತ್ತೆ ಪ್ರತಿ ಬಾರಿಯೂ ಓದಿದಾಗಲೂ ಹೊಸ ಹೊಸ ಆಯಾಮಗಳೂ ಹೊಸಬೆಳಕ ಚೆಲ್ಲುತ್ತಲೇ ಇರುತ್ತವೆ, ಅದರಲ್ಲೂ ಹೆಣ್ಣು ಪಾತ್ರಗಳು ಒಂದೊಂದರ ಮೇಲೂ ನೂರೆಂಟು ರೀತಿಯ ಭಾವಗಳು ಮುಡುತ್ತವೆ, ನಂಗೆ ಈ […]
ನಾನು ಓದಿದ ಪುಸ್ತಕ
ಶಬರಿ ಬರಗೂರು ರಾಮಚಂದ್ರಪ್ಪ ಜಗತ್ತಿನಾದ್ಯಂತ ಕರೋನಾ ತಂದ ಬೀಕರ ಆತಂಕ ,ಸಾವು. ನೋವುಗಳ , ವಿಷಾದ , ಈ ಭಯಗ್ರಸ್ಥ ಸನ್ನಿವೇಶದಿಂದ ಪಾರಾಗಲು ದೇಶವಾಸಿಗಳಿಗೆ ವಿಧಿಸಿದ ಲಾಕ್ ಡೌನ್ ಎಂಬ ಬಂದ್ ನಿಂದಾಗಿ ದೊರೆತ ಬಿಡುವಿನ ಸಮಯಕ್ಕೆ ಜೊತೆಯಾದುದು ” ಶಬರಿ “_ ಎಂಬ ಕಾದಂಬರಿ. ಈ ನಾಡು ಕಂಡ ಹೆಸರಾಂತ ಚಲನಚಿತ್ರ ನಿರ್ದೇಶಕರು , ನಟರೂ , ಸಾಹಿತಿಗಳೂ , ಬರಹಗಾರರೂ ಆಗಿ ಹೆಸರು ಮಾಡಿರುವ ಹಿರಿಯರೂ ಆಗಿರುವ ಡಾ// ಬರಗೂರ್ ರಾಮಚಂದ್ರ […]