ನಾನು ಓದಿದ ಪುಸ್ತಕ

ಪ್ರೇಮ ತಪಸ್ವಿನಿ ಚಿತ್ರಾoಗದೆ.

ಎಸ್.ಪಿ.ವಿಜಯಲಕ್ಷ್ಮಿ

“”ಪ್ರೇಮ ತಪಸ್ವಿನಿ  ಚಿತ್ರಾoಗದೆ “”–ಲೇಖಕಿ  S P ವಿಜಯಲಕ್ಸ್ಮಿ,

ಇವರ ಕೆಲವು ಕವಿತೆ ಓದಿರುವೆ, ಪ್ರವಾಸ ಕಥನದ ಲೇಖನಗಳೂ ನನಗೆ ತುಂಬಾ ಇಷ್ಟವಾದವು, ಇದೀಗ ಹೇಳಹೊರಟದ್ದು ಮನಸೂರೆಗೊಂಡ ಚಿತ್ರಾoಗದೆಯ ಬಗ್ಗೆ….  

     ನಂಗೆ ಪೌರಾಣಿಕ ಕಥನಗಳೆಂದರೆ ಮೊದಲಿಂದಲೂ ತೀರದ ಆಕರ್ಷಣೆ, ಮತ್ತೆ ಮತ್ತೆ  ಪ್ರತಿ ಬಾರಿಯೂ ಓದಿದಾಗಲೂ ಹೊಸ ಹೊಸ ಆಯಾಮಗಳೂ ಹೊಸಬೆಳಕ ಚೆಲ್ಲುತ್ತಲೇ ಇರುತ್ತವೆ, ಅದರಲ್ಲೂ ಹೆಣ್ಣು ಪಾತ್ರಗಳು ಒಂದೊಂದರ ಮೇಲೂ ನೂರೆಂಟು ರೀತಿಯ ಭಾವಗಳು ಮುಡುತ್ತವೆ,

ನಂಗೆ ಈ  ಚಿತ್ರಾ…….  ಪಾತ್ರದ ಬಗ್ಗೆ ಜಾಸ್ತಿಯೇನೂ ತಿಳಿದಿರಲಿಲ್ಲ, ಮಹಾಭಾರತದಲ್ಲಿ ಬರೋ ಅರ್ಜುನ ಗಾಂಧರ್ವ ವಿವಾಹವಾದವಳು,   ಬಬ್ರುವಾಹನನ ಅಮ್ಮ ಅಷ್ಟೇ, 

ಅಲ್ದೇ, ರವೀoದ್ರನಾಥ್ ಟ್ಯಾಗೋರ್ ರ ಚಿತ್ರಾ,  ಕುವೆಂಪು ಚಿತ್ರಾ ಅವರವರದೇ ಶೈಲಿಯಲ್ಲಿ ಹೊರಹೊಮ್ಮಿಸಿದ್ದಾರೆ, ಆದರೂ ನಾನೂ ಓದಿರಲಿಲ್ಲ ಹೋದ ವರ್ಷ್ ನಮ್ಮೂರಲ್ಲಿ ಆಳ್ವಾಸ್ ನವರು ನೃತ್ಯ ರೂಪಕ ನೋಡೋವರೆಗೂ, ಅದುವರೆಗೂ ನಂಗೆ ನೃತ್ಯರೂಪಕ ಅಂದ್ರೆ ಅಂತಾ ಆಸಕ್ತಿ ಖಂಡಿತಾ ಇರಲಿಲ್ಲ, ಆತ್ಮೀಯ್ರೊಬ್ಬರ ಆಗ್ರಹಕ್ಕೆ ಮಣಿದು ಅಂದು ಹೋಗಿದ್ದೆ, ಅಂದು ನೋಡಿದ ಚಿತ್ರಾ ಮನದೊಳಗೆ ಅರಳಿದ್ದು ಇಳಿದದ್ದು ಮಾತ್ರಾ Vijaya Sp ಯವರ ಪ್ರೇಮ ತಪಸ್ವಿನಿ ಚಿತ್ರಾಳಾಗಿ,  ಮಣಿಪುರ ರಾಜ್ಯ ತನ್ನ ನಿಸರ್ಗ ರಮಣೀಯತೆ ಹಾಗೂ ಬದುಕಿನ ವೈವಿದ್ಯತೆಯಿಂದಲೇ ವಿಶಿಷ್ಟವಾದುದು, ಇದರಲ್ಲಿ ಬಿಂಬಿತವಾದ ಇನ್ನೊಂದು ಅಂಶ ಗಂಡುಮಕ್ಕಳಿಲ್ಲದ ಕಾರಣ ಮಗಳನ್ನೇ ರಾಜಕುಮಾರನಂತೆ ಬೆಳೆಸುವ  ರಾಜ ಚಿತ್ರಸೇನ, ಪುರುಷತ್ವವನ್ನೇ ಆವಾಹಿಸಿಕೊಂಡು ಬೆಳೆಯುವ ಚಿತ್ರಾ… ಮಗಳ ಹೆಣ್ತನದ ಸೊಗಡು ಸೂಕ್ಷ್ಮತೆಗಾಗಿ ಹಪಹಪಿಸುವ ತಾಯಿ ಕರುಳು….. ಗಂಡಿನಂತೆಯೇ ಬೆಳೆದರೂ ಹೆಣ್ತನವೆನ್ನೋದು ಹೇಗೆ ಅಂತರ್ಗತವಾಗಿರತ್ತನ್ನೋದು ಗಾಂಡೀವಿಯನ್ನ ನೋಡಿ ವಿರಹದಿ ಚಡಪಡಿಸುವ ಚಿತ್ರಾ…. ರಮ್ಯ ರೋಚಕ ಮಹಾಭಾರತದಲ್ಲಿ ಸಣ್ಣ ಅಂಶವಾಗಿರೋ ಚಿತ್ರಾ oಗದೆ ಇಲ್ಲಿ ವಿಸ್ತ್ರುತಗೊಳ್ಳುತ್ತಾ ಕಣ್ಮುಂದೆ ಪ್ರಣಯೋನ್ಮಾದದ ಹೊಸ ರೋಚಕ ಲೋಕವೊಂದು ಅತಿರಮ್ಯವಾಗಿ ಅನಾವರಣಗೊಳ್ಳುತ್ತಾ ಮೈಮನ ಆವರಿಸಿಕೊಳ್ಳುತ್ತಾಳೆ

ಕ್ಷಾತ್ರ ತೇಜಸ್ಸಿನ ಹೊಳಪಿನಲ್ಲಿ ಆ ವೀರತೆಯ ಗರ್ವದಲ್ಲಿ ಮಿಂಚುವ ಯುವರಾಣಿ ಎದೆಯೊಳಗೆ ಹೇಗಾದರೂ ಪಾರ್ಥನನ್ನೊಲಿಸಿಕೊಳ್ಳುವ ಹಂಬಲ ಉಕ್ಕಿ ಕಾಮದೇವನನ್ನು ಬೇಡಿಕೊಳ್ಳುವ ಪರಿ ಅದರ ಮೂಲಕ ಅವನನ್ನೊಲಿಸಿಕೊoಡು ಮತ್ತೆ ಗಂಡೆದೆಯ ಚಿತ್ರಳಾಗಿಯೂ ಅವನಲ್ಲುಳಿದು ಹೋಗುವ ಅಂತಿಮ ವಿಜಯ,  ಲೀಲಾ ವಿನೋದ ಕೃಷ್ಣ ಪರಮಾತ್ಮನ ಆಟದಲ್ಲಿ ಮಾಧ್ಯಮ ಪಾಂಡವ ಮೈಮರೆತು ಬಿಡುವ ರೀತಿಯನ್ನು,  ಚಿತ್ರಾ ಮರಳಿ ಪುರಪ್ರವೇಶ ಮಾಡದೇ ಊರಮುಂದಿನ ಗುಡಿಯಲ್ಲಿ ಪತಿಯ ನಿರೀಕ್ಷೆಯಲ್ಲಿ ಪ್ರೇಮತಪಸ್ವಿನಿಯಾಗೇ ಕಾಲಕಳೆಯುವ, ಭಗವಂತನ ಮಾಯದಿಂದ ಅಪ್ಪ ಮಗನ ಮಧ್ಯೆ ನೆಡೆಯುವ ಯುದ್ಧ, ಪತ್ನಿಯನ್ನು ಜಾರಿಣಿಯೆಂದು ನಿಂದಿಸುವ ದುರಹಂಕಾರಿ ಅರ್ಜುನ ಸರ್ವವನ್ನು ಯಾವ ಭಿಡೆಯಿಲ್ಲದೆ ಅತ್ಯುತ್ತಮ ಭಾಷೆಯಲ್ಲಿ ಸೌಜನ್ಯದ ಎಲ್ಲೆ ಮೀರದಂತೆ ಮೂಲಕ್ಕೆ ಕುತ್ತೂ ಬರದೇ ಮೂಲದ ರಸವತ್ತಾದ ವರ್ಣನೆಗೂ ಚ್ಯುತಿ ಬಾರದಂತೆ ಅಕ್ಷರ ಅಕ್ಷರವನ್ನೂ ಮೂಡಿಸಿರುವ ಪರಿ ಮನೋಜ್ಞವಾಗಿದೆ, ಪ್ರೇಮ ಪರಿಣಯ ರಾಸಲೀಲೆ ಯಾವುದೂ ಮಿತಿ ಮೀರದೇ ಓದುತ್ತಿದ್ದಂತೆ ದಿನಗಟ್ಟಲೇ ಆ ಭಾಷೆ, ವರ್ಣನೆ ಆ ರೋಮಾಂಚನದಲ್ಲಿ ಮೈಮರೆಯುವಂತಾಗತ್ತೆ, ನಾನಂತು ನಮ್ಮ ಹಳ್ಳಿಯ ಫಾರಂ ಹೌಸಲ್ಲಿ ಕುಳಿತು ಓದಿ ಕಳೆದೇ ಹೋಗಿದ್ದೆ,

 ಹೌದು ಎಸ್. ರಾಮನಾಥ್ ಅವರು ಮುನ್ನುಡಿಯಲ್ಲಿ ಹೇಳಿದಂತೆ ಪೌರಾಣಿಕದ ಬಗ್ಗೆ ಏನೇ ಬರೆಯುವುದೂ ಹೋಳಿಗೆ ಮಾಡಿದಂತೆ,?? !!(ಇದನ್ನ ಓದಿಯೇ ಸವೀಬೇಕು ) ನಿಜಾ ನಾನು ಹೋಳಿಗೆ ಸವಿದ ಆನಂದದಲ್ಲಿದ್ದೆ,  ನಾನಂದ್ಕೊಡಿದ್ದೆ ಈ ವಿಷಯಗಳನ್ನು ಅಂದಿನ ಭಾಷೆಯಲ್ಲಿ ಬರೆಯೋದು ಸುಲಭ ಅಂತಾ ಆದರೆ ಇದನ್ನ  ಓದಿದ ಮೇಲೇ ಅರ್ಥವಾಗಿದ್ದು ನಮ್ಮಿ ನಾಗಾಲೋಟದ ಬದುಕನ್ನ ಅಂದಿನ ಭಾವನೆಗೆ ಭಾಷೆಗೆ ಹೊಂದಿಸುವುದು ಎಷ್ಟು ಕ್ಲಿಷ್ಟ ಅಂತಾ….  ಇದು ಸಂಪ್ರದಾಯಸ್ಥ ಸಾತ್ವಿಕ ಸಹೃದಯಿ ಹಾಗೂ ಅತ್ಯಂತ ಪ್ರೌಢ ಮನಸ್ಕರಿಗೆ, ಮತ್ತು ವಿಷಯದ ಆಳ ಅಗಲ ವಿಸ್ತಾರವನ್ನು ಅರಿತು ನುರಿತವರಿಗೆ  ಮಾತ್ರಾ ಸಾಧ್ಯ,

ಮುಖಸ್ತುತಿಯಲ್ಲ ನಾನೇ ಬರೆದರೆ ಹೇಗಿರುತ್ತದೆಂಬುದನ್ನು ಚಿಂತಿಸಿದಾಗಲೇ ಹೊಳೆದ ಸೂಕ್ಷ್ಮವಿದು, ಒಂದು ಸುಸಂಸ್ಕೃತ ಚೌಕಟ್ಟಿನ ಸಾತ್ವಿಕ ಸಹಿಷ್ಣುತೆಯ ಸುರಕ್ಷತೆಯ ಬಾಲ್ಯದಿಂದಲೂ ಅನುಸರಿಸಿದ ಸಂತೃಪ್ತ ಮನಸ್ಥಿತಿಯ ಚಿಂತನೆಗೂ ಇವೆಲ್ಲವನ್ನೂ ಗೊತ್ತಿದ್ದೂ ಪರಿಸ್ಥಿತಿಯ ಅನಿವಾರ್ಯತೆಯಿಂದ ಅಧಿಗಮಿಸಿದ ಬಂಡಾಯ ಅಭಿವ್ಯಕ್ತಿಗಳ ನಡುವೆ ಸಣ್ಣ ತೆರೆಯೊಂದಿರತ್ತೆ ತಿಳಿವಿನ ಶುದ್ಧ ನಿಷ್ಕಲ್ಮಶ ಮನಸ್ಸಿಗೆ ಮಾತ್ರಾ ಅರಿವಿಗೆ ಬರುವಂತಹುದು, ಇವೆಲ್ಲವನ್ನೂ ಕ್ರೋಢಿಕರಿಸಿ ಸಮಗ್ರವಾಗಿ ಅವಲೋಕಿಸಿದರೆ ಇದು ವಿಜಯಾ ಅತ್ಗೆ ಕೈಲಿ ಅರಳಿದಷ್ಟೂ ಸುಮಕೋಮಲವಾಗಿ ನನ್ನಿಂದ ಸಾಧ್ಯವಾಗ್ತಿರಲಿಲ್ಲ, ಈ ಚಿತ್ರಾಳಿಂದಾದ ಇನ್ನೊಂದು ಉಪಕಾರವೆಂದರೆ ಪುರಾಣದ ಹೆಣ್ಣು ಪಾತ್ರಗಳೆಲ್ಲವನ್ನು ಕಲೆ ಹಾಕುವ  ಹುಡುಹುಡುಕಿ ಓದುವ ಅದರಲ್ಲೊಂದು ಹೊಸ ಕಾವ್ಯ ಸೃಷ್ಟಿಸುವ ತುಮುಲವೊಂದು ಹುಟ್ಟಿಕೊಂಡಿದ್ದು, ವಿಜಯಾ ಅತ್ತಿಗೆ ಯಾಕೆ ಮತ್ತಷ್ಟು ಈ ಪುರಾಣ ಪಾತ್ರಗಳ ರಚನೆಗೆ ಮನ ಮಾಡಬಾರದು??  ಯಾರಾದರೂ ಸಹೃದಯರು ಇಂತಹ ಗುಣಮಟ್ಟದ ಲೇಖಕಿಗೆ  ಒತ್ತಾಸೆಯಾದಲ್ಲಿ ಬಹುಷಃ ಅತ್ಯುತ್ತಮ ಪಾತ್ರಗಳು ಒಡಮೂಡಿಯಾವು,

*********

ಪದ್ಮಜಾ ಜೋಯಿಸ್

One thought on “ನಾನು ಓದಿದ ಪುಸ್ತಕ

  1. ಓ…. ಅತ್ಯಂತ ಪ್ರೀತಿಯ ಧನ್ಯವಾದಗಳು ಪದ್ಮಜಾ…

Leave a Reply

Back To Top