ಶಬರಿ
ಬರಗೂರು ರಾಮಚಂದ್ರಪ್ಪ
ಜಗತ್ತಿನಾದ್ಯಂತ ಕರೋನಾ ತಂದ ಬೀಕರ ಆತಂಕ ,ಸಾವು. ನೋವುಗಳ , ವಿಷಾದ , ಈ ಭಯಗ್ರಸ್ಥ ಸನ್ನಿವೇಶದಿಂದ ಪಾರಾಗಲು ದೇಶವಾಸಿಗಳಿಗೆ ವಿಧಿಸಿದ ಲಾಕ್ ಡೌನ್ ಎಂಬ ಬಂದ್ ನಿಂದಾಗಿ ದೊರೆತ ಬಿಡುವಿನ ಸಮಯಕ್ಕೆ ಜೊತೆಯಾದುದು ” ಶಬರಿ “_ ಎಂಬ ಕಾದಂಬರಿ.
ಈ ನಾಡು ಕಂಡ ಹೆಸರಾಂತ ಚಲನಚಿತ್ರ ನಿರ್ದೇಶಕರು , ನಟರೂ , ಸಾಹಿತಿಗಳೂ , ಬರಹಗಾರರೂ ಆಗಿ ಹೆಸರು ಮಾಡಿರುವ ಹಿರಿಯರೂ ಆಗಿರುವ ಡಾ// ಬರಗೂರ್ ರಾಮಚಂದ್ರ ಪ್ಪನವರದು .
ಬರಗೂರರೆಂಬ , ಮನೋ ಆಲಯದೊಳಗೆ ಹೆಣೆಯಲ್ಪಟ್ಟ “ಶಬರಿ”_ ಕಾದಂಬರಿ ನನ್ನೊಳಗೆ ಅಚ್ಚೊತ್ತಿದ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳಬಯಸುತ್ತಿದ್ದೇನೆ.
ಸಾಹಿತ್ಯ ಎಂದರೆ ಶಬ್ಧ, ಅರ್ಥ, ಭಾವ , ಬುದ್ಧಿಗಳಿಂದ ಸಮ್ಮಿಳಿತವಾಗಿದ್ದು , ಓದುಗನಿಗೆ ಜ್ಞಾನ , ಆನಂದ , ಬದಲಾವಣೆ. ಮಾರ್ಗದರ್ಶನ , ವಿಶ್ವಾಸವನ್ನು. ನೀಡುವಂತದ್ದಾಗಿದೆ . ಮಾನವೀಯ ಮೌಲ್ಯದಾ , ಮಾರ್ಗದರ್ಶನ ವಿಶ್ವಾಸವನ್ನು ನೀಡುವಂತದ್ದಾಗಿ ಮೌಲ್ಯಗಳ ಮಹತ್ವವನ್ನು , ಬದಲಾವಣೆಗಳ ಔಚಿತ್ಯ ವನ್ನೂ ,ಸಮಾಜದ ಓರೆ ಕೋರೆಗಳನ್ನು , ತಿದ್ದುವ, ಒಡಲೊಳಗಿನ ತುಮುಲಗಳನ್ನು ಬಿಚ್ಚಿಡುವ ನೋವುಗಳಿಗೆ , ಸಾಂತ್ವನ , ನೀಡುವ ,ಸರಿ ತಪ್ಪುಗಳನ್ನು ವಿವೇಚನೆಗೆ ಹಚ್ಚುವ , ಹೋರಾಟಗಳಿಗೆ ಧೈರ್ಯ ತುಂಬುವ , ಮಹತ್ವದ ಕೆಲಸಗಳನ್ನು ಸಾಹಿತ್ಯ ಮಾಡುತ್ತಾ. ,ಬಂದಿದೆ .
ಮನುಷ್ಯ , ಜಗತ್ತಿನಲ್ಲಿ ನೆಮ್ಮದಿಯಿಂದ. ಬದುಕಲು ಹಣ ಅಂತಸ್ತು ಆಹಾರ ಸೌಲಭ್ಯಗಳಷ್ಟೇ , ಸಾಲದು , ಎಲ್ಲಕ್ಕಿಂತ ಮಿಗಿಲಾಗಿ ದೌರ್ಜನ್ಯಗಳಿಂದ ಹೊರಬರಲು , ಜಗತ್ತಿನ ಅನ್ಯಾಯಗಳನ್ನು ಬಯಲಿಗೆಳೆಯಲು ಅಕ್ಷರ ಜ್ಞಾನ ಹಾಗೂ ಆತ್ಮವಿಶ್ವಾಸ ಬಹಳ ಮುಖ್ಯ ಎಂಬುದನ್ನು “ಶಬರಿ”- ಎಂಬ ಪಾತ್ರದ ಮುಖೇನ ಬಹಳ ಅದ್ಭುತ ವಾಗಿ. ತಮ್ಮ ದಿಟ್ಟ ನಿರೂಪಣಾ ಶೈಲಿಯಿಂದ ಹೆಣೆಯುತ್ತಾ ಹೋಗಿರುವ ಪರಿ ಅದ್ವಿತೀಯವಾಗಿದೆ.
ಆ ರಾಮಾಯಣದಲ್ಲೊಬ್ಬ ಶಬರಿ ಈ. ಕಾದಂಬರಿಯಲ್ಲೊಬ್ಬ ಶಬರಿ ಇಬ್ಬರ ಪಾತ್ರಗಳಲ್ಲೂ ನೇರ ಸಹಜ ದಿಟ್ಟ ನಡೆನುಡಿಗಳು ಸಹಕಾರ ಸಹಾಯದ ಮನೋಭಾವಗಳು, ವ್ಯವಸ್ಥೆಯನ್ನು ಧಿಕ್ಕರಿಸುವ ದೃಢತೆಗಳು ಇಬ್ಬರಲ್ಲೂ ಸಾಮ್ಯತೆ ಪಡೆದುಕೊಂಡಿವೆ.
“ನನ್ನ ದೃಷ್ಟಿಯಲ್ಲಿ ಶಬರಿ. ಒಂದು ಪಾತ್ರವಲ್ಲಾ , ಇದೊಂದು ರೂಪಕ ಈ ರೂಪಕಕ್ಕೆ ಹಿನ್ನೆಲೆಯಾಗಿ. ಬಂದಿರುವುದು ಒಂದು ಬುಡಕಟ್ಟಿನ ಬವಣೆಯ ಬದುಕು”
ಎಂದು ಬರಗೂರರೇ ತಮ್ಮ “ಬರಗೂರರ ಬಯಲೊಳಗೆ”-ಎಂಬಲ್ಲಿ ನುಡಿದಿದ್ದಾರೆ .
ರಾಜಕೀಯ ಅಂತಃಕರಣವನ್ನು ಶೋಧಿಸುತ್ತಾ ಜನಸಂಸ್ಕೃತಿ ಹಾಗೂ ಮುಗ್ಧತೆಯನ್ನು , ರೂಢಿ , ಆಚರಣೆ ,ದೇವರು ಎಂಬ ಕಲ್ಪನೆಗಳ ಮೂಲಕ ಬೆದರಿಸಿ ಸವಾರಿ ಮಾಡುವ ವರ್ಗ . ಒಂದೆಡೆಯಾದರೆ,
ಅಕ್ಷರಕಲಿಕೆಯಿಂದಾಗಿ ಮೂಡಿದ ಜ್ಞಾನ , ವಿಶ್ವಾಸ , ತನ್ಮೂಲಕ ಚರ್ಚೆ ,ಅನ್ಯಾಯಗಳ ಪರಾಮರ್ಶೆ ,,ತಮ್ಮ ಬೆವರನ್ನೇ ಹೀರಿ ಬದುಕನ್ನು , ನರಕವಾಗಿಸ ಹೊರಟಿರುವವರ ವಿರುದ್ಧ ಧನಿಯೇರಿಸುತ್ತಾ , ಆತ್ಮಸ್ಥೈರ್ಯ ಪಡೆದು ಸೆಟೆದು ನಿಲ್ಲುವ ಬುಡಕಟ್ಟು ಜನಾಂಗ ಯತ್ತೊಂದು ವರ್ಗ . ಇಲ್ಲಿ ರಾಜಕೀಯ ಕೈಮೇಲಾಟ ಅಮಾಯಕರ ಹತ್ಯೆ , ಗೆ ಇಂತಹ ಒಂದು ಗಂಭೀರ ವಿಷಯವನ್ನು , ಅತ್ಯಂತ ಸರಾಗವಾಗಿ ಹಾಡು,ನರ್ತ ಹಾಸ್ಯ ಶೃಂಗಾರ ಕರುಣ ಮುಂತಾದ ನವರಸಗಳನ್ನು ಮಿಳಿತಗೊಳಿಸುತ್ತಾ , ಎಲ್ಲಿಯೂ ಇದೊಂದು ಚಳುವಳಿಯೆಂಬ ಸುಳಿವೂ ಮನದಲ್ಲಿ ಮೂಡದ ಹಾಗೆ ಓದಿಸಿಕೊಂಡು ಹೋಗುವ ಇಲ್ಲಿಯ ಶೈಲಿ, ಬರಗೂರರ ಅಭಿವ್ಯಕ್ತಿಯ ತೇಜಕ್ಕೆ ಸಾಕ್ಷಿಯಾಗಿ , ಮನಸ್ಸನ್ನು ಸೆಳೆದಿದೆ . ಜೊತೆಗೆ ಚಲನಚಿತ್ರ ದಂತೆ ನಡುನಡುವೆ ಸನ್ನಿವೇಶಕ್ಕೆ ತಕ್ಕಂತೆ ಕವನಗಳು ಜಾಗೃತಿ ಗೀತೆಗಳ ದಂಡೇ ಅತ್ಯಂತ ಪ್ರಬುದ್ಧ ವಾಗಿ ಮೂಡಿಬಂದಿರುವ ಪರಿ ಚಲನ ಚಿತ್ರದ ಪ್ರಭಾವ ಇಲ್ಲಿಯೂ ಬಿತ್ತರಿಸಿದೆ ಚಿತ್ರನಿರ್ಧೇಶಕರ ನಡಿಗೆಯ ಲಕ್ಷಣವಿರುವುದು ಕಾಣಸಿಗುತ್ತದೆ .
ಹಾಗೆಯೇ ಬರಗೂರು ಬಳಸಿರುವ ಗ್ರಾಮೀಣ ಭಾಷೆಯ ಸೊಗಡು ಅತ್ಯಂತ ಸುಂದರವೂ ಮೊನಚೂ ಆಗಿ ಮೂಡಿಬಂದಿದ್ದು , ಲೇಖಕರು ಗ್ರಾಮೀಣ ಭಾಷೆಯ ಹಿಡಿತ ಹೊಂದಿದ್ದಾರೆಂಬು ದಕ್ಕೆ ಸಾಕ್ಷಿಯಾಗಿದೆ. ಹಾಗೂ ಅವರೆದೆಯೊಳಗೆ ಇಷ್ಟೊಂದು ಗ್ರಾಮ್ಯ ಪದಗಳು ಉಳಿದಿದೆಯೇ ಎಂದು ಅಚ್ಚರಿಯೆನಿಸುತ್ತದೆ . ರಿಯೆನಿಸುತ್ತದೆ . ಹಾಗೆ ಬಹಳ ಗಟ್ಟಿಯಾದ ಸುಂದರ ಗ್ರಾಮ್ಯ ಭಾಷೆಯನ್ನು ಮುಂದಿನ ಪೀಳಿಗೆಗೆ ಗೂ ಉಳಿಸುವ ಬೆಳಸುವ ಕಾರ್ಯಮಾಡಿದ್ದಾರೆ .
ಇನ್ನೂ -ಶಬರಿ :ತಿಮ್ಮರಾಯಪ್ಪ _,ಗೌರಿ ,:ಪೂಜಾರರಪ್ಪಾ , ಮೂಕ ಸಣ್ಣೀರ , ರಾಮಾಜೋಯಿಸ್ , (ಊರಗೌಡನಿಗೆ ಸಲಹೆಗಾರ), ನರಸಿಂಹರಾಯಪ್ಪ:ಸಾವಿತ್ರಮ್ಮ (ಊರು ಗೌಡ, ಗೌಡತಿ) , ಚಂದ್ರು ಬುಡಕಟ್ಟು ಜನರ ಸಂಬಂಧಿ ,ಸೂರ್ಯು , ಮತ್ತು ನವಾಬ್ ಈ ಜನರ ಉದ್ಧಾರಕ್ಕಾಗಿ ತಮ್ಮನ್ನೇ ಸವೆಸಿ ಕೊಂಡವರು ಈ ಜನರು ಹಿಂದಿನ ಶಕ್ತಿ ಯಾಗಿ ಧ್ವನಿಯಾಗಿನಿಂತವರು .
ಇಲ್ಲಿ ಪ್ರಧಾನ ವಾಗಿ ಕಂಡುಬರುವ ಪಾತ್ರಗಳೆಂದರೆ
ಶಬರಿ ಚಂದ್ರು ಸೂರ್ಯ , ಹುಸೇನ್ ಇಲ್ಲಿಯ ಜನರನ್ನು, ಎಚ್ಚರಿಸಿ ವಿದ್ಯೆ ಕಲಿಸಿ, ಅವರ, ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ತಮ್ಮನ್ನೇ ಉರಿಸಿಕೊಂಡು ಬೆಳಕಾಗುತ್ತಾ ಬಂದು ,ಕ್ರಿಯಾರೂಪಕಗಳಾಗಿರವ ಪಾತ್ರಗಳು , ಹಾಗೂ ಕಥಾ ನಾಯಕ , ನಾಯಕಿಯರಾಗಿದ್ದಾರೆ.
ಶಬರಿ ಕಥೆ ಪ್ರಾರಂಭವಾಗುವುದು ಸಿಂಹಾವಲೋಕನ ಕ್ರಮದಿಂದ ,. ಬುಡಕಟ್ಟು ಸಮುದಾಯದಲ್ಲಿ ಹೆಚ್ಚೆಂದರೆ ಮೂವತ್ತು ಗುಡಿಸಲುಗಳು , ಊರಿನ ಹೊರಗೆ ಸ್ವಲ್ಪ ದೂರದಲ್ಲಿವೆ ,ಆಚಾರ ವಿಚಾರಗಳಲ್ಲಿ ವಿಚಿತ್ರ ಸಂಪ್ರದಾಯ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಈ ಆಚರಣೆಗಳಿಗೆ ವಕ್ತಾರರಂತೆ ಪೂಜಾರಪ್ಪಾ ಇದ್ದಾನೆ . ಇವನು ಗೌರಿಯ ತಂದೆ . ಈತನ ಮಾತೇ ವೇದವಾಕ್ಯ , ಇವನನ್ನು ಬಿಟ್ಟರೆ ತಿಮ್ಮರಾಯಪ್ಪ , ಹಟ್ಟಿಯ ಹಿರಿಯ ನಿಯತ್ ಗಾರ , ಹದ್ದು ಮೀರದ ಮಾತು ನಡವಳಿಕೆ . ಇವನ ಮಗಳೇ ಶಬರಿ ತಾಯಿಯಿಲ್ಲದ ಇವಳು ತಂದೆಯ ಆಣತಿಯಂತೆ ಬೆಳೆದವಳು . ರಾಮಾಯಣ ದ ಶಬರಿ ಕಥೆಕೇಳಿದ್ದ ತಿಮ್ಮರಾಯಿ ಶಬರಿಯಂತೆ ತಾಳ್ಮೆಯಿಂದ , ನೀತಿ ನಿಷ್ಠೆ ಇಟ್ಕೊಂಡು ಬಾಳಿದ್ರೆ ಒಳ್ಳೇದಾಗ್ತದೆ ಎಂದು ತನ್ನ ಜನಗಳಿಗೆ ನಿಯತ್ತಿನ ತಾಳ್ಮೆಯ ಕಥೆ ಹೇಳುತ್ತಾ , ತಾನೂ ಅದನ್ನೇ ನಂಬಿ , ಪಾಲಿಸ್ತಾ ತನಗಿಷ್ಟವಾದ ಶಬರಿ ಹೆಸ್ರೇ ಮಗಳಿಗೂ ಕರೆದಾತ
ಸುತ್ತಲೂ ಝೇಂಕರಿಸಿದ ಮಳೆಮೋಡ ,ಕಾರೆಂಬ ಕತ್ತಲು ಮಿಂಚು ಫಳಫಳನೆ ಹೊಳೆದು ಮರೆಯಾಗುತ್ತಿದೆ , ಹುಚ್ಚೀರ ಮಳೆ ಬರುವ ಸೂಚನೆಯನ್ನು ಕೈ ಭಾಷೆಯ ಮೂಲಕವೇ ತಿಳಿಸುತ್ತಾ ಒಳ ಕರೆಯುತ್ತಿದ್ದಾರೆ
ಒಳಗೆ ನಡಿಯೆಂದು ಸನ್ನೆ ಯಲಿ ಹೇಳುತ್ತಿದ್ದಾನೆ , ಶಬರಿಯ ಮನೆ ಮನಸು ಎರಡಕ್ಕೂ ,ಅಮಾವಾಸ್ಯೆ ಕವಿದಿದೆ . ಇಡೀ ಹಟ್ಟಿ ಮೌನವಾಗಿ ಸೂತಕದ ಛಾಯೆ ಆವರಿಸಿದೆ . ” ಅತ್ರೆ ಸತ್ತವ್ರು , ಬತ್ತಾರೇನ ,ಸ್ಯಬರಿ ನಿಮ್ಮಪ್ಪಾನೇ ಹೇಳ್ತಿರಲಿಲ್ವಾ , ಒಳ್ಳೇ ದಿನಕ್ಕೆ ಕಾಯಬೇಕು ಅಂತಾ “- ಶಬರಿ ಅಂದ್ಮೇಲೆ. ಕಾಯೋದ್ ತಾನೇ . ನೀನೇ ಕಾಯದಿದ್ರೆ ಹ್ಯಾಂಗೆ ಎಂದು ಹೇಳ್ತಾ ಎಲ್ರೂ ಗುಡಿಸಲು ಸೇರಿಕೊಂಡ್ರು .
ಅಲ್ಲುಳಿದವರು ಮಾತನಾಡಬಾರದ ಹುಚ್ಚೀರ. ಶಬರಿ . ಒಡಲೊಳಗಿನ ಮಗು ಮೂವರೇ . ಕತ್ತಲನ್ನು ಸೀಳಿಕೊಂಡು ಬರುವ ಗುಡುಗು ಮಿಂಚು , ಆ ಮಿಂಚು ಬೆಳಕಂತೆ ಇವಳು ಬಾಳಲ್ಲಿ ಬೆಳದಿಂಗಳಾಗಿ ಬಂದ ಸೂರ್ಯ , ಬರುವನೇ ದೂರಕ್ಕೆ ದಿಟ್ಟಿಸುವಳು
ಆ ಸೂರ್ಯ ಅದೆಷ್ಟು ದಿನಗಳಾಗಿದ್ದವು ಹೋಗಿ , ಇಂದಾರಾ ಬಂದಾನಾ , ದೂರದಲ್ಲೂ ಯಾರೂ ಬರುವ ಸುಳಿವಿಲ್ಲಾ ಸಪ್ಪಳವೂ ಇಲ್ಲಾ . ಸೂರ್ಯ ಬಂದೇ ಬರುವನು ವಸಿ ಕಾಯಬೇಕು , ಮಗಾ , ಆ ಶಬರವ್ವನ ತರಾ ಅಪ್ಪನ ಮಾತುಗಳು , “- ನೆನಪುಗಳು ಬದಕ ನೆಕ್ಕಲಾರಂಬಿಸಿದವು .
ಇಂತದ್ದೇ ಮಳೆಯ ರಾತ್ರಿಯಲೊಮ್ಮೆ ಸೂರ್ಯನೊಂದಿಗೆ ಏಕಾಂತದ ಮಾತು , ನಮ್ಮ ಮಗುವಿಗೆ ಏನ್ ಹೆಸರಿಡಾನಾ ?
ಈಗ್ಲೇ ಯಾಕಾ ಆ ಮಾತು ?
ಹಂಗದ್ರೆ ಯೋವಾಗಾದ್ರೂ ಇಡೋದೇ ತಾನೆ , ಈಗ್ಗೆ ಅನ್. ಕಂಡ್ರೆ. ತಪ್ಪೇನು ಅಂಬ್ತ ?
ಗಂಡೂ ಹೆಣ್ಣು ಎರಡ್ಕೂ ಹೊಂದಿಕೆ ಆಗೋಹಂಗೇ ತೇಜ್ ಅಂತಾ ಇಡಾನಾ , ಆಗಬಹುದಾ
ಹಂಗಾದ್ರೆ ಏನಾ ? ಇಂತಾ ಎಸ್ರು ನಾ ಕೇಳೇ ಇಲ್ಲಾ ?
ಪಳ ಪಳ ಅಂತ ಹೊಳೆಯುತ್ತಲ್ಲಾ ಅದು , ತೇಜ ಸೂರ್ಯನ್ ಬೆಳಕಿದ್ದಂಗೆ
ಹಂಗಾರೆ ಅದೇ ಇರ್ಲಿ ಸೂರ್ಯಂಗೂ ಚಂದಾಗಿ ಹೊಂದಾಣಿಕೆ ಆಗ್ತದಾ .ಹೂ ಅದೇ ಇರ್ಲಿ ಆಟೆಯಾ ::
ಅದಿರಲಿ ಗಂಡೇ ಹುಟ್ಟಬೇಕಲ್ಲಾ. ನಕ್ಕಿದ್ದ ಸೂರ್ಯ ಇಂತದ್ದೆ ರಾತ್ರಿಯಲಿನಡೆದ ಮಾತುಕತೆ .
ಈಗ ಎಲ್ಲವೂ ಗೌಜಲಾಗಿದೆ , ತಿಮ್ಮರಾಯನ ಅಂತಿಮ ಕಾರ್ಯ ಮುಗಿಸಿ ಬಂದಿದಾಳೆ , ತಾಳಿಕಟ್ಟಿದ ಚಂದ್ರು ಬುಡಕಟ್ಟಿನವರು ಪಾಲಿಸಿಕೊಂಡು ಬಂದ ಸಂಪ್ರದಾಯ ವಾದ , ಮದುವೆಯಾದ ಹೆಣ್ಣು ಮಗಳು ಮೊದಲ ರಾತ್ರಿ ಯನ್ನು , ದೇವಾಲಯ ದಲ್ಲಿ. ದೇವರೊಂದಿಗೆ ಕಳೆಯಬೇಕು , ಈ ಅಲಿಖಿತ ಕಾನೂನು ಚಂದ್ರನೊಳಗೆ ಕೆಂಡದುಡೆಯಾಗಿ ಪುಟಿದು , ರಹಸ್ಯ ಭೇದಿಸಲು ತೀರ್ಮಾನಿಸಿದ ಮೊದಲ ರಾತ್ರಿ ದೇವಾಲಯ ಹೊಕ್ಕ ಚಂದ್ರು ,ದೇವಾಲಯದಲ್ಲಿ ಕೊನೆಯಾದ . ನಂಬಿಕೆ ಉಲ್ಲಂಘನೆ ರಕ್ತ ಕಾರಿ ಕೊನೆಯಾದ ನೆಂಬ ಭಯ ಬಿತ್ತಲಾಗುತ್ತದೆ . ಮದುವೆ ದಿನವೇ ಶಬರಿ ವಿಧವೆ .
ಚಂದ್ರು ವಿನ ಮದುವೆಯಂದೇ ಬರಬೇಕಿದ್ದಾ ಗೆಳೆಯ ಸೂರ್ಯಾ ಕಾರಣಾಂತರದಿಂದ ಎರಡು ದಿನ ತಡವಾಗಿ ಬಂದು ಚಂದ್ರುವಿನ ಗೆಳಯನೆಂಬುದ ಸಾಕ್ಷೀಕರಿಸಿ ಶಬರಿಯ ಮನೆಯಲ್ಲೇ ಉಳಿದು ಮನೆಯವನೆ ಅಷ್ಟೇ ಏಕೆ ಹಟ್ಟಿಯವನೇ ಆಗಿ ನಿಂತು ಬದಲಾವಣೆ ಯು ಕನಸಿನೊಂದಿಗೆ ರಾತ್ರಿ ಶಾಲೆ ಅಕ್ಷರ ಜ್ಞಾನ ನಂಬಿಕೆ , ವಂಚನೆ , ಹಕ್ಕು ಹಾಡು ಎಲ್ಲಾ ಬದಲಾವಣೆ ತಂದು ವಿಶ್ವಾಸ ಮೂಡಿಸಿ ಹೋರಾಟದ ಶಕ್ತಿ ತುಂಬಿ . ನಿಂತು ಕಥೆ ಮುಂದುವರಿಯುವ ಪರಿಗೆ ಓದುಗ ಫಿದಾ ಆಗುವಂತೆ
ನಿರುಪಿಸಿರುವ ರೀತಿಗೊಂದು ಹ್ಯಾಟ್ಸ್ ಆಫ್ ಹೇಳಲೇಬೇಕು . ಹಾಗೆ ಮುಂದುವರಿದಿದೆ .
ಹಾಗೆಯೇ ಮತ್ತೊಂದು ಮಹತ್ತರ ನಂಬಿಕೆ ಬದಲಾಗುವ ಸನ್ನಿವೇಷವೆಂದರೆ ಅಂತರ್ ಧರ್ಮೀಯ ವಿವಾಹ ಅದೂ ಬುಡಕಟ್ಟು ಜನರ ವಕ್ತಾರನಂತೆ ಇದ್ದ ಪೂಜಾರಪ್ಪನ ಮಗಳು ಗೌರಿ ನವಾಬನನ್ನು ಪ್ರೇಮಿಸಿ ಸಂಪ್ರದಾಯ ದಿಕ್ಕರಿಸಿದಾಗ ವಿಧಿಯಿಲ್ಲದೆ ಒಪ್ಪುವ ಸನ್ನಿವೇಶ ಮೊದಲ ರಾತ್ರಿ ದೇವರೊಂದಿಗೆ ಇರಬೇಕೆಂಬ ಕಾನೂನು ಮುರಿದು ಜಯಶಾಲಿ ಗಳಾಗಿದ್ದು . ಇದು ಊರಗೌಡನ ಮರ್ಮ ಎಂಬುದನ್ನು , ಚಂದ್ರು, ಸತ್ತದ್ದು ರಕ್ತಕಾರಿಯಲ್ಲಾ ,ದೇವಾಲಯದಲ್ಲಿ ಇದ್ದ ಊರಗೌಡ ನರಸಿಂಹನಿಂದ ,ಎಂದು ಹೇಳುತ್ತಾ ,ಎಲ್ಲವನ್ನೂ ಹಾಳೆಯಲ್ಲಿ ಬರೆದು , ಎಲ್ಲರ ಕಣ್ಣು ತೆರೆಸಿ ದ್ದು . ಕಾದಂಬರಿಗೊಂದು ಹೊಸ ತಿರುವು ನೀಡುವಂತೆ ಬದಲಾವಣೆ ಸ್ವೀಕರಿಸುವ ಸಮುದಾಯ . ಇವರ ಒಗ್ಗಟ್ಟೀಗೆ ಬೆದರಿ ಬೆಪ್ಪಾದ ಗೌಡ ಜೋಯಿಸರು .
ಹೀಗೆ ಕಥೇ ಸಾಂಗೋಪ ಸಾಂಗವಾಗಿ ಸಾಗಿದೆ , ಕುತೂಹಲ ಹಿಡಿದಿಡುವಲ್ಲಿ ಯಶಸ್ವಿ ಯಾಗಿ ಓದಿಸಿಕೊಂಡು ಸಾಗಿ ಕೊನೆಯಲ್ಲಿ , ಕರುಳು ಕಿತ್ತಂತೆ ಸಂಕಟದ ಅಂತ್ಯ ಕಂಡಿದೆ . ನೀವೊಮ್ಮೆ ಓದಿ ಅನುಭವಿಸಿ (ಕಾಡಿಸುತ್ತದೆ)
.
ಇಲ್ಲಿ ಬರುವ ಒಂದಷ್ಟು ಪಾತ್ರಗಳು ನಂಟು ಹೇಗೆ ಎಲ್ಲಿಂದ ಹೇಗೆ ಸೇರಿಕೊಂಡವು , ಇದಾವ ಸಂಘಟನೆ , ಬುಡಕಟ್ಟಿನ ಇವರ ನಡುವಿನ ಸಾಮರಸ್ಯ ಕ್ಕೆ .ಕಾರಣವೇನು ಎಂಬುದರ ಸುಳಿವೇ ಸಿಗುವುದಿಲ್ಲಾ.
ಸೂರ್ಯ ಯಾರು , ಅವನ ಸಂಚಾರವೆಲ್ಲಾ ರಾತ್ರಿಯೇ ಆಗಿರಲು ಕಾರಣ , ಅವನೊಂದಿಗಿದ್ದ ಬಂದೂಕೂ ಬಗಲಚೀಲದ ದಾಖಲೆಗಳೇನಿರಬಹುದು , ಶಬರಿಯಂತೆಯೇ ಓದುಗನಲ್ಲಿ. ಮೂಡಿದ ಸಂದೇಹಗಳು ಸಂದೇಹಗಳಾಗೇ ಉಳಿದುಬಿಡುವುದು ಮಾತ್ರ ವಿಷಾದನೀಯ .
ಇತ್ತ ” ಋಣಾನುಬಂಧ ರೂಪೇಣಾ ಪಶು ಪತ್ನಿ ಸುತಾಲಯ “- ಎಂಬಂತೆ ಬಗ್ಗಡವಿಲ್ಲದಾ ಸಗ್ಗದ ಸರೋವರದಂತೆ ,ಇದ್ದ ಶಬರಿಗೆ ಸಂತಸ ಕನಸಾಗಿಯೇ ಉಳಿದುಬಿಡುತ್ತದೆ ರಾಮಾಯಣದ ಶಬರಿ ಕುರಿತು ರಾಮನು ” ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು ಲಕ್ಷ್ಮಣ”- ಎಂದು ಹೇಳುವೆ ಮಾತಿನಂತೆಯೇ ಇಲ್ಲಿಯೂ ಶಬರಿ ಬೆಳಕಿಗಾಗಿ ಹಂಬಲಿಸಿ ನರಳುವ ಪರಿ
ನೋವು ಕಡೆಯವರೆಗೂ ಆಕೆಗೆ ಸಂಗಾತಿಯಾಗಯೇ ಉಳಿದು ಬಿಡುವುದು ಸಂಕಟವೆನಿಸುತ್ತದೆ ., ಹಕ್ಕಿಗಾಗಿ ಹೋರಾಡಿದವಳಿಗೆ ಹಕ್ಕು ಭೂಮಿ ಸಿಕ್ಕೀತೆ , ಸೂರ್ಯನ ಬಾಗಿಲು ಚೀಲ ಬಂದೂಕು ಹಿಡಿದಳು ಎಲ್ಲಿಗೆ ಸೇರಿದಳು ಎಂಬಿತ್ಯಾದಿ ಗೊಂದಲಗಳಿಗೆ ಉತ್ತರ ಸಿಗದಿರುವುದು , ಅನುಮಾನಕ್ಕೆ ಆಸ್ಪದ ನೀಡಿ ಇದರ ಮುಂದುವರಿದ
ಮತ್ತೊಂದು ಭಾಗವನ್ನೇನಾದರೂ ತಂದಿರುವರೇ ಎಂದೆನಿಸುತ್ತದೆಯಾದರೂ, ಕಾದಂಬರಿಯಲ್ಲಿ , ಎಲ್ಲಿಯೂ ಈ ಮಾಹಿತಿ ಕಾಣಸಿಗುವುದಿಲ್ಲಾ.
ಒಟ್ಟಾರೆಯಾಗಿ ಒಂದು ಸಾಮಾಜಿಕ ನ್ಯಾಯ ಕ್ಕಾಗಿ .ಹೊರಾಡುವ ಪಾತ್ರಗಳು ಅಂದಿನಿಂದ ಇಂದಿನವರೆಗೂ ತುಳಿತಕ್ಕೆ ಒಳಗಾದ ಒಳಗಾಗುವ ,ನ್ಯಾಯವೇ ಸಾಯುವುದು ಇಲ್ಲಿಯೂ ಸಾಬೀತಾಗಿದೆ .
ಶಿಕ್ಷಣ ವು ಚಿಂತನೆ ಆತ್ಮವಿಶ್ವಾಸ , ಮತ್ತು ಬದಲಾವಣೆಗಳನ್ನು ಮೂಡಿಸಿ. ಅಂತರಂಗದ ವರೆಗೂ ಜಾಗೃತಿಗೆ ಒಗ್ಗಿಸುವ ಬಗ್ಗಿಸುವ ಕ್ರಿಯೆಯನ್ನು ಸುಂದರವಾಗಿ ತಂದಿದ್ದಾರೆ .
ಆ ಶಬರಿಗೆ ಮುಕ್ತಿ ಒದಗುತ್ತದೆ ,ಆದರೆ ಇವಳು ಹೋರಾಟಕ್ಕೆ ನಾಯಕಿಯಾಗುತ್ತಾಳೆ.
ಮಹಾನ್ ಸಾಹಿತಿಗಳು , ಚಿಂತಕರು , ನಟರೂ , ನಿರ್ದೇಶಕರೂ ಕೃತಿಕಾರರೂ ಹಿರಿಯರೂ ಆದ ಬರಗೂರರಲ್ಲಿ ನನ್ನ ಮನವಿಯೆಂದರೆ ತೀರಾ ಸಾಮಾನ್ಯ ಓದುಗಳಾದ ನನ್ನ ಮಾತು ಅಭಿಪ್ರಾಯ ಗಳಲ್ಲಿ ದೋಷಗಳೇನಾದರೂ ಇದ್ದಲ್ಲಿ ಕ್ಷಮೆಯಿರಲೆಂದು ಕೇಳಿಕೊಳ್ಳುತ್ತಾ ಇದಕ್ಕೆ ವಿರಾಮ ನೀಡುತ್ತೇನೆ ಅತ್ಯಂತ ವಿಚಾರಪೂರ್ಣ ಗ್ರಾಮ್ಯ ಭಾಷೆಯ ವೈಭವೀಕರಣದಿಂದ ಸಮೃದ್ಧವಾಗಿ ಎಲ್ಲರಿಗೂ ಇಷ್ಟವಾಗುವ ಕಾದಂಬರಿ ಇದಾಗಿದೆ .ಎಲ್ಲಿಯೂ ಪುಟವನ್ನು ಹಾರಿಸೋಣವೆಂದೆನಿಸದೆ . ಓದಿಸಿಕೊಳ್ಳುತ್ತದೆ . ನೀವೂ ಸಾದ್ಯವಾದರೆ ಓದಿ. ಆನಂದಿಸಿ ಎಂದು ಕೇಳಿಕೊಳ್ಳುತ್ತಾ
***********
ವನಜಾ ಸುರೇಶ್
ನಿಮ್ಮ ವಿಮರ್ಶೆಯ ಬರಹವನ್ನು ಓದಿದ ಮೇಲೆ ಕಾದಂಬರಿಯನ್ನು ಮತ್ತೊಮ್ಮೆ ಓದುವಂತೆ ಪ್ರೇರಣೆ ನೀಡಿದೆ ಮೇಡಂ