ವರ್ತಮಾನ

ವರ್ತಮಾನ

ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ […]

ಕಾವ್ಯಯಾನ

 ಯಾವತ್ತೂ ಅವರ ಕತೆಯೇ ಉಂಡೆಯಾ ಕೂಸೆ ಎಂದುಅವ್ವಗೆ ಕೇಳುವ ಆಸೆಅಡ್ಡಿ ಮಾಡುವುದದಕೆಅಪ್ಪನ ತೂತುಬಿದ್ದ ಕಿಸೆ ಅವರ ಒಲೆಯ ಮೇಲಿನ ಮಡಕೆಒಡೆದು ಹೋದುದು ಮುದ್ದೆ ಕೋಲಿನಕಾರಣಕ್ಕೇನಲ್ಲಎಸರಿಗೂ ನೀರ ಇಡಲಾರದ ಬರಡುನೋವಿಗೆ ಖಾಲಿ ಮಡಕೆಯೂಬಾಯ್ದೆರೆಯಿತು ನೋಡಲ್ಲ. ನೆಲೆ ನೀಡದ ಸೂರು, ಉರಿವಸೂರ್ಯನ ತೇರು, ಕೆಂಡದುಂಡೆಯಮೇಲೆಯೇ ನಡೆದರು ಅವರೆಲ್ಲ;ಉರಿ ಹಾದಿ ಬರಿಗಾಲಿಗೆ ಊರದಾರಿ ಮರೆಸಿತು, ಹರಿದ ಬೆವರುಕಣ್ತುಂಬಿ, ನೋಟ ಮಂಜಾಯಿತು ಇವನಾರವ ಇವನಾರವಎಂದವರೇ ಎಲ್ಲ ; ಇವ ನಮ್ಮವಅವ ನಮ್ಮವ ಎನ್ನಲ್ಲಿಲ್ಲ. ಕಷ್ಟಸಂಕಷ್ಟವಾಗಿ ಅವರನು ಕಾಡಿತಲ್ಲಕಾಯಕಜೀವಿಗೆ ಯಾವ ಯುಗದಲೂರಕ್ಷಣೆ ಸಿಗದಲ್ಲ.. ***** […]

ಪುಸ್ತಕ ಸಂಗಾತಿ

ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ‌ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ ‌.ಇದರಲ್ಲಿ‌ ನಾ ಓದೊದ ಮೊದಲ ಕತೆ‌ ಕವಲು ಸಂಕಲನದ‌ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ‌‌ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ.‌ ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ […]

ಕಾವ್ಯಯಾನ

ಏಕಾಂಗಿಯೊಬ್ಬನ ಏಕಾಂತ ಕಣ್ಣೀರು ಖಾಲಿಯಾಗುವುಂತೆತುಂಬಿಕೊಳ್ಳುತ್ತದೆ ಮತ್ತೆ ಮತ್ತೆಏಕಾಂತ ಖಾಲಿಯಾದರೂಏಕಾಂಗಿಯಾಗುವಂತೆಕಣ್ಣೀರು ಕೂಡ ನೀರಾಗುತ್ತದೆಅವಳ ಬಸಿದು ತಾನೇ ಉಳಿದಾಗ ಮೂರುಗಂಟಿನ ಆಚೆ ನೂರುಗಂಟುಗಳಾಚೆತೆರೆದುಕೊಂಡ ಹೊಸಲೋಕಕೆಪಕ್ಷಿಯ ರೆಕ್ಕೆಗಳ ಕಸುವಿನಂತೆಜಿಗಿದ ಕನಸುಗಳನೆಲ್ಲಾ ಗಂಟಿನೊಳಗೆಮನದೊಡೆಯನ ಸಂಗಾತಕೆಇಬ್ಬನಿಯ ಜೀವದಂತೆ ಕಾದುಕೂತವಳು ಅಲೆಯೊಡೆವ ರುಚಿ ತಂಗಾಳಿಗೆ ಸವರಿಕಾಮನ ಬಿಲ್ಲನು ಕಂಡವಳುತೆಂಡೆಯೊಡೆದ ಕಣ್ಣೀರ ಮಾತಿಗೆಗಾಳಿಯನೆ ಸೀಳಿ ಹೊರಟಾಗತಂಗಾಳಿಗೆ ಬಸಿರಾಗಿ ಕನಸುಗಳ ಹೆತ್ತವಳು ಅಕ್ಷರಕ್ಕೆ ಸಿಗದ ಅಕ್ಕರೆಯನುಲಿಪಿಮಾಡಿ ಅವನಿಗೆ ತಲುಪಿಸಲುಹಾರಿ ಹಾರಿ ನೆಲೆ ಕಾಣದೆ ಅಲೆಯುವಳುಆಗೊಮ್ಮೆ ಈಗೊಮ್ಮೆ ಟಿಸಿಲೊಂದು ಕಂಡಾಗಮುಂಗಾಲಿನಲೆ ಜೀವ ಹಿಡಿಯುವಳುನಂಬಿಕೆಯ ಮಾತು ಹೇಳಿದ ಆ ಮರಕೆಅವಳ ಹಳಹಳಿಕೆಗಳನು […]

ಕಾವ್ಯಯಾನ

ಕವಿತೆಯಾಗುವ ಹೊತ್ತು ಅಂಜನಾ ಹೆಗಡೆ ಅಲ್ಲಿಕರುಳ ಬಿಸುಪಿಗೆಕದಲಿದ ಕುಡಿಯೊಂದುಕನಸಾಗಿ ಮಡಿಲುತುಂಬಿಬೆಳ್ಳಿಗೆಜ್ಜೆಯ ಭಾರಕ್ಕೆ ಕನಲಿದರೆನಕ್ಷತ್ರವೊಂದುದೃಷ್ಟಿಬೊಟ್ಟು ಸವರಿಹಣೆ ನೇವರಿಸಿ ನಕ್ಕಾಗಸೃಷ್ಟಿ ಸ್ಥಿತಿ ಲಯಗಳಭಾಷ್ಯವಿಲ್ಲದ ಬರೆಹಕ್ಕೆತಂಬೂರಿ ಹಿಡಿದುನಾನಿಲ್ಲಿಅಕ್ಷರವಾಗುತ್ತೇನೆ ಅಲ್ಲೊಂದು ಇಬ್ಬನಿಹಸಿರೆಲೆಯ ಮೋಹಕ್ಕೆಆವಿಯಾಗುವ ಹೊತ್ತಲ್ಲಿಮುಂಗುರುಳೊಂದು ನಾಚಿಕೆಂಪಾಗಿಅರಳಿದ ದಾಸವಾಳದಪ್ರೇಮಕ್ಕೆ ಬಿದ್ದಾಗಅಂಗಳಕ್ಕಿಳಿದ ಬಣ್ಣಗಳಒಂದೊಂದಾಗಿ ಹೆಕ್ಕುತ್ತಜೋಡಿಸುತ್ತಬೆಳಕಾಗಿ ಮೈನೆರೆದುನಾನೊಂದುಚಿತ್ರಕಾವ್ಯವಾಗುತ್ತೇನೆ ಅಲ್ಲಿಜೋಕಾಲಿಯೊಂದುಸ್ವಪ್ನಗಳ ಜೀಕುತ್ತಮುಗಿಲಿಗೆ ಮುಖಕೊಟ್ಟುಹಗುರಾಗುವ ಕ್ಷಣದಲ್ಲಿಗಾಳಿಗಂಟಿದ ಪಾದನೆಲವ ಚುಂಬಿಸುವಾಗಜೀಕಲಾಗದನೆಲದೆದೆಯ ನಿಟ್ಟುಸಿರಗಾಳಿಗೊಪ್ಪಿಸಿನಾನಿಲ್ಲಿಕವಿತೆಯಾಗುತ್ತೇನೆ **********

ಕವಿತೆ ಕಾರ್ನರ್

ಕವಿತೆಯಂತವಳು (ಕವಿತೆಯಂತವಳು ಕವಿತೆಯಾದಾಗ) 1.ಸಹ್ಯಾದ್ರಿಯ ಹಸಿರು ಚಪ್ಪರದೊಳಗಿನೊಂದುಹಳೆಯ ಮನೆಯೊಳಗೆ ಕೂತುಬರೆಯುತ್ತಾಳೆಪ್ರತಿ ಶಬುದವನ್ನೂ ಹೃದಯದೊಳಗಿಂದ ಹೆಕ್ಕಿತಂದುತನ್ನ ಒಂಟಿತನದ ಕಣ್ಣೀರಿನಿಂದ ಅವನ್ನು ತೊಳೆದುಒಣಗಿಸಿತನ್ನ ಲೋಕದ ಕಣ್ಣಿನ ನಗುವಿನ ಬಣ್ಣವನದಕೆ ಲೇಪಿಸಿಕಟ್ಟುತ್ತಾಳೆಕವಿತೆಯ ಹಾರ,ತನ್ನಅವಮಾನಅಸಹಾಯಕತೆಹತಾಶೆಗಳ ಪೋಣಿಸಿ!ಓದುತ್ತೇನೆ. ತಲೆದೂಗುತ್ತೇನೆಅವಳ ಕಾವ್ಯ ಕಟ್ಟುವ ಕಲೆಗಿಂತ ಹೆಚ್ಚಾಗಿನಕ್ಕು ನಕ್ಕೇ ದು:ಖ ಮರೆಸಿಮರುಳು ಮಾಡುವ ಅವಳ ಬದುಕುವ ಕಲೆಗಾರಿಕೆಯನ್ನು! ಅವಳಿಗೂ ಬದುಕೆಂಬುದಿದೆ ಕವಿತೆಯಹೊರತಾಗಿಯೂಎಂಬುದು ನೆನಪಾದಾಗೆಲ್ಲನಾನು ಕಣ್ಣೀರಾಗುತ್ತೇನೆ.=================== 2ಕಂಡೆ:ಶಬುದಗಳ ಒಡನಾಟದೊಳಗೆ ತಾನೇ ಒಂದುಹೊಸ ಶಬುದವಾದವಳ ಹಾಗೆ ಅವಳು ಕಟ್ಟಿದ ಪ್ರತಿ ಶಬುದಗಳ ಪಾದಗಳಲ್ಲೂಗಾಯದ ಗುರುತುಇಟ್ಟ ಹೆಜ್ಜೆಗಳೆಲ್ಲವೂ ಹೂವಿನ ಮೇಲೇನೂ ಆಗಿರಲಿಲ್ಲಬಹಳಷ್ಟು […]

ಕಾವ್ಯಯಾನ

ತುಡಿತ ವಿಜಯ್ ಶೆಟ್ಟಿ ಎಲ್ಲ ಮರೆತ ಒಂದು ಹಳೆಯಊರಕೇರಿಯ ದಾರಿಗುಂಟಸತತಸೈಕಲ್ ತುಳಿಯುವ ತುಡಿತನನಗೆ. ಇನ್ನೇನು ದಿನ ಕಳೆದು,ಉದಯಕ್ಕೆ ಸಿದ್ದವಾದ ರಾತ್ರಿಗೆ,ಸಂಜೆಯ ಹುಂಜದ ಹಂಗಿಲ್ಲಅಪರಿಚಿತ ಊರಕೇರಿಯ ದಿಕ್ಕುಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು! ತುಸುವೇ ಹೊತ್ತಿನ ಬಳಿಕನಾನು ತಲುಪುವ ಕೇರಿಯಾದರೂ ಎಂಥದು? ಮುದಿ ಲಾಟೀನಿನ ಮಂದ ಬೆಳಕಲ್ಲಿಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋಆ ಊರಿನಲ್ಲಿ?ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋಆ ಊರಿನಲ್ಲಿ?ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋಆ ಊರಿನಲ್ಲಿ? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆಒಂದೋಅಪರಿಚಿತ ಗುಡಿಸಲೊಂದರಲ್ಲಿಮಂಕು […]

ಪುಸ್ತಕ ವಿಮರ್ಶೆ

ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ […]

ವಿಮರ್ಶೆ

ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ‌ ಮುಂದ (ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ) ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ‌ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿ‌ಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ […]

ಕಾವ್ಯಯಾನ

ಕಣ್ಣೀರು ಜಗದೀಶ್ ಬನವಾಸಿ ಕಣ್ಣೀರು ಬರುವಷ್ಟು ಬರಲಿಎದೆಯ ನೋವು ತೊಳೆದುನೆನಪುಗಳ ಪುಟ ಓದ್ದೆಯಾಗುವಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳು ಬರುವಷ್ಟು ಅತ್ತು ಬಿಡುನೆನಪುಗಳು ನೇಪಥ್ಯಕ್ಕೆ ಮರಳಿಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳುವ ಹರಿವಿಗೆ ತಡೆಯಾಗುವಗೊಡ್ಡು ನೆಪಗಳ ಒಡ್ಡದಿರುಒಡೆದ ಕಟ್ಟೆ ಬರಿದಾಗಲಿ ಬಿಡುಮತ್ತೆಂದು ಅವು ತಿರುಗಿ ಬಾರದಂತೆ. *******

Back To Top