ಸುಮ್ಮನೆ ಬದುಕಿಬಿಡು

ಸುಮ್ಮನೆ ಬದುಕಿಬಿಡು

ಕವಿತೆ ಸುಮ್ಮನೆ ಬದುಕಿಬಿಡು ವಿಶಾಲಾ ಆರಾಧ್ಯ ಬದುಕಿ ಬಿಡಬೇಕು ಸುಮ್ಮನೆದುಮ್ಮಾನ ಬಿಗುಮಾನವಿಲ್ಲದೆಎಲ್ಲರೊಳಗೊಂದಾಗಿಯೂತಾನೇತಾನಾಗಿ ಆಕಾಶಕ್ಕೇಕೆ ಚಪ್ಪರ ..ನಿಸರ್ಗಕ್ಕೇನು ಮದುವೆಯೇ?ಇಷ್ಟಕ್ಕೂ ಮದುವೆಗೆ ಚಪ್ಪರಬೇಕೇ ಬೇಕೆಂದವರಾರು?ಮದುವೆಗೆ ಗಂಡು ಹೆಣ್ಣಿದ್ದರೆ ಸಾಕುಬೇರೆಲ್ಲಾ ಬೇಲಿಗಳ ಕಿತ್ತು ಹಾಕು ಪ್ರಕೃತಿ ಚೈತ್ರದ ಚಿಗುರೊಡನೆಮೈನೆರೆದಾಳೆ ಚಲುವೆರೆದಾಳೆಹೆಣ್ಣಿನ ಗುಣವೇ ಈ ಮಣ್ಣಿಗೂಮೈದುಂಬಿದಾಗ ಮಿಕ್ಕಿ ಎರೆವುದುಪ್ರಕೃತಿ ಸಹಜ ! ಅದಕೇಕೆ ನಿಯಮ ***************************

ಮನ ನೆಡದಾಗ

ಕವಿತೆ ಮನ ನೆಡದಾಗ ರೇಶ್ಮಾಗುಳೇದಗುಡ್ಡಾಕರ್ ನಡೆಯುತ್ತ ನಡೆಯುತ್ತಾ ನಡೆದದಾರಿಯೇ ಕಾಣಲಿಲ್ಲ ಹಿಂತಿರುಗಿನೋಡಿದಾಗ ಮುಂದಿರುವ ಗೂಢಾರಣ್ಯವುನಡಿಗೆಗೆ ಧೊಳಿಪಟವಾಗಿಅವಶೇಷವೇ ಇಲ್ಲದಂತಾಗಿತ್ತು …..! ಬದುಕಿನ ಪ್ರವಾಹಕ್ಕೆ ನಿಲ್ಲದಪಯಣ ರಭಸದಿ ಹುಡುಕುತ್ತಲೆಇತ್ತು ನೆಮ್ಮದಿಯ ದಡವದಣಿವರಿಯದ ದೇಹದ ಜೊತೆಗೆಹೆಗಲಲ್ಲಿ ಭದ್ರವಾಗಿದ್ದವು ಕನಸಿನಜೋಳಿಗೆ ಒಮ್ಮೊಮ್ಮೆ ನಿಂತಲ್ಲೇ ನಿಂತು ,ಕಾದು ,ಕಾದು , ಕೆಂಡಕಿಂತಲುಬಿಸಿಯಾಗಿ ! ಎಲ್ಲ ಬೇಗುದಿಗಳನ್ನುತನ್ನೊಳಗೆ ಸುಟ್ಟು ಬೂದಿಮಾಡಿತು …… ದಿಟ್ಟತನ ನೋಡುಗರ ಎದೆಯಲ್ಲಿಭಯದ ಬುಗುರಿಯ ಆಡಿಸಿದ್ದುಕ್ಷಣ ಮಾತ್ರದಲ್ಲಿಸಂಕೋಲೆಗಳನ್ನು ಕಿತ್ತು ಒಸೆದಮೇಲೆಹೆದರುವದು ಯಾತಕ್ಕೆ ?ಭವಿಷ್ಯ ಕ್ಕೂ ,ವಾಸ್ತವಕ್ಕೂ …..ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವುಭಯದ ಭೂತಗಳು … […]

ಜೋಳದ ಹೂವು

ಕವಿತೆ ಜೋಳದ ಹೂವು ಪೂಜಾ ನಾರಾಯಣ ನಾಯಕ್ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆಜೋಳದ ಹೂವೊಂದು ಮಗುವಂತೆಮನದಿಂಗಿತವ ಕೇಳುವವರಾರೆಂದುನರಳುತಿದೆ ತನ್ನೆದೆಯ ಗೂಡಲ್ಲಿರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ ಮನದಿಂಗಿತವನರುಹಲಿ?ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?ನನ್ನೆಡಗೆ ಸುಳಿಯರಾರೂಅಯ್ಯೋ, ಇದು ನನ್ನ ವಿಧಿಯೆ? ಪಾತರಗಿತ್ತಿಗೆ ಹೇಳಲೆ?ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!ಭ್ರಮರಕ್ಕೆ ತಟ್ಟಿದೆಸೂರ್ಯಕಾಂತಿಯ ಮೋಹ!ಕಣಜವನು ಕೈಬೀಸಿ ಕರೆವೆನೆಂದರೆಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!ಯಾರ ಬಳಿ ಹೇಳಲಿ ಅಡಗಿದಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,ಗೋಗರೆಯುತಿಹೆ ಸುಯ್ಲು ಸೋರದ ಹಾಗೆನುಂಗುತಿಹೆ ಒಳಗೊಳಗೆ… ಎತ್ತಲಿಂದಲೂ ಬರರ್ಯಾಕೆ ಇತ್ತ?ಕುಸುಮ-ವಾಸನೆಯ ಕಂಪಿಲ್ಲವೆಂದೆ?ಇದ್ದರೂ ಇರಬಹುದೆ ನನ್ನೊಳಗಿನಮಧುವಿಗೆ […]

ದೊರೆಯ ಕಿರೀಟದ ನೀಲ ಮಣಿಯಲ್ಲಿ….

ಕವಿತೆ ದೊರೆಯ ಕಿರೀಟದ ನೀಲ ಮಣಿಯಲ್ಲಿ…. ಶ್ರೀದೇವಿ ಕೆರೆಮನೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದದೊರೆಯಲ್ಲೊಂದು ಉದಾಸೀನಅನತಿ ದೂರದಲ್ಲಿ, ಕೈ ಕಟ್ಟಿವಿಧೇಯಳಾಗಿ ನಿಂತಿದ್ದಕಪ್ಪು ಬಣ್ಣದ ನಿರಾಭರಣ ಯುವತಿಯಕಡೆಗೊಂದು ದಿವ್ಯ ನಿರ್ಲಕ್ಷ ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯಸುಂದರವಾಗಿರದ್ದು ಯಾವುದೂ ಕಣ್ಣೆದುರುಕಾಣಲೇ ಬಾರದು ಎಂಬ ಹಟಎದುರಿಗಿದ್ದ ಯುವತಿಯೋಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ ದೊರೆಯ ಅಣತಿಯಂತೆ ತಲೆ ತಗ್ಗಿಸಿಮುಖ ತಿರುವಿ ಹೊರ ಹೊರಟಾಕೆಯಕಣ್ಣಲ್ಲೊಂದು ಅಬ್ಬರಿಸುವ ಕಡಲುಉಕ್ಕಿದ ನಗೆಯಲ್ಲೊಂದು ಕಡಲಲೆಗಳನೆನಪಿಸುವ ಭೋರ್ಗರೆತ ಅದೋ…ದೊರೆ ಓಡೋಡಿ ಬಂದಿದ್ದಾನೆಈಗ ತಾನೆ ಹೊರಗೆ ಹೋದಕಪ್ಪು […]

ಗೆಳೆಯರು ಹಲವರು

ಕವಿತೆ ಗೆಳೆಯರು ಹಲವರು ಮಾಲಾ.ಮಾ.ಅಕ್ಕಿಶೆಟ್ಟಿ. ಕಲಿಸುವುದು ದಿನವೂಗೆಳೆತನ ವ್ಯಾಖ್ಯೆಗಳುವಾಟ್ಸಪ್ ಫೇಸ್ ಬುಕ್ ನಲ್ಲಿ ನೋಯಿಸುವುದು ಹೀಯಾಳಿಸುವುದುಕಡೆಗಣಿಸುವುದು ಸಲ್ಲಚೂರು ಚೂರು ಹೃದಯವನ್ನಂತೂಮಾಡಬಾರದುಗಳ ಸರಮಾಲೆಯಲ್ಲಿಸಾಲು ನಿಂತ ‘ಬಾರದುಗಳು’ ಬೇಕೇ ಬೇಕು ಹಠಒಂದು ಕಾಲದಲ್ಲಿ ಗೆಳೆತನಇರದಿರೆ ನಿರುತ್ಸಾಹಸಿಗಲಿಲ್ಲ ಅಂದುಸಿಗುತ್ತಿದೆ ಇಂದುವಾಟ್ಸಪ್ ಫೇಸ್ ಬುಕ್ ನಲ್ಲಿ ಒಂಟಿತನ, ಅಸಂತೋಷಅಶಾಂತಿಯನ್ನು ಕೊಟ್ಟದೇಣಿಗೆ ಅಂದಿನ ಗೆಳೆತನದ್ದುಸುಧಾರಿಸಿದ ಗೆಳೆತನಇಗಿಂದು ನೀಗಿಸಲುಅಸಾಧ್ಯ ಆಗಿನ ಬೇಡಿಕೆಯನ್ನುಸಾಕು ಗೆಳೆತನ ಡೋಂಗಿರೂಢಿಯಾಗಿದೆ ಅವರಿಲ್ಲದಜೀವನದ ಒಂಟಿ ಪಯಣ ವ್ಯತ್ಯಾಸವಿಲ್ಲ ಇವರಇರುವಿಕೆ ಇಲ್ಲದಿರುವಿಕೆಯಾರ್ಯಾರ ಜೀವನದಲ್ಲಿಏನು, ಕುತೂಹಲವಿಲ್ಲಆತ್ಮೀಯರಲ್ಲದವರಜೊತೆ ಉತ್ಸಾಹವೆಲ್ಲಿ ನೀರೆರೆಯಲು ಬರುವರುಸತ್ತಾಗ ಬಾಯಲ್ಲಿ ಆತ್ಮೀಯರುಹೊರತು ಡೋಂಗಿಯಲ್ಲಪಾಪ ಫೋಟೋ […]

ನನ್ನ ಬೆರಳುಗಳು

ಕವಿತೆ ನನ್ನ ಬೆರಳುಗಳು ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ನನ್ನ ಬೆರಳುಗಳುಗಿಡಗಳಲ್ಲಿ ಚಿಗುರುತ್ತವೆಹವಳದಂತೆ ಕೆಂಪು ಕೆಂಪುಅರಳುತ್ತವೆ ತಾವರೆಯ ಎಸಳುಗಳಂತೆಕೊಳದಲ್ಲಿ ಮೀನುಗಳಾಗಿಉಗುರುಗಳು ಕಣ್ಣುಗಳಾಗಿಕಣ್ಣು ಮಿಟುಕಿಸದೆ ದೇವರಾಗುತ್ತವೆಮಿಂಚಿನ ಗತಿಯಲ್ಲಿ ಚಲಿಸುತ್ತವೆನಾನು ಗಾಳ ಹಾಕುತ್ತೇನೆನನ್ನದೇ ಬೆರಳುಗಳಿಗೆಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿ ಮೀನುಗಳು ನೀರು ಬಿಟ್ಟೊಡನೆಮರಳಿ ಬೆರಳುಗಳಾಗುತ್ತವೆಹವಳ ಚಿಗುರುಗಳಾದತಾವರೆ ಎಸಳುಗಳಾದಕೊಳದೊಳಗೆ ಮೀನುಗಳಾದಅನುಭವಗಳನ್ನು ಬರೆಯುತ್ತವೆದೇವರಾದದ್ದನ್ನೆ ಮರೆತುಇನ್ನೇನೋ ಹೊಸತು ಆಗಲುರೆಕ್ಕೆ ಬಿಚ್ಚಿಕೊಂಡು ಹೊರಟುಬಿಡುತ್ತವೆಹೊಸತು ಆದಾಗೆಲ್ಲ ದೇವರಾದ್ದನ್ನುಬೆರಳಾದಾಗೆಲ್ಲ ಮರೆಯುತ್ತಮರಳಿ ಹೊರಡುತ್ತವೆ ಅದಕೇ…ನನ್ನ ಕವನಗಳು ದೇವರನ್ನುಮುಟ್ಟುವುದೇ ಇಲ್ಲಇನ್ನೇನು ಬೆರಳು ಆತನನ್ನುಮುಟ್ಟಿತು ಎಂಬಷ್ಟರಲ್ಲಿಅದಕ್ಕೆ ಮುಟ್ಟು ಆಗಿರುತ್ತದೆಕವನಗಳು ಹಾಳೆಗಳಲ್ಲೇಹಳತಾಗುತ್ತವೆ ನನ್ನ ಹೃದಯಒಂದು ಮೀನಾಗಿಬಿಟ್ಟಿದೆಗಾಳ ಅವನ […]

ಕಬ್ಬಿಗರ ಅಬ್ಬಿ -9 ಕನಸು ಕಲಿಸುವ ಕವಿತೆಗಳು ಆಫೀಸ್‌ನಲ್ಲಿ ದಿನವಿಡೀ ದುಡಿದು, ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿ ಮನೆಗೆ ಬಂದಾಗ, ಬಿಸಿ ಬಿಸಿ ಕಾಫಿಯ ಜತೆಗೆ ಭಾವ ಗೀತೆ ಕೇಳುತ್ತೇನೆ. ಕುದಿದು ಕೆನೆಗಟ್ಟಿದ ಮನಸ್ಸನ್ನು ತಣಿಸಿ, ತಂಪು ಐಸ್ ಕ್ರೀಂ ಮಾಡುವ ಶಕ್ತಿ ಈ ಕವಿತೆಗಳಿಗೆ. ಹಾಡು ಕೇಳುತ್ತಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಅಂತ ಸ್ಮೃತಿ ಪಟಲದಿಂದ ಅಕ್ಷಿಪಟಲಕ್ಕೆ ಚಿತ್ರಗಳು ಪ್ರೊಜೆಕ್ಟ್ ಆಗಿ, ಕನಸುಗಳಿಗೆ ರೆಕ್ಕೆ ಮೂಡುತ್ತವೆ. ಬದುಕಿನಲ್ಲಿ ವೈಫಲ್ಯಗಳು ಹಲವು. ಆದರೂ ನೂರರಲ್ಲಿ […]

ಅಬ್ಬರ

ಕವಿತೆ ಅಬ್ಬರ ಪ್ರೊ.ಕವಿತಾ ಸಾರಂಗಮಠ ಹರಿದ ಗುಡಿಸಲಲ್ಲಿಮುರಿದ ಛಾವಣಿಗಳಲ್ಲಿಹರಿದ ಬಟ್ಟೆಯುಟ್ಟುಹಸಿವು ಇಂಗಿದೆ! ನಿರಾಶ್ರಿತರು ಮುಗಿಲಿಗೆಮುತ್ತಿಗೆ ಹಾಕಿದ್ದಾರೆತುತ್ತು ಅನ್ನ ಬಟ್ಟೆಗಾಗಿಹೆಣಗುತ್ತಿದ್ದಾರೆಇಲ್ಲೊಬ್ಬನಿಗೆ ಹೊರಗೆತಿರುಗುವ ಚಿಂತೆ! ಸೀಲ್ ಡೌನ್,ಲಾಕ್ ಡೌನ್ಆಯ್ತುಪ್ರೀತಿ-ಪ್ರೇಮ ಸೀಲ್ ಡೌನ್ ಆಯಿತಾ?ಇಲ್ಲೊಬ್ಬ ಪ್ರೇಮಿ ಉಸುರುತ್ತಿಅದ್ದಾನೆ! ನೆಕ್ಕಲು ಹಳಸಿದ ಅನ್ನ ಸಿಕ್ಕರೆಸಾಕು ಬದುಕುತ್ತೇನೆಎನ್ನುತ್ತಿದ್ದಾನೆಹಸಿವಿನ ಬೆಲೆ ತಿಳಿದವಭಿಕ್ಷುಕನೂ ಇರಬಹುದು?! ಕೀಟಗಳ ಕಾಟವಿನ್ನೂ ಮುಗಿಯದೇಅಕಟಕಟಾನಿದ್ದೆಮಾಡಿ ಮಾಸಗಳೇ ಉರುಳಿವೆಎನುತಿರುವ ಇಲ್ಲೊಬ್ಬಹಾಸಿಗೆ ಪ್ರೇಮಿ! ಆಸೆ ಬಿಡದ ಜೀವಬೇಕೆಂದು ಹೊರಟೇ ಇದೆಅರಿವಿಲ್ಲಮಸಣಕೋವ್ಯಸನಕೋ? *****************************

ಮುಖಗಳು

ಕವಿತೆ ಮುಖಗಳು ಡಾ. ಅರಕಲಗೂಡು ನೀಲಕಂಠ ಮೂರ್ತಿ ವೃತ್ತಿಯಲ್ಲಿ ಎಷ್ಟೊಂದು ಮುಖಗಳುಎದುರಾಗುತ್ತವೆ…ಭಿನ್ನ ಭಿನ್ನ ಭಾವಗಳುಕವಚಗಳು ಅದೇ ಒಂದೊಮ್ಮೆ ಯಾವುದೋರಸ್ತೆಯ ಪಕ್ಕ ಕಾಯುತ್ತಿರಿಒಂದೇ ಒಂದೂ, ಕೊಸರಿಗೂ ಕಾಣದುಪರಿಚಯದ ಮುಖ!ಎಷ್ಟೊಂದು ಸೋಜಿಗ…! ಜಗತ್ತು ತುಂಬಿದೆತುಂಬಿ ತುಳುಕುತ್ತಿದೆ –ಜನರಿಂದ ಮತ್ತುಜನರನ್ನು!ಇಲ್ಲಿ ಅನಾಥರಿಗೂಇನ್ನಿತರ ಅಂಥದೇ ಅನಾಥರ ಗುರುತೂಸಿಗದು…ಬಹುಶಃ… ಇದರಿಂದಲೇ ಇಲ್ಲಿ ಎಲ್ಲವೂನಾನು, ನನ್ನದು ಮತ್ತುನನ್ನವರು…ಬಹುಶಃ… ಗೋಡೆಯ ಮೇಲೆ ಈ ದಿನದಹೊಚ್ಚ ಹೊಸ ಹೂಮಾಲೆಯಿರುವನನ್ನಪ್ಪನ ಅಮ್ಮನ ಫೋಟೋನನ್ನ ನಂತರ ಎಲ್ಲಿರುವುದೋ ಏನೋ…?ಹಾಗೆಯೇ ಎಲ್ಲ ಮುಖಗಳುನೆನಪುಗಳು… ಬಣ್ಣದ ಬ್ರಶ್ ಒಂದುಬಳಿಬಳಿದು ನಿತ್ಯ ನಿರಂತರಉದುರಿ ಮರೆಯಾಗುವ ಮುಖವಾಡಗಳು…ಮತ್ತು […]

ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಅಮ್ಮನ ಸೆರಗ ಬಿಡಿಸಿದ ಬೆರಳುಗಳು ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ ಶಿಕ್ಷಕಿಯರಿಗೊಂದು ಸೆಲ್ಯೂಟ್ ಪ್ರಜ್ಞಾ ಮತ್ತಿಹಳ್ಳಿ ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ […]

Back To Top