ಗೆಳೆಯರು ಹಲವರು

ಕವಿತೆ

ಗೆಳೆಯರು ಹಲವರು

ಮಾಲಾ.ಮಾ.ಅಕ್ಕಿಶೆಟ್ಟಿ.

ಕಲಿಸುವುದು ದಿನವೂ
ಗೆಳೆತನ ವ್ಯಾಖ್ಯೆಗಳು
ವಾಟ್ಸಪ್ ಫೇಸ್ ಬುಕ್ ನಲ್ಲಿ

ನೋಯಿಸುವುದು ಹೀಯಾಳಿಸುವುದು
ಕಡೆಗಣಿಸುವುದು ಸಲ್ಲ
ಚೂರು ಚೂರು ಹೃದಯವನ್ನಂತೂ
ಮಾಡಬಾರದುಗಳ ಸರಮಾಲೆಯಲ್ಲಿ
ಸಾಲು ನಿಂತ ‘ಬಾರದುಗಳು’

ಬೇಕೇ ಬೇಕು ಹಠ
ಒಂದು ಕಾಲದಲ್ಲಿ ಗೆಳೆತನ
ಇರದಿರೆ ನಿರುತ್ಸಾಹ
ಸಿಗಲಿಲ್ಲ ಅಂದು
ಸಿಗುತ್ತಿದೆ ಇಂದು
ವಾಟ್ಸಪ್ ಫೇಸ್ ಬುಕ್ ನಲ್ಲಿ

ಒಂಟಿತನ, ಅಸಂತೋಷ
ಅಶಾಂತಿಯನ್ನು ಕೊಟ್ಟ
ದೇಣಿಗೆ ಅಂದಿನ ಗೆಳೆತನದ್ದು
ಸುಧಾರಿಸಿದ ಗೆಳೆತನ
ಇಗಿಂದು ನೀಗಿಸಲು
ಅಸಾಧ್ಯ ಆಗಿನ ಬೇಡಿಕೆಯನ್ನು
ಸಾಕು ಗೆಳೆತನ ಡೋಂಗಿ
ರೂಢಿಯಾಗಿದೆ ಅವರಿಲ್ಲದ
ಜೀವನದ ಒಂಟಿ ಪಯಣ

ವ್ಯತ್ಯಾಸವಿಲ್ಲ ಇವರ
ಇರುವಿಕೆ ಇಲ್ಲದಿರುವಿಕೆ
ಯಾರ್ಯಾರ ಜೀವನದಲ್ಲಿ
ಏನು, ಕುತೂಹಲವಿಲ್ಲ
ಆತ್ಮೀಯರಲ್ಲದವರ
ಜೊತೆ ಉತ್ಸಾಹವೆಲ್ಲಿ

ನೀರೆರೆಯಲು ಬರುವರು
ಸತ್ತಾಗ ಬಾಯಲ್ಲಿ ಆತ್ಮೀಯರು
ಹೊರತು ಡೋಂಗಿಯಲ್ಲ
ಪಾಪ ಫೋಟೋ ಶೇರ್
ಮಾಡಿ ಆರ್ ಐ ಪಿ ಹೇಳುವುದು
ವಾಟ್ಸಪ್ ಫೇಸ್ ಬುಕ್ ನಲ್ಲಿ

ನಿರೀಕ್ಷೆಯ ಅವಶ್ಯಕತೆಯ
ಹಂಚಿ ತುಸು ಪ್ರೀತಿಯ
ಬೇಡಿದವರಿಗೆ ದೂರಾಗುವ ಮುಂಚೆ
ನೆನೆಬಹುದು ಸಾವಿನಾಚೆಯೂ

****************************

One thought on “ಗೆಳೆಯರು ಹಲವರು

Leave a Reply

Back To Top