ಪುಸ್ತಕ ಸಂಗಾತಿ
ವಿಮುಕ್ತೆ ಪುಸ್ತಕ: ವಿಮುಕ್ತೆ ಲೇಖಕರು: ಓಲ್ಗಾ ಅನುವಾದಕರು: ಅಜಯ್ ವರ್ಮ ಅಲ್ಲೂರಿ ‘ವಿಮುಕ್ತ’ ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ ಬಹುಚರ್ಚಿತ ಕೃತಿಗಳಲ್ಲಿ ಒಂದು. ಓಲ್ಗಾ ಎಂಬ ಹೆಸರಿನಿಂದಲೇ ದೇಶದಾದ್ಯಂತ ಗುರುತಿಸಿಕೊಂಡಿರುವ ಪೋಪೂರಿ ಲಲಿತ ಕುಮಾರಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರಿನವರು. ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ, ಚಿಂತಕಿ, ಅನುವಾದಕಿ, ಹಾಗೂ ಮಹಿಳಾ ಹಕ್ಕುಗಳ ಹೋರಾಟಗರ್ತಿಯಾಗಿರುವ ಇವರು ಪ್ರಸ್ತುತ ತೆಲುಂಗಾಣದ ಸಿಕಂದ್ರಾಬಾದಿನಲ್ಲಿ ನೆಲೆಸಿದ್ದಾರೆ. ಸ್ವೇಚ್ಛ, ನೀಲಿ ಮೇಘಾಲು, ರಾಜಕೀಯ ಕಥಲು, ಮಾಕು ಗೋಡಲು ಲೇವು, ಪ್ರಯೋಗಂ, […]
ಕಾವ್ಯಯಾನ
ಮಾತಿನಲಿ ಮೌನೋತ್ಸವ ಡಾ. ಅಜಿತ್ ಹರೀಶಿ ಮಾತುಗಳ ಸಮ್ಮಿಲನಜನ್ಮಾಂತರದ ಗೆಳೆತನಸಮ್ಮತಿಸಿ ಧ್ಯಾನಿಸಿದ ಮೌನಸರಸದ ನಿನ್ನ ಮಾತಿನಲಿ ಜತನ ಮಾತಿನ ಮುಗ್ಧತೆ ನೀರಸಮನದ ಜ್ಞಾನ ಪಾದರಸನೀ ಮಾತೊಳು ತರುವಕಲೆಯ, ಮೌನದಿ ಪಡೆದವ ನಾ ಹತ್ತಿಕ್ಕಿ ಬಚ್ಚಿಟ್ಟ ಮಾತುಮೌನದ ಮಣಿ ಪೋಣಿಸದುಉಕ್ಕುಕ್ಕಿ ಹರಿವ ನನ್ನ ಮಾತುಚಂದದ ಹಾರವಾಗಿಸದು ನನ್ನ ಗತ್ತಿನ ಭಾವ ತಂದಿತ್ತುನನಗೆ ಗೊತ್ತು ಎಂಬ ಗಮ್ಮತ್ತುತಿಳಿಯದೆ ನಾ ಆಡಿದರೂಮೌನದಲೇ ದಂಡಿಸದಿರು ಧರಿಸಿ ಧರಿತ್ರಿಯಾದೆ ನೀನುಪಾದಕ್ಕೆರಗಿ ಸೇವೆಗೈವೆ ನಾನುಕ್ಷಮಿಸು ಭರಿಸು ನನ್ನ ಮಾತನುಶೇಖರಿಸಿ ನಿನ್ನ ಮೌನವನು ***********
ಸ್ವಾತ್ಮಗತ
ದೇವನೂರು ಮಹಾದೇವರೂ..! ಮತ್ತವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯೂ.!! ದೇವನೂರ ಮಹಾದೇವ ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ. ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. […]
ದಿಕ್ಸೂಚಿ
ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ. ಜಯಶ್ರೀ ಜೆ.ಅಬ್ಬಿಗೇರಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ‘ನಿನ್ನ ಪರವಾಗಿ ಹೇಳುವುದೇನಾದರೂ ಇದ್ದರೆ ಹೇಳಬಹುದು ಎಂದು ಹೇಳಿದಾಗ ಅದಕ್ಕೆ ಆತ “ನ್ಯಾಯಾಧೀಶರೇ, ನನ್ನ ಜೊತೆಗೆ ನನ್ನ ತಂದೆ ತಾಯಿಗೂ ಶಿಕ್ಷೆ ವಿಧಿಸಿ. ಅವರನ್ನೂ ಜೈಲಿಗೆ ಕಳಿಸಿ” ಎಂದ. ನ್ಯಾಯಾಧೀಶರು ಕಾರಣ ಕೇಳಿದಾಗ ಕಳ್ಳ ಹೇಳಿದ “ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಒಂದು ಪೆನ್ಸಿಲ್ ಕದ್ದೆ. ನಮ್ಮ ತಂದೆ ತಾಯಿಗೆ ಗೊತ್ತಾದರೂ ಅವರು ಏನನ್ನೂ ಹೇಳಲಿಲ್ಲ. ನಂತರ ಬೇರೆ […]
ಜೀವನ
ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ […]
ಕಾವ್ಯಯಾನ
ಸ೦ಜೆ ಇಳಿಬಿಸಿಲು ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಎಷ್ಟು ಚೆ೦ದ ವಿದ್ದೆಯೇ ನೀನು,ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆಲ೦ಗ ದಾವಣಿಯಲ್ಲಿ ನಲಿದಾಡಿದವಳೆ,ಪಡಸಾಲೆಯಲಿ ಓಡಿ ಬ೦ದುಧಿಕ್ಕಿಯ ಹೊಡೆದು ಗಾಭರಿಯ ನೋಟದಲಿಪ್ರೇಮದೆಸಳುಗಳನೆಸೆದು ಓಡಿ ಹೋದವಳೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆತಾವರೆಯ ಮೊಗ್ಗುಗಳ ತೋರಿಸುತನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗಹುಸಿ ಕೋಪದಲಿ ನನ್ನ ನೂಕಿದವಳೆಕೆರೆಯ ನೀರಲಿ ಕೆಡವಿನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂಒದ್ದೆ […]
ವರ್ತಮಾನ
ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ […]
ಕಾವ್ಯಯಾನ
ಯಾವತ್ತೂ ಅವರ ಕತೆಯೇ ಉಂಡೆಯಾ ಕೂಸೆ ಎಂದುಅವ್ವಗೆ ಕೇಳುವ ಆಸೆಅಡ್ಡಿ ಮಾಡುವುದದಕೆಅಪ್ಪನ ತೂತುಬಿದ್ದ ಕಿಸೆ ಅವರ ಒಲೆಯ ಮೇಲಿನ ಮಡಕೆಒಡೆದು ಹೋದುದು ಮುದ್ದೆ ಕೋಲಿನಕಾರಣಕ್ಕೇನಲ್ಲಎಸರಿಗೂ ನೀರ ಇಡಲಾರದ ಬರಡುನೋವಿಗೆ ಖಾಲಿ ಮಡಕೆಯೂಬಾಯ್ದೆರೆಯಿತು ನೋಡಲ್ಲ. ನೆಲೆ ನೀಡದ ಸೂರು, ಉರಿವಸೂರ್ಯನ ತೇರು, ಕೆಂಡದುಂಡೆಯಮೇಲೆಯೇ ನಡೆದರು ಅವರೆಲ್ಲ;ಉರಿ ಹಾದಿ ಬರಿಗಾಲಿಗೆ ಊರದಾರಿ ಮರೆಸಿತು, ಹರಿದ ಬೆವರುಕಣ್ತುಂಬಿ, ನೋಟ ಮಂಜಾಯಿತು ಇವನಾರವ ಇವನಾರವಎಂದವರೇ ಎಲ್ಲ ; ಇವ ನಮ್ಮವಅವ ನಮ್ಮವ ಎನ್ನಲ್ಲಿಲ್ಲ. ಕಷ್ಟಸಂಕಷ್ಟವಾಗಿ ಅವರನು ಕಾಡಿತಲ್ಲಕಾಯಕಜೀವಿಗೆ ಯಾವ ಯುಗದಲೂರಕ್ಷಣೆ ಸಿಗದಲ್ಲ.. ***** […]
ಪುಸ್ತಕ ಸಂಗಾತಿ
ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ .ಇದರಲ್ಲಿ ನಾ ಓದೊದ ಮೊದಲ ಕತೆ ಕವಲು ಸಂಕಲನದ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ. ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ […]
ಕಾವ್ಯಯಾನ
ಏಕಾಂಗಿಯೊಬ್ಬನ ಏಕಾಂತ ಕಣ್ಣೀರು ಖಾಲಿಯಾಗುವುಂತೆತುಂಬಿಕೊಳ್ಳುತ್ತದೆ ಮತ್ತೆ ಮತ್ತೆಏಕಾಂತ ಖಾಲಿಯಾದರೂಏಕಾಂಗಿಯಾಗುವಂತೆಕಣ್ಣೀರು ಕೂಡ ನೀರಾಗುತ್ತದೆಅವಳ ಬಸಿದು ತಾನೇ ಉಳಿದಾಗ ಮೂರುಗಂಟಿನ ಆಚೆ ನೂರುಗಂಟುಗಳಾಚೆತೆರೆದುಕೊಂಡ ಹೊಸಲೋಕಕೆಪಕ್ಷಿಯ ರೆಕ್ಕೆಗಳ ಕಸುವಿನಂತೆಜಿಗಿದ ಕನಸುಗಳನೆಲ್ಲಾ ಗಂಟಿನೊಳಗೆಮನದೊಡೆಯನ ಸಂಗಾತಕೆಇಬ್ಬನಿಯ ಜೀವದಂತೆ ಕಾದುಕೂತವಳು ಅಲೆಯೊಡೆವ ರುಚಿ ತಂಗಾಳಿಗೆ ಸವರಿಕಾಮನ ಬಿಲ್ಲನು ಕಂಡವಳುತೆಂಡೆಯೊಡೆದ ಕಣ್ಣೀರ ಮಾತಿಗೆಗಾಳಿಯನೆ ಸೀಳಿ ಹೊರಟಾಗತಂಗಾಳಿಗೆ ಬಸಿರಾಗಿ ಕನಸುಗಳ ಹೆತ್ತವಳು ಅಕ್ಷರಕ್ಕೆ ಸಿಗದ ಅಕ್ಕರೆಯನುಲಿಪಿಮಾಡಿ ಅವನಿಗೆ ತಲುಪಿಸಲುಹಾರಿ ಹಾರಿ ನೆಲೆ ಕಾಣದೆ ಅಲೆಯುವಳುಆಗೊಮ್ಮೆ ಈಗೊಮ್ಮೆ ಟಿಸಿಲೊಂದು ಕಂಡಾಗಮುಂಗಾಲಿನಲೆ ಜೀವ ಹಿಡಿಯುವಳುನಂಬಿಕೆಯ ಮಾತು ಹೇಳಿದ ಆ ಮರಕೆಅವಳ ಹಳಹಳಿಕೆಗಳನು […]