ಕಾವ್ಯಯಾನ
ಅಂತಃಶುದ್ಧಿಯ ಸಮಯ…!! ಅರ್ಚನಾ ಹೆಚ್ ಜಾತಿ ಧರ್ಮಗಳ ಸುಳಿಯಲರಳಿದ ಕುಸುಮಗಳಿಂದು ಶಿವಪೂಜೆಗೊದಗದೆ ಬರಿದೆ ಬಾಡಿದ ಬೆರಗು..!! ಹೆತ್ತ ಮಡಿಲಲಿ ಮತ್ತೆ ಕೂಸುಗಳು..! ಬದುಕಿದರೂ ಸತ್ತರೂ ಅವಳೊಡಲೇ ಗಮ್ಯ.. ಮಣ್ಣಾಗಬಾರದವುದೆಂಬುದೊಂದೇ ತಾಯಿ ಹರಕೆ..!! ನಾನು ನನ್ನಂದೆಂಬ ತುಂಬು ಗರ್ವದಲಿದ್ದೆ..!!?? ಮತ್ತೆ ಮೇಲಿಹನಾಗ್ರಹ..! ಕಣ್ಣೆವೆಯಿಕ್ಕದೆ ದಿಟ್ಟಿಸಿ ನೋಡು..! ಸ್ವಾರ್ಥ ದುರಾಗ್ರಹದ ಪೀಡೆಯೊಳಾಡಿದ ಮರುಳ ಮಾನವರಿಗಿದೇಟು! ರಣತಂತ್ರ!! ವಿಕೃತ ಮನಸ್ಥಿತಿಗಳಾಟ! ವಿಶ್ವವ್ಯಾಪಿ ಬೀಸಿ ಚಾಟಿಯೇಟು..!! ಧನವೋ! ಋಣವೋ!?? ಶಕ್ತಿಯಾಟದಲಿ ಸತ್ತವರ ಲೆಕ್ಕಗಳು ಸರ್ವವ್ಯಾಪಿ! ಮೃತ್ಯು ಕಡುಕೋಪಿ..!! ಮಾತೃಭೂಮಿಯ ಸೊಗಡು ಭಕ್ತಿ ಮರೆತವಗೆ […]
ಕಥಾಯಾನ
ಒಂದು ಹನಿ ನೀರಿನ ಕಥೆ ಜ್ಯೋತಿ ಬಾಳಿಗಾ ಸದಾಶಿವ ರಾಯರಿಗೆ ಆರೋಗ್ಯದಲ್ಲಿ ತೊಂದರೆ ಆಗಿ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಹಳ್ಳಿಯಿಂದ ನಿನ್ನ ಮಾವನ ಪೋನು ಬಂದಿತ್ತು ಸಚಿನ್. ರಾಯರು ಹೇಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ ಅಂದರೆ ಅಷ್ಟು ದೂರ ಪ್ರಯಾಣ ನನ್ನಿಂದ ಸಾಧ್ಯವಿಲ್ಲ ಮಗನೇ….ನಿನ್ನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ್ದಾರೆ ರಾಯರು. ನೀನಾದರೂ ಅವರ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಅಪ್ಪಾಜಿ ಹೇಳಿದಾಗ,ಆಸ್ಪತ್ರೆ ಎಂದರೆ ಮಾರು ದೂರ ಓಡುವ ನನಗೆ ಏನು ಮಾಡುವುದೆಂದು ತಿಳಿಯದೇ ಹುಂಗುಟ್ಟಿದೆ. ಊರಿಗೆ […]
ಕಥಾಯಾನ
ಸುನಂದಾಬಾಯಿ ಕೊಡ ಮಲ್ಲಿಕಾರ್ಜುನ ಕಡಕೋಳ ಸುತ್ತ ನಾಕಿಪ್ಪತ್ತು ಹಳ್ಳಿಗಳಲ್ಲಿ ಅವರ ಬಡತನ ಪ್ರಸಿದ್ದವಾಗಿತ್ತು. ತಲೆಮಾರುಗಳಿಂದ ಶೀಲವಂತರ ಸುನಂದಾಬಾಯಿ ಭಗವಂತ್ರಾಯ ದಂಪತಿಗಳು ಪಡೆದುಕೊಂಡ ಆಸ್ತಿಯೆಂದರೆ ಕಿತ್ತುತಿನ್ನುವ ಬಡತನ. ಅದನ್ನೇ ಹಾಸುಂಡು ಬೀಸಿ ಒಗೆಯುವಂತಿತ್ತು. ಅವರೂರು ಮಾತ್ರವಲ್ಲ. ಸುತ್ತ ಹತ್ತಾರು ಹಳ್ಳಿಯ ಮಂದಿ ಘೋರ ಬಡತನದ ಬಗ್ಗೆ ಮಾತಾಡುವಾಗ ಶೀಲವಂತರ ಭಗಂತ್ರಾಯರ ಬಡತನ ಉಲ್ಲೇಖಿಸದೇ ಇರಲಿಕ್ಕೆ ಸಾಧ್ಯವಿರುತ್ತಿರಲಿಲ್ಲ. ಅವರು ಉಪವಾಸದ ದಿನಗಳನ್ನು ನೆನಪಿಡುತ್ತಿರಲಿಲ್ಲ., ಅಂಬಲಿ ಕುಡಿದ ದಿನಗಳನ್ನು ನೆನಪಿಡುತ್ತಿದ್ದರು. ಈ ದಿನಗಳೇ ಅಪರೂಪ. ಸಜ್ಜೆ ಹಿಟ್ಟಿನ ಗಂಜಿಗೆ ರುಚಿ ಬರಲೆಂದು ಸೇರಿಸಲು ” ಉಪ್ಪಿಗೂ ” ಅವರಲ್ಲಿ ಬಡತನವಿತ್ತು. ಅಂತೆಯೇ ಉಪವಾಸದ ದಿನಗಳೇ ಹೇರಳ. ಗಂಜಿ ಕುಡಿದ ದಿನಗಳೇ ವಿರಳ. ಸುನಂದಾಬಾಯಿಗೆ ಜಾಂಬಳ ಬಣ್ಣದ ಒಂದೇ ಒಂದು ಸೀರೆ ಇತ್ತು. ಮೈ ಮೇಲಿನ ಆ ಒಂದು ಸೀರೆಯನ್ನು ಜಳಕ ಮಾಡುವಾಗ ಅರ್ಧರ್ಧ ತೋಯಿಸುತ್ತಾ ಒಣಗಿಸಿಕೊಳ್ಳುತ್ತಿದ್ದಳು. ಅಷ್ಟಕ್ಕೂ ಆಕೆ ಹೊಲಕ್ಕೆ ಹೋದಾಗ ನಿರ್ಜನ ಕರ್ಮನಹಳ್ಳದಲ್ಲಿ ಜಳಕ ಮಾಡುತ್ತಿದ್ದಳು. ಕೂಲಿನಾಲಿ ಮಾಡುವಾಗ ಸೀರೆ, ಗಿಡಗಂಟಿಗಳಿಗೆ ತಾಗದಂತೆ ಮತ್ತು ಕುಂತೇಳುವಾಗ ಜಿಗಿಸತ್ತ ಸೀರೆ ಟಸಕ್ಕನೆ ಹರಿದು ಹೋಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಳು. […]
ಕಾವ್ಯಯಾನ
ಗಝಲ್ ವೆಂಕಟೇಶ ಚಾಗಿ ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ || ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ ನೋಡುತಿರು ಅಪ್ಪ || ಹಸಿವಿನ ಆಟವನು ನೋಡಲು ನೆರೆಯುವರು ನಾಟಕದ ಮಂದಿ ನಿನ್ನಾಟದ ಗತ್ತು ಗಮ್ಮತ್ತುಗಳ ತೋರಿಸುವುದ ಮರೆಯದಿರು ಅಪ್ಪ || ಚಂದ್ರಮನ ತೋರಿಸಿ ಅಮ್ಮ ತುತ್ತು ಉಣಿಸುವಳು ಅಷ್ಟೇ ತುತ್ತುಗಳ ಕೂಡಿಡಲು ನನ್ನ ಎಂದಿಗೂ ಕಡೆಗಣಿಸದಿರು ಅಪ್ಪ || […]
ಲಹರಿ
ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಅಮೃತಾ ಪ್ರೀತಮ್ ಶೀಲಾ ಭಂಡಾರ್ಕರ್ मैं तैनू फ़िर मिलांगी. ಅಮೃತಾ ಪ್ರೀತಂ ತಾನು ಸಾಯುವ ಮೊದಲು ಇಮ್ರೋಜ್‍ನಿಗಾಗಿ ಪಂಜಾಬಿಯಲ್ಲೊಂದು ಕವಿತೆ ಬರೆದಳು. ಪ್ರತಿಯೊಂದು ಶಬ್ದವೂ ಪ್ರೀತಿಯನ್ನು ತುಂಬಿಸಿಕೊಂಡು ಕವಿತೆಯಾಗಿತ್ತು. ಅಮೃತಾ ಒಂದು ವಿಶಿಷ್ಟ ವ್ಯಕ್ತಿತ್ವ. ಹದಿನಾರನೆ ವಯಸ್ಸಿನಲ್ಲೇ ಮನೆಯವರು ನಿಶ್ಚಯಿಸಿ ಪ್ರೀತಮ್ ಸಿಂಗ್ ಜತೆ ಮದುವೆ ಮಾಡಿದ್ದರೂ ಆ ಮದುವೆ ಊರ್ಜಿತವಾಗಲಿಲ್ಲ. ನಂತರದ ದಿನಗಳಲ್ಲಿ ಬರವಣಿಗೆಯಲ್ಲಿ ತನ್ನನ್ನು ವಿಶೇಷವಾಗಿ ಈ ಜಗತ್ತಿಗೆ ಪರಿಚಯಿಸಿಕೊಂಡ ಅಮೃತಾ ಲಾಹೋರ್ ವಿಭಜನೆಯ ಸಮಯದಲ್ಲಿ ಆ ಕಾಲದ […]
ಕಾವ್ಯಯಾನ
ಗಝಲ್ ಪ್ರತಿಮಾ ಕೋಮಾರ ಕಹಿಯೂರಲ್ಲೊಂದು ಸಿಹಿ ಗಿಡವ ನೆಡುವ ಸಹಕರಿಸು ಬಂದು ನೆಟ್ಟ ಗಿಡಕೆ ಜೀವ ಜಲ ಕೊಟ್ಟು ಪೊರೆಯುವ ಸಹಕರಿಸು ಬಂದು ಬಾಗಿ ಬಸವಳಿದು ಉರುಳಿದ ಜೀವಕೆ ಸಾಂತ್ವನವೇ ಮದ್ದು ಮಾನವತೆಯ ನೆಲೆಯಲ್ಲಿ ಮಮತೆಯನು ಹನಿಸುವ ಸಹಕರಿಸು ಬಂದು ಕೋಟೆಗಳ ಕಟ್ಟಿ ಹಕ್ಕಿಯೆಂದಾದರೂ ತನ್ನ ಬಂಧಿಸಿಕೊಂಡೀತೇ? ಮನಗಳ ನಡುವೆ ಹಬ್ಬಿರುವ ಬೇಲಿಯನು ಕಡಿಯುವ ಸಹಕರಿಸು ಬಂದು ಸ್ವಾಥ೯ದ ಮಾರುಕಟ್ಟೆಯಲ್ಲಿ ಬಿಕರಿಯಾಗುವವು ಬರೀ ಸ್ವಾಥ೯ಗಳೇ ನಿಸ್ವಾಥ೯ತೆಯ ದೀಪ ಹಚ್ಚಿ ಬದುಕ ಬೆಳಗುವ ಸಹಕರಿಸು ಬಂದು ಗಂಧಕ್ಕೆ ಮುಚ್ಚಿ,ಬಿಚ್ಚಿ,ಬೊಬ್ಬೆ ಹೊಡೆವ […]
ಕಾವ್ಯಯಾನ
ಪ್ರಿಯ ಸಖ H. ಶೌಕತ್ ಆಲಿ ಬೆಳದಿಂಗಳಲ್ಲಿ ತಂಪು ತಂಗಾಳಿಯಲ್ಲಿ ನಮ್ಮ ಮಿಲನ ಆಲಿಂಗನ ಅರಳಿದ ನೈದಿಲೆಯ ಚಂದಿರನ ಚುಂಬನ ಪ್ರಶಾಂತವಾದ ಹೃದಯ ಮನಸೆಲ್ಲಾ ಅವನಲ್ಲೇ ಲೀನಾ ಆಧ್ಯಾತ್ಮವೂ ಅಮರ ಪ್ರೇಮವೂ ಬುದ್ಧ ನನ್ನ ಪ್ರಿಯ ಸಖ ಬೆಳಕಾಗಬೇಕು ಈ ಭೂಮಿಯು ಈ ಸುಂದರ ಪ್ರಕೃತಿ ನೆನಪಿರಲಿ ಶ್ವೇತ ಮೋಡಗಳು ಆಗಸದಲ್ಲಿ ಹೃನ್ಮನಗಳು ಏಕಾಂತವಾಗಿ ಭಾವನೆಗಳು ಹೂವಂತೆ ಅರಳಿ ಸುಖದ ಸೆಲೆಯಾಗಿ ಅವ ನಿಂತ ಬುದ್ಧ ನನ್ನ ಪ್ರಿಯ ಸಖ ನೋಟದಲ್ಲಿ ಸಾವಿರ ಅರ್ಥ ಜನ್ಮಜನ್ಮಾಂತರ ಪುನೀತ […]
ಕಾವ್ಯಯಾನ
ಪೂರ್ಣವಾಗದ ಸಾಲುಗಳು ಶೀಲಾ ಭಂಡಾರ್ಕರ್ ಮನಸ್ಸು ಒಮ್ಮೊಮ್ಮೆತೊಟ್ಟಿಕ್ಕುತ್ತಾ ಶಬ್ದಗಳಾಗಿ, ಹಾಳೆಯ ಮೇಲೆ ಒಂದೊಂದಾಗಿ ಬಿದ್ದು ಹರಡಿಕೊಳ್ಳುತ್ತಾ…. ಶುರುವಿಟ್ಟುಕೊಳ್ಳುತ್ತದೆ ಆಡಲು ಶಬ್ದಗಳ ಆಟ. ಹೊಂದಿಕೊಳ್ಳಲು ಹೆಣಗುವ ಭಾವನೆಗಳ ಮಾಟ. ಕವಿತೆಯಾಗಲು ಹೊರಟ ನಿಶ್ಶಬ್ದ ಶಬ್ದಗಳ ಅರ್ಧಂಬರ್ಧ ಸಾಲುಗಳು. ನೋಡಲು ಯಾವುದೋ ನಿರ್ಭಾವುಕ ಚಹರೆಯಂತಹ ಉಲ್ಲೇಖಗಳು. ಹಿಂದೊಮ್ಮೆ ಮುಂದೊಮ್ಮೆ ನಿಲ್ಲಲು ಸೆಣಸಾಟ. ಅರ್ಥವಿಲ್ಲದವುಗಳ ಮೂಲೆಗೆ ತಳ್ಳಾಟ ಮನುಷ್ಯರಲ್ಲಿ ಮಾತ್ರವಲ್ಲ ಶಬ್ದಗಳಿಗೂ ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು ಎಂದರೆ ಒಪ್ಪುವಿರಾ? *********
ಪ್ರಸ್ತುತ
ಹೋಮ್ ಕೇರ್ ಹಗರಣ. ಮಾಲತಿಶ್ರೀನಿವಾಸನ್. ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿಸಹಾಯಮಾಡಲು ಜನರನ್ನುಒದಗಿಸುವ ಸಂಘಗಳುಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ. ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವುಅಪ್ಯಾಯಮಾನ ಹಾಗೂ ಉಪಯುಕ್ತ. ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳುಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ […]
ಕಾವ್ಯಯಾನ
ನಿಯಮ ಡಾ.ಅಜಿತ್ ಹರೀಶಿ . ಅಪಘಾತಗಳೆಲ್ಲ ಆಕಸ್ಮಿಕಗಳಲ್ಲ ಕಾರಣವಿರಬಹುದಲ್ಲ ಅಲಕ್ಷ್ಯ ಆತುರ ಅತ್ಯುತ್ಸಾಹ ಕಲ್ಪಿಸುವ ಎದುರಿನ ಅಚಾತುರ್ಯ ಬೇಕೆಂದಾಗ ಬಂಜೆತನ ಬೇಡವಾದಾಗ ಫಲಿಸುವ ಗರ್ಭ ಸುರತಕ್ಕೆ ಸುರಕ್ಷಿತ ಸಂಗಾತಿ ಮಾತ್ರ! ಯುಗ ಬದಲಾಗಿದೆ ಸ್ವರ್ಗ ನರಕಗಳೆಲ್ಲವೂ ಸೃಷ್ಟಿಯಾಗಿದೆ ಇಲ್ಲೇ ತೆರೆಯಲಾಗಿದೆ ಬದುಕಿನ ಕಂದಾಯ ಕಟ್ಟುವ ಕೌಂಟರ್ ನಮ್ಮಲ್ಲೇ ದೇವನ ಕಣ್ಣುಗಳು ಮಾರು-ಮಾರಿಗೆ ಎಲ್ಲೆಲ್ಲೂ ಟವರ್ ಲೊಕೇಷನ್ ಅಪರಾಧಿಯಾಗದ ಸೂತ್ರ ಜೀವಿಸುವ ಸಾಫ್ ಸೀದಾ *********