ಕಾವ್ಯಯಾನ
ಬಸವಣ್ಣ ಡಾ.ಪ್ರಸನ್ನ ಹೆಗಡೆ ಅಣ್ಣ ಬಸವಣ್ಣನೆಂದರೆ ಬಿಜ್ಜಳ ಮಂತ್ರಿಯೊಂದೇ ಅಲ್ಲ ಸಾವಿರದ ಬೀಜ ಬಿತ್ತಿದ ಮಹಾ ಮಂತ್ರ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೆ ವಚನಕಾರನಲ್ಲ ಹೊಸ ವಿಚಾರ ಸೃಜಿಸಿದ ವಿವೇಕ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಶಿವಶರಣನಲ್ಲ ಶಿವ ಚರಣ ಮುಟ್ಟದಾ ವಿಶ್ವ ಮೂರ್ತಿ ಅಣ್ಣ ಬಸವಣ್ಣನೆಂದರೆ ವಿಚಾರವಾದಿಯೊಂದೇ ಅಲ್ಲ ಶಿಷ್ಟಾಚಾರ ಪಾಲಿಸಿದ ಇಷ್ಟ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಲಿಂಗ ಪಿಡಿದವನಲ್ಲ ಲಿಂಗವನ್ನೇ ಮೆಚ್ಚಿಸಿದ ಜ್ಞಾನ ಮೂರ್ತಿ ಅಣ್ಣ ಬಸವಣ್ಣನೆಂದರೆ ಜ್ಞಾನ ಸಾಗರವಷ್ಟೇ ಅಲ್ಲ ಸರ್ವರನೂ […]
ಕಾವ್ಯಯಾನ
ಕರೋನ ಕರೋನಾ.. ವಾಣಿ ಮಹೇಶ್ ಅತ್ತ ಹೋಗ್ ಬ್ಯಾಡಿ ಕರೋನಾ ಐತೆ ಇತ್ತ ಬರ್ ಬ್ಯಾಡಿ ಕರೋನಾ ಐತೆ ಎತ್ತಾ ಹೋದ್ರೂನೂ ಪೋಲೀಸು ಕಾಟ ಎತ್ತಾ ಬಂದ್ರೂನೂ ವೈದ್ಯರಾ ಕಾಟ ಏನು ಮಾಡೋದಪ್ಪ… ಹೆಂಗಿರೋದಪ್ಪಾ..? ಮನೆಯಲ್ಲಿ ಕುಂತೂ.. ನಿಂತೂ.. ಸಾಕಾಗೋಗೈತೆ.. ಅಯ್ಯೋ ಸಾಕಾಗೋಗೈತೆ // ಪಕ್ಕದಾ ಮನೆಯಾ ಇಣುಕಿ ನೋಡಲೂ ಭಯವಾಗುತೈತೆ ಯಾಕೋ.. ಏನೋ.. ಬಂದಾ.. ಕೆಮ್ಮು ನೋಡಿದಾ ಜನ ದೂರ ಸರಿಸಿಯೇ ಬಿಟ್ಟರಲ್ಲ!!! ಅಯ್ಯೋ ಓಡಾಡ್ಸಿ ಬಿಟ್ಟರಲ್ಲ..!! ಬೆಳಗಿಂದಾ.. ಮೈ ಬೆಚ್ಗೆ.. ಊರೆಲ್ಲಾ ಸುತ್ತೋಕೆ ಹೋಗಿದ್ನಲ್ಲ […]
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-7 ಸಮಾನತೆಯೋ ಸಹಬಾಳ್ವೆಯೋ? ಲಾಕ್ ಡೌನ್ ಶುರುವಾದಾಗಿನಿಂದ ಕಿಟಕಿ ಬಾಗಿಲುಗಳು ಸದಾ ಮುಚ್ಚಿಯೇ ಇದ್ದರೂ ಅದೆಲ್ಲಿಂದ ಬರುತ್ತದೆಯೋ ಇಷ್ಟೊಂದು ಧೂಳು ಎನ್ನುತ್ತಾ ಗೊಣಗಾಡಿಕೊಂಡು ಸ್ವಚ್ಛತಾ ಕಾರ್ಯ ಶುರು ಮಾಡಿದೆ. ಅಷ್ಟರಲ್ಲಿ ಒಬ್ಬ ಗೆಳತಿ ಪೋನ್ ಮಾಡಿದಳು. ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಮನೆಯ ಎಲ್ಲಾ ಕೆಲಸ ಮುಗಿದು ಹೋಗುತ್ತದೆಯೆ ಈಗ. ನನ್ನ ಗಂಡನೂ ಮನೆಯಲ್ಲಿಯೇ ಇರುವುದರಿಂದ ಅರ್ಧ ಮನೆಕೆಲಸ ಅವನಿಗೆ ತಗುಲಿ ಹಾಕ್ತೇನೆ… ನೀನೂ ಹಾಗೇ […]
ಕಾವ್ಯಯಾನ
ಅಂತಿಮಯಾತ್ರೆ ಹರೀಶ ಕೋಳಗುಂದ ಉಸಿರು ಬಿಗಿ ಹಿಡಿದಿದೆ, ಎದೆಬಡಿತ ಕ್ಷೀಣ. ಕೆಲವೇ ಸಮಯ ಬಾಕಿ. ಪಸೆಯಾರಿದ ಗಂಟಲಿಗೆ ಕಡೆಯ ಬಯಕೆ, ಗುಟುಕು ಗಂಗಾಜಲ ಮಾತ್ರ. ಮತ್ತೇನೂ ಬೇಡ. ಉರಿವ ಹಣತೆಯ ಸೊಡರು ಬೀಸುಗಾಳಿಗೆ ತುಯ್ದಾಟ….! ಕಾಲ ಮೀರುತ್ತಿದೆ, ಸಾಸಿವೆಯ ಸಾಲಕ್ಕೆ ಹೋದವಳು ಇನ್ನೂ ಮರಳಿಲ್ಲ, ದಾರಿಯಲಿ ಬುದ್ಧ ಸಿಕ್ಕಿರಬೇಕು. ಕಾಲವಶದಲ್ಲಿ ಸಾವಿತ್ರಿಯೂ ಲೀನ. ಪುರುದೇವನ ವರ್ತಮಾನವೂ ಇಲ್ಲ. ಕಣ್ಣು ಕವಿಯುತ್ತಿದೆ, ಚಾಚಿ ಮಲಗಿದ ದೇಹ ಅಸಾಧ್ಯ ಭಾರ. ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ, ಹಠಾತ್ತನೆ ಯಾರದೋ […]
ಕಾವ್ಯಯಾನ
ಶಾಯರಿಗಳು ಮರುಳಸಿದ್ದಪ್ಪ ದೊಡ್ಡಮನಿ (ಕೂದಲಾ) ನಿನ್ನ ಕೂದಲ ಹಾಂಗ ಹಗೂರಕ ನಿನ್ನ ಗಲ್ಲಕ್ಕ ಹಾರಿಕೊತ ಮುತ್ತಿಡತಾವು ಅವು ಎಷ್ಟು ಪುಣ್ಯಾ ಮಾಡ್ಯಾವು. ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ಹುಚ್ಚು ಬಿಡಬೇಕು ಅವನ್ನೋಡಿದ ಹರೇದ ಹುಡುಗರಿಗೆ ಹುಚ್ಚು ಹಿಡಿ ಬೇಕು. ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ನವಿಲು ಕುಣದಂಗಕ್ಕೈತಿ ನವಿಲಿನ ಕುಣತಕ್ಕ ನನಗರ ಒಂದ್ ನಮೂನಿ ಆಕ್ಕೈತಿ. ನಿನ್ನ ಮುಂಗುರುಳು ಎಷ್ಟು ಚಂದ ಮುಖದ ಮ್ಯಾಗ ಹಾರಾಡತಾವು ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ ಎಲ್ಲೆಂದ್ರಲ್ಲಿ […]
ಬಸವ ಜಯಂತಿ
ಬಸವ ಜಯಂತಿ ಜಾತಿಯನ್ನು ೧೨ ನೆಯ ಶತಮಾನದಲ್ಲಿಯೇ ಕಾಯಕ ಸೂಚಕವಾಗಿಸಿದ ಬಸವಣ್ಣ..! ನಾಳೆ ದಿನಾಂಕ ೨೬ ರಂದು ಬಸವಣ್ಣನವರ ಜಯಂತಿ. ಆ ನೆಪದಲ್ಲಿ ಈ ಲೇಖನ… ಬಸವೇಶ್ವರ ( ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು… ಬಸವಣ್ಣನವರು ೧೧೩೪ […]
ಅನುವಾದ ಸಂಗಾತಿ
ಇನ್ನಿಲ್ಲ ಕ್ಲೀಷೆಗಳು ಮೂಲ: ಆಕ್ತೇವಿಯೋ ಪಾಜ಼್ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಸು೦ದರ ಮುಖಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆನೀನೂ ತೆರೆ ನಿನ್ನ ಮುಖವನ್ನು ನನಗೆಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ. ಸಮ್ಮೋಹಕ ಮುಗುಳು ನಗೆಯಓ, ನಿಯತಕಾಲಿಕೆಯ ಸು೦ದರಿಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ. ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?ಓ, ಬಿಯಾಟ್ರಿಸ್,ಕಾಡುವ ನಿನ್ನ ಮಾಯೆಸೃಜಿಸುವುದು ಭ್ರಮೆ. ಆದರಿ೦ದು, ಮತ್ತೊ೦ದು ಕ್ಲೀಷೆಯಲಿಬರೆಯುವುದಿಲ್ಲ ಈ ಕವಿತೆ ನಿನಗಾಗಿಇಲ್ಲ, ಇನ್ನಿಲ್ಲ ಕ್ಲೀಷೆ. ಯಾರ ಸೌ೦ದರ್ಯಅವರ […]
ಅನುವಾದ ಸಂಗಾತಿ
ನಿನ್ನ ಹಾಡು ಮೂಲ: ರಬೀಂದ್ರ ನಾಥ ಟಾಗೋರ್ ಕನ್ನಡಕ್ಕೆ: ಡಾ.ಪ್ರಸನ್ನ ಹೆಗಡೆ ನೀ ಹಾಡುವಾ ಪರಿಯ ನಾನರಿಯೆ ನನ್ನೊಡೆಯಾ ಬೆರಗಿನಿಂ ನಾ ಕುಳಿತು ಪೇಳ್ವೆ ಜಿಯಾ,,,ಪೇಳ್ವೆ ಜಿಯಾ ನಿನ್ನ ಹಾಡಿನಾ ಕಿರಣ ಬೆಳಗುತಿದೆ ಜಗವನ್ನು ಬಾನಿನಿಂ ಬಾನಿಗೆ ಹರಿಸಿ ಉಸಿರು ಆ ಹಾಡಜೀವಸೆಲೆ ಅಡೆತಡೆಯ ಪುಡಿಮಾಡಿ ದೈರ್ಯದಿಂ ಮುಂದಕ್ಕೆ ನುಗ್ಗುತಿಹುದು….ನುಗ್ಗುತಿಹುದು ನಿನ್ನ ಹಾಡಕೂಡೆಂದು ಕೂಗುತಿದೆ ಎನ್ನೆದೆಯು ಆದರದು ಬರಿವ್ಯರ್ಥ ದ್ವನಿಗಾಗಿ ನಾನು ಒರಲುತಿಹೆನು ನಾ ನುಡಿವೆ ಬರಿನುಡಿಯ ಹಾಡಾಗ ಆ ನುಡಿಯು ಕೈಚೆಲ್ಲಿ ಕಣ್ಣೀರ ಸುರಿಸುತಿಹೆನು…ಸುರಿಸುತಿಹೆನು ಅಹ! […]
ಕಾವ್ಯಯಾನ
ಗಝಲ್ ಎ. ಹೇಮಗಂಗಾ ಸ್ಫಟಿಕದಂತೆ ಸದಾ ನಿರ್ಮಲ ಹೃದಯದವನು ನನ್ನ ರಾಜಕುಮಾರ ಕನಕದಂತೆ ಸದಾ ಹೊಳೆಯುವ ರೂಪದವನು ನನ್ನ ರಾಜಕುಮಾರ ಸವಿಮಾತಿನಲಿ ಮೊಗ್ಗು ಮನಸ ಅರಳಿಸಿದವನು ನನ್ನ ರಾಜಕುಮಾರ ಕಿರುನಗೆಯಲಿ ಮೋಡಿ ಮಾಡುತ ಚಿತ್ತ ಕಲಕಿದವನು ನನ್ನ ರಾಜಕುಮಾರ ಬೆಂಗಾಡಾದ ಬಾಳಲಿ ಚೈತ್ರ ಮೂಡಿಸಿದವನು ನನ್ನ ರಾಜಕುಮಾರ ಒಲವಿನಾರಾಧನೆಯೇ ತಪವೆಂದು ತೋರಿದವನು ನನ್ನ ರಾಜಕುಮಾರ ಸಪ್ತಪದಿಯಲಿ ಒಂದಾಗಿ ಸಗ್ಗವನೇ ಸೃಜಿಸಿದವನು ನನ್ನ ರಾಜಕುಮಾರ ಮಧುರ ಮಿಲನದ ನಶೆಯಲಿ ಮೈ ಮರೆಸಿದವನು ನನ್ನ ರಾಜಕುಮಾರ ತೋಳಬಂಧನದಿ ಪಿಸುಮಾತುಗಳ ಉಸುರಿದವನು […]
ಅನುವಾದ ಸಂಗಾತಿ
ಮೂಲ: ನಿಝಾರ್ ಖಬ್ಬಾನಿ ಕನ್ನಡಕ್ಕೆ: ಡಾ.ಗೋವಿಂದ ಹೆಗಡೆ ಆ ಮೀನಿನಂತೆ ನಾನು ಚುರುಕು ಮತ್ತು ಹೇಡಿ ಪ್ರೇಮದಲ್ಲಿ ನೀನು ನನ್ನಲ್ಲಿನ ಸಾವಿರ ಹೆಣ್ಣುಗಳ ಸಾಯಿಸಿದೆ ಮತ್ತು-ರಾಣಿಯಾದೆ ಚಿಂತಿಸಬೇಡ ನನ್ನ ಮಧು ಖನಿಯೇ ನೀನಿದ್ದೀ ನನ್ನ ಕವಿತೆಗಳಲ್ಲಿ ನನ್ನ ಪದಗಳಲ್ಲಿ ವರುಷಗಳು ಉರುಳಿ ಮುದಿಯಾಗಬಹುದು ಆದರೆ ನನ್ನ ಪುಟಗಳಲ್ಲಿ ನೀನು ಚಿರ ಯೌವನೆ ಈಗಲೂ ನೀನು ನಾನು ಹುಟ್ಟಿದ ದಿನವನ್ನು ಕೇಳುವೆ ಹಾಗಿದ್ದರೆ ಬರೆದುಕೋ-ನಿನಗೆ ಗೊತ್ತಿಲ್ಲದಿರುವುದನ್ನು ಎಂದು ನೀನು ಪ್ರೇಮವನ್ನು ಅರುಹಿದೆಯೋ ಅಂದೇ ನನ್ನ ಜನ್ಮದಿನ! ***********