ಕರೋನ ಕರೋನಾ..
ವಾಣಿ ಮಹೇಶ್
ಅತ್ತ ಹೋಗ್ ಬ್ಯಾಡಿ ಕರೋನಾ ಐತೆ
ಇತ್ತ ಬರ್ ಬ್ಯಾಡಿ ಕರೋನಾ ಐತೆ
ಎತ್ತಾ ಹೋದ್ರೂನೂ ಪೋಲೀಸು ಕಾಟ
ಎತ್ತಾ ಬಂದ್ರೂನೂ ವೈದ್ಯರಾ ಕಾಟ
ಏನು ಮಾಡೋದಪ್ಪ… ಹೆಂಗಿರೋದಪ್ಪಾ..?
ಮನೆಯಲ್ಲಿ ಕುಂತೂ.. ನಿಂತೂ..
ಸಾಕಾಗೋಗೈತೆ.. ಅಯ್ಯೋ ಸಾಕಾಗೋಗೈತೆ //
ಪಕ್ಕದಾ ಮನೆಯಾ ಇಣುಕಿ
ನೋಡಲೂ ಭಯವಾಗುತೈತೆ
ಯಾಕೋ.. ಏನೋ.. ಬಂದಾ.. ಕೆಮ್ಮು
ನೋಡಿದಾ ಜನ
ದೂರ ಸರಿಸಿಯೇ ಬಿಟ್ಟರಲ್ಲ!!!
ಅಯ್ಯೋ ಓಡಾಡ್ಸಿ ಬಿಟ್ಟರಲ್ಲ..!!
ಬೆಳಗಿಂದಾ.. ಮೈ ಬೆಚ್ಗೆ..
ಊರೆಲ್ಲಾ ಸುತ್ತೋಕೆ ಹೋಗಿದ್ನಲ್ಲ
ಇರೋಕಾಗದೆ.. ಮನೆಯಲ್ಲಿ ಇರೋಕಾಗದೆ
ಬಂದೇ ಬುಟೈತೆ ಕರೋನಾ..
ಕರೋನಾ… ಅದೆಂಥಾ ಕರೋನಾ..
ಅಟ್ಟಾಡ್ಸಿ ಬಿಡ್ತಲ್ಲ .. ಸಾಕಾಗಿ ಬಿಡ್ತಲ್ಲ..//
ಚುಚ್ಚಿ ಚುಚ್ಚಿ ಮೈಯ್ಯೆಲ್ಲ ತೂತು
ಮೈತುಂಬಾ ಮಾಸ್ಕು ಗೀಸ್ಕು ಹಾಕಿ
ಉಸಿರಾಟ ನಿಂತೇ ಹೋಯ್ತಲ್ಲ
ಮಲುಗ್ದಲ್ಲೇ ಮಲಗ್ಬೇಕಲ್ಲ…
ಏನು ಮಾಡೋದಪ್ಪ.. ಬೀದೀಗೇ..
ಬಂದ ತಪ್ಪಿಗೆ ಅನುಭವಿಸಬೇಕಾಯ್ತಲ್ಲ
ಹೇಳಿದ್ನ ಕೇಳಿದ್ರೆ ಇಂಗಾಯ್ತಿರ್ನಿಲ್ವಲ್ಲ..//
*******
Useful and informative message
Thank you sir
Comical narration, ಚೆನ್ನಾಗಿದೆ Mrs.ವಾಣಿ, ಅಭಿನಂದನೆಗಳು ☺️
Thank you kusuma mam
ಸರಳ ಸಾಹಿತ್ಯದಲ್ಲಿ ರಚನೆಯಾಗಿದೆ. ಆದ್ದರಿಂದ ತಮ್ಮ ಸಂದೇಶ ಭರಿತ ಸಾಲುಗಳು ಎಲ್ಲರ ಮನ ಮುಟ್ಟುತ್ತದೆ
ಆಭಿನಂದನೆಗಳು
Thank you sir