ನಿನ್ನ ಹಾಡು
ಮೂಲ: ರಬೀಂದ್ರ ನಾಥ ಟಾಗೋರ್
ಕನ್ನಡಕ್ಕೆ: ಡಾ.ಪ್ರಸನ್ನ ಹೆಗಡೆ
ನೀ ಹಾಡುವಾ ಪರಿಯ
ನಾನರಿಯೆ ನನ್ನೊಡೆಯಾ
ಬೆರಗಿನಿಂ ನಾ ಕುಳಿತು
ಪೇಳ್ವೆ ಜಿಯಾ,,,ಪೇಳ್ವೆ ಜಿಯಾ
ನಿನ್ನ ಹಾಡಿನಾ ಕಿರಣ
ಬೆಳಗುತಿದೆ ಜಗವನ್ನು
ಬಾನಿನಿಂ ಬಾನಿಗೆ
ಹರಿಸಿ ಉಸಿರು
ಆ ಹಾಡಜೀವಸೆಲೆ
ಅಡೆತಡೆಯ ಪುಡಿಮಾಡಿ
ದೈರ್ಯದಿಂ ಮುಂದಕ್ಕೆ
ನುಗ್ಗುತಿಹುದು….ನುಗ್ಗುತಿಹುದು
ನಿನ್ನ ಹಾಡಕೂಡೆಂದು
ಕೂಗುತಿದೆ ಎನ್ನೆದೆಯು
ಆದರದು ಬರಿವ್ಯರ್ಥ
ದ್ವನಿಗಾಗಿ ನಾನು ಒರಲುತಿಹೆನು
ನಾ ನುಡಿವೆ ಬರಿನುಡಿಯ
ಹಾಡಾಗ ಆ ನುಡಿಯು
ಕೈಚೆಲ್ಲಿ ಕಣ್ಣೀರ
ಸುರಿಸುತಿಹೆನು…ಸುರಿಸುತಿಹೆನು
ಅಹ! ದಣಿಯೆ ಎನ್ನ ದಣಿಯೆ
ನಿನ್ನಹಾಡಿನಾ ಅನಂತ ಬಲೆಯಲ್ಲಿ
ಎನ್ನೆದೆಯ ಹಿಡಿದೆಳೆದು
ಬಂದಿಸಿರುವೆ….ಬಂದಿಸಿರುವೆ.
********