ಮೂಲ: ನಿಝಾರ್ ಖಬ್ಬಾನಿ
ಕನ್ನಡಕ್ಕೆ: ಡಾ.ಗೋವಿಂದ ಹೆಗಡೆ

ಆ ಮೀನಿನಂತೆ ನಾನು
ಚುರುಕು ಮತ್ತು ಹೇಡಿ
ಪ್ರೇಮದಲ್ಲಿ
ನೀನು ನನ್ನಲ್ಲಿನ ಸಾವಿರ
ಹೆಣ್ಣುಗಳ ಸಾಯಿಸಿದೆ
ಮತ್ತು-ರಾಣಿಯಾದೆ
ಚಿಂತಿಸಬೇಡ
ನನ್ನ ಮಧು ಖನಿಯೇ
ನೀನಿದ್ದೀ ನನ್ನ ಕವಿತೆಗಳಲ್ಲಿ
ನನ್ನ ಪದಗಳಲ್ಲಿ
ವರುಷಗಳು ಉರುಳಿ
ಮುದಿಯಾಗಬಹುದು
ಆದರೆ ನನ್ನ ಪುಟಗಳಲ್ಲಿ
ನೀನು ಚಿರ ಯೌವನೆ
ಈಗಲೂ ನೀನು
ನಾನು ಹುಟ್ಟಿದ ದಿನವನ್ನು ಕೇಳುವೆ
ಹಾಗಿದ್ದರೆ ಬರೆದುಕೋ-ನಿನಗೆ
ಗೊತ್ತಿಲ್ಲದಿರುವುದನ್ನು
ಎಂದು ನೀನು ಪ್ರೇಮವನ್ನು
ಅರುಹಿದೆಯೋ
ಅಂದೇ ನನ್ನ ಜನ್ಮದಿನ!
***********
ಎಂತಹ ಉತ್ಕಟ ಪ್ರೇಮ ನಿವೇದನೆ!
ಸುಂದರ ಭಾವಪೂರ್ಣ ಗಝಲ್! ಅಭಿನಂದನೆಗಳು