ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-6 ಭವಿಷ್ಯವೇನೋ ಭಗವಂತ ಬಲ್ಲ… ಇನ್ನೊಂದೇ ಪರೀಕ್ಷೆ ಮುಗಿದರೆ ನನ್ನ ಪಿಯುಸಿ ಶಿಕ್ಷಣ ಮುಗಿಯುತ್ತದೆ ಅಮ್ಮಾ ಎಂದೊಬ್ಬ ಮಗ ಹೇಳಿದರೆ, ಇನ್ನೊಬ್ಬ ಅಮ್ಮನ ಮಗ ಹತ್ತನೆಯ ತರಗತಿಯ ಪರೀಕ್ಷೆಗೆ ಓದುತ್ತಿದ್ದ. ಒಬ್ಬಳ ಮಗಳು ಎಂಟನೆಯ ಪರೀಕ್ಷೆಗೆ ಓದುತ್ತಿದ್ದರೆ ಮತ್ತೊಬ್ಬಳ ಮಗಳು ಡಿಗ್ರಿ ಪರೀಕ್ಷೆಗೆ ಓದುತ್ತಿದ್ದಳು. ಎಲ್ಲ ಶಾಲಾ ಕಾಲೇಜು ಬಾಗಿಲುಗಳು ಮುಚ್ಚಿ ‘ಕೊರೊನಾ ದೆಸೆಯಿಂದ ನಿಮಗೆ ಅನಿರ್ದಿಷ್ಟ ಅವಧಿಯವರೆಗೆ ರಜಾ’ ಎಂದವು. ಅನೇಕರು ಪರೀಕ್ಷೆ ಬರೆಯದೇ […]
ಕಾವ್ಯಯಾನ
ಗಝಲ್ ಶಿವರಾಜ್. ಡಿ ನಮ್ಮ ಅಪಮಾನ ಅವಮಾನಗಳು ಇನ್ನೂ ಸತ್ತಿಲ್ಲ ಅಸ್ಪೃಶ್ಯತೆ ಅನಾಚರ ಅಜ್ಞಾನಗಳು ಇನ್ನೂ ಸತ್ತಿಲ್ಲ ನಿಮ್ಮ ಕಾಲಿನ ಚಪ್ಪಲಿ ಹೊಲೆದವರು ನಾವು ಚಪ್ಪಲಿ ಮೆಟ್ಟು ಬೆನ್ನಿಗೆ ಹೊದ್ದ ದರ್ಪ ಇನ್ನೂ ಸತ್ತಿಲ್ಲ ಮೀಸಲಾತಿ ಸ್ವಾಭಿಮಾನ ವಿರೋಧಿಸಿದವರು ನೀವು ನಮ್ಮನ್ನು ತುಳಿದ ನಿಮ್ಮ ದುರಭಿಮಾನ ಇನ್ನೂ ಸತ್ತಿಲ್ಲ ನಿಮ್ಮ ಮನೆಯ ಹೊಲ ಗದ್ದೆ ಚಾಕರಿಗೆ ಬೇಕು ನಾವು ನಮ್ಮನ್ನು ಹೊರಗಿಟ್ಟವರ ಮಡಿವಂತಿಕೆ ಇನ್ನೂ ಸತ್ತಿಲ್ಲ ನಿಮ್ಮ ಮಲಮೂತ್ರಗಳ ಹೊಲಸು ಹೊತ್ತವರು ನಾವು ಶ್ವಪಚರೆಂದು ಜರಿದ ಕೊಳಕು […]
ಪುಸ್ತಕ ದಿನ
ಇವತ್ತು ಪುಸ್ತಕ ದಿನ ಶಿವಲೀಲಾ ಹುಣಸಗಿ “One Best Book is equal to Hundred Good Friends one Good Friend is equal to library” -APJ Abdul kalam. ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ […]
ಕಾವ್ಯಯಾನ
ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ ಧಗ್ಗನೆದ್ದು ಬಂದಿವೆ ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು ಅಂದು ಕುಂಪಣಿಯ ಛೇಲಗಳಂತಿವರು ಇಂದು ಈ ಹೊತ್ತಿಗೆ ಅಲ್ಲಾವುದ್ದೀನನ ಚಿರಾಗ್ ಬೆಳಕಲಿ ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ ದಿನಗಳು ಲೋಕವನ್ನೇ ಸುಡುತಿದೆ ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ ಗಡಿಗಳು ದೇಶಕೋಶಗಳಲಿ ವಿಷವೇ ವಾಹಿನಿಯಾಗಿ […]
ಕಾವ್ಯಯಾನ
ಮುಕ್ತಿ ದೊರಕೀತು! . ತೇಜಾವತಿ ಹೆಚ್.ಡಿ ಅಂತಹದೊಂದು ಅಂತರಂಗದ ಮಿಡಿತವ ನೀ ಅರಿತು ಗೌರವಿಸುವಿಯಾದರೆ ಬರಡಾದ ಬಂಜರಿನಲ್ಲೂ ಉಕ್ಕುವ ಚಿಲುಮೆಗಾಗಿ ಕಾತರಿಸಿದ ಅವನಿಯ, ಕಾರ್ಗತ್ತಲ ಕಾನನದಲ್ಲೂ ನೆರಳಾಗಿ ಬರುವ ಕಂದೀಲನ್ನು ತಾನು ನಿರಾಕರಿಸಲಾರದು ಯಾವ ಭಾವವೂ ಆಕರ್ಷಣೆಯೆಂದು ಹಗುರ ನುಡಿಯದೆ ಕಾಮವೇ ಐಹಿಕದ ಸುಖವೆಂದು ನೀ ತಿಳಿಯದೆ ಅದರಾಚೆಗಿನ ಪವಿತ್ರತೆಯನೊಪ್ಪಿಕೊಳ್ಳುವೆಯಾದರೆ ಶಾಪಗ್ರಸ್ತ ಜೀವಕ್ಕೆ ಮುಕ್ತಿ ದೊರೆತು ಗಂಗೆಯ ಜಲದಿ ಪಾಪಗಳೆಲ್ಲ ತೊಳೆಯಲಿ ಒಳಗಿರುವ ಮಾಣಿಕ್ಯ ಪ್ರಜ್ವಲಿಸಲಿ ಅರಿವಿಗೆ ತಾನು ಸ್ಫೂರ್ತಿಯಾಗಲಿ *******
ಕಾವ್ಯಯಾನ
ಒಂದಿಷ್ಟು ಹಾಯ್ಕುಗಳು ಮದ್ದೂರು ಮದುಸೂದನ 1 ದೂರದ ಬೆಟ್ಟ ನುಣ್ಣಗೆ ಹೆಣ್ಣು ಕೂಡ 2 ಗಾಳಿ ಬಿಟ್ಟ ಪುಗ್ಗೆ ಒಮ್ಮೊಮ್ಮೆ ಬದುಕು 3 ತುದಿ ಕಾಣದ ಮುಗಿಲು ನಮ್ಮ ನಿಲ್ಲದ ಲಾಲಸೆ 4 ಬರಿದಾಗುತ್ತಿರುವ ಜೀವಜಲ ನಮ್ಮ ಜ್ಞಾನ 5 ಎಲ್ಲಿಯೂ ಒಂದಾಗದ ರೈಲಿನ ಹಳಿ ಜಾತಿಯತೆ 6 ಸದಾ ಕಾಡುವ ಕೊರತೆ ಮಾನವೀಯತೆ *********
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಕಾಲಚಕ್ರ ಅರೆಕ್ಷಣವೂ ವಿರಮಿಸದೇ ಉರುಳುತ್ತಲಿದೆ ನಲ್ಲೆ ನಮ್ಮ ಪ್ರೀತಿ ಅಡೆತಡೆಯಿಲ್ಲದೇ ಬೆಳೆಯುತ್ತಲಿದೆ ನಲ್ಲೆ ನಡೆದ ಹಾದಿಯಲಿ ಎದುರಾದ ಕಷ್ಟ ಕೋಟಲೆಗಳು ನೂರು ಗಂಗಾ಼ಳದ ಗಂಜಿಯಲ್ಲೇ ಮೃಷ್ಟಾನ್ನದ ಸವಿ ತುಂಬಿದೆ ನಲ್ಲೆ ನಿನ್ನೆ ಮೊನ್ನೆಯಂತೆ ನೆನಪಿನಲ್ಲಿದೆ ಸಪ್ತಪದಿ ತುಳಿದ ಘಳಿಗೆ ದಶಕಗಳ ಅನುರಾಗದಲಿ ಈ ಬಂಧ ಬಿಗಿಗೊಂಡಿದೆ ನಲ್ಲೆ ಹುಲ್ಲಿನ ಮನೆಯೇ ಅರಮನೆಯಾಗಿರೆ ಎಲ್ಲಿಹುದು ಕೊರತೆ ? ನಾನು ಬಡವ ನೀನು ಬಡವಿ ಒಲವೇ ಸಿರಿಯಾಗಿದೆ ನಲ್ಲೆ ಬಾಳಿನ ಸಂಧ್ಯಾಕಾಲವಿದು ನನಗೆ ನೀನು ನಿನಗೆ ನಾನು […]
ಗಝಲ್ ಲೋಕ
ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ನಾಲ್ಕನೆ ಅದ್ಯಾಯ ಕನ್ನಡಕ್ಕೆ ಗಜಲ್ ಬಂದ ರೀತಿ ಪ್ರಪಂಚದಲ್ಲಿ ಗಜಲ್ ಹುಟ್ಟಿದ ರೀತಿ, ಅದು ಬೆಳೆದು ಬಂದ ಬಗೆ ಮೊದಲಾದ ಸಂಗತಿಗಳ ನಂತರ ಈಗ ನಮ್ಮ ಕನ್ನಡ ಗಜಲಗಳಿಗೆ ಬರೋಣ ಕನ್ನಡದ ಜಾಯಮಾನ ಒಂದು ಮಟ್ಟಿಗೆ ಕಷ್ಟಕರವಾದ ಮತ್ತು ವಿದೇಶಿಯ ಪರ್ಷಿಯನ್, ಅರಬ್ಬೀ, ಉರ್ದು ಭಾಷೆಗೆ ಒಗ್ಗಿದ ಸಾಹಿತ್ಯ ಪ್ರಕಾರವಾದ […]
ಭೂಮಿ ದಿನ
ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ […]
ಪುಸ್ತಕ ವಿಮರ್ಶೆ
ಮೇಗರವಳ್ಳಿ ರಮೇಶ್ ಆಲ್ಖೆಮಿಸ್ಟ್ ಕಾದಂಬರಿ ಮೂಲ:ಪೌಲೋ ಕೋಎಲ್ಹೊ(ಅರ್ಜೆಂಟೈನಾ) ಕನ್ನಡಕ್ಕೆ: ಕಮಲ ಹೆಮ್ಮಿಗೆ ಶ್ರೀಮತಿ ಕಮಲ ಹೆಮ್ಮಿಗೆಯವರು ಅನುವಾದಿಸಿದ ಪೌಲೋ ಕೋಎಲ್ಹೊ ನ ಕಾದಂಬರಿ “ಆಲ್ಖೆಮಿಸ್ಟ್”– ಒಂದು ಒಳ ನೋಟ ಅರ್ಜೆಂಟೈನಾದ ಕಾದಂಬರಿ ಕಾರ ಪೌಲೋ ಕೊಎಲ್ಹೊ ಸ್ಪಾನಿಶ್ ಭಾಷೆಯಲ್ಲಿ ಬರೆದ ಕಾದಂಬರಿ “ಆಲ್ಖೆಮಿಸ್ಟ್” ಒಂದು ವಿಶಿಷ್ಠ ಕಥಾ ಹಂದರವನ್ನು ಹೊಂದಿರುವ, ಓದುಗನಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಕಾದಂಬರಿ. ಕನ್ನಡದ ಶ್ರೇಷ್ಠ ಕವಯಿತ್ರಿಯರಲ್ಲಿ ಒಬ್ಬರಾದ ಡಾ! ಕಮಲ ಹೆಮ್ಮಿಗೆಯವರು ಈ ಕಾದಂಬರಿಯನ್ನು ಅದರ ಮಲಯಾಳಂ […]