ಅನುವಾದ ಸಂಗಾತಿ
ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ […]
ಕಾವ್ಯಯಾನ
ಒಳದನಿ ಶಹನಾಜ್ ಬಿ. ಸಿರಿವ್ಯಾಲ ಒಳದನಿ ಅಂದು ನೀನು ನೆಟ್ಟಿದ್ದ ಜಾತ್ಯತೀತತೆಯ ವೃಕ್ಷ ಇಂದು ರಾಜಕೀಯ ವಿಷ ಗಾಳಿಗೆ ಸಿಲುಕಿ ನಿತ್ಯವೂ ನರಳುತ್ತಿದೆ. ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ ದಮನಿತರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಅದ್ಯಾಕೋ ನಿನ್ನ ಬುದ್ಧನಿಂದಲೂ ಈ ಸಮಾಜವನ್ನು ತಿದ್ದಲಾಗಲಿಲ್ಲ. ವೇಮುಲನ ಮುಖ ಪ್ರತಿ ಬಾರಿ ನೆನೆದಾಗಲೂ , ಎಲ್ಲೋ ಬಾಪುವಿನ ನಾಡಲ್ಲಿ ಕೃಶ ದೇಹಗಳಿಂದ ರಕ್ತ ಒಸರಿದಾಗಲೂ , ಮತ್ತೆಲ್ಲೋ ಅವಳ ತಿಂದುಂಡ ದೇಹಕ್ಕೆ ಬಲವಂತದ ಬೆಂಕಿ ಹಚ್ಚಿದಾಗಲೂ […]
ಕಾವ್ಯಯಾನ
ಕೊರತೆ ಜ್ಯೋತಿ ಡಿ.ಬೊಮ್ಮಾ ಧರ್ಮ ದೇವರುಗಳೆಲ್ಲ ಕಿರುಚಾಟದ ಸರಕುಗಳಾದವು.. ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ ಕಚ್ಚಾ ವಸ್ತುಗಳಾದವು.. ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ ಕ್ಷುಲ್ಲಕ ಕಾರಣಗಳಾಗಿರುವವು.. ಈ ವಿಷಯಗಳೆ ಈಗ ಪ್ರಚಲಿತ ವಿದ್ಯಾಮಾನವಾಗಿರುವವು.. ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು ದೇಶ ಗಡಿಗಳು ಇವುಗಳಡಿ ನರಳಾಡಿದವು ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ ಚಮರಗೀತೆಗಳಾದರು.. ಆರಂಭ ಎಲ್ಲಿಂದ. .ಅಂತ್ಯ ಯಾವದು.. ಗೊತು ಗುರಿಯಿಲ್ಲದ ವಿಚಾರ ಧಾರೆಗಳು.. ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ ಹಠ ಪ್ರತಿಯೊಬ್ಬರಲ್ಲೂ.. ಈಗ ಮಂದಿರ ಮಜ್ಜಿದ […]
ಕಾವ್ಯಯಾನ
ನೀನಿಲ್ಲದ ಈ ಹೊತ್ತು ಬಿದಲೋಟಿ ರಂಗನಾಥ್ ದೇಶ ಸುಡುವ ಕಣ್ಣುಗಳ ನಡುವೆ ನಿನ್ನ ಹೆಜ್ಜೆಗಳ ಸವಾರಿ ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ ಬರೆದ ಸಂವಿಧಾನ ಕರುಳು ನೋಯುತ್ತಿದೆ ಸೂಜಿಗೆ ದಾರ ಸೇರಿಸಿ ನಾಟಾಕುವ ಕೈಗಳಿಗೆ ಹೆದರಿ ನಿನ್ನುಸಿರನು ಸೇರಿಸಿ ಬರೆದ ಬೇರು ಸಂವಿಧಾನದಲಿ ನಿನ್ನ ನಿನ್ನವರ ಕನಸುಗಳು ಆಯಾಸವಿಲ್ಲದೆ ಆಡುತ್ತಿದ್ದವು ಆದರೇ ಕತ್ತರಿ ತೋರಿಸುತ್ತಲೇ ಇವೆ ಹಿಡಿಗಾತ್ರದ ಮನಸುಗಳು ಬರೆದ ಸಂವಿಧಾನದ ಪುಟಗಳ ಚೂರು ಮಾಡಲು ಬೆವರಲೇ ಬೆಂದ ನಿನ್ನ ಜನರ ಆಶಾಗೋಪುರಕೆ ನೀನೆ ಬೇಲುದಾರ […]
ಪ್ರಸ್ತುತ
ದಲಿತ ಸೂರ್ಯ ದಲಿತ ಸೂರ್ಯ..ವಿಶ್ವಮಾನವ… ಜೈಭೀಮ….! ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ.” …………….ಡಾ!!ಬಿ.ಆರ್ ಅಂಬೇಡ್ಕರ್ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ವ್ಯಕ್ತಿತ್ವವಾಗಿ ಪರಿವರ್ತನೆಗೊಳ್ಳುವ ಸಮಯ ಬಹು ಕಷ್ಟದ್ದು.ಜೀವನದ ಪ್ರತಿಕ್ಷಣದಲ್ಲೂ ಏಳುಬೀಳುಗಳನ್ನು ಕಂಡು,ನೋವಿನ ಅಗ್ನಿ ಕುಂಡದಲ್ಲಿ ಬೆಂದರೂ,ಪುಟಕ್ಕಿಟ್ಟ ಚಿನ್ನದಂತೆ ಪ್ರಖರವಾದ ಪ್ರಕಾಶ ಹೊರಹೊಮ್ಮಿಸುತ್ತಿರುವುದು ಪ್ರತಿಭೆಯ ಆಗರದ ಪ್ರತಿಮೆಯೆಂದರೆ ತಪ್ಪಾಗದು.ಇಂದು ನಾವೆಲ್ಲ ಭವ್ಯ ಭಾರತದ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿ ಶ್ರೀ ಜಗಜ್ಯೋತಿ ಬಸವಣ್ಣನವರು ಶ್ರೀ ಮಹಾತ್ಮಗಾಂಧೀಜಿ, ಡಾ!!ಬಿ.ಆರ್.ಅಂಬೇಡ್ಕರ್….ತ್ರಿಮೂರ್ತಿಗಳು ….ದೇಶ ವಿದೇಶಗಳಲ್ಲಿ […]
ಕಾವ್ಯಯಾನ
ಮೂಕ ಭಾರತದ ನಾಯಕ ನಾಗರಾಜ ಹರಪನಹಳ್ಳಿ ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ|| ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ ಬಡ ಭಾರತದ ಬಾಬಾ ಸಾಹೇಬ ನೀನೋ ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| ಬಡವರ ಪಾಲಿನ ಬೆಳಕು ನೀನೋ ಬಹುತ್ವ ಭಾರತವನ್ನು ತಿಳಿದವ ನೀನೋ ಮನುವಾದಿಗಳ ಕಣ್ಣು ತೆರೆಸಿದವ ನೀನೋ ಬ್ರಿಟಿಷರ ಮನಮನ ಗೆದ್ದವ ನೀನೋ […]
ಕಾವ್ಯಯಾನ
ಬಾಬಾಸಾಹೇಬ ತಾವು ದೇವರಾದರೆ! ಡಿ. ಎಮ್.ನದಾಫ್. ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು ಮಾನವತೆಯನ್ನು ಮರಳಿ ಸ್ಥಾಪಿಸಿದ ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ ಮತ್ತೆ ನೀ ದೇವರಾದಾಗ ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ. ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ ನೀ ದೇವರಾಗಬೇಡ […]
ಕಾವ್ಯಯಾನ
ದಲಿತ ಚೇತನ ಮನುಶ್ರೀ ಸಿದ್ದಾಪುರ ಓ ದಲಿತರ ಮಹಾಚೇತನವೇ ಇಗೋ ನಿನಗೆನ್ನಯ ನಮನ ಕಷ್ಟ-ಕಾರ್ಪಣ್ಯಗಳ ಬಳ್ಳಿಯಲಿ ಅರಳಿ ನಗುವ ಚೆಲ್ಲಿದೆ ಗುಲಾಬಿ ಯಂತೆ. ನರನಾಡಿಗಳ ಬತ್ತಿಯಾಗಿ ತಾನುರಿದು ಸುತ್ತಲೂ ಜ್ಞಾನದ ಬೆಳಕು ಹರಡಿದೆ. ಶೋಷಿತರ ದನಿಗೆ ಮೂಕನಾಯಕನಾಗಿ ಸೆಟೆದು ನಿಂತೆ ದೀನ ದಲಿತರ ಬದುಕಿನ ಉದ್ದಾರಕೆ. ಕಗ್ಗಲ್ಲಿನಲಿ ಮೂಡಿದೆ ಉಜ್ವಲ ಮೂರ್ತಿಯಾಗಿ ಕೂಗಿ ಕರೆದು ತೋರಿಸಿದೆ ಮಹಾಮನೆಯ ಬಿರುಕನು ಶಿಕ್ಷಣ ಸಂಘಟನೆ ಹೋರಾಟದ ತ್ರಿಪಟಿಕ ಸೂತ್ರ ದಲಿತರ ಬದುಕಿನ ಪಾವನದಿ ಸಾಗಿಬಂದ ಮಹಾಪಾತ್ರ. ಹೊನ್ನ ಚರಿತೆಯ ಮಹಾಪುರುಷರಲಿ […]
ಕಾವ್ಯಯಾನ
ಅಂಬೇಡ್ಕರ್ ಸ್ವಗತ ಮಧುಕುಮಾರ ಸಿ ಎಚ್ ಯಾವುದು ಆಗಬಾರದೆಂದು ನಾ ಎಣಿಸಿದೆನೋ ಅದು ಆಗಿಯೇ ತೀರಿದೆ ಅದಕ್ಕಾಗಿ ವಿಷಾದಿಸುತ್ತೇನೆ. ವ್ಯಕ್ತಿಪೂಜೆ ಬೇಡವೆಂದ ಮಾತು ಹಳ್ಳ ಹಿಡಿದು ಇಲ್ಲಿ ಈ ದಿನ ಪ್ರತಿಮೆಗೆ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಅಭಿಮಾನ ತೋರುವ ಆಚರಣೆ ವಿಜೃಂಭಣೆಯಿಂದಲೇ ನಡೆದಿದೆ. ನಾಲ್ಕು ತಿಂಗಳು ಕಳೆದ ಬಳಿಕ ಅಲ್ಲಲ್ಲಿ ‘ಗಣೇಶನ’ ಕೂರಿಸಿ ಮತ್ತದೇ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಕುಡಿದು ಕುಣಿದು ಕುಪ್ಪಳಿಸುವುದು ತಪ್ಪದೇ ನಡೆಯುವುದಿದೆ. ಎಡ-ಬಲ ಎರಡೆರಡು ಹೋಳಾಗಿ ಒಳಗೊಳಗೊಂದು […]
ಕಾವ್ಯಯಾನ
ಬಾಬಾರವರ ನೆನಪಲ್ಲಿ ಹೆಚ್ ರಾಠೋಡ ಬಾಬಾ ನಿನ್ನ ನೆರಳಿನಲ್ಲಿಭರತಖಂಡ ನಡೆದಿದೆ ಶ್ರೇಷ್ಠ ಭಾರತದೇಶ ಎಂಬ ಹೆಗ್ಗಳಿಕೆಯು ಪಡೆದಿದೆ ಭರತ ಭೂಮಿ ನಿತ್ಯ ನಿನ್ನ ನೆನೆದು ಹೆಜ್ಜೆ ಇಡುತ್ತಿದೆ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಧನ್ಯ ಸಾರ್ಥಕತೆ ಮೆರೆದಿದೆ ನೀನುಹಾಕಿಕೊಟ್ಟ ದಾರಿಯಲ್ಲೇ ಇಂದು ದೇಶ ಸಾಗಿದೆ ನಿನ್ನ ಜ್ಞಾನ ಪಾಂಡಿತ್ಯಕ್ಕೆ ವಿಶ್ವವೇ ತಲೆದೂಗಿದೆ ಸಮಾನತೆಯ ಭಾವದಲ್ಲಿ ಸಂವಿಧಾನ ರಚಿಸಿದೆ ಶ್ರೇಷ್ಠ ಸಂವಿಧಾನ ರಚಿಸಿದ ಶಿಲ್ಪಿ ಎಂದೆನಿಸಿದೆ ಭಾರತೀಯರ ಎದೆಯಲ್ಲಿ ನಿನ್ನ ಪ್ರತಿಮೆ ನಿಂತಿದೆ ಅಂಬೇಡ್ಕರ್ ಎಂಬ ನಾಮ ಅಜರಾಮರವಾಗಿದೆ ಭೀಮನೆಂಬ […]