ಕಾವ್ಯಯಾನ
ಅವತಾರ ಪುರುಷ ಸಂಮ್ಮೋದ ವಾಡಪ್ಪಿ ಕಡುಕಷ್ಟದಲಿ ಕುದ್ದು ನೊಂದು ಬೆಂದು ಹೀಯಾಳಿಸುವವರ ಮಧ್ಯೆ ಎದ್ದು ತಾ ನಿಂದು ಮೇಲೆದ್ದು, ಕುಕ್ಕುವ ಕಂಗಳ ನೇರದಿ ನೋಡಿ ಅಧ್ಯಯನ ದಾರಿಯಲಿ ಬರೆದ ಭಾರತದ ಮುನ್ನುಡಿ ಅರಿತರು ಅನೇಕ, ಅನೇಕರು ಮರೆಮಾಚಿದರು ಬಿಡದ ಹಠಯೋಗಿ ಸದಾ ತಪದಿ ಮಿಂದು ದಾರಿಗುಂಟ ಮುಳ್ಳುಗಳು ಬದಿಗೊತ್ತುತ ನಡೆ ಭೀಮನ ಸಾಹಸ, ಸಂವೇದನೆ ದೇಶ ಏಳಿಗೆಯಡೆ ಅಸ್ಪೃಶ್ಯತೆಯ ನೂಕಿ ಮಹಾಸಮರವ ಸಾರಿ ದೀನರ ಬಂಧು ಮಾತೃಭೂಮಿಯ ಮೇಲೆತ್ತುವ ಗುರಿ ಸತತ ಚಲನೆ, ಹೊಟ್ಟೆ ಬಟ್ಟೆ ಕಟ್ಟಿ […]
ಪ್ರಸ್ತುತ
ನಿಜವಾದ ವಿಮೋಚಕ ಸುರೇಶ ಎನ್ ಶಿಕಾರಿಪುರ ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಹಕ್ಕಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿನ ಮೂಲಕ ತವರಿನ ಯಾವುದೇ ಆಸ್ತಿಗೆ ಆಕೆ ಹಕ್ಕುದಾರಳಲ್ಲ ಸಂಬಂಧದವಳಲ್ಲ ಎಂಬುದನ್ನು ನೆಲೆಗೊಳಿಸಲಾಗಿತ್ತು. ಅವಳಿಗೆ ತವರಿನ ಆಸ್ತಿಯೇನಾದರೂ ಇದ್ದರೆ ಅದು ಆಕೆಯ ತಾಯಿ ಮಾತ್ರವೇ ಆಗಿರುತ್ತಿದ್ದಳು. ಅದೂ ಬದುಕಿದ್ದರೆ ಇಲ್ಲದಿದ್ದರೆ ಅದೂ ಇಲ್ಲ. ಹಿಂದೆಲ್ಲಾ ಬಾಲ್ಯ ವಿವಾಹವಾಗಿ ಚಿಕ್ಕ ವಯಸ್ಸಿನಲ್ಲೇ ಗಂಡ ತೀರಿ ಹೋದರಂತೂ ಮುಗಿಯಿತು. ಇಟ್ಟುಕೊಂಡರೆ ಗಂಡನ ಮನೆ ಇಲ್ಲದಿದ್ದರೆ ತವರು ಮನೆ. […]
ಪ್ರಸ್ತುತ
ಮಹಾನ್ ಮಾನವತಾವಾದಿ ಅಂಬೇಡ್ಕರ ರೇಷ್ಮಾ ಕಂದಕೂರ ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಪ್ರತೀಕವಾಗಾರುವ ಲಿಖಿತ ದಾಖಲೆಯ ಹೊತ್ತಿಗೆ ಸಂವಿಧಾನ ಇದರ ರಚನೆಗೆ ಮಹತ್ವದ ಕೊಡುಗೆ ನೀಡಿದ ಮಹನೀಯ ಅಂಬೇಡ್ಕರ.ಸ್ವಾತಂತ್ರ್ಯ,ಸಮಾನತೆ,ಬಂಧುತ್ವದ ಆಧಾರವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನ ರಚಿತವಾಗಿದೆ. ನಮ್ಮ ಹಕ್ಕು,ಕರ್ತವ್ಯಗಳನ್ನು ತಿಳಿಸಿ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಗಳ ಅರಿವು ನೀಡುವ ವಿಶ್ವದಲ್ಲಿಯೇ ಬ್ರಹತ್ ಸಂವಿಧಾನ ಇಂಗ್ಲೆಂಡನ ಸಂವಿಧಾನ ಮಾದರಿಯನ್ನು ಅಳವಡಿಸಿ ಕೊಳ್ಳಲಾಯಿತು. ಅಂಬೇಡ್ಕರ ಬಾಲಕನಿದ್ದಾಗಲೇ ಪ್ರತಿಭಾವಂತ, ಕಲಿಯುವ ಹಂಬಲ,ಸೂಕ್ಷ್ಮತೆಯನ್ನು ಗುರುತಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದರು.ಅಮೇರಿಕಾ,ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.ಸಾಹು ಮಹಾರಾಜರಿಂದ ಶಿಷ್ಯವೇತನ […]
ಕಾವ್ಯಯಾನ
ಅಂಬೇಡ್ಕರ್ ಮೂಗಪ್ಪ ಗಾಳೇರ ನಾವು ಹುಟ್ಟಿದಂತೆ ಆತನು ಹುಟ್ಟಿದ್ದ ಯಾಕೋ ಗೊತ್ತಿಲ್ಲ ನಮ್ಮಲ್ಲಿ ಇರದ ಬೆಳಕು ಆತನಲ್ಲಿತ್ತು ಬುದ್ಧನೋ, ಬಸವಣ್ಣನೋ ಯಾರ ತದ್ಭವವೋ ಗೊತ್ತಿಲ್ಲ ಅವರ ಮುಖ ಚರಿತ್ರೆ ಇತನಲ್ಲಿ ಅಡಗಿತ್ತು ಚಮ್ಮಾರನ ಕೈಯಲ್ಲಿ ಲೇಖನಿ ನರ್ತಿಸಿದಾಗ ಪ್ರಳಯವಾದಿತೆಂದು ಕಾದು ಕುಳಿತ ಕೆಲವರಿಗೆ ಭೂಮಿ ಕಂಪಿಸಿದಂತೆ ನಡುಕ ಹುಟ್ಟಿತು ಹೌದು ಆತ ಸೃಷ್ಟಿಸಿದ್ದು ಪ್ರಳಯವೆ ಯಂತಹ ಪ್ರಳಯ ಕಪ್ಪು ಮೋಡಗಳೆಲ್ಲ ಬಿಳಿಯ ಮೋಡಗಳೊಂದಿಗೆ ಮಿಲನ ನಡೆಸಿ ಭೂ ಗರ್ಭದೊಳಗೆ ಮಾನವೀಯ ಕೂಸುಗಳ ಜನನದ ಪ್ರಳಯ ಆ ಪ್ರಳಯಗಳಿಗಾ […]
ಕಾವ್ಯಯಾನ
ಅಂಬೇಡ್ಕರ್ ಜಯಂತಿಗೆ ರಾಮಾನುಜ ನೆನಪು ಡಾ.ನಾ.ಗೀತಾಚಾರ್ಯ ದಲಿತರನ್ನು ಬಲಿತರು ಹೆಗಲಲಿ ಹೊತ್ತು ದೇವಾಲಯದರ್ಶನ ಮಾಡಿಸುವ ಹೊತ್ತು ಎಂದು ಬರುವುದೊ ಎಂದು ಕಾಯುತಿಹೆ ನಾನಂತು. ಜಾತ್ಯತೀತ ಭಾರತದ ಸಮಾನತೆಯ ಈ ಹೊತ್ತು. ಇದು ಕನಸಲ್ಲ, ಹುಚ್ಚಲ್ಲ ,ನಡೆದಿದೆ ಸತ್ಯಕಥೆ. ತಿರುಪ್ಪಾಣರೆಂಬ ದಲಿತ ಆಳ್ವಾರರ ಜೀವನಗಾಥೆ. ಮುನಿಯೆ ವಾಹನನಾಗಿ ಗರ್ಭಗುಡಿಗೇ ಹೊತ್ತೊಯ್ದ ಕಥೆ.ಸಾವಿರವರ್ಷದ ಇತಿಹಾಸ ಮರುಕಳಿಸಬಾರದೇಕೆ. ಅಂಬೇಡ್ಕರ್ ಗಾಂಧಿ ಬಸವರಿಗೂ ಮೊದಲೆ. ರಾಮಾನುಜರಿತ್ತಿದ್ದರು ದಲಿತರಿಗೆ ಹೆಗಲೆ. ದಲಿತರ ಕಾಲ್ತೊಳೆದ ಕೆರೆನೀರ ಕುಡಿದಿದ್ದರಾಗಲೆ. ‘ತಿರುಕುಲ’ರೆಂದು ಕೂರಿಸಿದ್ದರು ದೇವರ ಬಗಲೆ. ಅಂಬೇಡ್ಕರರೆ ನೀವೇನೋ […]
ಅನುವಾದ ಸಂಗಾತಿ
ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ […]
ಕಾವ್ಯಯಾನ
ಒಳದನಿ ಶಹನಾಜ್ ಬಿ. ಸಿರಿವ್ಯಾಲ ಒಳದನಿ ಅಂದು ನೀನು ನೆಟ್ಟಿದ್ದ ಜಾತ್ಯತೀತತೆಯ ವೃಕ್ಷ ಇಂದು ರಾಜಕೀಯ ವಿಷ ಗಾಳಿಗೆ ಸಿಲುಕಿ ನಿತ್ಯವೂ ನರಳುತ್ತಿದೆ. ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ ದಮನಿತರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಅದ್ಯಾಕೋ ನಿನ್ನ ಬುದ್ಧನಿಂದಲೂ ಈ ಸಮಾಜವನ್ನು ತಿದ್ದಲಾಗಲಿಲ್ಲ. ವೇಮುಲನ ಮುಖ ಪ್ರತಿ ಬಾರಿ ನೆನೆದಾಗಲೂ , ಎಲ್ಲೋ ಬಾಪುವಿನ ನಾಡಲ್ಲಿ ಕೃಶ ದೇಹಗಳಿಂದ ರಕ್ತ ಒಸರಿದಾಗಲೂ , ಮತ್ತೆಲ್ಲೋ ಅವಳ ತಿಂದುಂಡ ದೇಹಕ್ಕೆ ಬಲವಂತದ ಬೆಂಕಿ ಹಚ್ಚಿದಾಗಲೂ […]
ಕಾವ್ಯಯಾನ
ಕೊರತೆ ಜ್ಯೋತಿ ಡಿ.ಬೊಮ್ಮಾ ಧರ್ಮ ದೇವರುಗಳೆಲ್ಲ ಕಿರುಚಾಟದ ಸರಕುಗಳಾದವು.. ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ ಕಚ್ಚಾ ವಸ್ತುಗಳಾದವು.. ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ ಕ್ಷುಲ್ಲಕ ಕಾರಣಗಳಾಗಿರುವವು.. ಈ ವಿಷಯಗಳೆ ಈಗ ಪ್ರಚಲಿತ ವಿದ್ಯಾಮಾನವಾಗಿರುವವು.. ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು ದೇಶ ಗಡಿಗಳು ಇವುಗಳಡಿ ನರಳಾಡಿದವು ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ ಚಮರಗೀತೆಗಳಾದರು.. ಆರಂಭ ಎಲ್ಲಿಂದ. .ಅಂತ್ಯ ಯಾವದು.. ಗೊತು ಗುರಿಯಿಲ್ಲದ ವಿಚಾರ ಧಾರೆಗಳು.. ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ ಹಠ ಪ್ರತಿಯೊಬ್ಬರಲ್ಲೂ.. ಈಗ ಮಂದಿರ ಮಜ್ಜಿದ […]
ಕಾವ್ಯಯಾನ
ನೀನಿಲ್ಲದ ಈ ಹೊತ್ತು ಬಿದಲೋಟಿ ರಂಗನಾಥ್ ದೇಶ ಸುಡುವ ಕಣ್ಣುಗಳ ನಡುವೆ ನಿನ್ನ ಹೆಜ್ಜೆಗಳ ಸವಾರಿ ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ ಬರೆದ ಸಂವಿಧಾನ ಕರುಳು ನೋಯುತ್ತಿದೆ ಸೂಜಿಗೆ ದಾರ ಸೇರಿಸಿ ನಾಟಾಕುವ ಕೈಗಳಿಗೆ ಹೆದರಿ ನಿನ್ನುಸಿರನು ಸೇರಿಸಿ ಬರೆದ ಬೇರು ಸಂವಿಧಾನದಲಿ ನಿನ್ನ ನಿನ್ನವರ ಕನಸುಗಳು ಆಯಾಸವಿಲ್ಲದೆ ಆಡುತ್ತಿದ್ದವು ಆದರೇ ಕತ್ತರಿ ತೋರಿಸುತ್ತಲೇ ಇವೆ ಹಿಡಿಗಾತ್ರದ ಮನಸುಗಳು ಬರೆದ ಸಂವಿಧಾನದ ಪುಟಗಳ ಚೂರು ಮಾಡಲು ಬೆವರಲೇ ಬೆಂದ ನಿನ್ನ ಜನರ ಆಶಾಗೋಪುರಕೆ ನೀನೆ ಬೇಲುದಾರ […]
ಪ್ರಸ್ತುತ
ದಲಿತ ಸೂರ್ಯ ದಲಿತ ಸೂರ್ಯ..ವಿಶ್ವಮಾನವ… ಜೈಭೀಮ….! ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ.” …………….ಡಾ!!ಬಿ.ಆರ್ ಅಂಬೇಡ್ಕರ್ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ವ್ಯಕ್ತಿತ್ವವಾಗಿ ಪರಿವರ್ತನೆಗೊಳ್ಳುವ ಸಮಯ ಬಹು ಕಷ್ಟದ್ದು.ಜೀವನದ ಪ್ರತಿಕ್ಷಣದಲ್ಲೂ ಏಳುಬೀಳುಗಳನ್ನು ಕಂಡು,ನೋವಿನ ಅಗ್ನಿ ಕುಂಡದಲ್ಲಿ ಬೆಂದರೂ,ಪುಟಕ್ಕಿಟ್ಟ ಚಿನ್ನದಂತೆ ಪ್ರಖರವಾದ ಪ್ರಕಾಶ ಹೊರಹೊಮ್ಮಿಸುತ್ತಿರುವುದು ಪ್ರತಿಭೆಯ ಆಗರದ ಪ್ರತಿಮೆಯೆಂದರೆ ತಪ್ಪಾಗದು.ಇಂದು ನಾವೆಲ್ಲ ಭವ್ಯ ಭಾರತದ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿ ಶ್ರೀ ಜಗಜ್ಯೋತಿ ಬಸವಣ್ಣನವರು ಶ್ರೀ ಮಹಾತ್ಮಗಾಂಧೀಜಿ, ಡಾ!!ಬಿ.ಆರ್.ಅಂಬೇಡ್ಕರ್….ತ್ರಿಮೂರ್ತಿಗಳು ….ದೇಶ ವಿದೇಶಗಳಲ್ಲಿ […]