ಪ್ರಸ್ತುತ

ಮಹಾನ್ ಮಾನವತಾವಾದಿ ಅಂಬೇಡ್ಕರ

Bhimrao Ramji Ambedkar | Columbia Global Centers

ರೇಷ್ಮಾ ಕಂದಕೂರ

ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಪ್ರತೀಕವಾಗಾರುವ ಲಿಖಿತ ದಾಖಲೆಯ ಹೊತ್ತಿಗೆ ಸಂವಿಧಾನ ಇದರ ರಚನೆಗೆ ಮಹತ್ವದ ಕೊಡುಗೆ ನೀಡಿದ ಮಹನೀಯ ಅಂಬೇಡ್ಕರ.ಸ್ವಾತಂತ್ರ್ಯ,ಸಮಾನತೆ,ಬಂಧುತ್ವದ ಆಧಾರವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನ ರಚಿತವಾಗಿದೆ.


ನಮ್ಮ ಹಕ್ಕು,ಕರ್ತವ್ಯಗಳನ್ನು ತಿಳಿಸಿ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಗಳ ಅರಿವು ನೀಡುವ ವಿಶ್ವದಲ್ಲಿಯೇ ಬ್ರಹತ್ ಸಂವಿಧಾನ ಇಂಗ್ಲೆಂಡನ ಸಂವಿಧಾನ ಮಾದರಿಯನ್ನು ಅಳವಡಿಸಿ ಕೊಳ್ಳಲಾಯಿತು.


ಅಂಬೇಡ್ಕರ ಬಾಲಕನಿದ್ದಾಗಲೇ ಪ್ರತಿಭಾವಂತ, ಕಲಿಯುವ ಹಂಬಲ,ಸೂಕ್ಷ್ಮತೆಯನ್ನು ಗುರುತಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದರು.ಅಮೇರಿಕಾ,ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.ಸಾಹು ಮಹಾರಾಜರಿಂದ ಶಿಷ್ಯವೇತನ ಪಡೆದರು

.
ಸಾಮಾಜಿಕ,ಆರ್ಥಿಕ ಪ್ರಗತಿಗಾಗಿ ನಿರಂತರ ಹೋರಾಟ ನಡೆಸಿದರು.ಭಾರತದ ನೀರಾವರಿ ಜನಕನೆಂದೆ ಹೇಳಬಹುದು ಪಂಡಿತ ನೆಹರುರವರ ಕಾಲದಲ್ಲಿನ ಮಂತ್ರಿಯಾಗಿದ್ದರು ಇವರನ್ನು ಮಂತ್ರಿ ಮಂಡಲದ ವಜ್ರ ಎಂದೇ ನೆಹರುರವರು ಪರಿಚಯಿಸುತ್ತಿದ್ದರು‌.


ಹತ್ತನೇ ತರಗತಿಯಲ್ಲಿ ಮುಂಚೂಣಿಯಲ್ಲಿ ಪಾಸಾದಾಗ ಇವರಿಗೆ ಬಹುಮಾನವಾಗಿ ದೊರೆತ “ಬುದ್ಧನ ಚರಿತ್ರೆ” ಪುಸ್ತಕ ಮುಂದೆ ಬೌದ್ಧ ಧರ್ಮ ಸ್ವೀಕರಿಸಲು ಪ್ರೇರಣೆ ನೀಡಿತು.ಬುದ್ಧ,ಮಾರ್ಕ್ಸ ರ ಪ್ರಭಾವ ಇವರ ಅಪಾರ ಮೇಲೆ ಅಪಾರವಾಯಿತು.ಮನುಸ್ಮೃತಿಯಲ್ಲಿ ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ವಿರೋಧಿಸಿದರು‌.ಜಾತಿ ಆಧಾರಿತ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು.


ಪ್ರಜಾ ಪ್ರಭುತ್ವದಲ್ಲಿ ಎದ್ದು ಕಾಣುವ ಸ್ಥೂಲ ಕಲ್ಪನೆಯ ವಿಭಿನ್ನ ಸಮಾಜವನ್ನು ಆದರ್ಶ ಸಮಾಜದ ಕಲ್ಪನೆ ಸುಖಿರಾಜ್ಯವನ್ನಾಗಿ ಬದಲಾಯಿಸಿ ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವಗಳು ಒಟ್ಟಿಗೆ ಸಾಧಿಸುವುದನ್ನು ಕಲ್ಪಿಸಿದರು.


ಇಂದಿನ ಸಮಾಜದಲ್ಲಿ ಒಂದು ಮನೋಭಾವ ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ ನೀಡುವುದು ಅವಶ್ಯಕ.ಪೆಡಸಾದ ಸಾಮಾಜಿಕ ಅಡೆತಡೆಗಳಿಂದ ಮುಕ್ತ ಸಮಾಜದ ನಿರ್ಮಾಣ ಅವಶ್ಯಕವಾಗಿದೆ. ಅಮರ ಚೇತನ ಮಹಾನ್ ಮಾನವತಾವಾದಿ ಶೋಷಿತರ ಏಳ್ಗೆಗಾಗಿ,ಸರ್ವ ಸಮಾನತೆಗಾಗಿ ಮೀಸಲಾತಿಯ ಅಧಿನಿಯಮ ಜಾರಿಗಾಗಿ ಶ್ರಮಿಸಿದರು.ಶ್ರಮಿಕರ ಕಣ್ಣೀರ ಒರೆಸುವಲ್ಲಿ.ದೇವರಿದ್ದಾನೆ ಎಂದು ತಿಳಿದ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದವರು ಭಾರತದ ಸಂವಿಧಾನದ ಶಿಲ್ಪಿ ಅಂಬೇಡ್ಕರ.

*******

One thought on “ಪ್ರಸ್ತುತ

Leave a Reply

Back To Top