ಕಾವ್ಯಯಾನ
ಗಝಲ್ ಡಾ. ಗೋವಿಂದ ಹೆಗಡೆ ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು […]
ಸಂಗೀತ ಸಂಗಾತಿ
ಸಂಗೀತದ ಹಿರಿಮೆ ರತ್ನಾ ಬಡವನಹಳ್ಳಿ ಪ್ರತಿ ಮಾನವನಲೂ ಒಂದೊಂದು ಕಲೆ ತನಗರಿಯದೆ ಅಡಗಿ ಕುಳಿತೇ ಇರುತ್ತದೆ.ಅದನ್ನು ಗುರುತಿಸಿ ಬೆಳಕಿಗೆ ತರುವ ಸಾಮರ್ಥ್ಯ ಕೆಲವರಲ್ಲಿ ತಕ್ಷಣ ಮೂಡುವುದಿಲ್ಲ. ಅದನ್ನು ಗ್ರಹಿಸಿ ಹೊರತರುವ ಗುರು,ಹಾಗೂ ಕಲಾಪೋಷಕರೂ ಸಿಗಬೇಕು. ಎಂತಹ ಕಠಿಣ ಮನಸಿನ ಮನುಜನಾದರೂ ಸಂಗೀತದ ರಾಗಕ್ಕೆ ಒಮ್ಮೆಯಾದರೂ ತಲೆದೂಗದೆ ಇರಲಾರ. ಎಂದಾದರೂ ಒಂದಲ್ಲ ಒಂದು ಹಾಡಿಗೆ ಕಾಲು ,ಕೈ ಬೆರಳು ತಾಳ ಹಾಕಿ ತಲೆದೂಗಿಯೇ ಇರುತ್ತಾನೆ ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ.ಒಬ್ಬೊಬ್ಬರಿಗೆ ಒಂದೊಂದು ರಾಗ ಇಷ್ಟವಾಗಬಹುದು. ರಚ್ಚೆ ಇಳಿದು ಅಳುವ […]
ಅನುವಾದ ಸಂಗಾತಿ
Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು […]
ಕಾವ್ಯಯಾನ
ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ ಬಿದಲೋಟಿ ರಂಗನಾಥ್ ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ ಹೆಣದ ಮೇಲಿನ ಕಾಸಿಗೆ ನಾಲಿಗೆಯನ್ನೇಕೆ ಚಾಚಿದೆ ? ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ ನಿನ್ನ ಹೆಸರನ್ನೇಕೆ ಜೋಡಿಸುತ್ತಿ? ನಿಷ್ಠೆ ಇಲ್ಲದ ಮನಸನು ಹೊತ್ತು ಹೊಲಸು ಆಗಿ ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ ನಿನ್ನ ನಡೆ ಎಂದಿಗೂ ಗಾಳಿಗೋಪುರ ಇದ್ದ ಸೀರೆಯನು ಉಡದೇ ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು […]
ಕಾವ್ಯಯಾನ
ಅರಿವು ಬಿ.ಎಸ್.ಶ್ರೀನಿವಾಸ್ ಹೊತ್ತಾಯಿತು ಗೊತ್ತಾಯಿತು ಪಯಣ ಮುಗಿಯಲಿದೆಯೆಂದು ರವಿಯು ಮುಳುಗಿ ತಾರೆ ಮಿನುಗಿ ಶಶಿ ಆಗಸ ಬೆಳಗುವನೆಂದು ಹೊತ್ತಾಯಿತು ಗೊತ್ತಾಯಿತು ಗಳಿಸಿದ್ದು ಉಳಿಸಿದ್ದು ಚಿಟಿಕೆಯಷ್ಟೇ ಎಂದು ಅರಿಯುವುದು ಅಳಿಸುವುದು ಬೆಟ್ಟದಷ್ಟಿದೆಯೆಂದು ಹೊತ್ತಾಯಿತು ಗೊತ್ತಾಯಿತು ಬಾಳಲೆಕ್ಕಾಚಾರದಲಿ ಒಂದನೊಂದು ಕೂಡಿದರೆ ಎರಡೇ ಆಗಬೇಕಿಲ್ಲವೆಂದು ಶೂನ್ಯವೂ ಮೂಡಬಹುದೆಂದು ಹೊತ್ತಾಯಿತು ಗೊತ್ತಾಯಿತು ಭರದಿ ಹರಿದ ನದಿಯು ಧುಮುಕಿ ಕಡಲ ಸೇರಲಿದೆಯೆಂದು ತನ್ನತನವ ಕಳೆದುಕೊಂಡು ಅಲೆಅಲೆಯಲಿ ಸುಳಿಯುವುದೆಂದು ಹೊತ್ತಾಯಿತು ಗೊತ್ತಾಯಿತು ನನ್ನದೆಂಬುದೆಲ್ಲ ನನ್ನದೇ ಆಗಿರಬೇಕಿಲ್ಲವೆಂದು ಋಣಸಂದಾಯವಾಗದೆ ಬಿಡುಗಡೆಯು ಸಾಧ್ಯವೇ ಇಲ್ಲವೆಂದು ಕಿರುಪರಿಚಯ: ಹವ್ಯಾಸಿ ಬರಹಗಾರರು, […]
‘ಸ್ವಾತ್ಮಗತ’
ಕೆ.ಶಿವು.ಲಕ್ಕಣ್ಣವರ ಅಜರಾಮರವಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಮಹತ್ ಸಾಧನೆ..! ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಹಿಂದೂ ಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು. ಅವರನ್ನು ರಾಜ್ಯದಲ್ಲಿ ನಡೆದಾಡುವ ದೇವರು ಎಂದು ಕೂಡ ಜನರು ಕರೆಯುತ್ತಿದ್ದರು. ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಅವರು. ಅವರಿಗೆ ಭಾರತ ಸರ್ಕಾರವು […]
ಕಾವ್ಯಯಾನ
ಡಾ.ಗೋವಿಂದ ಹೆಗಡೆಯವರ ಎರಡು ಪದ್ಯಗಳು ನಕ್ಕು ಬಿಡು. ಉಂಡ ಕಹಿಗುಳಿಗೆಗಳ ತಪಸೀಲು ಬೇಕಿಲ್ಲ ಸವೆಸಿದ ಕೊರಕಲು ದಿಣ್ಣೆ ದಾರಿಗಳಿಗೆ ಎಡವಿದ ಗಾಯ ನಟ್ಟ ಮುಳ್ಳುಗಳಿಗೆ ಪುರಾವೆಯಿಲ್ಲ ಹನಿಗೂಡಿದ ಕಣ್ಣುಗಳಲ್ಲಿ ತಿರುಗಿ ನೋಡಿ ಒಮ್ಮೆ ನಕ್ಕು ಬಿಡು, ಗೆಳತಿ! ಕೂಡಿ ನಡೆದ ದಾರಿಗಳು ಬೇರಾದ ಹೆಜ್ಜೆಗಳು ಏರು ದಾರಿಯ ಕುಂಟುನಡೆ-ಗೆ ಒದಗದ ಊರುಗೋಲುಗಳು ಬೆನ್ನಿಗೆರಗಿದ ಬಾರುಕೋಲುಗಳು ಎಲ್ಲ ಅನುಭವ ಸಂತೆಯಲ್ಲೊಮ್ಮೆ ನಿಂತು ಗೆಳತೀ, ನಕ್ಕುಬಿಡು ದಾರಿ ಹೂವಿನದಲ್ಲ ನೆರಳು- ನೀರು ಸಿಗುವ ಖಾತರಿಯಿಲ್ಲ ಮುಗಿವ ಮುನ್ನ ಹಗಲು ಸೇರುವುದು […]
ಕಾವ್ಯಯಾನ
ಮೌನದ ಮಡುವಿನೊಳಗೆ ಸಂತೆಬೆನ್ನೂರು ಫೈಜ್ನಾಟ್ರಾಜ್ ಮನಸ್ಸು ನೀರಿಂದ ಹೊರಬಂದ ಮೀನು ಇಂದಿನಿಂದ ಅಲ್ಲ ಅಂದಿನಿಂದಲೂ…! ಕಾರಣವಲ್ಲದ ಕಾರಣಕ್ಕೆ ಸುಖಾ ಸುಮ್ಮನೆ ಮಾತಿಗೆ ಮಾತು ಬೆಳೆದು’ಮೌನ’ ತಾಳಿ ತಿಂಗಳ ಮೇಲೆ ಹನ್ನರೆಡು ದಿನಗಳಾದವು! ದಾಂಪತ್ಯ ಆದಾಗ್ಯೂ ನೂರಾರು ಕ್ಷಣಗಳನ್ನು ಹೇಗೆಂದರೆ ಹಾಗೆ ಎಲ್ಲೆಂದರೆ ಅಲ್ಲಿ ಸರಸದಿ ಹಾಡು ಹಳೆಯದಾದರೇನು ಎಂಬಂತೆ ಕಳೆದಿದ್ದೂ ಒಂದು ‘ಮಾತು’ ನೂರು ಸುಖಗಳನ್ನು ಕೊಲ್ಲುತ್ತೆ ಅನ್ನೋದೆಷ್ಟು ಘಾಟು ಅಲ್ವಾ? ಜಗಳ ಆಡೋದು ಇಬ್ಬರಿಗೂ ಚಟ ಅಲ್ಲ, ಚಾಳೀನೂ ಇಲ್ಲ. ಒಣ ಅಹಂ ಇಷ್ಟು ಅಂತರ […]
ಮಾನವ ಹಕ್ಕುಗಳು
ಡಿಸೆಂಬರ್ – 10 ಮಾನವ ಹಕ್ಕುಗಳ ರಕ್ಷಣಾ ದಿನ. ಈ ಹಕ್ಕುಗಳ ರಕ್ಷಣೆ ಅರ್ಥಪೂರ್ಣವಾಗಿ ಸಾಕಾರಗೊಳುತ್ತಿದೆಯೇ..? ಅಲ್ಲದೇ ಭಾರತದಲ್ಲಿ ‘ಮಾನವ ಹಕ್ಕು’ಗಳ ಸ್ಥಿತಿ ಹೇಗಿದೆ..!? ಕೆ.ಶಿವು.ಲಕ್ಕಣ್ಣವರ ಇದೇ ಡಿಸೆಂಬರ್ 10ರಂದೇ ಈ ಮಾನವ ಹಕ್ಕುಗಳ ರಕ್ಷಣಾ ದಿನದ ಈ ಲೇಖನ ಬರೆಯಬೇಕಾಗಿತ್ತು ನಾನು. ಅಲ್ಲದೇ ಇನ್ನೂ ಒಂದಿಷ್ಟು ಸಾಂದರ್ಭಿಕ ಲೇಖನಗಳನ್ನೂ ಬರೆಯಬೇಕಾಗಿತ್ತು. ಆದರೆ ಈ ಯಾವುದೋ ಲೇಖನಗಳ ಮಾಹಿತಿ ಸಂಗ್ರಹಕ್ಕಾಗಿ ಹೀಗೆಯೇ ಸಿರಿಗೆರೆ ಹೋಗಿದ್ದೆ. ಹಾಗಾಗಿ ಈ ಡಿಸೆಂಬರ್ 10ರ ಈ ಮಾನವ ಹಕ್ಕುಗಳ ರಕ್ಷಣಾ ದಿನದ […]
ಕಾವ್ಯ ಪರಂಪರೆ
ಬನ್ನಿ ನಮ್ಮ ಜೊತೆಗೂಡಿ…….. ಪ್ರತಿ ತಿಂಗಳ ಕಾರ್ಯಕ್ರಮ ಹಳಗನ್ನಡ ವಾಚನ ಮತ್ತು ವ್ಯಾಖ್ಯಾನ ದಿನಾಂಕ:15/12/2019 ಭಾನುವಾರ ಬೆಳಿಗ್ಗೆ 11ಕ್ಕೆ. ಮಹಿಳಾ ವಿಶ್ರಾಂತಿ ಕೊಠಡಿ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಬನ್ನಿ ನಮ್ಮ ಜೊತೆಗೂಡಿ……..