ಕಾವ್ಯಯಾನ
ಗಝಲ್ ಎ. ಹೇಮಗಂಗಾ ನನ್ನ ತೊರೆದು ಹೋಗುವುದೇ ಹಿತವೆಂದಾದರೆ ಹೇಳಿ ಹೋಗು ಕಾರಣ ನನ್ನ ಮರೆತು ಬಾಳುವುದೇ ಸುಖವೆಂದಾದರೆ ಹೇಳಿ ಹೋಗು ಕಾರಣ ‘ನಿನ್ನ ಹೊರತು ಬೇರಾರೂ ಬೇಕಿಲ್ಲ’ವೆಂದೇ ಈ ತನಕ ಕನವರಿಸುತ್ತಿದ್ದೆ ನನ್ನ ಅಸೀಮ ಒಲವೇ ಈಗ ಬೇಡವೆಂದಾದರೆ ಹೇಳಿ ಹೋಗು ಕಾರಣ ಕಂಡ ಕನಸುಗಳಿಗೆ ರಂಗು ಬಳಿದು ರೆಕ್ಕೆ ಮೂಡಿಸಿದವನು ನೀನು ನನ್ನ ಸಾಂಗತ್ಯವೇ ಇಷ್ಟವಿಲ್ಲವೆಂದಾದರೆ ಹೇಳಿ ಹೋಗು ಕಾರಣ ದಿಕ್ಕು ಬದಲಿಸಿದ ನಿನ್ನ ನಿಗೂಢ ನಡೆ ಊಸರವಳ್ಳಿಯನ್ನು ನೆನಪಿಸಿದೆ ನನ್ನ ಸಂಗವೇ ಬೇಡದ […]
ಕಾವ್ಯಯಾನ
ಮೌನ ಪ್ರತಿಭಾ ಹಳಿಂಗಳಿ ನಾ ಹೊದ್ದಿರುವೆ ಮೌನದ ಕಂಬಳಿಯನು ಉಸಿರು ಕಟ್ಟಿದಂತಿದೆ ಒಳಗೊಳಗೆ ಜೋರಾಗಿ ಕಿರುಚಬೇಕೆಂದಿರುವೆ ಸರಿಪಡಿಸಿಕೊಳ್ಳುತ ಗಂಟಲನ್ನು. ಒಳಗೂ,ಹೊರಗೂ ತಾಕಲಾಟ ತರತರನಾದ ಭಾವಗಳ ಎರಿಳಿತ ಮನದ ಕದ ತಟ್ಟುತಿರಲು. ಅತ್ತು ಸುಮ್ಮನಾಗುವೆ ಒಮ್ಮೆ ಜಗದ ಆಗು,ಹೋಗುಗಳಲ್ಲಿ ಮಂಡಿ ಉರಿ ಕುಳಿತಿರಲೂ ಬಂದು ನನ್ನ ಮುಂದೆ. ಶಬ್ದವೂ ನಿಲುಕುತ್ತಿಲ್ಲ ತಲೆಯೆತ್ತಿ ನೋಡಬೇಕೆನಿಸಿತು ಒಮ್ಮೆ. ನೋಡಲಾರೆನು ಎಂದುಸುರಿತು ಹುದುಗಿಸುತ ತಲೆ ಕಂಬಳಿಯೊಳಗೆ ಮರೆಯಲಾರದೆ ಮೌನ *********
ಕಾವ್ಯಯಾನ
ಕೋಗಿಲೆ ಸುಜಾತಾ ಗುಪ್ತಾ ಮಾಮರದ ಕೊಗಿಲೆಯೇ ಒಲವಿನ ಯಾವ ಭಾವವಿಲ್ಲಿ ಇಹುದೆಂದು.. ಕೊರಳೆತ್ತಿ ರಾಗಾಲಾಪಿಸುವೆ ಏತಕೀ ವ್ಯರ್ಥಾಲಾಪನೆ.. ಇನಿಯನಾ ಬಾಹುಬಂಧನದಲ್ಲಿ ಜಗಮರೆತು ನಾನಿರಲು ಅಂದು ನಿನ್ನ ಕುಹೂ ಕುಹೂ ರಾಗಕೆ ನನ್ನ ಮನ ಪಲ್ಲವಿ ಹಾಡಿತ್ತು.. ಇನಿಯ ಸನಿಹದಲಿರಲಂದು ಜೀವನದೆ ನಾದಮಯ ಉಸಿರಿರಲು.. ನಿನ್ನ ಕಂಠದಾ ಸಿರಿ ಆಗಿತ್ತು ನನ್ನೆದೆಗೆ ಒಲವಿನ ರಾಗಸುಧೆ.. ಇಂದು ನೀನೂ ನಾನೂ ಒಂಟಿ ಪ್ರೇಮ ಯಾನದೆ.. ಪುರ್ರೆಂದು ಹಾರಿಹೋಯಿತೇನು ನಿನ್ನೊಲವಿನ ಜೋಡಿ,ಭರಿಸದೆ ಆಲಾಪಿಸುತಿರುವೆಯಾ ಈ ವಿರಹ ಗೀತೆ.. ನಿನ್ನೀ ಕಂಠದಿಂದ ವಿರಹಗೀತೆ […]
ಕಾವ್ಯಯಾನ
ಬಂಧಿ ನಾನಲ್ಲ ವೀಣಾ ರಮೇಶ್ ನಿನ್ನ ನೆನಪುಗಳೇ ನನ್ನ ಬಂಧಿಸಿರುವಾಗ ಈ ಗ್ರಹಬಂಧನ ನನ್ನನೇನೂ ಕಾಡಲಿಲ್ಲ ಹುಡುಕುವ ಪದಗಳು ಬಾವನೆಗಳಲೇ ಬಂಧಿಸಿರುವಾಗ ನಾ ಬಂಧಿ ಅನ್ನಿಸಲಿಲ್ಲ ಎದೆಯ ಬಡಿತದ ಪ್ರತಿ ಸದ್ದಲ್ಲೂ ಕಾವಲಿರಿಸಿದ,ನಿನ್ನುಸಿರು ಈ ಗ್ರಹಬಂಧನ ನನಗೆ ಹಿಂಸೆ ಅನ್ನಿಸಲಿಲ್ಲ ನಿನ್ನ ನೆನಪುಗಳೇ ನನ್ನ ಜೊತೆಯಿರುವಾಗ ಪ್ರತಿ ಮೂಲೆಗೂ ನನ್ನ ಕರೆದೊಯ್ಯುವಾಗ ನಾ ಬಂಧಿ ಅಂತ ಅನ್ನಿಸಲಿಲ್ಲ ******
ಕಾವ್ಯಯಾನ
ಅಸ್ವಸ್ಥ ಅಭಿಪ್ರಾಯ –ನೂರುಲ್ಲಾ ತ್ಯಾಮಗೊಂಡ್ಲು ವಟಗುಡುವ ಕಪ್ಪೆಗಳಂತಿರುವ ಕೆಲ ಮೂರ್ಖ ಆಂಕರರು; ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ ವಿಜ್ಞಾನ ದೇವಿ ಪುರುಷರು ! -ಎಂದಿನಂತೆ ವಟಗುಡುವುದೇ ಅವರ ಕೆಲಸವೆಂದು ನಾನೂ ಸುಮ್ಮನಿರಲಾರದೆ ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ ಒಂದೆರಡು ಕವಿತೆಯ ತುಣುಕುಗಳನ್ನು ಹಾಳೆಯ ಮೇಲೆ ಹರಿಸುತ್ತೇನೆ ನನಗೆ ಗೊತ್ತಿದೆ ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ; ಈ ಶತಮಾನದ ಪೆಂಡಮಿಕ್ ರೋಗ ! ‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು ಆದರೆ , ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು […]
ಕಾವ್ಯಯಾನ
ವಿಧಾಯ ಹೇಳುತ್ತಿದ್ದೇವೆ ದೇವವರ್ಮ ಮಾಕೊಂಡ(ದೇವು) ಮಧುರ ಸ್ಪರ್ಷವಿತ್ತ ನೆನಪುಗಳು ಮುಳುಗುತ್ತಿವೆ ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ ದಿನ ದಿನ ಕಳೆದ ಘಟನೆಗಳು ಭಯವಿದೆ ನನಗೀಗ ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆ ಸ್ವರ್ಗದ ಹಾದೀಲಿ ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗ ಕಳೆದು ಹೋದ ಜೋತಿರ್ವರ್ಷಗಳ ಮೆಲಕು ಹಾಕುತ್ತ ನಿಂತಿರುವೆ ಲಿಖಿತ ಡೈರಿಗಳು ಶೀರ್ಷಿಕೆ ರಹಿತ ಪದ್ಯಗಳು ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು ಬರಿ ಅರೆಬರೆ […]
ಕಾವ್ಯಯಾನ
ಆಸ್ಪತ್ರೆಗಳು ಸಿ ವಾಣಿ ರಾಘವೇಂದ್ರ ರೋಗಗಳ ಭೀತಿ ಮನ-ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ರೋಗಗಳು ನೂರಾರು ರೋಗಿಗಳಲ್ಲಿ ಬಿಡದು ರೋಗಗಳು ಮೊಲೆ ಹಾಲುಗಳನ್ನು ನವಜಾತ ಶಿಶುಗಳನ್ನು ಎಲ್ಲ ಕಲೆತ ಜಗದ ವೈದ್ಯರು ಒಟ್ಟಾಗಿ ಚಿಕಿತ್ಸೆ ನೀಡಿದರೂ ಮತ್ತಷ್ಟು ಅಸಾಧ್ಯ ರೋಗಗಳು ರೋಗ ನಾಶವಾಗುವ ತನಕ ಆಸ್ಪತ್ರೆಗಳು ರೋಗಿ ನಾಶವಾಗುವ ತನಕ ರೋಗಗಳು *****
ಕಾವ್ಯಯಾನ
ನನಸಿನೊಳಗೊಂದು ಕನಸು ಹುಳಿಯಾರ್ ಷಬ್ಬೀರ್ ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಿಜವಾಗಿಯೂ ನಾವು ಬಡವರು ಎಂದು ನೀವು ಕರೆದವರು ದಲಿತರು ಶ್ರಮಿಕರು ಅಲ್ಪ ಸಂಖ್ಯಾತರು ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ ಚದುರಂಗದ ದಾಳಗಳು.. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾನು ಮಾತಾಡುವಾಗ ನಿಮ್ಮ ಕಿವಿ ಗಬ್ಬುನಾತದ ಸಂಡಾಸಿನೊಳಗೆ ಕೂತು ತುಕ್ಕು ಹಿಡಿದ ತಗಡಿನ ಮೇಲಿನ ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು ಸೋತು ಹೋದ ನಿಮ್ಮ ಪಂಚೇಂದ್ರಿಯಗಳ ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ….! ಈ ಅಯೋಮಯದೊಳಗೆ ನಿಮಗೆ ಬಿತ್ತಂತೆ ಒಂದು […]
ಕಥಾಯಾನ
ಸಂತೆಯಲಿ ಕಂಡ ರೇಣುಕೆಯ ಮುಖ ಮಲ್ಲಿಕಾರ್ಜುನ ಕಡಕೋಳ ಸಂತೆಯಲಿ ಕಂಡ ರೇಣುಕೆಯ ಮುಖ ಸಂತೆಯಲಿ ಕಂಡ ರೇಣುಕೆಯ ಮುಖ ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ ಮರೆಯಲಾಗದ ಮೃದುಲ ಮುಖವದು. ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಹೌದು, ಅವಳ ” ಆ ಮುಖ ” ನನ್ನ ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ ಸುಮಧುರ ಸಮಾರಾಧನೆ. ಅವಳನ್ನು ಅದೆಷ್ಟು ಬಾರಿ ಭೆಟ್ಟಿ ಮಾಡಿ, ಅವಳೊಂದಿಗೆ ಮಾತಾಡಿ, ಜೀವಹಗುರ ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ. ಯಡ್ರಾಮಿಯ ಶಾಲಾದಿನಗಳು ಮುಗಿಯುವ ಮುಜೇತಿ… ಅವಳ ನನ್ನ ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ ಕುತೂಹಲ ನನಗೆ. ಆದರೆ ಅವಳು ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. […]
ಪುಸ್ತಕ ವಿಮರ್ಶೆ
ಮೂರು ದಾರಿಗಳು ಯಶವಂತ ಚಿತ್ತಾಲ ಮೂರು ದಾರಿಗಳು ಕಾದಂಬರಿ ಯಶವಂತ ಚಿತ್ತಾಲ ಸಾಹಿತ್ಯ ಭಂಡಾರ ಮೂರು ದಾರಿಗಳು ಯಶವಂತ ಚಿತ್ತಾಲರ ಮೊದಲ ಕಾದಂಬರಿ.ಭೀತಿ, ಪ್ರೀತಿ ಮತ್ತು ಭಂಡಾಯ ( ಆತ್ಮನಾಶ) ; ಇವು ಈ ಕೃತಿಯಲ್ಲಿ ಉದ್ಭವಿಸಿದ ಒಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂರು ವ್ಯಕ್ತಿತ್ವಗಳು ಕಂಡುಕೊಳ್ಳುವ ದಾರಿಗಳು. ಹನೇಹಳ್ಳಿ, ಸಾಣಿಕಟ್ಟಾ, ಗೋಕರ್ಣ ಮತ್ತು ಕುಮಟಾದ ಸುತ್ತಲಿನ ಪರಿಸರದ ಚಿತ್ರಣ, ಭಾಷೆ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ಮೂಡಿಬಂದಿದೆ. ವಿಶ್ವನಾಥ ಶಾನಭಾಗರು ಸಾಣೇಕಟ್ಟೆಯ ಧಕ್ಕೆಯಿಂದ ಕುಮಟೆಯ ಕಡೆಗೆ ಹೋಗುವ ಬೋಟಿಯನ್ನು […]