ಕಲಿಗಾಲದ ಫಲ

ಕಲಿಗಾಲದ ಫಲ

ಕವಿತೆ ಅರುಣ್ ಕೊಪ್ಪ ಅಂದು ಖುಷಿಯನ್ನೆಲ್ಲ ಉಸುರಿಹಿಡಿದು ಮುಟ್ಟಿದ್ದಕ್ಕೂತಂತ್ರಜ್ಞಾನದ ಗುಲಾಬು ಜಾಮೂನಿನ ಚಪಲದಲ್ಲಿದ್ದೆವು.ಸ್ವಾರ್ಥದ ಕುದುರೆಯನ್ನೇ ಏರಿ ಸವಾರಿಕಾಂಚಾಣದ ಕರವಸ್ತ್ರವನ್ನೇ ಬಳಸುತ್ತಿದ್ದೆವು. ಪಾದ ಊರದ ನೆಲ ಮೌನದಲ್ಲಿಕಾಲು ದಾರಿಗಳನ್ನು ನುಂಗಿ ಹಾಕಿತ್ತುಬೀದಿ ದೀಪದಲ್ಲೂ ಕಣ್ಣು ಕಾಣದಮೋಜು ಮಸ್ತಿಯಲಿ ರಾತ್ರಿಯನ್ನುಹಗಲಿನಂತೆ ಅನುಭವಿಸುತ್ತಿದ್ದೆವು.ಸಮಯವನ್ನು ಹರಾಜು ಮಾಡಿಅಹಂ ಅಂಗಡಿಯಲ್ಲಿ ಮಾರಾಟಮಾಡುತ್ತಿದೆವು. ಹುಟ್ಟಿದ ಕಿಮ್ಮತ್ತಿಗೆ ಬೀದಿ ವಾಪಾರಿಗಳಮಂತ ಉರಿಸುತ್ತಿದ್ದೆವು.ನಾವೇ ಅನುಭೋಗಿಗಳುಎಂಬ ಸರ್ವ ಜಂಬದಲಿವೃದ್ಧರನ್ನು ಹೇಸಿಗೆಯಾಗಿ ನೋಡುತ್ತಿದ್ದೆವು. ವ್ಯಾಪಾರ ಜಗತ್ತಿನಲ್ಲಿಸಂಬಂಧಕ್ಕೂ ಮಾಪು ಹಿಡಿದುತಾವೇ ಸರಿ ಎಂದೆನುತಕಾಣುವ ಸೊಗದೊಳಗೆಭೂತಗನ್ನಡಿಯ ಹಿಡಿದುಮೊಸರಲ್ಲಿ ಕಲ್ಲು ಹುಡುಕುತ್ತಿದ್ದೆವು ಆದರೆ ಇಂದು ಎಲ್ಲಕಲಿಗಾಲದ […]

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ

ಅಂಕಣ ‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ‍್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ […]

ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ

ಅಂಕಣ ಬರಹ ಕವಿಯಿತ್ರಿ ನೂತನ ಎಂ.ದೋಶೆಟ್ಟಿ ಉತ್ತರ ಕನ್ನಡದ ಸಿದ್ದಾಪುರದವರು. ಮೃತ್ಯುಂಜಯ ದೋಶೆಟ್ಟಿ , ಪ್ರೇಮಾ ದೋಶೆಟ್ಟಿ ಅವರ ಮಗಳು.‌ಅವರ ಪತಿ ಶಾಮ ಸುಂದರ ಕದಂ ಕಾರವಾರ ಬಳಿಯ ಸದಾಶಿವಗಡದವರು. ಆಕಾಶವಾಣಿಯಲ್ಲಿ ಎಂಜಿನಿಯರ್. ಕವಯಿತ್ರಿ ಕತೆಗಾರ್ತಿ ನೂತನ ದೋಶೆಟ್ಟಿ ಸಮೂಹ ಸಂವಹನ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಹುದ್ದೆ ನಿಭಾಯಿಸುತ್ತಿದ್ದಾರೆ. ಕಾರವಾರ ಆಕಾಶವಾಣಿ, ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಮಾಡಿ, ಇದೀಗ ಹಾಸನ ಜಿಲ್ಲಾ ಆಕಾಶವಾಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ೨೦೦೯ರಲ್ಲಿ ಕಾಲವೆಂಬ ಮಹಾಮನೆ ಕಾವ್ಯ […]

ಜ್ಞಾನೋದಯದ ನಿದ್ದೆ

ಕವಿತೆ ವಸುಂಧರಾ ಕದಲೂರು ನಡುರಾತ್ರಿಗಳಲಿ ಒಮ್ಮೊಮ್ಮೆ ನಿದ್ದೆಸುಳಿಯದೇ ನರಳಿ,ನರಳಾಡಿಹೊರಳಾಡುವಾಗ ಮನಕೆ ಜಗದಚಿಂತೆಯೂ ಹಿಡಿದು ಚಿಂತನೆಗೆಶುರುವಾಗುತ್ತದೆ. ಇಂತಿಪ್ಪ ಅಶಾಂತಿಗೆ ಶಾಂತಿಯಹುಡುಕುವ ಮನಸ್ಸಾಗುತ್ತದೆ. ಜ್ಞಾನೋದಯಕ್ಕೆ ಮನೆಬಿಟ್ಟುಹೋದವ ನೆನಪಾಗಿ, ನಾನೂ ಎದ್ದುಹೊರಡಿಬಿಡಬೇಕೆಂಬ ತುಡಿತ ಹೆಚ್ಚಾಗಿಪರಿತ್ಯಾಗದ ವೇದಿಕೆ ಹತ್ತಲು ಮನಇನ್ನಿಲ್ಲದಂತೆ ಸಿದ್ಧವಾಗುತ್ತದೆ. ಏಳಬೇಕೆಂದವಳ ನಡು ಬಳಸಿ,ಕೊರಳ ಸುತ್ತಿ ಅಪ್ಪಿರುವ ‘ನಾಲ್ಕುಕೈಗಳ ಬಂಧನ ಬಿಡಿಸಿಕೊಳ್ಳುವುದುಹೇಗೆ?’ ಪ್ರಶ್ನೆ ಧುತ್ತೆಂದು ಕಾಡುತ್ತದೆ. ಲೋಕೋದ್ಧಾರಕ್ಕೆ ಹೊರಡಲಾಗದೆಭವಬಂಧನಕೆ ಸಿಲುಕಿರುವ ನಾನು,ಬದ್ಧತೆಯೇ ಇಲ್ಲದ ಬುದ್ಧಿಗೇಡಿಯೇ?!ಭಯವೂ ಸುಳಿದಾಡುತ್ತದೆ. ‘ಛೇ, ಬಿಡು ಇದನ್ನೆಲ್ಲಾ ಎದ್ದು ನಡೆ’……ಕಳ್ಳ ಮನಸ್ಸಿನ ಚಿತಾವಣೆ. ನಾನೇನೋ ಹೋಗಿಬಿಡುವೆ. ನಾಳೆಇವರೆಲ್ಲಾ ಹುಡುಕಾಡಿದರೆ, […]

ತುಟಿಗಳ ಮೇಲೆ ನಿನ್ನಿಯದೇ ಹೆಸರು

ಕವಿತೆ ನಾಗರಾಜ ಹರಪನಹಳ್ಳಿ ತಲೆಗೂದಲ ಮುದ್ದಿಸಬೇಕುಅವುಗಳ ಒಂದೊಂದೇ ಎಣೆಸುತಪ್ರೀತಿಸಬೇಕು ನಿನಗೆ ಊಹಿಸಲು ಅಸಾಧ್ಯಉಸಿರಲ್ಲಿ ಹೆಸರು ಬೆರೆಸುವಕಲೆ ನನಗೆ ಮಾತ್ರ ಗೊತ್ತು ಪ್ರೀತಿ ಅಂದರೆ ಹುಡುಗಾಟವಲ್ಲಅದು ಕಣ್ಬೆಳಕುಹಾಗಾಗಿಪ್ರತಿನೋಟದಲ್ಲಿ ನನ್ನ ಬಿಂಬ ದೂರ ತಳ್ಳಲಾಗದು ಒಲವುಅದು ಹಠಮಾರಿನಿನ್ನ ತುಟಿಗಳ ಮೇಲೆನಿನ್ನಿನಿಯದೇ ಹೆಸರು ಯಾರು ಏನೇ ಹೇಳಲಿಎಷ್ಟೇ ಹತ್ತಿರದವರಿರಲಿಪ್ರೇಮದ ಮುಂದೆಅವು ನಿಲ್ಲಲಾರವು ಹೃದಯದ ಬಡಿತವೇ ನಿಲ್ಲುವಕ್ಷಣ ಬಂದರೂಕೊನೆಯಲ್ಲಿ ನೆನಪಾಗುವುದುಇನಿಯ ದನಿಯೇ ಒಲವು ಮಳೆಅದನ್ನೆಂದೂ ಭೂಮಿ ನಿರಾಕರಿಸದುನದಿಯ ಎಷ್ಟೇ ಹಿಡಿದಿಟ್ಟರು ಅದರ ಚಲನೆ ಕಡಲಕಡೆಗೆ ನೀ ನಿನ್ನ ಮನಸ ಜೊತೆ ಮಾತಾಡುವುದೇ ಇನಿಯಎದುರಿಟ್ಟುಅದೇ […]

ಬೆಕ್ಕು -ನಾಯಿಗಳ ಹುಲ್ಲಿನೌಷಧ!

ಅನುಭವ ಕಥನ(ಮಕ್ಕಳಿಗಾಗಿ) ವಿಜಯಶ್ರೀ ಹಾಲಾಡಿ   ‘ಮುದೂರಿ’ ಒಂದು ಸಣ್ಣ ಹಳ್ಳಿ.   ಅಲ್ಲಿ ವಿಜಿಯ ಮನೆ . ಅವರ ಊರಿನಲ್ಲಿ ಫರ್ಲಾಂಗು ದೂರಕ್ಕೊಂದೊಂದು ಮನೆಗಳು. ಆ ಊರು ಕಾಡು-ಗುಡ್ಡಗಳ ನಡುವೆ ಅವಿತುಕೊಂಡಿತ್ತು. ಜನರ ಸಂಖ್ಯೆಯೂ ಕಡಿಮೆ. ಅಲ್ಲಿಂದ ವಾಹನ ಓಡಾಡುವ ರಸ್ತೆ ತಲುಪಲು ಎರಡೂವರೆ ಮೈಲು ನಡೆದುಹೋಗಬೇಕಿತ್ತು. ಹಾಗೆ ಹೋದಾಗ ಸಿಗುವುದೇ ಹಾಲಾಡಿ. ಅಲ್ಲಿ ಕೆಲವು ಅಂಗಡಿಗಳು, ಪೋಸ್ಟ್ ಆಫೀಸ್, ಶಾಲೆ, ಹಾಲಿನ ಡೈರಿ, ಬ್ಯಾಂಕು ಇದ್ದವು . ಬಸ್ಸುಗಳು ಓಡಾಡುತ್ತಿದ್ದವು. ಡಾಕ್ಟರರನ್ನು ಕಾಣಬೇಕಾದರೆ ಅಲ್ಲಿಂದ ಬಸ್ಸು […]

ಸಹನೆಯ ತೇರು

ಕಥೆ ಸುಧಾ ಹಡಿನಬಾಳ.            ರೀ, ನಿನ್ನೆ  ಅವರೆಲ್ಲಾ ನಗ್ ನಗ್ತಾ ಮಾತಾಡ್ತಿರ್ವಾಗ ನೀವ್ಯಾಕ್ರಿ ಮಂಕಾಗಿ ಕುತಿದ್ರಿ? ನೀವೂ ನಗ್ತಾ ಮಾತಾಡ್ತಾ ಇದ್ರೆ ನಂಗೆ ಎಷ್ಟು ಖುಷಿ ಆಗ್ತಿತ್ತು ಗೊತ್ತಾ’ ಎನ್ನುತ್ತ ನಿನ್ನೆಯ ಅಮ್ಮನ ಮನೆ ಸಡಗರದ ಗುಂಗಲ್ಲೇ ಗಂಡನ ಕೊರಳಿಗೆ ಜೋತು ಬಿದ್ದು ಲಲ್ಲೆಗರೆದಳು ಸ್ವಾತಿ. ಅಷ್ಟೇ ನಿರ್ದಾಕ್ಷಿಣ್ಯವಾಗಿ ಅವಳ ಕೈಗಳನ್ನು ತಳ್ಳಿ ‘ ಒಹೋ, ನಿನ್ ತರನೆ ಕಂಡವರ ಜೊತೆ ಎಲ್ಲಾ ಹಲ್ ಕಿರ್ದು ನಗ್ಬೇಕಿತ್ತಾ? ನಿಂಗೆ ನೀನು ಮದುವೆ ಆಗಿರೋಳು ಅನ್ನೋದೆ ಮರ್ತು […]

ಪಾಕ

ಕವಿತೆ ಡಾ . ಅಜಿತ್ ಹರೀಶಿ. ಎದೆಯೊಳಗೆ ಸಿಕ್ಕಿಬಿದ್ದಪದಗಳು ಸೀಳಿಹೊರಬಂದು ಘೀಳಿಡುತ್ತವೆನಮ್ಮನು ಕಟ್ಟಿಹಾಕಲುನಿನಗಾವ ಹಕ್ಕಿದೆಯೆಂದು…? ಈ ಮುರಿಯದ ಮೌನಆ ಅಕಾಲ ಪ್ರಸವಈ ಮುದವಿಲ್ಲದ ಮನಆ ಕಳೆಗೆಟ್ಟ ಮಳೆಹದ ಬಿದ್ದು ಮೊಳೆಯಲಿ ಅರ್ಧ ಗೀಚಿದ ಕವಿತೆಅಂತ್ಯ ಕಾಣದ ಕತೆಮಧ್ಯೆ ನಿಂತ ಬದುಕಿನಂತೆಮುಂದೇನೆಂಬ ಚಿಂತೆ ಅವಸರಕ್ಕೆ ಬಿದ್ದುಮುಗಿಸುವ ದಾರಿಅದಿಲ್ಲವೋ ಸದ್ದಿಲ್ಲದೆಮಾಡಬೇಕು ತಯಾರಿ…!********************

ವೃದ್ಧಾಶ್ರಮಗಳ ಸುತ್ತ

ಚಿಂತನೆ ಅರುಣ ರಾವ್ ನನ್ನ  ಶಾಲಾ ದಿನಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳನ್ನು ಕೇಳಿದ್ದ ನನಗೆ, ವೃದ್ಧಾಶ್ರಮ ಎಂಬ  ಹೊಸ ಆಶ್ರಮ ನವ  ಪ್ರಪಂಚವೊಂದನ್ನು ಪರಿಚಯಿಸಿತು. ನನ್ನ ಚಿಕ್ಕಂದಿನಲ್ಲಿ ವೃದ್ಧಾಶ್ರಮ ಎನ್ನುವ ಪದವನ್ನು ನಾನೆಂದೂ  ಕೇಳಿಯೇ  ಇರಲಿಲ್ಲ. ಆಗೆಲ್ಲಾ  ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು ಬಹಳ ಆನಂದದಿಂದ ಸಮರಸದಿಂದ ಕೂಡಿ ಬಾಳುವೆ ನಡೆಸುತ್ತಿದ್ದರು. ಇವರೆಲ್ಲರೂ ಇದ್ದಾಗ ಮಾತ್ರ ನಮ್ಮದೊಂದು ಸಂಸಾರವಾಗುತ್ತದೆ ಎಂದು ಎಲ್ಲರೂ ಬಲವಾಗಿ ನಂಬಿದ್ದರು. ವಯಸ್ಸಾದ  ತಂದೆ ತಾಯಿಗಳು ನಮಗೊಂದು […]

ಎದೆಯ ಬೆಂಕಿ

ಕವಿತೆ ವೀಣಾ ನಿರಂಜನ ನನ್ನ ಎದೆಯೊಳಗೆ ಬೆಂಕಿಯಿದೆಈ ಬೆಂಕಿಯೇನನ್ನ ಸುಡದಂತೆ ಎಚ್ಚರದಿಂದದಾಟಬೇಕಿದೆ ಹೊರಗೆನಿರೂಪಾಯಳಾದ ನನಗೆನಿರುಪದ್ರವಿ ಕವಿತೆಯೇಉತ್ತರ ಹೇಳಬೇಕುಅಕ್ಷರಗಳು ಬೇಯದಂತೆಶಬ್ದಗಳು ಬೂದಿಯಾಗದಂತೆಈ ಬೆಂಕಿಯಿಂದಲೇಬೆಳಕ ಹೊತ್ತಿಸ ಬೇಕಿದೆ ಕತ್ತಲು ಮಗ್ಗುಲು ಬದಲಾಯಿಸಿನಾಳೆ –ಬೆಳಗಾಗುವುದು ಮತ್ತೆಸುಡುವ ಸೂರ್ಯ ಹೊತ್ತು ತರುತ್ತಾನೆಬೆಳಕಿನ ಪುಂಜ ಎಂದಿನಂತೆ ಎದೆಯ ಬೆಂಕಿಗೆ ನೆರಳಿಲ್ಲ ಎಂದಾದರೆಕವಿತೆ –ನೀನೇಕೆ ಮರವಾಗಿ ನಿಲ್ಲ ಬಾರದುಸುಡುವಾಗ್ನಿ ತಣ್ಣಗಾದೀತುನಿನ್ನ ತಂಗಾಳಿಯ ಸ್ಪರ್ಶದಿಂದಗಾಳಿ, ಬೆಳಕು ಮತ್ತು ಕವಿತೆಈ ಬೆಂಕಿಯೆದುರುಎದೆ ಸೆಟೆಸಿ ನಿಲ್ಲುವುದಾದರೆಪುಟಗೊಂಡ ಆತ್ಮ ಪರಿಶುದ್ಧವಾಗುತ್ತದೆಮತ್ತುಸತ್ಯವಾಗಿಯೂ ಅಲ್ಲಿ ಹೊಸತೊಂದುಕವಿತೆ ಬದುಕನ್ನು ಚುಂಬಿಸುತ್ತದೆಬದುಕಿಗಾಗಿ ಹಂಬಲಿಸುತ್ತದೆ.                    **********************

Back To Top