ಕನ್ನಡ ಕಂದ

ಕನ್ನಡ ಕಂದ

ಮಕ್ಕಳ ಪದ್ಯ ಕನ್ನಡ ಕಂದ ಮಲಿಕಜಾನ ಶೇಖ . ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೇನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೇನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ ತುಂಬಿದ ಮಣ್ಣಿನಲಿಎಂದಿಗೂ ನಾನು ಮೆರೆಯುವೇನು.. ಹರಿಹರ ಕೃಷ್ಣರು ಕಟ್ಟಿದಚಾಲೂಕ್ಯ ಕದಂಬರು ಆಳಿದಚೆನ್ನಮ್ಮಾ ಓಬವ್ವಾ ಹೋರಾಡಿದವೀರರು ಧೀರರು ಮೆರೆದಿಹಶೌರ್ಯದ ಇತಿಹಾಸ ಕೇಳುವೇನು.. ಶರಣರು ದಾಸರು ಬದುಕಿದಸೂಫಿ ಸಂತರು ಬೆಳಗಿದಸತ್ಯ ಶಾಂತಿ ನಿತ್ಯ ನೀತಿಐಕ್ಯ ಮಂತ್ರ ಸಾರಿದಪಾವನ ನೆಲಕ್ಕೆ ನಮಿಸುವೇನು. ರನ್ನ ಪಂಪರ ಅಪಾರ ಪಾಂಡಿತ್ಯಕುವೆಂಪು ಬೇಂದ್ರೆಯ ಅಗಾಧ […]

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦

ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – ೨೦೨೦ ಬಿದಲೋಟಿ ರಂಗನಾಥ್ ಮತ್ತು ಡಾ. ಶೋಭಾ ನಾಯಕ್ ಗೆ ೨೦೨೦ ರ ಸಾಲಿನ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿತ್ತು. ಈ ಸಲ ಒಟ್ಟು ೫೬ ಹಸ್ತಪ್ರತಿಗಳು ಬಂದಿದ್ದವು. ಕೊನೆಯ ಹಂತದಲ್ಲಿ ಅಂಕಗಳು ಸಮ ಬಂದ ಕಾರಣ ಇಬ್ಬರು ಕವಿಗಳ ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡ ಮೂಲದ ಶೋಭಾ ನಾಯಕ್ ರ ‘ಶಯ್ಯಾಗೃಹದ ಸುದ್ದಿಗಳು’ ಮತ್ತು ತುಮಕೂರು […]

ನಾ..ದಶಮುಖ

ಕವಿತೆ ನಾ..ದಶಮುಖ ಅಬ್ಳಿ,ಹೆಗಡೆ   ನನ್ನ ಮುಖ ನಾನೇ             ಇನ್ನೂ ಓದದ             ಓದಬೇಕೆಂದರೂ             ಓದಲಾಗದ,ಹಳೆಯ             ಪುಟ್ಟ ಪುಸ್ತಕ             ತೆರೆಯದೇ..             ಎಷ್ಟೋ ಕಾಲದ             ಮೇಲೆ             ಹೊತ್ತು ಗೊತ್ತಿಲ್ಲದೇ             ಯಾರ್ಯಾರೋ             ಬಂದು,ಮಡಚಿದ             ನೆರಿಗೆಗಳ             ನೇರಮಾಡಿ             ಧೂಳ ಝಾಢಿಸಿ             ಅವಸರದಲ್ಲಿ ಓದಿ             ತಮ್ಮಿಷ್ಟದಂತೇ             ತಮಗನಿಸಿದಂತೇ             ವ್ಯಾಖ್ಯಾನಿಸಿ             ನನ್ನೆದುರು ಕನ್ನಡಿ             ಆಗುತ್ತಾರೆ ನನಗೆ.             ನನ್ನ ಒಂದು ಮುಖ             ಹತ್ತಾಗಿ,ಒಂದೊಂದೂ             ಒಂದೊಂದು ತರಹ             ನನಗೇ ದಿಗ್ಭ್ರಮೆ             ನನಗೇ ಅರಿವಿಲ್ಲದ             ನನ್ನ ದಶಮುಖ             ಕಾಣಿಸಿದ ಕನ್ನಡಿಗೆ                     ನಾನೆಂದೂ ಕ್ರತಜ಼. **********************************

ಕನ್ನಡ, ಕನ್ನಡವೇ ಆಗಿರಲಿ

ಗೌರಿ.ಚಂದ್ರಕೇಸರಿ. ಭಾಷೆಯ ಮೇಲೆ ಗಾಢವಾದ ಪ್ರಭಾವ ಬೀರುವ ಸಂಸ್ಕøತಿಯು ಭಾಷೆಯ ಹರಿವನ್ನು ಬದಲಾಯಿಸುತ್ತ ಹೋಗುತ್ತದೆ. ಕೊರಕಲಿನಗುಂಟ ನೀರು ಹರಿಯುವಂತೆ ಸಮಯ ಸಂದರ್ಭಕ್ಕೆ ತಕ್ಕಂತೆ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. 2500 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ನಮ್ಮದು. ಬದಲಾವಣೆ ಆರೋಗ್ಯಕರವಾದದ್ದೇ. ಆದರೆ ಪರಕೀಯ ಶಬ್ದಗಳು ಕನ್ನಡದೊಡನೆ ಮಿಳಿತಗೊಂಡು ಹಾಡಿನ ರೂಪದಲ್ಲಿ ಕಿವಿಗೆ ಬೀಳುತ್ತಿದ್ದರೆ ಕೇಳಲು ಅಸಹನೀಯವೆನಿಸುತ್ತದೆ.      ತಳಹದಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಇಂದಿನ ಮಕ್ಕಳು ಕನ್ನಡದ ಮೇಲೆ ಪ್ರಭುತ್ವವನ್ನು ಸಾಧಿಸಲು ಹೇಗೆ ಸಾಧ್ಯ? ಸರಳಗನ್ನಡದ […]

ಗಝಲ್

ಗಝಲ್ ರತ್ನರಾಯ ಮಲ್ಲ ದೇವರ ಮಂದಿರಗಳಿಗಿಂತ ಮಸಣವೇ ಲೇಸುಆಡಂಬರದ ಪ್ರದರ್ಶನಕ್ಕಿಂತ ಮೌನವೇ ಲೇಸು ಬಜಾರ ಎಂದರೆ ಎಲ್ಲರೂ ಬೆನ್ನು ಹತ್ತುವವರೆಯಾರೂ ಬರದ ಸ್ಮಶಾನದ ಪ್ರಯಾಣವೇ ಲೇಸು ಬಂಧಗಳು ನರಳುತಿವೆ ಬಾಡಿದ ಬಾಂಧವ್ಯದಲ್ಲಿತಬ್ಬಲಿಯಲ್ಲಿ ಅರಳಿದ ಈ ಒಂಟಿತನವೇ ಲೇಸು ಶ್ರೀಮಂತಿಕೆಯು ಆಟವಾಡುತಿದೆ ಜಗದೊಳಗೆಜೊತೆ ಜೊತೆಗೆ ಹೆಜ್ಜೆ ಹಾಕುವ ಬಡತನವೇ ಲೇಸು ಅನುದಿನವೂ ಸಾಯಿಸುತಿವೆ ಮೌಲ್ಯಗಳು ನನ್ನ‘ಮಲ್ಲಿ’ಯ ಹೃದಯದಲ್ಲಿರುವ ಮರಣವೇ ಲೇಸು **********************

ಅಂಕಣ ಬರಹ ಬಾಗದ ಬದುಕು ನಾನು ಶಿವಮೊಗ್ಗೆಯಲ್ಲಿದ್ದ ದಿನಗಳಲ್ಲಿ ಹಲವು ತಲೆಮಾರಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಹಾಗೂ ಸಮಾಜವಾದಿಗಳು ಬೀದಿಯಲ್ಲಿ ಓಡಾಡಿಕೊಂಡಿದ್ದನ್ನು ಕಾಣುತ್ತಿದ್ದೆ. ಹೆಚ್ಚಿನವರು ಗಾಂಧಿ ಇಲ್ಲವೇ ಲೋಹಿಯಾರ ವ್ಯಕ್ತಿತ್ವ ಅಥವಾ ಚಿಂತನೆಯ ಭಾವಕ್ಕೆ ಸಿಕ್ಕು ಬದುಕಿನ ಹಾದಿ ರೂಪಿಸಿಕೊಂಡವರು. ಸಮಕಾಲೀನ ಚುನಾವಣಾ ರಾಜಕಾರಣದಲ್ಲಿ ಇವರ ಯಾರ ಹೆಸರೂ ಚಾಲ್ತಿಯಲ್ಲಿರುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳೂ ಇವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವರು ಮಲೆನಾಡಿನ ಮಳೆಗಾಲದಲ್ಲಿ ಮೋಡಗಳ ಮರೆಯಿಂದ ತಟ್ಟನೆ ಕಾಣಿಸಿಕೊಂಡು ಬೆಳಗುವ ಸೂರ್ಯನಂತೆ ಸನ್ನಿವೇಶ ಬಂದಾಗ ಪ್ರತ್ಯಕ್ಷವಾಗುತ್ತಿದ್ದರು. […]

ಸಾವಿನಂಗಡಿಯಲ್ಲಿ

ಕವಿತೆ ಸಾವಿನಂಗಡಿಯಲ್ಲಿ ಅಬ್ಳಿ,ಹೆಗಡೆ ಈಗ..ಇದೊಂದು ಭ್ರಹತ್ ಅಂಗಡಿ   ಜಗದ ಮೂಲೆ,ಮೂಲೆಗೂ   ಕೋಟಿ,ಕೋಟಿ ಶಾಖೆಗಳ ತೆರೆದು   ಕುಳಿತಿದ್ದಾನೆ ಯಜಮಾನ ನಗುತ್ತಾ   ಎಲ್ಲ ಶಾಖೆಗಳಲ್ಲೂ ಭರ್ಜರಿ ವ್ಯಾಪಾರ   ಒಂದು ಕೊಂಡರೆ ಒಂದು ಫ್ರೀ,   ಗಿರಾಕಿಗಳಿಗೆ ಆಮಿಷ,ನೂಕು ನುಗ್ಗಲು   ಮೇಲಾಟ,ತಳ್ಳಾಟ ಕೊಂಡುಕೊಳ್ಳಲು   ಅಂತರಕಾಯ್ದುಕೊಳ್ಳುವವರ,ಇಲ್ಲದವರ   ಮುಖವಿದ್ದೂ ಮುಖವಾಡ ದರಿಸಿದವರ   ದರಿಸಿಲ್ಲದವರ,ಸಂದೋಹ ಎಲ್ಲೆಡೆಗೂ   ಹೊಸ,ಹೊಸ ಆವಿಷ್ಕಾರ   ಶೋ ಕೇಸುಗಳಲ್ಲಿ ಗ್ಯಾರಂಟಿ ಕಾರ್ಡುಗಳ   ಸಹಿತ.ಹಳೇ ಸಾಮಾನುಗಳೂ ಇವೆ   ಎಲ್ಲೋ ಅಪರೂಪಕ್ಕೊಮ್ಮೆ ಬೇಡಿಕೆ   ಅದಕ್ಕೆಂದೇ ಇಟ್ಟ ಕಪಾಟುಗಳಲ್ಲಿ   ಅಂಗಡಿಯ ಹಿಂದೆ,ಹಿಂದೆ ಕಾಣುವಂತೆ   ಅಪರೂಪಕ್ಕೆ ಕೊಳ್ಳಲು ಬಂದಾಗಲೂ   ಚೌಕಾಸಿ […]

ಮತ್ಲಾ ಗಜಲ್

ಮತ್ಲಾ ಗಜಲ್ ತೇಜಾವತಿ ಹೆಚ್.ಡಿ. ನೀನಿರದ ವಿರಾಮವು ಬೇಡವಾಗಿವೆ ಈಗಮಾಯಾ ಮನಸ್ಸು ಖಿನ್ನತೆಗೆ ಜಾರುತಿವೆ ಈಗ ನೀ ನೋಡದ ಅಲಂಕಾರವು ಮಂಕಾಗಿವೆ ಈಗತೊಟ್ಟ ಆಭರಣಗಳೇ ಭಾರವಾಗಿವೆ ಈಗ ನಿನ್ನಗಲಿದ ಇರುಳೆಲ್ಲವೂ ಘೋರವಾಗಿವೆ ಈಗದೇವಾ ಕಂಡ ಕನಸೆಲ್ಲವೂ ದುಃಸ್ವಪ್ನವಾಗಿವೆ ಈಗ ನೀನಾಡದ ಮಾತುಗಳು ಕರಗಿ ಹೋಗಿವೆ ಈಗಅಳಿದುಳಿದ ಭಾವನೆಗಳು ಹೆಪ್ಪುಗಟ್ಟಿವೆ ಈಗ ನೀನಿಲ್ಲದ ನಂದನವನ ಬರಡಾಗಿವೆ ಈಗಬೀಸುವ ತಂಗಾಳಿಯೂ ಬತ್ತಿಹೋಗಿವೆ ಈಗ ‘ತೇಜ’ ನೀ ಬಾರದ ದಿನಗಳು ಸ್ತಬ್ಧವಾಗಿವೆ ಈಗಹಗಲು ರಾತ್ರಿಯ ವ್ಯತ್ಯಾಸವೇ ತಿಳಿಯದಾಗಿವೆ ಈಗ *

ಭೂತಾಯಿಗೆ ನಮನ

ಲೇಖನ ಭೂತಾಯಿಗೆ ನಮನ ರಾಘವೇಂದ್ರ ಈ ಹೊರಬೈಲು ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ  ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು […]

ಗಝಲ್

ಗಝಲ್ ಸುಜಾತಾ ರವೀಶ್ ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ  ಬರುವೆಯಾ ಸಂಗಾತಿ ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ  ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ?  ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ?  ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ    ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ  ಕುಸುರಿ ಕೆಲಸ ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ  ಹಾರುವೆಯಾ ಸಂಗಾತಿ  ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ  *****************************

Back To Top