ಕಾವ್ಯಯಾನ

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಲೋಕದ ಏಕಾಂತದಲಿ ನಿನ್ನ ಹುಡುಕಾಡಿದ್ದೇನೆ ನಾನು ಬಯಸಿ ನೋವನುಂಡರು ಕಾಣಲು ತಿರುಗಿದ್ದೇನೆ ನಾನು ನೋವಿನ ಹಾಸಿಗೆಯಲಿ ಮಲಗಿ ದಿನ ಕಳೆದಿದ್ದೇನೆ ಮೌನವ ಅಪ್ಪಿಕೊಂಡು ಕಾಲು ಹಾದಿ ನಡೆದಿದ್ದೇನೆ ನಾನು ಬದುಕು ಹತಾಶೆಯಲಿ ಮಿಂದಿರುವುದು ನೋಡು ಇರುವ ತನಕ ಜೀವಗಳೆರಡು ಹೊಂದಿ ನಡೆಯಲೆಂದಿದ್ದೇನೆ ನಾನು ಬಯಸಿದ ಗಳಿಗೆಯಿಂದ ಬರಿ ಚಿಂತೆ ಮೌನಗಳೆ ಆವರಿಸಿವೆ ಹೊರಗಿನ ಚಂದಕಿಂತ ಒಳಗಿರುವ ಅಂದವ ಬಯಸಿದ್ದೇನೆ ನಾನು ನಗುವ ಚೆಲ್ಲಿ ಬಾ ಖಾಲಿಯಾದ ನನ್ನೆದೆಯ ತುಂಬಿಸು ಈ ಮರುಳ ಚೆಂದಾಗಿ […]

ಅನುವಾದ ಸಂಗಾತಿ

ಬದುಕುವುದು ಹೇಗೆ? ಕನ್ನಡ:ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮಲಯಾಳಂ: ಚೇತನಾ ಕುಂಬ್ಳೆ ಎಲ್ಲವನು ಬಿಚ್ಚಿ ಬತ್ತಲೆಯಾಗಿಸುವ ಈ ದುಶ್ಯಾಸನರ ಮಧ್ಯೆ ಬದುಕುವುದು ಹೇಗೆ ? ಕಾಮನೆಗಳ ಬದಿಗೊತ್ತಿ ಲಿಂಗೈಕ್ಯಳಾದ ಅಕ್ಕನ ಹೆಸರು ಹೇಳಿ ನಾಪತ್ತೆಯಾಗುವ ತಂಗಿಯರ ಬಗ್ಗೆ ಬರೆಯುವುದು ಹೇಗೆ ? ಮಾತು ಬದಲಾಯಿಸುವ ನಾರದರ ಸಂತಾನ ಮೃಗವಾಗಿ ಸುಳಿಯುವ ಮಾರೀಚನ ಬಳಗ ಪ್ರತ್ಯಕ್ಷವಾದಾಗ ನಿಜರೂಪ ಅರಿಯುವುದು ಹೇಗೆ ? ಶಾಪಗ್ರಸ್ತ ಅಹಲ್ಯೆ ಶೋಕತಪ್ತ ಊರ್ಮಿಳೆ ದಿನವೂ ಅಳುವಾಗ ದೂರ ಸರಿಯುವುದು ಹೇಗೆ ? ಕಲ್ಲುದೇವರಿಗೆ ಮಂಗಳಾರತಿ ಮಾಡಿ […]

ಪ್ರಸ್ತುತ

ಸಮಯ ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ? ಜಯಶ್ರೀ.ಜೆ.ಅಬ್ಬಿಗೇರಿ. ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು. ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’ ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದನ್ನು ನಂಬುತ್ತೇವೆ. ಆದರೂ […]

ಕಾವ್ಯಯಾನ

ಸಮ್ಮಾನದ ಬೀಡಿಗೆ ಶಾಲಿನಿ ಆರ್. ಪ್ರಕೃತಿಯ ಭಾವೊತ್ಕರ್ಷ ದಿನದಿಂದ ದಿನಕೆ ಎಲ್ಲೆಲ್ಲೂ ನಗೆಯ ರಂಗವಲ್ಲಿ ನದಿ ಕಾನನಗಳ ಅಂಗಳದ ತುಂಬ, ಹೂ ಹಾಸಿದೆ ಡಾಂಬರಿನ ಹಾದಿಯುದ್ದಕೂ ಮರುಳಾಗಿ ಒಂದೇ ಹಠ ತುಸು ಹೆಚ್ಚೆ ಹೊತ್ತು ನಿಲುವೆ ವಾಹನಗಳ ಸುಳಿವಿರದ ಹಾದಿ ತುಂಬ, ಕಂಡು ಕಾಣದ ಹಕ್ಕಿ ಪಕ್ಕಿ ಮರಳಿ ಕಲರವ ಮೂಲೆ ಮೂಲೆಯ ಕಾಂಕ್ರೀಟಿನ ಕಾಡಿನಲ್ಲೆಲ್ಲಾ, ಜಂಗಮವಾಣಿಯಲಿ ಸೆರೆ ಹಿಡಿದರು ದಣಿವಾರದ ಪ್ರಕೃತಿಯ ಹಾವಾಭಾವ ಮತ್ತದರ ಕಾಪಿಡುವ ಧಾವ, ಮನುಜನ ಸಹಜ ಭಾವ! ನಿಧಾನಿಸಿದೆ ಪ್ರಕೃತಿ ಹೂ […]

ಅವ್ವನ ನೆನಪಲಿ

ಅವ್ವನ ನೆನಪಲಿ… ಮಲ್ಲಿಕಾರ್ಜುನ ಕಡಕೋಳ ಸಗರನಾಡು – ಮಸಬಿನ  ಪ್ರಾಂತ್ಯದ ಸುರಪುರ ಬಳಿಯ ” ಜಾಲಿಬೆಂಚಿ ”  ಅವ್ವನ  ತವರೂರು. ಏಳೂರು  ಗೌಡಕಿಯ ವತನದಾರ ಮನೆತನದಾಕೆ.  ಕಡಲೇಬೇಳೆ ಬಣ್ಣದ ತುಂಬು ಚೆಲುವೆಯಾದ  ಆಕೆಯನ್ನು ನೋಡಿದ  ಅಪ್ಪನಿಗೆ, ಮದುವೆಯಾಗುವುದಾದರೇ.. ಈ ಸಾಹೇಬಗೌಡರ ಮಗಳು ನಿಂಗಮ್ಮ ಗೌಡತಿಯನ್ನೇ ಆಗಬೇಕೆಂಬ ಸಂಕಲ್ಪ  ಮಾಡಿದ. ಅಪ್ಪನಿಗೆ ಆಗ ಉಂಡುಡಲು  ಯಥೇಚ್ಛವಾಗಿದ್ದುದು ಕಡುಬಡತನ ಮಾತ್ರ. ನಮ್ಮೂರ ಸಾಹುಕಾರರ ಹೊಲ – ಮನೆಯಲ್ಲಿ ಜೀತಕ್ಕಿದ್ದ. ಸಾಹುಕಾರರಿಗೆ  ನೂರಾರು ಎಕರೆ ಜಮೀನು. ಅದೆಲ್ಲ  ಜಮೀನು ತನ್ನದೆಂದು ” ಫೋಸು ” ಕೊಟ್ಟು ಸುಳ್ಳುಹೇಳಿ ಅವ್ವನನ್ನು ಲಪಟಾಯಿಸಿದನಂತೆ. ೧೯೪೮ ರ ರಜಾಕಾರರ ಸಪಾಟಿಯಷ್ಟೊತ್ತಿಗೆ  ಅವರ ಲಗ್ನವಾಗಿ ಅಜಮಾಸು ಎರಡು  ಪಟ್ಟಗಳೇ ಅಂದರೆ ಇಪ್ಪತ್ನಾಲ್ಕು  ವರುಷಗಳು ಕಳೆದಿದ್ದವಂತೆ.  ಒರಟು ಕಗ್ಗಲ್ಲಿನಂತಹ  ಅಪ್ಪನನ್ನು  ತಿದ್ದಿ,ತೀಡಿ  ಮೂರ್ತಿ  ಮಾಡಿದ  ಕೀರ್ತಿ […]

ಕಾವ್ಯಯಾನ

ಗಝಲ್ ಉಮೇಶ ಮುನವಳ್ಳಿ ಬೇಡಿದಾಗ ನೀ ಕೊಡದೇ ಹೋದರೆ, ಹುಡುಕುವಾಗ ನಿನಗೆ ಸಿಗದೇ ಇರಬಹುದು. ನೀಡಿದಾಗ ನೀ ಸ್ವೀಕರಿಸದೇ ಹೋದರೆ, ಬೇಡುವಾಗ ನಿನಗೆ ಸಿಗದೇ ಇರಬಹುದು. ಹಲುಬಿದಾಗ ನೀ ಹೊರಳಿ ನೋಡದಿರೆ, ಮರಳಿ ಬಂದಾಗ ನಿನಗೆ ಸಿಗದೇ ಇರಬಹುದು. ಕೊಡಲು ಬಂದಾಗ ನೀ ಕೊಸರಿಕೊಂಡರೆ, ಕನವರಿಸಿದಾಗ ನಿನಗೆ ಸಿಗದೇ ಇರಬಹುದು. ಬಯಸಿದಾಗ ನೀ ಬಿಗುಮಾನ ಬಿಡದಿರೆ, ಬೇಕೆಂದಾಗ ನಿನಗೆ ಸಿಗದೇ ಇರಬಹುದು. ಸನಿಹ ಬಂದಾಗ ನೀ ಮುನಿಸಿಕೊಂಡರೆ, ಸಹಿಸಿ ಬಂದಾಗ ನಿನಗೆ ಸಿಗದೇ ಇರಬಹುದು. ರೀತಿ ಬಿಟ್ಟಾಗ […]

ಕಾವ್ಯಯಾನ

ಅಸ್ತ್ರಗಳಿವೆ ಲಕ್ಷ್ಮೀ ದೊಡಮನಿ ಕಾಳಕೂಟ ಮೀರಿಸಬಲ್ಲ ವಿಷಗಳಿವೆ ನಮ್ಮೊಳಗೆ ಅಮೃತವ ಹಾಳುಮಾಡಬಲ್ಲ ಕುತಂತ್ರಿಗಳಿವೆ ನಮ್ಮೊಳಗೆ ಕಟುವಾಣಿ,ಅಶ್ಲೀಲ ವಿಚಾರ,ಸಂಶಯಗಳ ಮುಖೇನ ಅಂದದ ತನುವ ನಶಿಸಬಲ್ಲ ರಸಾಯನಗಳಿವೆ ನಮ್ಮೊಳಗೆ ಸಂಬಂಧದ ಲೆಕ್ಕವಿಲ್ಲ, ಸಮಯ-ಜಾಗದ ಪರಿವೆಯಿಲ್ಲ ಸ್ತ್ರೀಯರ ಆಸಿಸಬಲ್ಲ ಕ್ರಿಮಿಗಳಿವೆ ನಮ್ಮೊಳಗೆ ಪ್ರಗತಿಯ ರಸ್ತೆಯಿಂದ. ಧುಮ್ಮಿಕ್ಕುವವರ ಎಳೆಯುವ ಧ್ಯೇಯದಿಂದ ದೂರಾಗಿಸಬಲ್ಲ ಭಾವನೆಗಳಿವೆ ನಮ್ಮೊಳಗೆ ಅವನನ್ನುಹೊರುವ, ಅರ್ಧಾಂಗಿಯಾಗಬಲ್ಲ ಅವಳ ಅಸಮತೆಯಿಂದ ಕಾಣಬಲ್ಲ ನೋಟಗಳಿವೆ ನಮ್ಮೊಳಗೆ ಬೆರಳಿಂದ ಬ್ರಹ್ಮಾಂಡವರಿವ ಶಕ್ತಿ ಹುಟ್ಟಿದೆ ‘ಚೆಲುವೆ’ ಪುಸ್ತಕ ಸಂಸ್ಕೃತಿ ಅಳಿಸಬಲ್ಲ ಅಸ್ತ್ರಗಳಿವೆ ನಮ್ಮೊಳಗೆ *******

ಪುಸ್ತಕ ಸಂಗಾತಿ

ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ಲೇಖನಗಳ ಸಂಕಲನ ಎನ್. ಆರ್ ರೂಪಶ್ರೀ ಬೆನಕ ಬುಕ್ಸ್ ಬ್ಯಾಂಕ್ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ರೂಪಶ್ರೀ ಅವರ ಜ್ಞಾನ ಜ್ಯೋತಿ – ಆಧ್ಯಾತ್ಮಿಕ ಲೇಖನಗಳ ಸಂಕಲನ, ಮೌನ ಕಾಲ ಮತ್ತು ಕನಸ ತುಂಬಿದ ಕವಿತೆ ಎಂಬ ಕವನ ಸಂಕಲನಗಳು, ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು, ಹೆಜ್ಜೆಯಲ್ಲಿ ಗೆಜ್ಜೆನಾದ ಕಥಾಸಂಕಲನಗಳು ಈ ಹಿಂದೆ ಪ್ರಕಟಗೊಂಡಿವೆ. ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ […]

ಕಾವ್ಯಯಾನ

ನಾನೀಗಲೂ ನಿನಗೆ ಆಭಾರಿ. ಶೀಲಾ ಭಂಡಾರ್ಕರ್ ಕನಸೊಂದನ್ನು ಕನಸಾಗಿಯೇ ಉಳಿಸಿದಕ್ಕಾಗಿ, ಮತ್ತೆ ಮತ್ತೆ ಅದೇ ಕನಸಿನ ಗುಂಗಿನಲ್ಲಿ ಇರಿಸಿದಕ್ಕಾಗಿ, ನಿನಗೆ ನಾ ಸದಾ ಆಭಾರಿ. ಕನಸೊಂದಿತ್ತು ನನಗೆ ಸಮುದ್ರ ಕಿನಾರೆಯಲ್ಲಿ, ಮುಸ್ಸಂಜೆಯ ಹೊತ್ತಲ್ಲಿ, ಸೂರ್ಯನೂ ನಾಚಿ ಕೆಂಪಾಗಿ ನಮ್ಮನ್ನೋಡುತ್ತಾ ಮುಳುಗುತ್ತಿರುವಾಗಲೇ ಕೈಯೊಳಗೆ ಕೈ ಹಿಡಿದು ನಮ್ಮೊಳಗೆ ನಾವು ಕಳೆದು ಹೋಗುತ್ತಲೇ ಇರಬೇಕು ದೂರ ಬಲು ದೂರ ನಡೆದು. ಆ ದಿನವಿನ್ನೂ ಬರಲೇ ಇಲ್ಲ. ಸೂರ್ಯನು ನಾಚಿ ನಮ್ಮನ್ನು ನೋಡಲೇ ಇಲ್ಲ. ನಮ್ಮೊಳಗೆ ನಾವು ಕಳೆದು ಹೋಗಲೇ ಇಲ್ಲ. […]

ಕಾವ್ಯಯಾನ

ಕೀಲಿ ಕೈ ತರಲು ಧರಣೇಂದ್ರ ದಡ್ಡಿ ಯಾವ ದೇವರು ಕಣ್ಣು ತೆರೆಯಲೇ ಇಲ್ಲ ಯಾವ ದೇವರು ತಾನೇ ಕಣ್ಣು ತೆರೆದಾನು? ಕಲ್ಲಿನಲಿ ಯಾವುದೋ ಶಿಲ್ಪಿ ಕೆತ್ತಿದ ಮೂರ್ತಿ ಇಲ್ಲಿ ಮನಸ್ಸುಗಳೆಲ್ಲ ಕೋಟೆ ಬಾಗಿಲಿನ ಹಾಗೇಯೆ ಮುಚ್ಚಿಕೊಂಡಿವೆ ಮುಚ್ಚಿದ ಬಾಗಿಲಿಗೆ ಚಿಲಕ ಹಾಕಿದೆ ಜೊತೆಗೆ ದೊಡ್ಡದೊಂದು ಬೀಗವು ಕೂಡ ಹಾಕಿದ ಬೀಗದ ಕೀಲಿ ಕೈ ಸಮುದ್ರಕ್ಕೆ ಎಸೆದಿರುವಾಗ ನಾನೇ ಮೂರ್ಖ! ಈ ಕಲ್ಲು ದೇವರುಗಳೆಲ್ಲ ಕಣ್ಣು ತೆರೆಯುವುವು ಎಂದು ಕಾಯುತ್ತಿದ್ದೇನೆ ಇರಲಿ, ಆದರೂ ಒಂದು ಮಾತು ನೆನಪಿರಲಿ ದೇವರು […]

Back To Top