ಪ್ರಸ್ತುತ
ಲಾಕ್ಡೌನ್ ತೆರವಿನ ಪರಿಣಾಮಗಳು ರೇಶ್ಮಾ ಗುಳೇದಗುಡ್ಡಾಕರ್ ಕೊರೊನಾ ಸಾವಿರದ ಗಡಿದಾಟಿದೆ ಇಂತ ಆತಂಕದ ಸ್ಥಿತಿ ಯಲ್ಲಿ ಸರ್ಕಾರ ಲಾಕ್ಡೌನ್ ಹಂತ ಹಂತವಾಗಿ ತೆರವು ಗೊಳಿಸುವದು ಎಷ್ಟು ಸರಿ? ಸಾರಿಗೆ ಸಂಚಾರ ಆರಂಭವಾದರೆ ಸಾಮಾಜಿಕ ಅಂತರ ಸಾದ್ಯವೆ ನಮ್ಮ ಜನರ ಇಗಿನ ಮನಸ್ಥಿತಿ ಯಲ್ಲಿ ರಾಜ್ಯದ ಲ್ಲಿ ?ಶಾಲೆ ಪುನಾರಂಭ ಎರಡು ಪಾಳಿಯಲ್ಲಿ ಮಾಡಲು ಸಚಿವರು ಹೇಳಿದರು ಇಂತಹ ಸಂಧರ್ಭದಲ್ಲಿಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಶಾಲೆಯಲ್ಲಿ ಎಂಬುದನ್ನು ಪರೀಶೀಲಸ ಬೇಕು . ಶಾಲಾ ಅವರಣದಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವೇ ಎಂಬ ಪ್ರಶ್ನೆ ಉದ್ಬವಾಗುತ್ತದೆ . ಪೂರ್ವ ಪ್ರಾಥಮಿಕ ಮಕ್ಕಳ ಆರೋಗ್ಯ ಭದ್ರತೆಗೆ ಸ್ಯಾನಿಟೈಸರ್ ಬಳಕೆ ನೆಚ್ಚಿಕೊಂಡು ಮಕ್ಕಳನ್ನು ಕಾಪಾಡಲು ಸಾದ್ಯವಿಲ್ಲ ಇಷ್ಟು ದಿನ ಕಷ್ಟ ಪಟ್ಟು ಹಿಡಿದಿಟ್ಟ ಮಕ್ಕಳು ಒಮ್ಮೆಲೆ ಶಾಲೆಗೆ ಪ್ರವೇಶಿಸುತ್ತವೆ.ಅಲ್ಲಿ ಅವರದ್ದೆ ಆದ ಪ್ರಪಂಚ ರಚನೆಯಾಗುತ್ತದೆ ಮಕ್ಕಳು ಆಟ ಆಡುವಾಗ ,ಊಟಮಾಡುವಾಗ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ನಲಿಯುವ ಮಕ್ಕಳು ಬ್ರೇಕ್ ಸಮಯದಲ್ಲಿ ಒಬ್ಬರಿಗೊಬ್ಬರು ಕೈಹೀಡಿದು ಎಳೆದಾಡುತ ಓಡಾಡುವ ಚಿಣ್ಣರನ್ನು ಸಾಮಾನ್ಯ ಸಮಯದಲ್ಲೇ ನಿಗ್ರಹಿಸುವದು ಶಿಕ್ಷಕರಿಗೆ ಸವಾಲಿನ ಸಂಗತಿ . ಇನ್ನು ಇಂತಹ ಕಠಿಣ ಸಂದರ್ಭದಲ್ಲಿ ಪಾಲನೆ ಸಾದ್ಯವೇ ಎಂಬುದನ್ನು ಅವಲೋಕಿಸ ಬೇಕಿದೆ . ಕೊಠಡಿಯಲ್ಲಿ ಅಂತರ ಸಾದ್ಯ ಆದರೆ ಆವರಣದಲ್ಲಿ ಪಾಲಿಸುವದು ಕಷ್ಟ ದ ಸಂಗತಿ . ಇಂತಹ ಸಮಯದಲ್ಲಿ ಶಾಲೆ ಪುನರಾರಂಭವಾದರೆ .ವೈದ್ಯಕೀಯ ಸಿಬ್ಬಂದಿಯ ಅಗತ್ಯ ಮತ್ತುಪ್ರತಿ ತಾಲೂಕಿನಲ್ಲಿ ಮಕ್ಕಳ ತಜ್ಞ ವೈದ್ಯರು ಇದ್ದರಾಯೇ? ಎಂಬುದನ್ನು ಸರ್ಕಾರ ಪರೀಕ್ಷಸ ಬೇಕು .ಇಷ್ಟುದಿನ ನಮ್ಮನ್ನು ಕಾದ ಪೋಲಿಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಪೀಡಿತರಾದರು! .ಹೀಗಿರುವಾಗ ಇನ್ನು ಈ ಸರದಿ ಶಿಕ್ಷಕರು ,ಮಕ್ಕಳು,ಶಾಲಾ ಸಿಬ್ಬಂದಿದಾಗುತ್ತದೆ ಹೊರತು ಶೈಕ್ಷಣಿಕ ಆರಂಭವಾಗುವದಿಲ್ಲ . ಕೊರೊನಾ ದೆಸೆಯಿಂದ ಕೆಲಸ ಕಳೆದುಕೊಂಡು ನಗರಗಳಿಂದ ಆಗಾಧ ಪ್ರಮಾಣದಲ್ಲಿ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ.ಈ ಗ್ರಾಮಗಳಲ್ಲಿಯೂ ಶಾಲೆಗಳಿವೆ,ಹೊಸ ಹೊಸ ದಾಖಲಾತಿಯೂ ಶೈಕ್ಷಣಿಕ ವರ್ಷದಲ್ಲಿ ಅಗುತ್ತದೆ ಮಕ್ಕಳ ಸಂಖ್ಯೆ ಸಾಮಾನ್ಯ ವಾಗಿ ಏರುತ್ತದೆ .ಅಗ ಇಲ್ಲಿನ ಮಕ್ಕಳ, ಶಿಕ್ಷಕರ ಆರೋಗ್ಯ ವು .ನಾವು ಗಮನಿಸಬೇಕು ಈಗ ನಗರಗಳಿಗಿಂತ ಜನರ , ಪ್ರಮಾಣ ಗ್ರಾಮದಲ್ಲಿ ಹೆಚ್ಚಿದೆ .ಇಗ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ,ಅವುಗಳ ಸಾಮರ್ಥ್ಯ, ಅಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲವು ಮುಖ್ಯ ಪಾತ್ರ ವಹಿಸುತ್ತವೆ .ಇಗಿನ ಪರಿಸ್ಥಿತಿ ಯಲ್ಲಿ ತಾಲೂಕು ಆಸ್ಪತ್ರೆಗಳಲ್ಲೆ ವೈದ್ಯ ರು ಲಭ್ಯವಿಲ್ಲ ಕೊರೊನಾ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಮಕ್ಕಳ ಆರೋಗ್ಯ ಕಾಪಾಡುವದು ಹೇಗೆ? > ಇದನ್ನು ಗಂಭಿರವಾಗಿ ಯೋಚಿಸ ಬೇಕಿದೆ. ಲಾಕ್ಡೌನ್ ತೆರವಿಗೆ ಚಿಂತಿಸುವದಕ್ಕಿಂತ .ಕೊರೊನಾ ಬಗ್ಗು ಬಡಿಯಲುಚಿಂತಿಸ ಬೇಕು .ದಿನೆ ದಿನೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು,ಒಂದೆಡೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಮಾರ್ಕೇಟ್, ಅಂಗಡಿ, ಯಲ್ಲಿ ಮುಗಿ ಬಿದ್ದ ಜನ . ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಲಾಕ್ಡೌನ್ ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಅಗತ್ಯವಿದೆ. ತೆರವು ಮತ್ತಷ್ಟು ಕೊರೊನಾ ಅಟ್ಟಹಾಸಕ್ಕೆ ದಾರಿ ಮಾಡಿದಂತಾಗುತ್ತದೆ.ಮುಂದಾಗುವ ಅಪಾಯವನ್ನು ಗಮನದಲ್ಲಿ ಇಡ್ಟುಕೊಂಡು ನಿಯಮ ರೂಪಿಸಿ ಜನರ ಬದುಕನ್ನು ಉಳಿಸ ಬೇಕದ ತುರ್ತು ಅಗತ್ಯವಿದೆ ಇಲ್ಲವಾದಲ್ಲಿ ರಾಜ್ಯದ ಲ್ಲಿ ಮಹಾ ಮರಣ ಮೃದಂಗ ಬಾರಿಸುವದರಲ್ಲಿ ಸಂಶಯವಿಲ್ಲ . ( ಬರಹವನ್ನು ನೀವು ಓದುವ ಸಮಯದಲ್ಲಿ ರಾಜ್ಯದಾದ್ಯಂತೆಕೊರೋನಾ ಸೋಂಕಿತರ ಸಂಖ್ಯೆ ಮಮತ್ತಷ್ಟು ಏರಿಕೆಯಾಗಿದೆ) *****************************
ಕಾವ್ಯಯಾನ
ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು ಊರಿನಲ್ಲಿ ತನ್ನವರು ಸತ್ತರು ಜೊತೆಗೆ ನಡೆದವರು ಇಲ್ಲವಾದರು ಕರಾಳತೆಯ ಕರಳು ಯಾವ ವಯಸ್ಸಿಗೂ ಮಿಡಿಯಲಿಲ್ಲ ಪ್ರಸವ ಬೇಗೆಯು ಸಹಿಸಿದೆವು ಗರ್ಭವನ್ನು ಇಳಿಸಿ ನಡೆದೆವು ಬಿಟ್ಟು ಬಂದ ಗೂಡು ಸೇರಲು ಹಗಲಿರುಳು ನಡೆದೆವು ಸೌಲಭ್ಯವಿದೆಯಂತೆ ಮಾಗಿದ ಮಾವಿನಂತೆ ನಮಗೆ ಗೊಟ್ಟೆಯಾದರು ಸಿಕ್ಕಿದರೆ ಚೀಪಿ ನಾವು ತಿಂದಷ್ಟೇ ಸುಖಿಸುವೆವು ನಡೆನಡೆದು ಸೊರಗಿದ ಚಪ್ಪಲಿಗಳು ನಮ್ಮ ಮೇಲೆ ವಿರಸ ಹಾಡುವೆ ಇನ್ನೂ ಪಾದದ ಚರ್ಮಕ್ಕೆ ಹೊಲಿಗೆ ಹಾಕಿಕೊಂಡು ನಡೆಯುತ್ತಿದ್ದೇವೆ ನೀವು ತಂದ ಹುಳುಗಳು ನಮ್ಮ ಹೆಸರು ಹೇಳುತ್ತಿದೆ ಕೇಳಿ ವಲಸಿಗರಿಂದ ಕಾರ್ಮಿಕರಿಂದ ‘ನಾ ರಾರಾಜಿಸುವೆ ‘ಎನ್ನುತ್ತಿವೆ ನೋಡಿ ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ ನೋಡಿ ಸ್ವಲ್ಪ ಕರುಣೆ ಇದ್ದರೆ ನಿಮಗೆ ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ *********
ಕಾವ್ಯಯಾನ
ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ ಗತಿಯಲ್ಲಿ ತಿರುಗಿ ನೋಡಿ ನಗುತ್ತೇನೆ. ಕಳೆದ ದಿನಗಳನ್ನೊಮ್ಮೆ. ಓಡುವ ಭರದಲ್ಲಿ ನಿಲ್ಲದೆ ಓಡಿದ ಜೀವನವನ್ನೊಮ್ಮೆ ಮಾತನಾಡಿಸಿ… ಜೀವಿಸುವುದು ಹೇಗೆಂದು ತಿಳಿಸಿಕೊಡುತ್ತೇನೆ.. *******
ಗಾಳೇರ್ ಬಾತ್
ಗಾಳೇರ್ ಬಾತ್-02 Housekeeping ನ ಆ ದಿನಗಳು.……. ಈ ಲೇಖನದ ತಲೆಬರಹ ಓದಿದರೆ ನಿಮಗೆ ಆಶ್ಚರ್ಯವಾಗಬಹುದು. ಓದಿದವರಿಗೆ ಅಷ್ಟೇಕೆ ಕೇಳಿದವರಿಗೂ ಕೂಡ ವಿಚಿತ್ರ ಅನಿಸುತ್ತದೆ. ಯಾಕೆಂದರೆ ನನ್ನ life ಯೇ ಒಂತರಾ ವಿಚಿತ್ರ. ನಾನೇನೋ ಅವತ್ತು ಟೂರ್ ಪೀಸ್ ಗಾಗಿ ಬಂದು ಬೆಂಗಳೂರು ಸೇರ್ಕೊಂಡ್ ಬಿಟ್ಟೆ. ಸೇರ್ಕೊಂಡ್ ಅನಂತರದಲ್ಲಿ hotel ನಲ್ಲಿ cleaner ಆಗಿ ಕೆಲಸ ನಿರ್ವಹಿಸಿದೆ. ಆ hotel ಮಾಲೀಕ ಸರಿಯಾಗಿ ಸಂಬಳ ಕೊಡುವುದಿಲ್ಲ ಎಂದು ತಿಳಿದ ಮೇಲೆ ಅನಿವಾರ್ಯವಾಗಿ ದುಡಿದ ಶ್ರಮ ಅಲ್ಲಿಯೇ ಬಿಟ್ಟು house keeping ಕೆಲಸಕ್ಕೆ ಸೇರಿದೆ. ನಿಜ ನನ್ನಂತೆ ಊರು ಬಿಟ್ಟು ಬೆಂಗಳೂರು ಸೇರಿದ ಎಷ್ಟೋ ಯುವಕರು ಮೊದಲು ಕೆಲಸ ಗಿಟ್ಟಿಸಿಕೊಳ್ಳುವುದು ಬಹುತೇಕ ಹೋಟೆಲ್ಗಳಲ್ಲೇ! ಯಾಕೆಂದರೆ ಅಂತವರಿಗೆ ಬೆಂಗಳೂರು ಅಪರಿಚಿತ. ಎಲ್ಲಿ ವಸತಿ, ಎಲ್ಲಿ ನೀರು, ಎಲ್ಲಿ ಗಾಳಿ, ಎಲ್ಲಿ ಬಟ್ಟೆ ? ಇಷ್ಟೆಲ್ಲಾ ಕೊರತೆಗಳ ನಡುವೆ ಊರು ಬಿಟ್ಟು ಬಂದವರಿಗೆ ಬದುಕು ಕಟ್ಟಿಕೊಳ್ಳಲು ಹೋಟೆಲ್ಗಳೇ ಸೂಕ್ತ. ನಮ್ಮಂತ ಅಮಾಯಕರನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವೊಂದು ಹೋಟೆಲ್ ಮಾಲೀಕರು ಸಂಬಳ ಕೊಡದೆ ವಂಚಿಸಿದಾಗ ಅನಿವಾರ್ಯವಾಗಿ ಬೇರೆ ಉದ್ಯೋಗಗಳತ್ತ ಚಿತ್ತಾ ಅರಿಸಬೇಕಾಗುತ್ತದೆ. ಹಾಗೆಯೇ ನಾನು ಕೂಡ. ಅದೊಂದು big company. ಆ company ಹೆಸರು ನಾನು ಹೇಳುವುದಿಲ್ಲ. ಆದರೆ ಅದು ಬೆಂಗಳೂರಿನ ಮಧ್ಯಭಾಗದಲ್ಲಿರುವ ಶಾಂತಿನಗರದ ಅಂಚಿನಲ್ಲಿದೆ. ಅಲ್ಲಿಯೇ ನಾನು housekeeping ದಿನಗಳನ್ನು ಕಳೆದಿದ್ದು. ನನಗೆ ಎಲ್ಲಾ ಹೊಸತು. ಒಂದು ರೀತಿಯ ವಿಚಿತ್ರ ಜನ. ಲೇ ಮಾವ, ಲೇ ಬಾವಾ ಎನ್ನುತ್ತಲೇ ಬೆಳೆದ ನನಗೆ “ಏನು ಗುರು ಏನು ಸಮಾಚಾರ” ಎನ್ನುವ ಮಾತುಗಳು ಅಷ್ಟೇ ವಿಸ್ಮಯವಾಗಿ ಕಾಡುತ್ತಿದ್ದವು. “ಸೂಳೇಮಗ”, “ಬೊಳಿಮಗ” ಎಂದು ಬಯ್ಯೂವ ನಮ್ಮ ಹಳ್ಳಿಯ ಭಾಷೆ ಕಾಮಿಡಿಗೂ ಸೈ ಜಗಳಕ್ಕೂ ಸೈ. ಆದರೇ ಬೆಂಗಳೂರಿನ “ಅವನಮ್ಮನ್” ಎನ್ನುವ ಶಬ್ದ ಜಗಳಕ್ಕೆ ಮಾತ್ರ ಸೀಮಿತವಾಗಿದ್ದು ನನಗೆ ಒಂಥರಾ ಭಾಷೆಯ ಗಮ್ಮತ್ತು ರುಚಿಸುತ್ತಿತ್ತು. ಹಾಗೋ ಹೀಗೋ ಹೇಗೋ ಮಾಡಿ ಕಂಪನಿಯಲ್ಲಿ housekeeping ಕೆಲಸವನ್ನು ಗಿಟ್ಟಿಸಿಕೊಂಡೆ. ನನಗೆ ಆಗ ಪರಿಚಿತರಾಗಿದ್ದು ತುಂಬ ಜನ ಸ್ನೇಹಿತರು. ಆದರೆ ಅವರೆಲ್ಲಾ ಈಗ ಸರಿಯಾಗಿ ನೆನಪಿಲ್ಲ. ಅಲ್ಲಿ ನಡೆದ ಘಟನೆಗಳು ಮಾತ್ರ ನನ್ನ ಮೆದುಳಿನಲ್ಲಿ ಅಳಿಸದೆ print ಆಗಿಬಿಟ್ಟಿವೆ. ಕೆಲಸಕ್ಕೇನೂ ಸೇರಿದೆ. ಕಂಪನಿಯವರು ವಸತಿಯನ್ನು ಕೊಟ್ಟಿದ್ದರು. ಆ ವಸತಿಯ ಬಂಗಲೆ ಹೇಗಿತ್ತೆಂದರೆ? ನನಗೂ ಈಗಲೂ ಕೂಡ ಪದಗಳು ಸಿಗುತ್ತಿಲ್ಲ. ಆ ಬಂಗಲೆಯನ್ನು ವರ್ಣಿಸಲು. ಬೆಂಗಳೂರಿನ ದೊಡ್ಡ ಚರಂಡಿ ಅದು. ಅದೆಷ್ಟೋ ಜನರ ನೋವುಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು, ಅದೆಷ್ಟೋ ಜನರ ಮಲಿನವನ್ನು ತನ್ನ ಕೈಯಲ್ಲಿಟ್ಟುಕೊಂಡು ಹರಿಯುತ್ತಿತ್ತೆಂದರೆ ನನಗೂ ಈಗಲೂ ಕೂಡ ಆಶ್ಚರ್ಯ ವಾಗುತ್ತದೆ. ತುಂಬಾ ಶಾಂತತೆಯ ಸ್ವಭಾವ. ಸಮುದ್ರದಂತೆ ಭೋರ್ಗರೆಯುವುದಿಲ್ಲ. ನದಿಯಂತೆ ಕುಣಿಯುವುದಿಲ್ಲ. ತನ್ನ ಪಾಡಿಗೆ ತಾನು ಹೊರಟರೆ ನೋಡುವ ಜನರೆಲ್ಲ ಮೂಗಿನ ಮೇಲೆ ಕೈ ಇಟ್ಟು ಕೊಳ್ಳಬೇಕು. ಅಂತಹ ನಡಿಗೆ ಆ ಚರಂಡಿಯದ್ದು. ಅದರ ಪಕ್ಕದಲ್ಲಿಯೇ ನಮ್ಮ ಬಂಗಲೆ. ಬಂಗಲೆ ಎಂದರೆ ಸಾಮಾನ್ಯವಾಗಿ ಹತ್ತಾರು ಜನ. ಹೌದು ನಾವು ಕೂಡ ಅಲ್ಲಿ ಹತ್ತಾರು ಹುಡುಗರು ವಾಸಿಸುತ್ತಿದ್ದೆವು. ಆದರೆ ನಮ್ಮ ಬಂಗಲೆ ಗಾತ್ರದಲ್ಲಿ ಅಷ್ಟೊಂದು ವಿಶಾಲ ವಾಗಿರಲಿಲ್ಲ. ಆದರೆ ಅದರ ಮನಸ್ಸು ಮಾತ್ರ ತುಂಬಾ ದೊಡ್ಡದು. ಯಾಕೆಂದರೆ ಅಲ್ಲಿ ವಾಸಿಸುತ್ತಿದ್ದ ನಾವು ಬೇರೆ ಬೇರೆ ರಾಜ್ಯ, ಬೇರೆ ಬೇರೆ ಜಿಲ್ಲೇ, ಬೇರೆ ಬೇರೆ ಜಾತಿ, ಬೇರೆ ಬೇರೆ ಧರ್ಮದ ಹುಡುಗರು ಇದ್ದೆವು. ಯಾರನ್ನೂ ಕೂಡ ಪ್ರತ್ಯೇಕವಾಗಿ ನೋಡುತ್ತಿರಲಿಲ್ಲ. ಎಲ್ಲರನ್ನೂ ಒಂದೇ ಸಮವಾಗಿ ಕಾಣುವ ಆ ಬಂಗಲೆ ನಮಗೆ ಮೂಲಭೂತ ಸೌಕರ್ಯಗಳು ನೀಡಿದ್ದು ತುಂಬಾ ಕಡಿಮೆ. ಅದಕ್ಕಾಗಿಯೇ ನಾವು ಆ ದಿನ ಐಕ್ಯತೆಯಿಂದ ಇದ್ದೇವು ಅನಿಸುತ್ತದೆ. ವಸತಿ ಏನೋ ಕೊಟ್ಟಿದ್ದರು, ಆದರೆ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿತ್ತು. ಬಿಡಿಗಾಸೂ ಇಲ್ಲದ ನನಗೆ ತಿಂಗಳ ಸಂಬಳ ಸಿಗುವರಿಗೂ ಹೇಗೆ ಹೊಟ್ಟೆಯನ್ನು ಸಂಭಾಳಿಸುವುದು ಎನ್ನುವ ಚಿಂತೆಯಲ್ಲಿದ್ದೆ. ನನಗೆ ತುಂಬಾ ಆತ್ಮೀಯರಾದ ಸ್ನೇಹಿತರು ಒಂದೆರಡು ದಿನ ಊಟದ ವ್ಯವಸ್ಥೆಯನ್ನು ನೋಡಿಕೊಂಡರು. ಅವರು ಕೂಡ ಎಷ್ಟು ದಿವಸ ನೋಡಿಕೊಂಡಾರು? ಹೀಗೆ ಆ ಒಂದು ದಿನ ಕೆಲಸ ಮುಗಿಸಿ ಕಂಪನಿಯ main gate ನಲ್ಲಿ ಕುಳಿತಿದ್ದೆ. ನನ್ನ ಸಪ್ಪೆ ಮುಖ ನೋಡಿದ security guard ಒಬ್ಬರು ನನ್ನ ವಿಚಾರಿಸಿದಾಗ ಊಟಕ್ಕೆ ನನ್ನ ಹತ್ತಿರ ಹಣ ಇಲ್ಲ ಎಂದು ತಿಳಿಸಿದೆ. ಆಗ ಅವರು ಕಂಪನಿಗೆ ಬಂದ materialsನ ಖಾಲಿ ಬಾಕ್ಸ್ ಅಲ್ಲಿ ಬಿದ್ದಿರುವುದಾಗಿ ತೋರಿಸಿ, ಅವುಗಳನ್ನು ಗುಜರಿಗೆ ಹಾಕು. ಅದರಲ್ಲಿ ಬಂದಂತ ದುಡ್ಡು 50:50 ಎಂದರು. ನನ್ನ ಪಾಲಿಗೆ ಆ ದಿನದಿಂದ ಅವರು ದೇವರಾಗಿದ್ದರು. ನಾನು ಕೆಲಸ ಮುಗಿದ ನಂತರ ಪ್ರತಿದಿನ ರಟ್ಟಿನ ಬಾಕ್ಸ್ ಅನ್ನು ಗುಜರಿಗೆ ಹಾಕಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಒಂದೊಂದು ಸಾರಿ ರಟ್ಟಿನ ಬಾಕ್ಸ್ ಕಡಿಮೆ ಇದ್ದಾಗ ಐದೋ ಹತ್ತೋ ರೂಪಾಯಿ ಬರುವುದು. ಆಗ ನಾನು ಬಿಸ್ಕೆಟ್ ತಿಂದು ಜೀವನ ನಡೆಸಿದ್ದುಂಟು. ಅದೇನೇ ಇರಲಿ ಬಿಡಿ ಇವತ್ತಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹಾಗೆ ಬದುಕುವರು ಉಂಟು ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನಾನು ಕೂಡ ಒಂದಾನೊಂದು ಕಾಲದಲ್ಲಿ ಆಗೆ ಬದುಕಿದ್ದೆ. ಹಾಗಾಗಿ ನನಗೆ ಇದು ಕೌತುಕ ಎನಿಸುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಹಸಿವಿನ ಕುರಿತು ಸರ್ಕಾರದ ಕಣ್ಣು ತೆರೆಸಬೇಕು ಎಂಬ ಹಂಬಲ ಇವಾಗಲು ಕೂಡ ಇದೆ. ಹೇಗೋ ಮಾಡಿ ಮೊದಲ ತಿಂಗಳು ಮುಗಿಯಿತು. ಕೈಗೆ ಸಂಬಳ ಬಂದಿತ್ತು. ಮುಖದಲ್ಲಿ ಸ್ವಲ್ಪ ಮಂದಹಾಸ. Company ಯಲ್ಲಿಯೇ ಪರಿಚಿತರಾದ ಸ್ನೇಹಿತರ ಜೊತೆ ಸಂತೋಷದಿಂದ ದಿನ ಕಳೆಯುತ್ತಿದ್ದೆ. ನನಗೂ ಆಗಲೂ ಕೂಡ ಕವಿತೆ ಬರೆಯುವ ಹುಚ್ಚಿತ್ತು. ದೊಡ್ಡ ದೊಡ್ಡ ಕವಿತೆ ಅಲ್ಲದಿದ್ದರೂ ಚಿಕ್ಕ ಚಿಕ್ಕ ಸಾಲುಗಳನ್ನು ಬರೆಯುತ್ತಾ ಎಲ್ಲರನ್ನೂ impression ಮಾಡುತ್ತಿದ್ದೆ. ಆಗ companyಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಮತ್ತು ಹುಡುಗರು ನನ್ನ ತುಂಬಾ ಇಷ್ಟ ಪಡುತ್ತಿದ್ದರು. ಆಗ ನನಗೆ ಪರಿಚಿತವಾದ ಕೆಲವೊಂದು ಹುಡುಗಿಯರೆಂದರೆ ಶಾಂತಿ, ಆಶಾ, ಜ್ಯೋತಿ ಇವರೆಲ್ಲಾ ಇನ್ನೂ ಹರೆಯದ ಹುಡುಗಿಯರು. ಕಮಲ, ಸುಜಾತ ಇವರು ಮದುವೆಯಾದ ಆಂಟಿಯರು. ಇವರನ್ನೇ ನಾನು ಯಾಕೆ ಇಲ್ಲಿ ಹೇಳುತ್ತೇನೆ ಎಂದರೆ ಇವರದ್ದೆಲ್ಲಾ ಒಂದೊಂದು ಕಥೆ ಉಂಟು. ನಮ್ಮ ಬಂಗಲೆಯಲ್ಲಿದ್ದಿದ್ದು ನಾವೆಲ್ಲ bachelors. ನಾವ್ಯಾರು ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳಲು ಆ ಬಂಗಲೆಯಲ್ಲಿ ಅಡುಗೆಮನೆಯ ವ್ಯವಸ್ಥೆಯೇ ಇರಲಿಲ್ಲ. ಸರಿಯಾಗಿ bathroom ಮತ್ತು toilet ಇಲ್ಲದ ಬಂಗಲೆಯಲ್ಲಿ ಅಡುಗೆಮನೆ ಎಂಬುದು ಕನಸಿನ ಮಾತೇ ಎಂದೇ ಹೇಳಬಹುದು. ಇನ್ನೂ ಮಳೆಗಾಲ ಬಂತೆಂದರೆ ಸಾಕು ಮಳೆರಾಯ ನಮ್ಮನ್ನೆಲ್ಲ ಮುತ್ತಿಕ್ಕಿಬಿಡುತ್ತಿದ್ದ. ಅಂತದ್ರಲ್ಲಿ ನಾವು ಎಲ್ಲಿಂದ ಅಡುಗೆ ಮಾಡಿಕೊಳ್ಳುವುದು? ಹಾಗಾಗಿ ನಮ್ಮ ದಿನನಿತ್ಯದ ಊಟ ಹೋಟೆಲ್ಗಳಲ್ಲಿಯೇ ಸಾಗುತ್ತಿತ್ತು. ಇಲ್ಲ ಕಂಪನಿ ಕೊಡುವ pocket ಆಹಾರದಲ್ಲಿಯೇ ಮುಗಿದುಬಿಡುತ್ತಿತ್ತು. ಇದೆಲ್ಲದರ ನಡುವೆ ಆಶಾ ಮತ್ತೆ ಜ್ಯೋತಿ ಎಂಬ ಹುಡುಗಿಯರು ಒಂದು business ಶುರು ಮಾಡಿಕೊಂಡಿದ್ದರು. Business ಅಂದ ತಕ್ಷಣ ನಿಮ್ಮ mindನಲ್ಲಿ ಏನೇನೋ ವಿಚಾರಗಳು ಓಡಾಡುವುದು ಬೇಡ. ಯಾಕಂದ್ರೆ ನೀವು ತಿಳಿದುಕೊಂಡಿರತಕ್ಕಂತ business ಅಂತದ್ದೇನಿಲ್ಲ. ಕೆಲಸದ ಮಧ್ಯೆ tifin ಗೆಂದು ಬಿಡುವು ವಿರುತ್ತದೆ. ಆ ಕಂಪನಿಯ building ತುಂಬಾ ದೊಡ್ಡದು. ಅದರ ಕೆಳಗಿನ ಅಂತಸ್ತಿನಲ್ಲಿ ಸಾವಿರಾರು vehicles ಗಳನ್ನು parking ಮಾಡಿರುತ್ತಾರೆ. ಆ parking ಸ್ಥಳದಲ್ಲಿ ನಾವು ಊಟ ಮತ್ತು ತಿಂಡಿ ಮುಗಿಸುತ್ತಿದ್ದೆವು. ಅಷ್ಟೇ ಏಕೆ ಒಮ್ಮೊಮ್ಮೆ ನಮ್ಮ ಜೊತೆಗೆ ಕೆಲಸ ಮಾಡತಕ್ಕಂತ ladies ಮತ್ತು ಹುಡುಗಿಯರು, vehicle ಗಳ ಮರೆಯಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿ uniform ತೊಟ್ಟು ಕೊಂಡಿದ್ದುಂಟು. ಕನಿಷ್ಠ ಬಟ್ಟೆ ಬದಲಿಸಲು room ಇಲ್ಲದ ನಾವುಗಳು ಕೂಡ ಆ ಒಂದು big company employees ಎಂದೇಳಿ ಕೊಳ್ಳುವುದಷ್ಟೇ ನಮಗೆ ಹೆಮ್ಮೆ. ಅದಕ್ಕೇನೇ ಇರಬೇಕು ಕಾರ್ಮಿಕರ ಸಂಘಗಳು ಹುಟ್ಟಿಕೊಂಡಿದ್ದು ಅನಿಸುತ್ತದೆ. ಅದೊಂದು ದಿನ. ತಿಂಡಿ ತಿನ್ನುವ ಸಮಯ. ಕೆಲವು ಹುಡುಗರು ತಿಂಡಿ ತಿನ್ನಲು ಹೊರಗಡೆ ಹೋಗಿದ್ದರು. ಕೆಲವರು parking ಸ್ಥಳದಲ್ಲಿಯೇ ತಿಂಡಿ ತಿನ್ನುತ್ತಿದ್ದರು. ನನಗೆ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ನನ್ನ ಜೇಬಿನಲ್ಲಿ ದುಡ್ಡಿಲ್ಲ. ಏನು ಮಾಡುವುದೆಂದು ಯೋಚಿಸುತ್ತಾ…. ಪ್ರಕಾಶನೂ ಕೂಡ ನನ್ನ ಆಗೇ ನಿನ್ನೆ ದುಡ್ಡಿಲ್ಲ ಎಂದು ಹೇಳಿದ್ದ. ಹಾಗಿದ್ದರೆ ಅವನು ಈ ದಿನ ತಿಂಡಿಗೆ ಏನು ಮಾಡುವನು! ಎಂದು ಇಬ್ಬರೂ ಸೇರಿ ಯಾರ ಹತ್ತಿರ ನಾದರೂ ಸಾಲ ಕೇಳೋಣ ಎಂದುಕೊಂಡು parking ಸ್ಥಳಕ್ಕೆ ಬಂದೆ. ಅಲ್ಲಿ ನೋಡಿದರೆ ಆಶಾ ಮತ್ತು ಪ್ರಕಾಶ ತುಂಬಾ ಸಲಿಗೆಯಿಂದ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಏನೇನೋ ಮಾತನಾಡುತ್ತಾ ಆಗಾಗ ಕಿಲಕಿಲನೆ ನಗುತ್ತ ತಿಂಡಿ ತಿನ್ನುತ್ತಿದ್ದರು. ಇದನ್ನು ಕಂಡ ನನಗೆ ಅವರ ಪಕ್ಕ ಹೋಗಿ ಮಾತನಾಡಿಸಬೇಕೆಂದು ಅನಿಸಲಿಲ್ಲ. ಪಾಪ ಅವನೋ ಎಲ್ಲಿಂದಲೋ ನನ್ನ ಆಗೆ ಬಂದ ಬಡಪಾಯಿ. ಅವನಾದರೂ ಸುಖವಾಗಿ ತಿನ್ನಲಿ ಎಂದು ಮನಸ್ಸು ಹೇಳುತ್ತಿದ್ದರೆ. ನನ್ನ ತಲೆ ಏನೇನೋ ಯೋಚಿಸುತ್ತಿತ್ತು. ಇದು ಹೀಗೆಯೇ ಪ್ರತಿದಿನ ನಡೆಯುತ್ತಲೇ ಇತ್ತು. ಮತ್ತೊಂದು ದಿನ. ನಾನು ಆಶಾ ಮತ್ತು ಪ್ರಕಾಶ ತಿಂಡಿ ತಿನ್ನುವುದನ್ನು ನೋಡುತ್ತ ಕುಳಿತಿದ್ದೆ. ಆ ದಿನ ಪ್ರಕಾಶ ತಿಂಡಿಯನ್ನು ತಿಂದು ಬೇಗನೇ ಹೊರಟು ಹೋದ. ಸ್ವಲ್ಪ ಹೊತ್ತಿನ ನಂತರ ಆಶಾಳ ಹತ್ತಿರ ಪ್ರಭು ಕೂಡ ಬಂದು ಕುಳಿತ. ನಾನು ಇವನ್ಯಾಕಪ್ಪಾ ಇವಳ ಹತ್ತಿರ ಹೋದನೆಂದು ಯೋಚಿಸುತ್ತಿರುವಾಗಲೇ ಆಶಾ ತನ್ನ bagನಿಂದ tifin box ಅನ್ನು ತೆಗೆದು ಅವನ ಕೈಗೆ ಕೊಟ್ಟಳು. ಅವನು ಕೂಡ ನಗುನಗುತ್ತಲೇ boxನ್ನು ಬಿಚ್ಚುತ್ತಾ ತಿಂಡಿಯನ್ನು ತಿಂದು ಹೊರಟುಹೋದ. ಸ್ವಲ್ಪ ಹೊತ್ತಿನ ನಂತರ ಆಶಾಳೂ ಕೂಡ ಅಲ್ಲಿಂದ ಹೊರಟು ಹೋದಳು. ನನ್ನ maind ನಲ್ಲಿ ಲೆಕ್ಕಾಚಾರಗಳು ತುಂಬಾ ನಡೆಯಲಿಕ್ಕೆ ಶುರುವಿಟ್ಟುಕೊಂಡವು. ನಾನು ಈ ಮೊದಲು mostly ಪ್ರಕಾಶ ಮತ್ತು ಆಶಾ love ಮಾಡುತ್ತಿರಬಹುದೇನೋ! ಅದಕ್ಕಾಗಿಯೇ ಆಶಾ ಪ್ರಕಾಶನಿಗೆ ಪ್ರತಿದಿನ ತಿಂಡಿ ತಂದುಕೊಡುತ್ತಿದ್ದಳು ಎಂದುಕೊಂಡಿದ್ದೆ. ಆದರೆ ಇವತ್ತು ಪ್ರಭುವಿಗೂ ಕೂಡ ತಿಂಡಿ ಕೊಟ್ಟಿದ್ದರಿಂದ ನನ್ನ ಮನಸ್ಸಿನಲ್ಲಿ ಅವಳ ಬಗ್ಗೆ ಬೇರೆನೆ ಯೋಜನೆಗಳು ಶುರುವಾದವು. ಇವಳೇನು ದ್ರೌಪದಿನ ಇಬ್ಬಿಬ್ಬರನ್ನು love ಮಾಡುತ್ತಿದ್ದಾಳೆ. ಯಪ್ಪಾ ಶಿವನೇ ಇಂಥವರನ್ನೆಲ್ಲ ಆ ದೇವರೇ ಕಾಪಾಡಬೇಕು. ಎಂದು ಯೋಚಿಸುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಪ್ರಕಾಶ ಬಂದು; “ಏನೋ ಗಾಳೇರ ಯಾಕೆ ಇಲ್ಲಿ ಕೂತಿದೀಯ, ಟಿಫಿನ್ ಆಯ್ತಾ” ಎಂದಾಗ ನನಗೆ ತಡೆದುಕೊಳ್ಳಲಾಗದೆ, “ನನಗೆಲ್ಲಿಂದ ಟಿಫಿನಪ್ಪ, ನಿಮಗೇನು ನಿಮ್ಮ ಹುಡುಗಿ ಆಶಾ ಇದ್ದಾಳೆ. ಮನೆಯಿಂದ ನಿಮಗೆ ಬೇಕುಬೇಕಾದದ್ದು ತಂದು ಮಾಡಿಕೊಡುತ್ತಾಳೆ. ಸೌಜನ್ಯಕ್ಕಾದರೂ ಒಂದು ಮಾತು ಕರೆಯುವುದಿಲ್ಲ ಲೋ ಪ್ರಕಾಶ” ಎಂದುಬಿಟ್ಟೆ. “ಹೇ ಅವಳೇನು ಪುಕ್ಸಟ್ಟೆ ಕೊಡಲ್ಲಪ್ಪ….. ಟಿಫಿನ್ ಗಾಗಿ ತಿಂಗಳ ಸಂಬಳ ಆದಮೇಲೆ ಒಂದು ಟಿಫಿನ್ ಗೆ ಮೂವತ್ತು ರೂಪಾಯಿ ಅಂತ ಲೆಕ್ಕ ಹಾಕಿಕೊಂಡು ಇಸ್ಕೋತಾಳೆ ನಿನಗೆ ಬೇಕಿದ್ರೆ ಹೇಳು ನಾಳೆಯಿಂದ ಇನ್ನೊಂದು box extra ತರಲಿಕ್ಕೆ ಹೇಳತೀನಿ” ಅಂತ ನನ್ನ ಉತ್ತರಕ್ಕೂ ಕಾಯದೆ ಹೊರಟು ಹೋದ. ನಾನು ಆಶಾ
ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ ಹಿತವಾಗುತ್ತಿಲ್ಲ ನನಗೆ ಗೋರ್ಕಲ್ಲ ಮೇಲೆ ಮಳೆ ಸುರಿದು ನಿಷ್ಪ್ರಯೋಜಕವಾಗಿದೆ ಗೆಳೆಯ ಐಹಿಕದ ಯಾವುದೂ ಬೇಡ ದೂರದ ಬೆಳಕೊಂದ ಅರಸಿ ಹೊರಟಿಹೆ ಈಗ ನನ್ನಷ್ಟಕ್ಕೆ ನನ್ನ ಬಿಟ್ಟುಬಿಡು ನನ್ನಿಷ್ಟದ ಬದುಕು ಸನಿಹವಾಗಿದೆ ಗೆಳೆಯ ಹೋಗಬೇಕೆಂದಿರುವೆ ಜಾತಿಮತ ಲಿಂಗಭೇದ ತೂರಿ ನೀತಿನಿಯಮಗಳಾಚೆ ಸ್ವಚ್ಛಂದವಾಗಿ ನಿತ್ಯ ತೇಜದಿ ಪ್ರಜ್ವಲಿಸುವ ತಾರೆಯಾಗುವ ಹಂಬಲವಾಗಿದೆ ಗೆಳೆಯ *******
ಕಾವ್ಯಯಾನ
ನಿರುಪದ್ರವಿ ವಸುಂಧರಾ ಕದಲೂರು ಗಿಡಗಂಟಿ ಬಳಿ ಹೂ ಕೊಯ್ಯಲು ಹೋದೆ; ಮೈ ಮೇಲೆ ಕಪ್ಪು ಇರುವೆ ಹತ್ತಿದೆ. ಅದು ಹಾದಿ ತಪ್ಪಿತೆ ಅಥವಾ ನಾನು ತಪ್ಪಿದೆನೆ ಬೆರಳ ಬೆಟ್ಟಗುಡ್ಡ ಏರಿಳಿದು, ಅಂಗೈ ರೇಖೆ ಅಳೆದು, ಸರಸರಾ ಸರಸರಾ ಸಂಚರಿಸಿತು ಸಾವಧಾನವೇ ಇಲ್ಲ ಸರಸರಾ ಸರಸರಾ.. ನೋಡುತಿದ್ದೆ ಕಂಗೆಟ್ಟದ್ದು ಯಾರು ಭುಜದ ಮೇಲೆ; ಹಣೆ, ಮೂಗು, ಕೆನ್ನೆ ಮೇಲೆಲ್ಲಾ ಹರಿದಾಡಿತು ಸರಸರಾ ಸರಾಸರಾ.. ಈ ಮೈ, ಈ ಜೀವವುಳ್ಳ ನನ್ನನ್ನು ಹೊತ್ತ ಮೈ ; ಬಲು ಬಂಜರೆನಿಸಿತೇನು ಎದೆಗಿಳಿಯಲಿಲ್ಲ; ಒಲವ ಪಸೆ ಕಾಣಲಿಲ್ಲ. ಹರವಾದ ಈ ದೇಹ ಒಂದು ಇರುವೆಗೂ ಆಗಿಬರದಷ್ಟು ದೊಡ್ಡದು; ಸತ್ತ ಮೇಲೆ ಬೂದಿಕಸ. ಸರಸರಾ ಸರಸರಾ.. ತಡಕಾಡಿತು ಬಿಡುಗಡೆಯ ಹಾದಿಗೆ ಸರಸರಾ ಸರಸರಾ.. ಸಿಕ್ಕಿತದೋ ಕಾಲ ಬುಡದಲ್ಲಿ ನೆಲ, ಹಸಿರು, ಬದುಕು, ಒಲವು.. ಸರಸರಾ ಸರಸರಾ.. ಒಮ್ಮೆಗೆಲೆ ಕಳಚಿತು. ಹೇಗೆ ಜಾರಿಕೊಂಡಿತೋ ತಿಳಿಯದು ಯಾರಿಲ್ಲಿ ಆ ನಿರುಪದ್ರವಿ ! ••••••••••••• —
ಗಾಳೇರ್ ಬಾತ್
ಅಂಕಣ ಗಾಳೇರ ಬಾತ್-01 ಮೊದಲ ಬಾರಿ ರಾಜಧಾನಿಗೆ….. ಇವತ್ತಿನ ನನ್ನ present situation ನೋಡಿದರೆ ರಾಜಧಾನಿಯ ನನ್ನ ಮೊದಲ ಭೇಟಿ, ಹೀಗೆ ಇತ್ತು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅದು ಅಷ್ಟೊಂದು ಭಯಾನಕರೂ ಅಲ್ಲ. ಅದು ಅಷ್ಟೊಂದು ಆನಂದಮಯನೂ ಅಲ್ಲ. ಅದೊಂತರ ವಿಶಿಷ್ಟವಾದ ಬೇಟಿ ಎನ್ನಬಹುದು. ಆದರೆ ಈ ತರದ ಬೇಟಿ ಯಾವ ಮಕ್ಕಳಿಗೂ ಆಗಬಾರದು ಎನ್ನುವುದು ನನ್ನ ಈ ಲೇಖನದ ಆಕಾಂಕ್ಷೆ ಆಗಿದೆ. ನನ್ನ ನೆನಪಿನ ಬುತ್ತಿ ಬಿಚ್ಚಿ ಒಮ್ಮೆ ಹೊರಳಿ ನೋಡಿದಾಗ, ಬೆಂಗಳೂರಿನ ಬೇಟಿ ಏಕೋ ನಿಮ್ಮೆದುರಿಗೆ ಹಂಚಿಕೊಳ್ಳಬೇಕೆನಿಸಿತು. ನಾನು ಆಗ ಸರಿಯಾಗಿ ಪಿಯುಸಿಯನ್ನು ಓದುತ್ತಿದ್ದೆ. ಅದು ಹರಪನಹಳ್ಳಿಯ ಉಜ್ಜೈನಿ ಶ್ರೀ ಜಗದ್ಗುರು ಮಹಾವಿದ್ಯಾಲಯದಲ್ಲಿ. ಕಾಲೇಜಿನಲ್ಲಿ ಬೆರಳು ಮಾಡಿ ತೋರಿಸುವ ವಿದ್ಯಾವಂತರ ಪಟ್ಟಿಯಲ್ಲಿ ನಾನು ಕೂಡ ಒಬ್ಬನು ಎಂದು ಅಂದುಕೊಂಡಿರಲಿಲ್ಲ. ಎಲ್ಲಾ ಗೆಳೆಯರು, ಲೆಕ್ಚರ್ ರು ನಿರ್ಧರಿಸಿ ಆ ಪಟ್ಟ ಕಟ್ಟಿ ಬಿಡುತ್ತಿದ್ದರು. ಇಂದಿಗೂ ಕೂಡ ನನಗೆ ಆ ಪಟ್ಟ ಕಟ್ಟುತ್ತಿದ್ದಾರೆ; ನಾನು ಆ ಪಟ್ಟಕ್ಕೆ ಯೋಗ್ಯನಲ್ಲ ಎಂದು ನನ್ನ ಮನಸ್ಸು ಮಾತ್ರ ಹೇಳುತ್ತದೆ. ಇದನ್ನು ಕೇಳುವವರ್ಯಾರು? ಇರ್ಲಿ ಬಿಡಿ; ವಿಚಾರಕ್ಕೆ ಬರುತೀನಿ. ನಾನು ಆಗ ಪಿಯುಸಿ ಓದುತ್ತಿರುವಾಗ ನಮ್ಮ ಕಾಲೇಜಿನಲ್ಲಿ ಶೈಕ್ಷಣಿಕ ಪ್ರವಾಸ ಏರ್ಪಡಿಸಿದ್ದರು. ನಾನು ಪ್ರವಾಸಕ್ಕೆ ಹೋಗಲು ನನ್ನ ತಂದೆ ತಾಯಿಯನ್ನು ಕೇಳಲು ಊರಿಗೆ ಹೋದೆ. ಊರಿಗೆ ಹೋಗಿ ನನ್ನ ತಂದೆಗೆ ಕೇಳಿದೆ! “ಅಪ್ಪ ಕಾಲೇಜಿನಲ್ಲಿ ಟೂರ್ ಕರ್ಕೊಂಡು ಹೋಗ್ತಿದ್ದಾರೆ, ನಾನು ಹೋಗ್ತೀನಿ ಅಂತ”. ಆಗ ನಮ್ಮ ತಂದೆ ನಮ್ಮ ಮಾವನಿಗೆ ಕೇಳಿದ. ನನ್ನ ಮಾವ ಎಂದರೆ ನಮ್ಮ ಸೋದರತ್ತೆಯ ಗಂಡ. ಅವರು ಪ್ರೈಮರಿ ಸ್ಕೂಲ್ ಟೀಚರ್. ಅವರಾಡಿದ ಆ ಮಾತು ನನ್ನ ಅಪ್ಪನಿಗೆ ಮತ್ತು ಅವರಿಗೆ ಇಂದಿಗೆ ಅದು ನೆನಪಿದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ಆ ಮಾತು ನನ್ನ life ನಲ್ಲಿ ಇಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಅದೇನಪ್ಪಾ ಅಂತ ಕೇಳ್ತೀರಾ! ಕೇಳಿ ಪರವಾಗಿಲ್ಲ ,ಏಕೆಂದರೆ ಈ ಮಾತು ನೀವು ಮುಂದೆ ನಿಮ್ಮ ಮಕ್ಕಳಿಗೆ ಯಾವತ್ತು ಹೇಳಬಾರದೆಂದು ನಾನು ಈ ಲೇಖನ ಬರೆಯುತ್ತಿದ್ದೇನೆ. ನನ್ನ ಅಪ್ಪ “ಏನ್ ಮಾವ, ಮೂಗ ಕಾಲೇಜಲ್ಲಿ ಟೂರ್ ಗೆ ಹೋಗುತ್ತಾನಂತೆ ಕಳಿಸಬೇಕಾ!” ಆಗ ನನ್ನ ಮಾವ “ಹಾಗೇನಿಲ್ಲ ಮಾರಾಯ, ನಾವೆಲ್ಲಾ ಕಾಲೇಜಲ್ಲಿ ಟೂರ್ ಹೋಗಿ ಮೇಷ್ಟ್ರಾಗಿ ವೇನು? ಮುಂದಿನ ವರ್ಷ ಹೋದ್ರೆ ನಡೆಯುತ್ತೆದೆ ತಗೋ”. ನಮ್ಮ ಹಗರಿಬೊಮ್ಮನಹಳ್ಳಿ ಪಟ್ಟಣ ಬಿಟ್ಟರೆ ಬೇರೆ ಯಾವ ಚಿಕ್ಕ ಹಳ್ಳಿಗೂ ಪ್ರಯಾಣ ಬೆಳೆಸದ ನನ್ನಪ್ಪನಿಗೆ ಈ ಮಾತು ಸಾಕಿತ್ತೇನು. “ಬೇಡಪ ಮುಂದಿನ ವರ್ಷ ಹೋಗಬಹುದಂತೆಲ್ಲಾ, ಈ ವರ್ಷ ಹೋದ್ರೆ ಮುಂದಿನ ವರ್ಷನೂ ಹೋಗಬೇಕಂತಿಲ್ಲ ! ಅದಲ್ಲದೆ ಟೂರ್ ಏನು compulsory ಅಲ್ವಂತೆಲ್ಲಾ!” ಎಂದಾಗ ನನ್ನ ಕನಸಿಗೆ ಒಂದು ಗಳಿಗೆ ಬೆಂಕಿ ಇಟ್ಟಂಗಾಯಿತು. ಸುಧಾರಿಸಿಕೊಂಡು ಹರಪನಹಳ್ಳಿಗೆ ಬಂದು ರೂಮ್ ಲಿ ಯೋಚಿಸುತ್ತಾ ಕೂತಿದ್ದೆ.ಆಗ ನನಗೆ ನೆನಪಿಗೆ ಬಂದಿದ್ದು ನನ್ನ ಗೆಳೆಯನೊಬ್ಬ ಬೆಂಗಳೂರಿನಲ್ಲಿ ಇದ್ದಿದ್ದು, ಅವನು ಯಾವುದೋ ಹೋಟೆಲಿನಲ್ಲಿ ಕೆಲಸ ಮಾಡುತ್ತಾನೆ ಎಂದು ಕೇಳಲು ಪಟ್ಟಿದ್ದೆ. ಹಾಗೋ ಹೀಗೂ ಮಾಡಿ ಅವನ ನಂಬರನ್ನು collect ಮಾಡಿ ಅವನಿಗೆ ಫೋನಾಯಿಸಿದೆ. “ಮಗಾ, ಕಾಲೇಜಲ್ಲಿ ಟೂರ್ ಕರ್ಕೊಂಡು ಹೋಗ್ತಾರೆ ಕಣೋ, ಮನೆಯಲ್ಲಿ ಟೂರ್ ಗೆ ಕಳಿಸ್ತಾ ಇಲ್ಲ. 15days ಕೆಲಸ ಇದ್ರೆ ನೋಡು. ನನಗೆ ಟೂರ್ಗೆ ದುಡ್ಡು ಬೇಕಿದೆ” ಈ ಮಾತಿಗೆ ಸ್ಪಂದಿಸಿದ ನನ್ನ ಗೆಳೆಯ ಆಯ್ತು ಬಾ ಎಂದು ಹೇಳಿದ. ಆಗ ನಾನು ಬೆಂಗಳೂರಿಗೆ ಹೋಗಲು ನನ್ನ ಹತ್ತಿರ ಹಣವಿರಲಿಲ್ಲ. ಹೇಗೆ ಆರೆಂಜ್ ಮಾಡುವುದು ಎಂದು ಚಿಂತಿತನಾದ ನನಗೆ ಆಗ ತೋಚಿದ್ದು. ನನ್ನಪ್ಪ ಕೊಡಿಸಿದ ಟ್ರಂಕ್ ಮತ್ತು ಪುಸ್ತಕ! ಇವುಗಳನ್ನು ಗುಜುರಿಗೆ ಹಾಕಿದರೆ ಬೆಂಗಳೂರಿಗೆ ಹೋಗಲು ಟ್ರೈನ್ ಚಾರ್ಜ್ ಆಗುತ್ತದೆ ಎಂದು ಎನಿಸಿದೆ. ಟ್ರಂಕನ್ನು ಕಲ್ಲಿನಿಂದ ಕುಟ್ಟಿ ನುಜ್ಜುಗುಜ್ಜು ಮಾಡಿ ಗುಜರಿಗೆ ಹಾಕಿದೆ. ಅದರಿಂದ ಸಿಕ್ಕಿದ್ದು ಕೇವಲ 58 ರೂಪಾಯಿ. ಅದನ್ನು ಕಿಸೆಯಲ್ಲಿಟ್ಟುಕೊಂಡು, ಬಸ್ಸಿಗೆ ಹೋದರೆ ಬಸ್ ಚಾರ್ಜ್ ಜಾಸ್ತಿಯಾಗುತ್ತದೆ ಎಂದು ಲಾರಿಗೆ ಹತ್ತಿದೆ. ಹರಪನಹಳ್ಳಿಯಿಂದ ಹರಿಹರಕ್ಕೆ ಆಗ ನಾನು ಲಾರಿಗೆ ಕೊಟ್ಟಿದ್ದು ಹತ್ತು ರೂಪಾಯಿ, ಘಟನೆ ಇಂದಿಗೂ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿದಿದೆ. ಇನ್ನು ಉಳಿದಿದ್ದು 48 ರೂಪಾಯಿ. ಆಗಲೇ ಅಷ್ಟು ಹೊತ್ತಿಗೆ ಸೂರ್ಯ ನೆತ್ತಿಯ ಮೇಲಿಂದ ಕೆಳಗಿಳಿಯುತ್ತಿದ್ದ. ನನ್ನ ಹೊಟ್ಟೆ ಹಸಿವಿನಿಂದ ವಿಲವಿಲ ಅನ್ನುತ್ತಿತ್ತು. ಕೈಯಲ್ಲಿದ್ದ ಬಿಡಿಗಾಸು ಟ್ರೈನ್ ಚಾರ್ಜ್ ಗಿತ್ತು. ಹಸಿವು ಯಾವುದನ್ನು ಕೇಳುವುದಿಲ್ಲ. ಆದ್ದರಿಂದ ಅಲ್ಲೇ ಪುಟ್ಬಾತ್ ಅಲ್ಲಿದ್ದ, ಒಂದು ಎಗ್ ರೈಸ್ ಅಂಗಡಿಯಲ್ಲಿ ಆಪರೇಟ್ ತಿಂದೆ. ಇನ್ನು ಉಳಿದಿದ್ದು 38 ರೂಪಾಯಿ. ಇನ್ನು ನನಗೆ ಸರಿಯಾಗಿ ನೆನಪಿದೆ ಆಗ ಹರಿಹರ ದಿಂದ ಬೆಂಗಳೂರಿಗೆ 47 ರೂಪಾಯಿ ಟ್ರೈನ್ ಟಿಕೆಟ್ ಇತ್ತು. ನನ್ನಲ್ಲಿದ್ದ 38ರೂಪಾಯಿ. ಏನ್ ಮಾಡುವುದು ಎಂದು ನನ್ನ ಸ್ನೇಹಿತನಿಗೆ ಫೋನ್ ಹಚ್ಚಿದೆ. ಅವನು ಒಂದು ಬಿಟ್ಟಿ ಸಲಹೆ ನೀಡಿದ. “ಮಗ ಜನರಲ್ ಬೋಗಿಯೊಳಗೆ ಹತ್ತಿಗೋ, ಅಲ್ಲಿ ಯಾರೂ ಬರೋದಿಲ್ಲ ಚೆಕ್ ಮಾಡಲಿಕ್ಕೆ” ಈ ಮಾತೊಂದೇ ಸಾಕಾಗಿತ್ತು ನನಗೆ. ನಾನು ಅಲ್ಲಿಯವರೆಗೂ ಟ್ರೈನನ್ನು ಯಾವತ್ತೂ ನೋಡಿರಲಿಲ್ಲ. ಬೆಂಗಳೂರು ಯಾವ ಇದೆ ದಿಕ್ಕಿಗೆ ಬರುತ್ತದೆ ಎಂಬ ಊಹೆಯೂ ಕೂಡ ನನಗಿರಲಿಲ್ಲ. ಕಿಕ್ಕಿರಿದ ಜನ, ಇಷ್ಟೊಂದು ಜನ ನಾನು ನೋಡಿದ್ದು ನಮ್ಮ ಊರಿನ ಜಾತ್ರೆಯಲ್ಲಿ. ನನಗೆ ಆಶ್ಚರ್ಯ ಕುತೂಹಲ ಎರಡು ಆಗುತ್ತಿತ್ತು. ಏಕೆಂದರೆ ನಾನು ಅಲ್ಲಿವರೆಗೆ ನೋಡಿದ್ದು ರೈಲನ್ನು ಪೇಪರ್ನಲ್ಲಿ ಟಿವಿಯಲ್ಲಿ. ಈಗ ಸ್ವತಃ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ ಎಂಬ ರೋಮಾಂಚನ ನನ್ನದಾಗಿರಲಿಲ್ಲ. ಯಾಕೆಂದರೆ ನನ್ನ ಪ್ರಯಾಣದ ಸ್ಥಿತಿ ಕಂಡರೆ ನಿಮಗೆ ತಿಳಿಯದೆ ಇರದು. ರಾತ್ರಿ ಸರಿಯಾಗಿ 9:30 ಗಡಿಯನ್ನು ದಾಟಿ ಗಡಿಯಾರ ಮುನ್ನುಗ್ಗುತ್ತಿತ್ತು. ಯಾರೋ ಒಬ್ಬರು ಬೆಂಗಳೂರಿಗೆ ಹೊರಡಲು ಟಿಕೆಟ್ ತಗೊಂಡರು. ನಾನು ಆಗ ಇವರ ಹಿಂದೆ ಹೋದರೆ ನಾನು ಬೆಂಗಳೂರು ತಲುಪಬಹುದು ಎಂದು ಅವರು ಹೋದ ಕಡೆಯಲ್ಲೆಲ್ಲ ಹೋಗುತ್ತಿದ್ದೆ. ಅವರಿಗೆ ಯಾವುದೇ ರೀತಿಯ ಅನುಮಾನ ಬರದಹಾಗೆ ಅವರ ಹಿಂದೆ ಹಿಂದೆಯೇ ಸುತ್ತುತ್ತಿದ್ದೆ. ಕೊನೆಗೆ ರೈಲುಗಾಡಿ ಬಂದಾಗ ಅವರು ಹತ್ತಿದ ಬೋಗಿಯಲ್ಲಿ ಹತ್ತಿ ಗೆಳೆಯ ಹೇಳಿದಾಗೆ ಸೀಟಿನ ಅಡಿಯಲ್ಲಿ ಮಲಗಿದೆ. ರೈಲು ಯಾವಾಗ ಮತ್ತೆ ಚೆಲುವಾಯಿತೋ, ಯಾವ ಯಾವ ಪಟ್ಟಣಗಳನ್ನು ಹಾದುಹೋಯಿತೋ ಒಂದು ತಿಳಿಯಲಿಲ್ಲ. ಅಷ್ಟೊಂದು ಜನಗಳ ಮಧ್ಯೆ ಅದು ಯಾವಾಗ ನಿದ್ರೆ ದೇವತೆ ಆಕ್ರಮಿಸಿದ್ದಳೋ ಗೊತ್ತೆ ಆಗಲಿಲ್ಲ. ಪುನಃ ಕಣ್ಣು ತೆರೆಯುವಷ್ಟರಲ್ಲಿ ಜನಗಳು ತಾನು ಮುಂದು ನಾನು ಮುಂದು ಎಂದು ನುಗ್ಗುತ್ತ ಕೆಳಗಿಳಿಯುತಿದ್ದರು. ಯಾರನ್ನೋ ಕೇಳಿದೆ ಇದು ಬೆಂಗಳೂರಾ ಸರ್ ಅಂತ. ಹೌದಪ್ಪ ನೀನು ಎಲ್ಲಿ ಹೋಗಬೇಕು ಅಂತ ಕೇಳಿದರು. ಆಗ ನನಗೆ ನೆನಪಾಗಿದ್ದು ನನ್ನ ಗೆಳೆಯ . ಅವನಿಗೆ ಫೋನ್ ಮಾಡಲು ಬರೆದಿಟ್ಟು ಕೊಂಡ ಅವನ ನಂಬರನ್ನು ಕಿಸೆಯಲ್ಲಿ ಹುಡುಕಿದೆ. ಅದು ನಾನು ಮಲಗಿದ ಬೋಗಿಯಲ್ಲಿಯೇ ಉದುರಿ ಹೋಗಿದ್ದು ನನಗೆ ಗೊತ್ತೇ ಆಗಲಿಲ್ಲ. ಆಗ ನನಗೆ ದಿಕ್ಕೇ ತೋಚದಾಯ್ತು. ಎಲ್ಲರೂ ಇಳಿದ ಅದೇ ಜಾಗದಲ್ಲಿ ನಾನು ಇಳಿದೆ. ಚಿಕ್ಕ ಪಟ್ಟಣವನ್ನು ನೋಡದ ನಾನು ಬೃಹತ್ ಬೆಂಗಳೂರು ನಗರವನ್ನು ನೋಡಿ ನಿಬ್ಬೆರಗಾಗಿದ್ದೆ. ಎಲ್ಲಿ ನೋಡಿದರೂ ಕಿಕ್ಕಿರಿದ ಜನ. ಆದರೆ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಓಡಾಡುತ್ತಿದ್ದಾರೆ. ಈಗಲೂ ಹಾಗೇನೇ ಓಡಾಡುತ್ತಿದ್ದಾರೆ, ಯಾಕೆ ಹೀಗೆ ಓಡಾಡುತ್ತಿದ್ದಾರೆ ಎನ್ನುವುದು ಈಗಲೂ ಕೂಡ ನನಗೆ ಬೆಂಗಳೂರಿನ ಜನರ ಬದುಕು ಒಗಟಾಗಿ ಉಳಿದಿದೆ. ಕಿಸೆಯಲ್ಲಿ ಕೈ ಹಾಕಿದೆ. 38 ರೂಪಾಯಿ ಇತ್ತು. ನನಗೆ ಆ ವಯಸ್ಸಿನಲ್ಲಿ newspaper ಓದುವುದು ಒಂದು ಚಟವಾಗಿ ಬಿಟ್ಟಿತ್ತು. ಎರಡು ರೂಪಾಯಿ ಕೊಟ್ಟು ಪ್ರಜಾವಾಣಿ ಪತ್ರಿಕೆ ತೆಗೆದುಕೊಂಡು. ಸಿಕ್ಕಸಿಕ್ಕ ಬೆಂಗಳೂರಿನ ದಾರಿಯುದ್ದಕ್ಕೂ ನಡೆದುಕೊಂಡು ಹೋದೆ. ಅಲ್ಲಲ್ಲಿ ಸಿಗುವ ಪಾರ್ಕುಗಳಲ್ಲಿ ಸ್ವಲ್ಪ ಸ್ವಲ್ಪ ವಿಶ್ರಾಂತಿ ಮಾಡಿ ಪೇಪರ್ ಅಲ್ಲಿರುವ ವಿಚಾರಗಳನ್ನು ಓದುತ್ತಾ ಟೈಮ್ ಪಾಸು ಮಾಡಿದೆ. ಉಳಿದ ದುಡ್ಡಲ್ಲಿ ಆ ದಿನದ ನನ್ನ ಊಟ-ಉಪಚಾರ ವಾಯಿತು. ಇನ್ನು ಕೈಯಲ್ಲಿ ಕಾಸಿಲ್ಲ. ಮಲಗಲು ಮನೆಯಿಲ್ಲ. ನನಗೆ ಆಗಿನ್ನೂ 16 ವರ್ಷ. ಬೆಂಗಳೂರಿನಲ್ಲಿ ನೆಂಟರಿಲ್ಲ, ಗೆಳೆಯರಿಲ್ಲ. ಸೂರ್ಯ ನೋಡಿದರೆ ಆಗಲೇ ಮನೆ ಸೇರಿದ್ದ. ಏನು ಮಾಡುವುದೆಂದು ತೋಚದೆ ಪುನಃ ರೈಲ್ವೆ ಸ್ಟೇಷನ್ ಹತ್ತಿರ ಬಂದೆ. ಮತ್ತೆ ಊರಿಗೆ ಹೋಗೋಣ ಎಂದರೆ ಟ್ರೈನ್ ಆಗಲೇ ಹೊರಟಾಗಿತ್ತು. ಆ ರಾತ್ರಿ ಹೇಗೆ ಕಳೆಯುವುದೆಂದು ನಾನು ಚಿಂತಿಸುತ್ತಾ ಕಂಡಕಂಡ ಒಂಟಿ ಬೆಂಚಿನ ಮೇಲೆ ಕೂತು ಕಾಲಹರಣ ಮಾಡಿದೆ. ರಾತ್ರಿ ಹನ್ನೆರಡರ ಸಮಯ ಪೊಲೀಸ್ ಪೇದೆಯೊಬ್ಬ ಇಲ್ಲಿ ಏನು ಮಾಡುತ್ತಿದ್ದೀಯಾ ಹೊರಡು ಎಂದು ತನ್ನ ಲಾಟಿಯಾ ರುಚಿಯನ್ನು ತೋರಿಸಿದ. ಆ ಕತ್ತಲೆಯಲ್ಲಿ ಪುನಃ ಬೇರೊಂದು ದಾರಿ ಹಿಡಿದು ಸಾಗಿದೆ. ಅದೊಂದು ಯಾವುದೋ ಸರ್ಕಾರಿ ಬಂಗಲೆ, ಅಲ್ಲಿ ಒಂದು ದೊಡ್ಡದಾದ ಕಾಂಪೌಂಡ್. ಆ ಕಾಂಪೌಂಡ್ ಒಳಗೆ ಹಾರಿ, ಕಾಂಪೌಂಡ್ ಬದಿಯಲ್ಲೇ ಸೊಳ್ಳೆಗಳ ಜೊತೆಗೆ ನನ್ನ ಆ ದಿನದ ಬೆಂಗಳೂರಿನ ರಾತ್ರಿ ಕಳೆದೆ. ಆಗಲಿಲ್ಲ ನಡೆದು ನಡೆದು ಸುಸ್ತಾಗಿದ್ದರಿಂದ, ಅದು ಯಾವಾಗ ನಿದ್ರೆ ದೇವತೆ ಬಂದು ಆಕ್ರಮಿಸಿಕೊಂಡಳೋ ಗೊತ್ತೇ ಹಗಲಿಲ್ಲ. ಕಣ್ಣು ತೆರೆದು ನೋಡಿದಾಗ ಬೆಳಕರಿದಿತ್ತು. ಎದ್ದು ಕಣ್ಣುಜ್ಜಿಕೊಂಡು ಕಾಂಪೌಂಡ್ ಮೇಲೆ ಹತ್ತಿ ಕೂತೆ. ಏನು ಮಾಡುವುದೆಂದು ತೋಚದೆ ಇದ್ದಾಗ, ಒಬ್ಬ ಬ್ರೋಕರ್ ಬಂದು ಹೋಟೆಲಲ್ಲಿ ಕೆಲ್ಸ ಇದೆ ಕೆಲಸಕ್ಕೆ ಬರ್ತೀಯಾ ಎಂದು ಕೇಳಿದಾಗ ನನಗೆ ಆಗ ಆದ ಆನಂದ ಅಷ್ಟಿಷ್ಟಲ್ಲ. ಹಸಿವನ್ನು ತಾಳದೆ ನಾನು ಅವನ ಹಿಂದೆ ಹೆಜ್ಜೆ ಇಟ್ಟೆ………. ಇಷ್ಟಾದ ಮೇಲೆ ನಾನು ದುಡಿದುಕೊಂಡು ಕಾಲೇಜಿಗೆ ಹೋಗಿ ಟೂರ್ ಹೋಗಿದ್ದೇನೆಂದು ಭಾವಿಸಿದ್ದರೇ ಅದು ನಿಮ್ಮ ತಪ್ಪು ಕಲ್ಪನೆ. ಮುಂದೇನಾಯಿತು ಎಂದು ನನ್ನ ಇನ್ನೊಂದು ಲೇಖನದಲ್ಲಿ ಹೇಳುತ್ತೇನೆ. ಈ ಲೇಖನ ನಿಮಗೆ ಅರ್ಥವಾದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿರುವೆ. ********* ಮೂಗಪ್ಪ ಗಾಳೇರ
ಕಾವ್ಯಯಾನ
ಅಯ್ಯೋ… ಸಂತೇಬೆನ್ನೂರು ಫೈಜ್ನಾಟ್ರಾಜ್ ಮುರಿದು ಬಿಟ್ಟಿರಾ…ಛೆ..ಬಿಟ್ಟಿದ್ದರೆ ನೆಲದ ಮೇಲೆ ಆಕಾಶ ನೋಡ್ತಾ ನಾಲ್ಕು ದಿನ ಹೇಗೋ ಬಾಳುತ್ತಿತ್ತು ಅಯ್ಯೋ ಹರಿದು ಹಾಕಿದಿರಾ…ಛೆ ಮನವರಳೋ ನಾಲ್ಕಕ್ಷರ ಬರೆದು ಹಾಕಿದ್ದರೆ ಸಾಕಿತ್ತು ಕಿತ್ತೇಕೆ ಎಸೆದಿರಿ…ಛೆ ಮಳೆ ಬಂದಿದ್ದರೆ ಮೈ ಮುರಿದು ಚಿಗುರುತ್ತಿತ್ತೇನೋ ಪಾಪ ಏನಂದಿರಿ….ಛೆ ತುಸು ಕಾದು ನೋಡಿದ್ದರೆ ನಿಮ್ಮಂತೆಯೇ ಇರುತ್ತಿದ್ದರೋ…ಏನೋ… ಮುಖ ತಿರುವಿ ಬಿಟ್ಟಿರಾ… ಛೆ ನಗ್ತಾ ಒಂದೆರಡು ಮಾತಾಡಿದ್ದರೆ ಹೂ ನಗೆ ಕೊಡುತ್ತಿದ್ದರೇನೋ….! ಬಾಗಿಲು ಹಾಕಿಯೇ ಬಿಟ್ಟಿರಾ…ಛೆ ಒಲವ ಒಲವಿಂದ ನೋಡದೇ ಹಳದಿ ಕಣ್ಣೇಕೆ ಬಿಟ್ಟಿರಿ ಪಾಪ ದೂರಾಗುತ್ತಿರಲಿಲ್ಲವೇನೋ! ಛೆ…ಬಿಡಿ, ನಾನೂ ಹಾಗೆಯೇ ಬದಲಾಗಿದ್ದರೆ…ನನಗೂ ಹೊಸ ನೋಟ ಕಾಣುತ್ತಿತ್ತೇನೋ!! *******
ಪ್ರಸ್ತುತ
ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆ ಗಣೇಶಭಟ್ ಮಾನ್ಯ ಪ್ರಧಾನಿಯವರು ಸ್ವಾವಲಂಬಿ ಭಾರತ, ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆಯ ಕುರಿತು ಟ್ವೀಟಿಸಿದ್ದಾರೆ. https://twitter.com/PMOIndia/status/1253562403544915970 ಇಂದು ದೇಶ ಅನುಸರಿಸುತ್ತಿರುವ ಬಂಡವಾಳವಾದ ನೀತಿಯಿಂದ ಈ ಉದ್ದೇಶ ಈಡೇರಲು ಸಾಧ್ಯವಿಲ್ಲ.ಲಕ್ಷ ಲಕ್ಷ ಕೋಟಿ ಹಣ ಸುರಿದರೂ ಅಷ್ಟೇ. ಮಿಶ್ರ ಆರ್ಥಿಕನೀತಿ, ಗಾಂಧೀವಾದ,ಸರ್ವೋದಯ,ಜೆಪಿ ಚಿಂತನೆ,ಸಮಾಜವಾದ ಮುಂತಾದವುಗಳೆಲ್ಲವೂ ಬಂಡವಾಳವಾದದ ವಿವಿಧ ರೂಪಗಳು. ಕಮ್ಯೂನಿಸಮ್ ಎಂಬುದು state capitalism. ಪ್ರಾದೇಶಿಕ ಸ್ವಾವಲಂಬನೆಗೆ ಬೇಕಾದುದು ನವ ಆರ್ಥಿಕ ಚಿಂತನೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ರೂಪುಗೊಳ್ಳುವ ತಳ ಮಟ್ಟದ ಯೋಜನೆಗಳು. ಕಳೆದ ಹಲವು ವರ್ಷಗಳಿಂದಲೂ ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆಯ ಕುರಿತು ಪ್ರಉತ(ಪ್ರಗತಿಶೀಲ ಉಪಯೋಗ ತತ್ವ)ದ ಅಧಾರದ ಮೇಲೆ ಬರೆಯುತ್ತಿದ್ದೇನೆ. ಒಂದೆರಡು ಸ್ಯಾಂಪಲ್ ಗಳು: ಆಗಸ್ಟ್ 10, 2018 · ಪ್ರಾದೇಶಿಕ ಅಸಮಾನತೆ ದೂರೀಕರಿಸುವ ಪರಿ ಪ್ರತಿಯೊಂದು ಪ್ರದೇಶದ ಭೌಗೋಳಿಕ ಪರಿಸ್ಥಿತಿ, ನದಿ ಕೊಳ್ಳಗಳ ಸ್ಥಿತಿ, ಪರಿಸರ, ಮಣ್ಣಿನ ಗುಣ ಲಕ್ಷಣ, ಮಳೆ, ಹವಾಮಾನ ಮುಂತಾದವುಗಳ ಜೊತೆಗೆ ಜನರ ಮಾನಸಿಕತೆಯನ್ನು ಪರಿಗಣಿಸಿ ಯೋಜನೆಗಳು ರೂಪುಗೊಳ್ಳಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳು ತಾಲೂಕು ವಾರು ರೂಪುಗೊಂಡು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಪ್ರತಿಯೊಂದು ರಾಜ್ಯವೂ ತನ್ನ ಎಲ್ಲ ನಾಗರಿಕರಿಗೆ ಉದ್ಯೋಗ ಸೃಷ್ಟಿಸುವ, ತಾನು ಆರ್ಥಿಕವಾಗಿ ಸ್ವಾವಲಂಬಿಯಾಗುವಂತಹ ಪ್ರಯತ್ನ ನಡೆಸಬೇಕು. ಈ ಉದ್ದೇಶದಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು. 13 ಫೆಬ್ರವರಿ · ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನ. ಇದರ ಮೊದಲ ಹಂತವೆಂದರೆ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಭೌಗೋಳಿಕ ಕ್ಷೇತ್ರಗಳನ್ನು ಗುರ್ತಿಸುವುದು. 2 ಏಪ್ರಿಲ್ 2020 ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. 24 ಏಪ್ರಿಲ್ ರಂದು, 10:31 ಪೂರ್ವಾಹ್ನ ಸಮಯಕ್ಕೆ · ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆರ್ಥಿಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ .. ಮಾನವತೆಯ ಹಿತ ಬಯಸುವವರು ಪರ್ಯಾಯ ವ್ಯವಸ್ಥೆಯ ಕುರಿತು ಚಿಂತಿಸಲೇಬೇಕಾದ ಸಂದರ್ಭವಿದು. ********
ಪುಸ್ತಕ ಸಂಗಾತಿ
ಬರ್ಫದ ಬೆಂಕಿ ನಾಗರೇಖಾ ಗಾಂವಕರ್ ಗೆಳತಿ ನಾಗರೇಖಾ ಗಾಂವಕರ ಅವರ ಪುಸ್ತಕಗಳು ತಲುಪಿ ಬಹಳ ದಿನಗಳಾದರೂ ಓದಿದ್ದು ಈ ವಾರ..ಭರವಸೆಯ ಕವಯಿತ್ರಿ, ಕತೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡದವರು. “ಬರ್ಫದ ಬೆಂಕಿ” ಹೆಸರೇ ಹೇಳುವಂತೆ ಹೊಸ ರೀತಿಯ ಕಾವ್ಯ ಕಟ್ಟುವಿಕೆಯ ಪ್ರಯತ್ನ. ನನಗೆ ಸ್ವಲ್ಪ ಸಂಕೀರ್ಣವೆನಿಸಿದ ಕವಿತೆಗಳನ್ನು ಶ್ರೀ ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಲ್ಲಿನ ಕವಿತೆಗಳು ಭಾವ, ಅನುಭವದ ಹಿನ್ನೆಲೆಯಲ್ಲಿ ಸಹಜವಾಗಿ ಹೊಮ್ಮಿದಂಥವು. ಮಾಗುವುದೆಂದರೆ ಅವಳ ಕವಿತೆಗಳು ಕಾಲಾತೀತ ಕವಿತೆಗಳು ಬಾನ್ಸುರಿಯ ನಾದ ಎಂಬ ವಿಭಾಗಗಳಡಿ ಕವಿತೆಗಳು ದಾಖಲಾಗಿವೆ. ಅಕ್ಷರಗಳು ಶೋಕೇಸಿನ ಪದಕವಾಗಲ್ಲ, ಕೆಸರಿನ ನೈದಿಲೆಯೂ, ಬೆಳಕಿನ ಹಾಡೂ ಆಗಬೇಕು ಎಂಬ ಆಳದ ಅರಿವಿದೆ ಇಲ್ಲಿ. ಅಸ್ಮಿತೆಯ ಹಂಗಿಲ್ಲದ, ಕಾಯಕವೇ ಯೋಗವಾದ ಬೆಳಕಿನ ಪುಂಜಗಳಿಗೂ, ಸೂಟು ಬೂಟು ವಿಚಿತ್ರ ಆಕ್ಸೆಂಟುಗಳ ಜಂಭದ ಬೀಜಕ್ಕೂ ನಡುವೆ ಗೋಜಲಿನ ಗೂಡಾದ ಮನ ಶೂನ್ಯಕ್ಕೆ ಶರಣಾಗುವುದಿದೆ, ದೇಸಿ, ದೈನೇಸಿತನಕ್ಕಾಗಿ ಹಂಬಲಿಸುವುದಿದೆ ಇಲ್ಲಿ. ಕಾಯುವುದು, ನೋಯುವುದು, ಕೊರಗುವುದು, ಬೇಯುವುದು, ಮಾಗುವುದು ಹೇಗೆಂದರೆ ಬೆಂಕಿಯನ್ನು ಅಂಗೈಲಿಟ್ಟುಕೊಂಡು ಹೊಳಪಿನ ಚುಕ್ಕಿಯನ್ನು ಹಣೆಯಲ್ಲಿ ಧರಿಸುವುದು!! ಉಕ್ಕುವ ಕಡಲ ಮೋಹಿಸುವ ಇವರ ಹಟಕ್ಕೆ ಬರ್ಫದ ಬೆಂಕಿ ಕುಡಿವ ಹುಚ್ಚಿದೆಯಂತೆ. ಸುರಿದು ಹೋದ ಎಣ್ಣೆಯ ದೀಪ ಹಚ್ಚಲಾಗದೇ ಕತ್ತಲಲ್ಲಿ ಕಳೆದ ಹಸಿಹಸಿ ಬಯಕೆಯ ಬೆಳದಿಂಗಳ ರಾತ್ರಿಯಿದೆಯಂತೆ!! ಅವಳ ದ್ವಂದ್ವ, ತಲ್ಲಣಗಳು, ಅಬ್ಬಾ!! ರಾತ್ರಿಯಲ್ಲಿ ಹಗಲಿನ ಪಾಳಿ ಮಾಡುತ್ತಲೇ ನಡೆಯುತ್ತಿದ್ದಾಳೆ ಅವಳು. ನಾಜೂಕು ಬಳೆಗಳು ಗಾಯಗೊಳಿಸಿ ಬೇಡಿಯಾಗಿಸುವ, ಮೂಗುತಿ ಘಾಸಿಗೊಳಿಸುವ, ನಂಜು ತೆಗೆವ ಅರಿಶಿನವೂ ಕೆರೆತ ತಂದಿಡುವ, ಗೆಜ್ಜೆಯ ಸದ್ದೂ ಸಂತೆಯಾಗುವ, ತಾಳಿಯ ನೀರೂ ತಾಳಿಕೊಳ್ಳದ ನಿರಾಕರಣೆಯಲ್ಲೂ ಅವನನ್ನೇ ಒಳಗೊಳ್ಳುವುದು, ತನು ಬಂಧನವ ಮೀರಿ ಮನಗುದುರೆಗೆ ನಾಗಾಲೋಟ ಕಲಿಸುವ ಅವಳು. ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್ಡನ್ನು , ಪರದಾ ಬುರ್ಖಾ, ಕುಂಕುಮವನ್ನು, ತನ್ನ ಹೆಸರಿನೊಡನೆ ಅವನ ಹೆಸರು ಜೋಡಿಸುವುದನ್ನು, ಮಾಧವಿ, ಶಕುಂತಲೆ, ಪಾಂಚಾಲಿಯರನ್ನು ನಿರಾಕರಿಸುತ್ತ “ಹೆಂಡತಿಯಾಗಲಾರೆ” ಎನ್ನುವ ಅವಳು..ಬಿಂಕ ಬಿನ್ನಾಣ, ಒನಪು, ವೈಯಾರದ ಹಂಗು ತೊರೆದ, ಜಡ್ಡುಗಟ್ಟಿದ ಕೈಗಳ, ಮಾಸಿದ ಬಳೆಗಳ ಭೂಮಿ ತೂಕದ ಹೆಣ್ಣು ಅವಳು.. ಇಲ್ಲಿ ಸ್ವಾತಂತ್ರ್ಯವೂ ಬಂಧನವೂ ಕೈ ಜೋಡಿಸಿದೆ. ಬಾಯಿಲ್ಲದವನ ಕೂಗಿಗೆ ಕಂಚಿನ ಕಂಠ ಎರವಲು ಸಿಕ್ಕಿದೆ…ದಲಿತ ಕೇರಿಯಲಿ ದಿಗ್ವಿಜಯ…ರಾಮ ರಹೀಮರ ಮನೆಯ ಬೆಂಡು ಬತ್ತಾಸು, ಸಿರಕುರಮಾ ಮಾತು ಬಿಟ್ಟಿವೆ..ಕಾಲಾತೀತ ಕವಿತೆಗಳು ಹೀಗಿವೆ. “ನನ್ನ ಪೇಲವ ಮುಖದ ಮ್ಲಾನತೆಗೆ ನಿನ್ನ ನಿರಾಕರಣೆ ಕಾರಣ ಎನ್ನಬೇಕೆನಿಸುವುದಿಲ್ಲ. ಮುಂಗುರುಳ ಹೆರಳುಗಳು ನಿನ್ನ ಕೈ ಬೆರಳ ಸಂದಿಯಲ್ಲಿ ಹೊರಳಿ ನರಳಿ ಬೆಳಕಾದವಂತೆ. ನನಗೇನೂ ಈ ಬಂಧಕ್ಕೆ ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ. “ ಎಡತಾಕುವ ಬೆಕ್ಕಿನಂತೆ ಸುತ್ತುತ್ತಿದ್ದವ ಅಪರೂಪದ ಬಿಳಿ ಪಾರಿವಾಳವಾದ. ಆದರೂ ಹಳೆಯ ಉಸಿರ ಬಸಿರ ಕಡತಗಳ ತೆಗೆದೊಮ್ಮೆ ನೋಡಬೇಕೆನಿಸುತ್ತದೆ. ಓದಬಲ್ಲೆನೇ ಹಳೆಯ ದಿಟ್ಟಿಯ ಹಿಡಿದು.. “ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ ಮೈ ನುಣುಪು ತೋಳುಗಳ ನಡುವೆಯೂ ಅದೆಂತಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ. ಅವನ ಕನಸಿನ ತುಂಬಾ ಮುತ್ತಾಗುವುದು ಮಣಿ ಪೋಣಿಸುವುದು ಆಕೆ ಮಾತ್ರ.” ದೇಹ ಮೀರಿದ ಪ್ರೇಮದ ಠೇವಣಿ ಇಟ್ಟಿದ್ದು ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ ಈಗ ನಾನು ಅವನೂ ಕೂಡಿಯೇ ಮನೆ ಕಟ್ಟುತ್ತಿದ್ದೇವೆ. “ಸೀತೆಯಂತಿರಬೇಕು ನೀನು ಎಂದಾಗಲೆಕ್ಲ ನಾನೆನ್ನುತ್ತಿದ್ದೆ ನೀನು ರಾಮನಾದರೆ.. ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.. ಕಲ್ಪನೆಯಲ್ಲಿ ತೇಲುತ್ತಲೇ, ವಾಸ್ತವದಲ್ಲಿನ ನಡಿಗೆಯಿದು. ಬರ್ಫದಂತೆ ತಣ್ಣಗಿದ್ದರೂ, ಉರಿವ ಬೆಂಕಿಯದು. ಹೀಗೇ… ಬೆಳಕು, ಕಡಲು, ಬೆಂಕಿ, ರಾತ್ರಿ, ಆಗಸ, ಗಾಳಿ…ಪ್ರಕೃತಿಯೊಡನೆಯ ಪ್ರೀತಿ, ಸಂಕೀರ್ಣತೆ ..ಒಂದೆಡೆ, ಅವಳ ತರ್ಕ, ತಲ್ಲಣಗಳು, ತಾಕತ್ತು, ದೌರ್ಬಲ್ಯ, ಶೋಷಣೆ ಮತ್ತೊಂದೆಡೆ.. ಜಾತಿ, ಧರ್ಮ, ಆಚರಣೆ ಇನ್ನೊಂದು ಕಡೆ…ಪ್ರೀತಿ, ವಿರಹ,ಬಯಕೆ, ವಿಷಾದ ಮಗದೊಂದೆಡೆ… *********** ಅಮೃತಾ ಮೆಹಂದಳೆ
