ನನ್ನವನು

ನನ್ನವನು

ಕವಿತೆ ನನ್ನವನು ಅನಿಲ ಕಾಮತ ಮದಿರೆಯ ಅಮಲಿನಲ್ಲಿದ್ದಾಗಕೈಹಿಡಿದು ಕುಳುಣಿಸಿದ್ದೇನೆಹಸಿವಿನಿಂದ ಒಡಲುಉರಿ ಎದ್ದರುಒಡಲು ತುಂಬಿದವರಂತೆನಟಿಸಿರುವೆ ಮಾನನಿಯರ ಸಂಘದಲ್ಲಿಮುಳುಗಿದರುಮೌನ ಮುರಿಯದಿರುವೆಮೈಯ ಮೇಲಿನಬರೆ ಸರಿಕರಿಗೆಸಣ್ಣ ಗುಮಾನಿಯೂಬರೆದ ಹಾಗೆಸೀರೆಯಿಂದಸುತ್ತಿಕೊಂಡಿರುವೆರಂಡೆ ಮುಂಡೆಯಬೈಗಳಿಗೆ ದಿನಂಪ್ರತಿಆಹಾರವಾಗಿರುವೆನಿನ್ನ ಸಿಟ್ಟಿಗೆ ಅದೆಷ್ಟು ಸಲನಾನು ಆಹುತಿಯಾಗಿರುವೆಏಕೆಂದರೆ ನೀನುನನ್ನವನು…………. ******************************************************

ನಿರುತ್ತರ

ಪುಸ್ತಕ ಸಂಗಾತಿ ನಿರುತ್ತರ ನಿರುತ್ತರ-ಕವನ ಸಂಕಲನಪ್ರಕಾಶಕರು-ದೀಪ್ತಿ ಬುಕ್ ಹೌಸ್ ಮೈಸೂರುಪುಟಗಳು-೧೧೨ಬೆಲೆ-೧೦೦ರೂ ಅದೇ ಹಳೆಯ ಒಲೆಗೆ ಹೊಸ ಉರಿಯ ಹಾಕಿ ಪ್ರತಿದಿನ ನಾವೀನ್ಯದ ಬೆಳಕು ತೆರೆದಿದೆ ಬೆಳಕಿನ ಬದುಕು. … ಕವಿತೆ ಹುಟ್ಟುವುದೇ ಒತ್ತಡದಿಂದ ಎನ್ನುವುದು ನನ್ನ ನಂಬಿಕೆ. ಎಲ್ಲಾ ಸಾಂಗವಾಗಿ ಸಾಗುತ್ತಿದ್ದಾಗ ಸಾಲೊಂದೂ ಹೊಳೆಯದೆ ಕವಿತೆಯೆಂಬ ಈ ಚಂಚಲೆಯನ್ಮು ಹುಡುಕಿ ಗಾಬರಿಯಾಗುವುದು ನನಗೆ ಆಗಾಗ ಘಟಿಸುವ ಸಂಗತಿ. ಈ ಒತ್ತಡದಿಂದ ಹುಟ್ಟಿದ್ದನ್ನು ಪ್ರಮಾಣಬದ್ದವಾಗಿ ಬೆಳೆಸಿ ಅಕ್ಷರಗಳಲ್ಲಿ ಬೆಳೆಯಗೊಟ್ಟರೆ ಕವಿಯಾಗಿ ಗೆದ್ದಂತೆ. ಒಲಿದಂತೆ ಹಾಡುವೆ ಎನ್ನುವ ನನ್ನ ಮೊಂಡುವಾದಕ್ಕೆ […]

ಗಜಲ್

ಗಜಲ್ ಎ. ಹೇಮಗಂಗಾ ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ ತನುವಿಂದು ಕೊರಡಾಗಿ ಬಾಡಿದೆ ಹಿತ […]

ಅಂಕಣ ಬರಹ ನಿರ್ಮಲಾ‌ ಶೆಟ್ಟರ್ ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ ಪರಿಚಯ: ನಿರ್ಮಲಾ ಶೆಟ್ಟರ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಧಾರವಾಡ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಬೋಧನೆಯಿಂದ ತಾಲೂಕಾಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ ‘ಬೆಳಕಿನೊಡನೆ ಪಯಣ’ ಮತ್ತು ‘ನಿನ್ನ ಧ್ಯಾನಿಸಿದ ಮೇಲೂ’ ಎನ್ನುವ ಎರಡು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅದರಲ್ಲಿ ಒಂದು ಕಾವ್ಯಸಂಕಲನವಾದರೆ, ಇನ್ನೊಂದು ಗಜಲ್ ಸಂಕಲನವಾಗಿದೆ. ಸಧ್ಯ, ‘ಸರಹದ್ದುಗಳಿಲ್ಲದ ಭೂಮಿಯ […]

ಹಿಮಾಲಯ ಪರ್ವತ ಶ್ರೇಣಿಗಳು”

ಲೇಖನ ಹಿಮಾಲಯ ಪರ್ವತ ಶ್ರೇಣಿಗಳು” ಆಶಾ ಸಿದ್ದಲಿಂಗಯ್ಯ ಸಿಂಧೂ ನದಿಯ ಬಯಲಿನಲ್ಲಿ ಸಂಸ್ಕೃತಿ ರೂಪುಗೊಳ್ಳುವ ಮೊದಲೇ ಗೊಂಡಿ ಭಾಷೆಯಿತ್ತು ಎನ್ನುವ ಮಾತು ಹೆಚ್ಚು ಮುಖ್ಯವಾಗುತ್ತದೆ. ಹಲವು ಲಕ್ಷ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ ಖಂಡದ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಂಟಾರ್ಟಿಕಾಗಳು ಕೂಡಿದ್ದ ಭೂಭಾಗವಿತ್ತು. ಅದನ್ನು ಗೊಂಡ್ವಾನ ಎಂದು ಕರೆಯುತ್ತಿದ್ದರು. ಭಾರತದ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗ ಅಂದರೆ ದಕ್ಷಿಣ ಭಾರತದ ಪ್ರಸ್ಥಭೂಮಿ ಗೊಂಡ್ವಾನ ಪ್ರದೇಶದ ಭಾಗವಾಗಿತ್ತು. ಅಲ್ಲಿ […]

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

ನಾಲ್ಕು ದಿನದ ಪಯಣ

ಕಾವ್ಯಯಾನ ನಾಲ್ಕು ದಿನದ ಪಯಣ ತೇಜಾವತಿ ಹೆಚ್.ಡಿ. ಪ್ರವಾಹವೋ ಬಿರುಗಾಳಿಯೋಚಂಡಮಾರುತವೋ ಜ್ವಾಲಾಮುಖಿಯೋ ಸುನಾಮಿಯೋ… ಯಾವುದೋ ಒಂದು ವಿಕೋಪಬಂದೆರಗಲೇಬೇಕುನವನೆಲೆ ರೂಪಾಂತರವಾಗಲುಹೊಸ ಅಲೆ ಪ್ರಸಾರವಾಗಲು… ಬೇಕಾದದ್ದು ಬೇಡವಾಗಿಬೇಡವಾದದ್ದು ಬೇಕಾಗಿಕಸ ರಸವಾಗಿ, ರಸ ಕಸವಾಗಿಎಲ್ಲವೂ ತಲೆಕೆಳಾಗಾಗುವವಿಚಿತ್ರ ಸತ್ಯ-ಮಿಥ್ಯ ಪ್ರತಿಬಿಂಬಗಳ ದರ್ಶನವಾಗಲು…ಓ ಕಾಲನೇ… ವಜ್ರಕ್ಕಿಂತಲೂ ನೀನೆಷ್ಟು ಕಠೋರ.. ನಿನ್ನನುಗ್ರಹವಿದ್ದರೆಹೂವಿನ ಮೇಲಿನ ನಡಿಗೆಇಲ್ಲದಿದ್ದರೆ..ಕತ್ತಿಯ ಮೇಲಿನ ನಡಿಗೆಮುಟ್ಟಿದ್ದೆಲ್ಲಾ ಮಲ್ಲಿಗೆಯಾಗಿಸುವ ನಿನಗೆತಾಕಿದ್ದೆಲ್ಲ ನಂಜಾಗಿಸುವ ಕಲೆಯೂ ಕರಗತವಾಗಿದೆ ಬಿಡು.. ಎಂದಾದರೂ ನಿನ್ನಂತರಗವ ಅಳೆಯಲಾದೀತೇ…?ಈ ಕ್ಷಣಿಕದ ಗೊಂಬೆಗಳು..! ದಾನ ಮಾಡಿದ ಕರಗಳು ಬೇಡುವುದೆಂದರೇನು..ತನ್ನಸ್ತಿತ್ವವ ಪರರ ವಶದಲ್ಲಿಟ್ಟುನಶ್ವರದ ಬಾಳು ಬದುಕುವುದೆಂದರೇನು.. ನೂರೊಂದು […]

ಸಾವಿತ್ರಿ

ಕವಿತೆ ಸಾವಿತ್ರಿ ಡಾ.ಸುರೇಖಾ ರಾಠೋಡ ವೀರ ಮಹಿಳೆ ಸಾವಿತ್ರಿಅಕ್ಷರದ ಅವ್ವ ಸಾವಿತ್ರಿ ಅಕ್ಷರ ಕಲಿಯಲು ಹೊರಾಡಿದಅಕ್ಷರ ಕಲಿಸಲು ಶ್ರಮಿಸಿದವೀರ ಮಹಿಳೆ ಸಾವಿತ್ರಿ ದಿನ ದಲಿತರ ಶಿಕ್ಷಣಕ್ಕಾಗಿನಿಂದನೆ, ಅಪಮಾನ, ಅವಮಾನಗಳನ್ನುಸಹಿಸಿದ ವೀರ ಮಾತೆ ಸಾವಿತ್ರಿ ಬಡವಬಲ್ಲಿದವರೆನ್ನೆದೆ ಎಲ್ಲರಸೇವೆ ಮಾಡಿದದೇಶದ ಮೊದಲ ಶಿಕ್ಷಕಿಮೊದಲ ಮುಖ್ಯೋಪಾಧ್ಯಾಯಿನಿಸಾವಿತ್ರಿ ಮಹಿಳಾ ಶಿಕ್ಷಣಕ್ಕಾಗಿ ಜೀವನವನ್ನೇಮುಡುಪಾಗಿಟ್ಟವೀರ ಮಾತೆ ಸಾವಿತ್ರಿ ಜ್ಯೋತಿ ಬಾ ಪುಲೆಯವರೊಂದಿಗೆಶಾಲೆಗಳನ್ನು ತೆರೆದ ಶಿಕ್ಷಣದಾತೆಸಾವಿತ್ರಿ ಜನರ ಕೆಂಗಣ್ಣಿಗೆ ಗುರಿಯಾಗಿಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡುದಿಟ್ಟತನದಿಂದ ಮುಂದೆ ನಡೆದದಿಟ್ಟ ಮಹಿಳೆ ಸಾವಿತ್ರಿ ಶಾಲಾ ಮಕ್ಕಳ ಬೇಕು ಬೇಡಗಳನ್ನುಕುಂದುಕೊರತೆಗಳನ್ನು ನಿಗಿಸಿದಸಹನಾಮಯಿ ಸಾವಿತ್ರಿ […]

ಮಾತು ಮನವನ್ನು ಅರಳಿಸಬೇಕು

ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ  ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ  ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ  ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು  ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು […]

ನನ್ನ ಪ್ರೀತಿಯ ಭಾರತ

ಪುಸ್ತಕ ಸಂಗಾತಿ ನನ್ನ ಪ್ರೀತಿಯ ಭಾರತ ಪುಸ್ತಕ:  ನನ್ನ ಪ್ರೀತಿಯ ಭಾರತ ಲೇಖಕರು : ಜಿಮ್ ಕಾರ್ಬೆಟ್  ಕನ್ನಡಕ್ಕೆ : ಪ್ರೊ.ಆರ್.ಎಸ್.ವೆಂಕೋಬ್ ರಾವ್ ಪ್ರಕಾಶನ : ಚಾರು ಪ್ರಕಾಶನ ,ಬೆಂಗಳೂರು ಬೆಲೆ: 125 ಲಭ್ಯತೆ: ಸಂಗಾತ ಪುಸ್ತಕ ,ಧಾರವಾಡ ಜಿಮ್ ಕಾರ್ಬೆಟ್ ಹೆಸರು ಕನ್ನಡಿಗರಿಗೆ ಚಿರಪರಿಚಿತ ,ಪೂರ್ಣ ಚಂದ್ರ ತೇಜಸ್ವಿ ಅವರಿಂದ ಕಾಡಿನಕಥೆಗಳ ಸರಣಿಗಳ ಮೂಲಕ  ಮನೆಮಾತಾಗಿರುವ ಜೀಮ್ ಕಾರ್ಬೆಟ್ ಮತ್ತು ಅವರ ಬರಹ ನಾಲ್ಕು ಗೋಡೆಗಳ ನಡುವೆ ,ಕಾಂಕ್ರೀಟ್ ಸೀಮೆಯ ಯಲ್ಲೂ ಪುಸ್ತಕಗಳನ್ನು ಹೀಡಿದರೆ ಕಾಡಿನ […]

Back To Top