ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.

ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.

ಲೇಖನ ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. ಸುನೀತಾ ಕುಶಾಲನಗರ ಶಾಲೆ ಸೇರಿದಾಗಿನಿಂದ ಈವರೆಗೂ ಪ್ರತಿವರ್ಷ ಆಗಸ್ಟ್ ಬಂತೆಂದರೆ ಅದೇನೋ ಸಂಭ್ರಮ.ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ವಾತಂತ್ರೋತ್ಸವದ ಸಡಗರ ಅದು ಹಾಗೆಯೇ ಉಳಿಯಲು  ಮತ್ತು ಬೆಳೆಸಲು ಶಿಕ್ಷಕ ವೃತ್ತಿಯಲ್ಲಿರುವುದರಿಂದ ಮತ್ತಷ್ಟು ಉತ್ಸಾಹಿಯಾಗಿ ನಿರ್ವಹಿಸುವ ಅವಕಾಶ. ವಿದ್ಯಾರ್ಥಿಗಳಾಗಿದ್ದಾಗ  ದೇಶಭಕ್ತಿ ಮೈಗೂಡಿಸುವ ಭಾಷಣದ  ಬಾಯಿಪಾಠ,ದೇಶಭಕ್ತಿ ಗೀತೆ ಹಾಡಿ ನಲಿದು  ಶಿಕ್ಷಕರು ಕೊಡುವ ಮಿಠಾಯಿ ಚೀಪುತ್ತಾ ಕೇಕೆ ಹಾಕಿ  ಆ ದಿನ ಸವಿದ ಖುಷಿಯನ್ನು ಮೆಲುಕಿಸುತ್ತಾ ಮನೆಗೆ ತೆರಳುತಿದ್ದ ನೆನಪು ಮೊನ್ನೆ ಮೊನ್ನೆಯೆಂಬಂತೆ.  ಸ್ವತಃ  ಶಿಕ್ಷಕಿಯಾಗಿರುವುದರಿಂದ […]

ಸ್ವಾತಂತ್ರೋತ್ಸವದ ವಿಶೇಷ

ಸಂವಿಧಾನ ಮತ್ತು ಮಹಿಳೆ. ನೂತನ ದೋಶೆಟ್ಟಿ  1)  ಅವಳು 23ರ ಹುಡುಗಿ. ಆಗಲೇ ಮದುವೆಯಾಗಿ ಎರಡು ಮಕ್ಕಳು. ಅಂದು ಮನೆಕೆಲಸಕ್ಕೆ ಬಂದಾಗ ಬಹಳ ಸಪ್ಪಗಿದ್ದಳು. ಬಾಯಿಯ ಹತ್ತಿರ ರಕ್ತ ಕರೆಗಟ್ಟಿತ್ತು.ಏನೆಂದು ಕೇಳುವುದು? ಇದೇನು ಹೊಸದಲ್ಲ. ಅವಳ ಕುಡುಕ ಗಂಡ ಹೊಡೆಯುತ್ತಾನೆ. ತನ್ನ ಕುಡಿತದ ದುಡ್ಡಿಗೆ ಅವಳನ್ನೇ ಪೀಡಿಸುತ್ತಾನೆ. ಪುಟ್ಟ ಇಬ್ಬರು ಮಕ್ಕಳ ಜೊತೆ ನಾಲ್ವರ ಸಂಸಾರದ ಹೊಣೆ ಅವಳ ಮೇಲಿದೆ. ವಾರದಲ್ಲಿ ಎರಡು ದಿನ ಗಂಡನಿಂದ  ಹೊಡೆಸಿಕೊಂಡು ಬರುತ್ತಿದ್ದವಳು ಈಗ ದಿನವೂ ಬಡಿಸಿಕೊಳ್ಳುತ್ತಿದ್ದಾಳೆ.  ಅವಳ ನೋವು ನೋಡಲಾಗದೆ,  […]

ಗಾಳಿ ಪಟ

ಕವಿತೆ ಗಾಳಿ ಪಟ ರೇಷ್ಮಾ ಕಂದಕೂರ. ಕೆಲವೊಮ್ಮೆ ಏರುಇನ್ನೊಮ್ಮೆ ಇಳಿತಹರಿಯ ಬಿಡದಿರುಸಮತೋಲನದ ಬಾಲಂಗೋಚಿ ಗಾಳಿ ಬಂದ ಕಡೆ ಮುಖ ಮಾಡಿಘಾಸಿಗೊಳಿಸುವೆ ಮನವಅತ್ತಿಂದಿತ್ತ ಸುಳಿಯುತಬಾನ ಚಿತ್ತಾರದಿ ತೇಲುತಿದೆ ಬಾನಂಚಿಗೆ ಸಾಗುವ ಕನಸಿಗೆಬಣ್ಣ ಹಚ್ಚುತ ಸಾಗಿದೆಮಕ್ಕಳ ಮನ ತಣಿಸುತಕುಣಿದಿದೆ ಎಲ್ಲ ಮರೆತು ತಾಗದಿರಲಿ ಕುಗ್ಗುವ ಮಾತುಸಿಗದಿರಲಿ ಆಡಿಕೊಳ್ಳುವವರಿಗೆಮೇಲೇರುವ ಧಾವಂತಕೆನೂರೆಂಟು ವಿಘ್ನಸಾವರಿಸಿ ಮೇಲೇರುತಲಿರು ಬೇಕಾ ಬಿಟ್ಟಿತನ ಬೇಡಸಾಕೆಂದು ಕುರದೇಗುರಿಯ ಸಾಕಾರಕೇಗುರುತರ ಜವಾಬ್ದಾರಿಯಲಿ ಏರಿದವ ಕೆಳಗಿಳಿಯಲೇ ಬೇಕುಸೂರೆ ಮಾಡಿದವ ಸೆರೆಯಾಗುವಎಲ್ಲವನು ಸುಸ್ಥಿತಿಯಲಿ ನೋಡುಬಾಳ ಬೆಳಗುವೆ ನಿರಾತಂಕದಿ. **************************************

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ […]

ರಾಹತ್ ಇಂದೋರಿ

ಅನುವಾದಿತ ಕವಿತೆ ಮೂಲ: ರಾಹತ್ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ಕಂಗಳಲ್ಲಿ ನೀರು ತುಟಿಗಳಲ್ಲಿ ಕಿಡಿಯನ್ನು ಇರಿಸಿಬದುಕ ಮಾಡಬೇಕೆಂದರೆ ಯೋಜನೆಗಳು ಹಲವು ಇರಿಸಿ ಕಲ್ಲುಮುಳ್ಳುಗಳದೇ ದಾರಿಯಲಿ ಗುರಿ ಏನೂ ದೊಡ್ಡದಲ್ಲಕೂಗಿ ಕರೆಯುತಿದೆ ದಾರಿ ಪಯಣ ಜಾರಿ ಇರಿಸಿ ಒಂದೇ ನದಿಗೆ ಎರಡು ದಡಗಳು ಸ್ನೇಹಿತರೆಬದುಕಿನೊಂದಿಗೆ ಸ್ನೇಹ ಸಾವಿನೊಂದಿಗೆ ಸಖ್ಯ ಇರಿಸಿ ಬಂದು ಹೋಗುವ ಕ್ಷಣಗಳು ಉಸುರುತಿವೆ ಕಿವಿಯಲ್ಲಿಏನೋ ಘಟಿಸುವುದಿದೆ ಎಲ್ಲ ತಯಾರಿ ಇರಿಸಿ ಜರೂರಿ ಇದೆ ಕಣ್ಣುಗಳಲಿ ಕಲ್ಪನೆ ಇರಿಸುವುದುನಿದ್ದೆ ಇರಿಸದಿದ್ದರೂ ಕನಸೊಂದಿಗೆ ಗೆಳೆತನ ಇರಿಸಿ ಬೀಸುವ ಗಾಳಿ ಹೊತ್ತಯ್ಯದಿರಲಿ […]

ಮನಸ್ಸು ಎಂಬ ಮನುಷ್ಯನ ತಲ್ಲಣ

ಲೇಖನ ಮನಸ್ಸು ಎಂಬ ಮನುಷ್ಯನ ತಲ್ಲಣ ವಿ ಎಸ್ ಶಾನ್ ಭಾಗ್ ಕೋರೋನ ಎಂಬ ಮಹಾಮಾರಿ ರೋಗ ಜಗತ್ತನ್ನು ಕಾಡುತ್ತಿದೆ. ಎಲ್ಲ ದೇಶಗಳ ಜನರ ನಾಲಿಗೆಯ ಮೇಲೆ ಒಂದೇ ಹೆಸರು ಕೊರೊನ ಅಂದರೆ ಕೋವಿಡ್-೧೯ ಎಲ್ಲರ ಭಾವನೆ ,ಒಂದೇ ಅದೆಂದರೆ ಅನಿಶ್ಚಿತತೆ ಮತ್ತು ಅಸಹಾಯಕತೆ,ತನ್ನ ಆತ್ಮೀಯರನ್ನು ಕಳೆದುಕೊಳ್ಳುವ ಭೀತಿ ಒಂದಾದರೆ ಆಯಾ ದೇಶದ ಜನರಿಗೆ ವಿಧಿಸಿದ ಕೆಲವು ನಿಬಂದನೆಗಳು ಮನೋಕ್ಲೇಶವನ್ನು ಉಂಟುಮಾಡಿದೆ..ಕೋವಿಡ್_೧೯ ಮನುಷ್ಯನ ಜೀವನ ಮತ್ತು ಮರಣದ ನಡುವೆ ನಿಂತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ನಂತರ ಹುಟ್ಟಿದವರಿಗೆ […]

ನ್ಯಾಯಕ್ಕಾಗಿ ಕೂಗು

ಕವಿತೆ ನ್ಯಾಯಕ್ಕಾಗಿ ಕೂಗು ನೂತನ ದೋಶೆಟ್ಟಿ ಕೈ ಎತ್ತಿ ಜೈಕಾರ ಹಾಕಿದಾಗಎಲ್ಲರೂ ಒಂದೆಂಬ ಅನುಭವಬಾಯಿಸೋತ ಬಿಡುವಿನಲ್ಲಿಸಣ್ಣ ಗುಸುಗುಸು ಪತ್ರಿಕೆಯವರೆದುರುಪೋಸು ಕೊಟ್ಟವರುಬಾರದ ಭಾಷೆಯಲ್ಲಿ ತೊದಲಿದವರುಮತ್ತೆ ಚುರುಕು ಕ್ಯಾಮರಾಕ್ಕಾಗಿಕಾಲರ್ ಎಳೆದುಕೊಂಡರುನೆರಿಗೆ ಸರಿ ಮಾಡಿಕೊಂಡರುಮಿಂಚಿನ ಸಂಚಾರ ಬೇಡಿಕೆಗಳು ಉರುಹೊಡೆಯಲುಅಲ್ಲಲ್ಲಿ ಚದುರಿದವರುಹಣುಕಿದರುಒಂದಾದರು ದಂಡು, ಮೆರವಣಿಗೆಗಳೆಲ್ಲಮುಗಿದಾಗಜಾತಿ- ಮಾತು, ಊರು- ಕೇರಿಗಳಗುಂಪು ಒಡೆದು ಒಂದಾಗಿ ಬಾಳಿದಇತಿಹಾಸದ ಪುಟಗಳಲಿಪುನರಾವರ್ತನೆಯ ಮಂತ್ರಅನಿವಾರ್ಯ ವರ್ಷಗಳ ಹೊಸ್ತಿಲಲ್ಲಿಮೊರೆಯಿಡುತ್ತಿರುವ ನ್ಯಾಯ. ( 2009ರಲ್ಲಿ ಬರೆದದ್ದು. 73 ನೇ ಸ್ವಾತಂತ್ರ್ಯ ದಿನದ ಹೊಸ್ತಿಲಲ್ಲಿ ನಿಂತು ನೋಡಿದಾಗ ಕಾಲ ಅಲ್ಲಿಯೇ ನಿಂತಿದೆಯೇ ಎಂಬ ಅನುಮಾನ.) ***********************************

ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’

ಕವಿತ ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ ವಸುಂಧರಾ ಕದಲೂರು ನನ್ನಪ್ಪನಿಗೆ ಹೆಚ್ಚೇನೂ ಆಸೆಗಳಿರಲಿಲ್ಲನಮ್ಮ ಓದಿನ ಕುರಿತೂ…ಹೆಣ್ಣು ಮಕ್ಕಳಿಗೆ ಆದಷ್ಟು ಬೇಗಮದುವೆಯಾದರೆ ಸಾಕು. ಒಳ್ಳೆಯಹುಡುಗ ತನಗೆ ಅಳಿಯನಾಗಿ,ಮಕ್ಕಳಿಗೆ ಬಲವಾದ ಗಂಡನಾಗಿಒಟ್ಟಾರೆ ಚೆಂದಾಗಿ ಬದುಕಿದರೆ ಸಾಕು. ಇಷ್ಟೇ… ನನ್ನಪ್ಪ ಎಂದೂ ಯಾವಹೆಣ್ಣುಮಕ್ಕಳನ್ನು ಹೀಗಳೆಯಲಿಲ್ಲ,ನಿಮ್ಮ ಕೈಲಾಗದ ಕೆಲಸವಿದೆಂದುಹೇಳಿ ನಮ್ಮ ಚೈತನ್ಯವನೆಂದೂಉಡುಗಿಸಲಿಲ್ಲ.ನಾವೊಂದು ಹೊರೆಯೆಂದುನಡೆ ನುಡಿಯಲೆಂದೂ ತೋರಲಿಲ್ಲ.ಗಂಡುಮಕ್ಕಳೊಡನೆ ಹೋಲಿಸಿಜರಿಯಲಿಲ್ಲ. ಜರಿಯ ಲಂಗ ಹೊಲೆಸಿಕೊಡುವುದ ಮರೆಯಲಿಲ್ಲ. ನನ್ನಪ್ಪನಿಗೆಂದೂ ಅಪಾರಆಸ್ತಿ ಗಳಿಸುವ ಹುಕಿ ಹುಟ್ಟಿರಲಿಲ್ಲ.ಬಂಧುಜನ ಪ್ರೀತಿ; ಗಳಿಸಿದ ಸ್ನೇಹವಿಶ್ವಾಸಗಳನು ಜೋಪಾನ- ಜತನಮಾಡುವ ರೀತಿ ಇಷ್ಟೇ ಆತ ಕೊನೆಗೆನಮಗಾಗಿ ಗಳಿಸಿಟ್ಟ […]

ಏಕಾಂತವೆಂಬ ಹಿತ

ಕವಿತೆ ಏಕಾಂತವೆಂಬ ಹಿತ ಶ್ರೀದೇವಿ ಕೆರೆಮನೆ ಇಷ್ಟಿಷ್ಟೇ ದೂರವಾಗುವನಿನ್ನ ನೋಡಿಯೂ ನೋಡಲಾಗದಂತೆಒಳಗೊಳಗೇ ನವೆಯುತ್ತಿದ್ದೇನೆಹೇಳಿಯೂ ಹೇಳಲಾಗದಒಂಟಿತನವೆಂಬ ಕೀವಾದ ಗಾಯಕ್ಕೀಗಮಾಯಲಾಗದ ಕಾಲಮುಲಾಮು ಸವರಲು ನಿರಾಕರಿಸುತ್ತಿದೆಅಸಹಾಯಕಳಾಗಿ ನೋಡುತ್ತಿದ್ದೇನೆನಮ್ಮಿಬ್ಬರ ನಡುವೆಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಅಂತರವನ್ನು ಎಂದೋ ಆಡುವ ಎರಡೇ ಎರಡುಮಾತಿನ ನಡುವೆಯೇಒತ್ತರಿಸಿ ಬರುವ ಯಾವುದೋ ರಾಜಕಾರ್ಯಮಾತು ಹಠಾತ್ತನೆ ನಿಂತುಒಂದು ನಿಮಿಷ ಎಂದು ಹೊರಟ ನಿನಗೆಕಾಲ ಗಳಿಗೆಗಳ ಹಂಗಿಲ್ಲಕಾದು ಕುಳಿತ ನನಗೆ ಮಾತ್ರಪ್ರತಿ ಕ್ಷಣವೂ ವರುಷವಾಗುತ್ತಿರ ಭಯ ಮತ್ತೆ ಮಾತನಾಡುವ ಸಮಯಕ್ಕಾಗಿನಾನು ಜಾತಕಪಕ್ಷಿಯಾಗಿ ಕಾಯುತ್ತಿದ್ದರೆಎಂದೂ ಮುಗಿಯದ ನಿನ್ನ ಕೆಲಸಗಳುಈ ಜನ್ಮದಲ್ಲಿ ಮಾತನಾಡಲು ಬಿಡದಂತೆಸದಾ ಸತಾಯಿಸುತ್ತವೆ […]

ಷರತ್ತು

ಕವಿತೆ ಷರತ್ತು ಮಾಂತೇಶ ಬಂಜೇನಹಳ್ಳಿ ಈಗ ಮಳೆ ಬಿಟ್ಟಿದೆ.ಅವಳ ನೆನಪುಗಳ ಹದವಾಗಿ,ಎದೆಯ ಬಾಣಲೆಯೊಳಗೆ,ಕಮ್ಮಗೆ ಹುರಿಯುವ ಸಮಯ.. ಚಿಟಪಟವೆಂದು ಒಂದಷ್ಟು,ಜೋಳದ ಕಾಳುಗಳಂತೆನೆನಪ ಬಿಸಿಗೆ ಸಿಡಿದಾವು.ಸಾವಧಾನಕ್ಕಾಗಿ ನೆನೆವ ಉರಿ ತಗ್ಗಿಸುವುದು,ಹೃದ್ಯೋಧರ್ಮ.. ನಿಗವಿಡುತ್ತೇನೆ. ಮಳೆಗೂ ಗೊತ್ತು ಧೋ!!ಎಂದುಒಂದೇ ಸಮನೆ ಸುರಿದರೆ,ಒಬ್ಬ ಪ್ರೇಮಿ ಅವಳಿಗಾಗಿ ಪರಿತಪಿಸುವುದಿಲ್ಲವೆಂದೂ,ನೆನಪಿಸುವುದಕ್ಕೆ ನೆಲ ರಾಚುವಹನಿಗಳ ಕರತಾಡನ ಸುಖಾ ಸುಮ್ಮನೆ ಅಡ್ಡಿಯಾದೀತೆಂದು. ಗರಕ್ಕನೆ ನಿಂತು ಬಿಟ್ಟರೆ ಅಬ್ಬಬ್ಬಾ!ಹುಬ್ಬೆ ಮಳೆ ಸುರಿದು ಸಮ ರಾತ್ರಿಗೆ,ಮಲಗಿದ ಬೆಳಗಿಗೆ ಮೃದು ನೆಲದಲ್ಲಿ,ಮನೋಸೆಳೆವ ಅಣಬೆಗಳಂತೆ ಉಬ್ಬುವಆಕೆಯ ನೆನಪುಗಳು ದಾಂಗುಡಿಯಾಗುತ್ತವೆ. ಮುಂದಿನದ್ದು ನಿರತ ಅನುಭವಿಸುವ,ನಾನು ಮಾತ್ರ ನನ್ನೊಳಗೆ,ಆಕೆಯ […]

Back To Top