ಕವಿತೆ
ನ್ಯಾಯಕ್ಕಾಗಿ ಕೂಗು
ನೂತನ ದೋಶೆಟ್ಟಿ
ಕೈ ಎತ್ತಿ ಜೈಕಾರ ಹಾಕಿದಾಗ
ಎಲ್ಲರೂ ಒಂದೆಂಬ ಅನುಭವ
ಬಾಯಿಸೋತ ಬಿಡುವಿನಲ್ಲಿ
ಸಣ್ಣ ಗುಸುಗುಸು
ಪತ್ರಿಕೆಯವರೆದುರು
ಪೋಸು ಕೊಟ್ಟವರು
ಬಾರದ ಭಾಷೆಯಲ್ಲಿ ತೊದಲಿದವರು
ಮತ್ತೆ ಚುರುಕು
ಕ್ಯಾಮರಾಕ್ಕಾಗಿ
ಕಾಲರ್ ಎಳೆದುಕೊಂಡರು
ನೆರಿಗೆ ಸರಿ ಮಾಡಿಕೊಂಡರು
ಮಿಂಚಿನ ಸಂಚಾರ
ಬೇಡಿಕೆಗಳು ಉರುಹೊಡೆಯಲು
ಅಲ್ಲಲ್ಲಿ ಚದುರಿದವರು
ಹಣುಕಿದರು
ಒಂದಾದರು
ದಂಡು, ಮೆರವಣಿಗೆಗಳೆಲ್ಲ
ಮುಗಿದಾಗ
ಜಾತಿ- ಮಾತು, ಊರು- ಕೇರಿಗಳ
ಗುಂಪು
ಒಡೆದು ಒಂದಾಗಿ ಬಾಳಿದ
ಇತಿಹಾಸದ ಪುಟಗಳಲಿ
ಪುನರಾವರ್ತನೆಯ ಮಂತ್ರ
ಅನಿವಾರ್ಯ ವರ್ಷಗಳ ಹೊಸ್ತಿಲಲ್ಲಿ
ಮೊರೆಯಿಡುತ್ತಿರುವ ನ್ಯಾಯ.
( 2009ರಲ್ಲಿ ಬರೆದದ್ದು. 73 ನೇ ಸ್ವಾತಂತ್ರ್ಯ ದಿನದ ಹೊಸ್ತಿಲಲ್ಲಿ ನಿಂತು ನೋಡಿದಾಗ ಕಾಲ ಅಲ್ಲಿಯೇ ನಿಂತಿದೆಯೇ ಎಂಬ ಅನುಮಾನ.)
***********************************
ಸಕಾಲಿಕ..ವಸ್ತುನಿಷ್ಠ..
ಧನ್ಯವಾದಗಳು
ಬಹುಶಃ ನ್ಯಾಯಕ್ಕಾಗಿ ಮೊರೆ ಇಡುವ ಕಾಲ ಈ ನೆಲದಲ್ಲಮ ನಿರಂತರತೆಯನ್ನು ಕಾಯ್ದುಕೊಳ್ಳುತ್ತಲೇ ಇರುತ್ತದೆಯೇನೋ… ಕವಿತೆ ಮಾರ್ಮಿಕವಾಗಿದೆ.
Very timely
Where we where there we are…