ಹುಡುಕಾಟವೆಂಬುದು ವ್ಯಾಧಿ
ಅನುವಾದ ಸಂಗಾತಿ ಹುಡುಕಾಟವೆಂಬುದು ವ್ಯಾಧಿ ಕನ್ನಡ ಮೂಲ:ಸ್ಮಿತಾ ಅಮೃತರಾಜ್. ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಒಂದು ಪಾತ್ರೆಯ ಗಾತ್ರತನ್ನ ಪಾತ್ರಕ್ಕಿಂತ ಹೆಚ್ಚಿಗೆಇನ್ನೇನು ಭರಿಸಲು ಸಾಧ್ಯನೀನೇ ಹೇಳು?ಮೊಗೆದು ಮೊಗೆದು ಮತ್ತೂ ಮತ್ತೂಸುರಿದು ತುಂಬಿದ್ದಕ್ಕೆ ಕಾರ್ಯ ಕಾರಣವುಂಟೇ? ಕವಿತೆಗೂ ವಿಜ್ಞಾನಕ್ಕೂ ಕೂಡಿಬರದು ಸಖ್ಯಇದು ನಿನಗೂ ಗೊತ್ತಿರುವಂತಸತ್ಯ. ಸುರಿಯುವ ಓಘಕ್ಕೆತುಂಬಿದ್ದೂ ಚೆಲ್ಲಿ ಆರಿ ಹೋಗುತ್ತಿದೆಕಂಡೂ ಕಾಣದಂತಿರುವ ಸಣ್ಣದೊಂದುಬಿರುಕು ಪಾತ್ರದ ತಳಕ್ಕೀಗಅಡರಿಕೊಂಡಿದೆ. ಹಿಡಿ ಹೃದಯ ಮುಷ್ಟಿ ಗಾತ್ರಎದೆ ಬಡಿತ ರಕ್ತ ಸಂಚಲನಹಿಡಿ ಜೀವ ಇಲ್ಲೇ ಹಿಡಿದು ನಿಂತಿದೆಯೆನ್ನುವುದುಎಲ್ಲರಂತೆ ನೀನೂ ಓದಿ ಉರು ಹೊಡೆದವಳೆ.ಬದುಕು […]
ವಾರ್ಷಿಕ ವಿಶೇಷಾಂಕ
‘ಸಂಗಾತಿ’ ಕನ್ನಡ ಸಾಹಿತ್ಯದ ವೆಬ್ ಪತ್ರಿಕೆ ಇದೇ ಅ.೨೦ ಕ್ಕೆ ಎರಡು ವರ್ಷ ಮುಗಿಸಿ,ಮೂರನೇ ವಸಂತಕ್ಕೆ ಅಡಿಯಿಡುತ್ತಿದೆ
ಈ ಎರಡು ವರ್ಷಗಳಲ್ಲಿ ಸಂಗಾತಿ ಪತ್ರಿಕೆ ಕವಿತೆ, ಕತೆ, ಜೀವನ ಚರಿತ್ರೆ, ಅಂಕಣ ಬರಹಗಳ ಮೂಲಕ ಕನ್ನಡ ಸಾಹಿತ್ಯದ ವರ್ತಮಾನದ ದನಿಯನ್ನು ಕಟ್ಟಿಕೊಟ್ಟಿದೆ. ನಾಡಿನ ಹಿರಿಯರು, ಕಿರಿಯರು ಸಂಗಾತಿಗೆ ಬರೆದಿದ್ದಾರೆ.
ಎರಡು ವರ್ಷದ ಪಯಣದ ಈ ಸಂದರ್ಭದಲ್ಲಿ ಪತ್ರಿಕೆ ವಿಶೇಷ ಸಂಚಿಕೆ ತರಲು ತಿರ್ಮಾನಿಸಿದೆ
ಗಝಲ್
ಕ್ಷಮೆ,ದಯೆ,ವಾತ್ಸಲ್ಯಗಳ ಮಹಾಮೂರ್ತಿ
ಸದ್ಗುಣಿಯಾಗು ದೊರೆಯೆ
ಪ್ರಮಾದಗೈದವರಿಗೆ ಪಶ್ಚಾತಾಪದ ಚಣವನ್ನು
ಕೊಡಲಾಗದ ನಿನ್ನ ಜನ್ಮ ಸಾರ್ಥಕವೆ
ಪ್ರಿಯ ಬಾಪುವಿಗೊಂದು ಪತ್ರ
ಹೋರಾಟ, ಜೈಲು, ಉಪವಾಸ, ಬರಹ, ತ್ಯಾಗ- ಅಬ್ಬಬ್ಬಾ! ಬರೆಯುತ್ತಾ ಹೋದರೆ ಎಂದೂ ಮುಗಿಯದಿರುವ ಅಗಣಿತ ಅದ್ಭುತ ನೀವು. ನಿಮ್ಮ ಬದುಕಿನ ರೀತಿ, ನೀತಿ, ಸಿದ್ಧಾಂತಗಳು ಇಂದಿಗೂ ಚಾಲ್ತಿಯಲ್ಲಿರುವುದನ್ನು ಕಂಡಾಗ ನನ್ನ ಮನಸ್ಸು ಹೇಳುತ್ತದೆ- ‘ಬಾಪು, ನೀವು ಎಂದೆಂದಿಗೂ ಅಮರ.’
ಗಜಲ್
ಕಾಯಕದ ಹೆಸರಲ್ಲಿ ಹವ್ಯಾಸಗಳು ಬದಲಾಗುತಿವೆ ಇಂದು
ಉಡುಗೆ-ತೊಡುಗೆಗಳು ದರ್ಪದಿಂದ ನರ್ತಿಸುತಿವೆ ಹೇಗೆ ಸಹಿಸಲಿ
ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ.
ಬಾಪು ಮತ್ತು ವೈರುಧ್ಯ
ಎಷ್ಟೇ ವೈರುಧ್ಯಗಳಿದ್ದರೂ
ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು
ಕೆಸರನಲ್ಲಿದ್ದರು ಕೆಸರಿನಂತಾಗದೆ
ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು
ಪತ್ರಕರ್ತ ಗಾಂಧೀಜಿ
ಪತ್ರಿಕೋದ್ಯಮ ನನಗೆ ಶಿಕ್ಷಣ ಇದ್ದಂತೆ. ನನ್ನೊಳಗೆ ಇಣುಕಿ ನೋಡಿ ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಚುರುಕಾದ ಪದಪ್ರಯೋಗ, ಕಠಿಣ ವಿಶೇಷಣ ಬಳಸಬೇಕೆಂದು ನನ್ನ ಕೋಪ ಹಾಗೂ ಪ್ರತಿಷ್ಠೆ ಆಜ್ಞಾಪಿಸುತ್ತದೆ. ಕಳೆಯನ್ನೆಲ್ಲಾ ಕಿತ್ತುಹಾಕಲು ಬರವಣಿಗೆ ಒಂದು ಸಾಧನ ಎನ್ನುತ್ತಿದ್ದ ಗಾಂಧೀಜಿ ಒಬ್ಬ ಮಹಾಗದ್ಯ ಶಿಲ್ಪಿ
ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ…
ಸಾದಾರಣ ರೂಪು, ಸಾದಾರಣ ಉಡುಪಿನ, ಕುಳ್ಳಗಿನ ಆಕಾರದ ದೇಶದ ಪ್ರಧಾನಿಯೆನಿಸಿದ ವ್ಯಕ್ತಿಯೊಬ್ಬರೂ ತುಸು ದುಗುಡದಿಂದ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರ ಮನದಲ್ಲಿ ನೂರಾರು ಚಿಂತೆಗಳಿವೆ. ‘ ಹತ್ಯಾರೋಂ ಕಾ ಜವಾಬ್, ಹತ್ಯಾರೋಂಸೆ ದೇಂಗೆ..
ಗಾಂಧೀ ಬರಬಹುದೇ?
ಬರಬಹುದೇ ಗಾಂಧೀ?!
ಗಾಂಧೀ ಮತ್ತೇ ಬಂದರೇ
ಗಹಗಹಿಸಿ ಈ ಲೋಕ ನಗುವುದಿಲ್ಲವೇ?!