ನೀನಿಲ್ಲದೇ..
ಪ್ರತಿ ಸಂಜೆಯಲೂ ನೆನಪು ಅರಳಿ
ಇರುಳೆಲ್ಲಾ ಎಚ್ಚರಾಗಿ..
ಹಗಲು ಮಗ್ಗಲು ಮುರಿದು ಮತ್ತೆ ಬೆಳಕಾಗಿ
ಚಾಕು ಹೆಗಡೆ
ಇಂತಹ ಎಷ್ಟೋ ಘಟನೆಗಳಿಗೆ ಕುಮಾರ ಹೆಗಡೆ ಕಾರಣನಾದರೂ ಅವನು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದಿಲ್ಲ. ಅವನ ಮಟ್ಟಿಗೆ ಎಲ್ಲರಿಂದಲೂ ಪ್ರೀತಿ ಪಡೆಯಬೇಕು ಎನ್ನುವ ಆಸಕ್ತಿ. ಆದ್ದರಿಂದಲೇ ಎಲ್ಲರಿಗೂ ಅವನಲ್ಲಿ ವಿಶ್ವಾಸ. ಎಲ್ಲರಿಗೂ ಅವನ ಮಧ್ಯಸ್ತಿಕೆ ಬೇಕೇ ಬೇಕು. ಊರಿನಲ್ಲಿ ಯಾವ ಪಂಚಾಯ್ತಿಯಾದರೂ ಕುಮಾರ ಹೆಗಡೆಗೆ ಕರೆ ಹೋಗುತ್ತದೆ
ನದಿಯಂತೆ.
ನನಗೊಮ್ಮೆ ಅನಿಸುತ್ತದೆ
ನಾನೊಂದು ನದಿಯಂತೆ ಹರಿಯಬೇಕು
ಪ್ರಶಾಂತವಾಗಿ
ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ
ಲೇಖನ ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ ವಿಶ್ವನಾಥ ಎನ್ ನೇರಳಕಟ್ಟೆ ಹಳಗನ್ನಡ ಸಾಹಿತ್ಯವನ್ನು ಅಭ್ಯಸಿಸುವ ನಿಟ್ಟಿನಲ್ಲಿ ಇಂದಿನ ಬಹುತೇಕ ವಿದ್ಯಾರ್ಥಿಗಳ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಒಂದು ಕಾಲಘಟ್ಟದಲ್ಲಿ ಅಧ್ಯಯನದ ಪ್ರಮುಖ ಭಾಗವಾಗಿದ್ದ ಹಳಗನ್ನಡ ಸಾಹಿತ್ಯ ಇಂದು ಬಹುತೇಕ ಸಂದರ್ಭಗಳಲ್ಲಿ ಪರೀಕ್ಷೆಯ ಉದ್ದೇಶಕ್ಕಾಗಿ ಮಾತ್ರವೇ ಅಧ್ಯಯನಕ್ಕೆ ಒಳಪಡುತ್ತಿದೆ. ಅದರ ಕುರಿತಾದ ಆಸಕ್ತಿಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಾರೆ. ಇದು ಕೇವಲ ವಿದ್ಯಾರ್ಥಿ ವಲಯದ ಮನೋಭಾವವಲ್ಲ. ಕನ್ನಡ ಭಾಷೆ- ಸಾಹಿತ್ಯವನ್ನೇ ಜೀವನ ನಿರ್ವಹಣೆಯ […]
ಬರೆ
ಗಾಳಿ ಬೀಸಿದೆ
ನಿನ್ನ ಗಾಯಗಳಿಗೆ – ಮಾಯಲು ಒಂದು ತೆರ.
ಬಳಸಿಕೋ…
ಯಾರೂ ಪರದೇಶೀಯರಲ್ಲ..
ನೆನಪಿಡಿ,
ಯಾರೂ ಪರದೇಶೀಯರಲ್ಲ,
ಯಾವ ನೆಲವೂ ಗೊತ್ತಿಲ್ಲದಲ್ಲ
ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು
ಗುಡಿಹಳ್ಳಿಗೆ ರಂಗಭೂಮಿ ಬಗ್ಗೆ ವಿಶೇಷ ಒಲವು ಆಸಕ್ತಿ. ವೃತ್ತಿ ಹಾಗೂ ಹವ್ಯಾಸಿ ನಡುವೆ ಕೊಂಡಿಯಾಗಿ ಬರಹ ಬರೆದ. ಹೆಚ್ವು ವೃತ್ತಿ ಕಲಾವಿದರ ಕಡೆಯೇ ವಾಲಿದ್ದ. ಹತ್ತಾರು ಆ ವೃತ್ತಿ ಕಲಾವಿದರ ಜೀವನಚರಿತ್ರೆ, ಪರಿಚಯ, ವಿಶ್ಲೇಷಣೆಯ ಕೃತಿ ಹೊರ ತಂದ.
ಮಲ್ಲಿಗೆ ಮೊಗ್ಗುಗಳು
ರಸಿಕನ ಕೈ ಸೇರಿದ ಮಲ್ಲಿಗೆ
ಮುಂಗೈ ಸುತ್ತಿಕೊಂಡಿವೆ
ಗೆಜ್ಜೆಯ ಗಲ್ ಗಲ್ ನಿಂದ
ದಣಿದು ಮೂಲೆ ಗುಂಪಾಗಿವೆ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ […]
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ