ಬರೆ

ಕಾವ್ಯಯಾನ

ಬರೆ

( ಮೈಸೂರಿನಲ್ಲಿ ನಡೆದ ಅತ್ಯಾಚಾರಕ್ಕೆ ಕವನ)

ಯಮುನಾ.ಕಂಬಾರ

Crimes against women | Women Laws India

ಮಳೆಯಲ್ಲಿ ತೋಯ್ದು
ತೋಯಿಸಿಕೊಂಡವರಿಗೆ – ಮಳೆಯದೇನು ಚಿಂತೆ……!!??

ಮೈಯಲ್ಲಿ ಸಲ್ಲದ
ನಂಜು ಸುರಿದಾಗ
ಮೂಢತನವೇಕೆ…….?? ಬಾಯಿ ಬಿಡಲು…..!!

ವಿಷ , ಗಾಯ
ಕೊರೆದ ಗೆರೆಗಳೇ ಸಾಕು
ನಿನಗೆ ಬೆನ್ನೆಲುಬಾಗಿ ನಿಲ್ಲಲು.

ಕ್ಷಣ ಧ್ಯಾನಿಸು
ಕ್ಷಣ ಚಿಂತಿಸು
ಒತ್ತಿ ಬರಿವುದು ಸಾಗರದ ಬಲ – ನಿನ್ನ ಹೋರಾಟಕೆ ; ಜೀವದ ತೆರ

ಗಾಳಿ ಬೀಸಿದೆ
ನಿನ್ನ ಗಾಯಗಳಿಗೆ – ಮಾಯಲು ಒಂದು ತೆರ.
ಬಳಸಿಕೋ…
ಊರುಗೋಲಾಗಿಸಿಕೋ…..
ನಿನ್ನ ಹಕ್ಕು ಕಸಿದ
ಗಳಿಗೆಗಳಿಗೆ,
ಠಕ್ಕ ಕೈಗಳಿಗೆ,
ಮಲಿನ ಮನಗಳಿಗೆ – ಶಾಸನವಾಗಿಸಲು ….!!
ಏಳೆ ಕೆಂಪು ಗೆರೆ
ಮತ್ತೆ,
ಮೀನ ಮೇಷ ಎನಿಸದ
ಎನ್ನಕೌಂಟರಿನ ಬರೆ…..!!

****

Leave a Reply

Back To Top