ಕಾವ್ಯಯಾನ
ನೀನಿಲ್ಲದೇ..
ಬಾಲಕೃಷ್ಣ ದೇವನಮನೆ
ಇಂಥ ಸಂಜೆಗಳೆಷ್ಟೋ ಜಾರಿದವು
ನಿನ್ನ ನೆನಪುಗಳ ಪುಟದೊಳಗೆ
ಹಾಗೇ ಕಾಪಿಟ್ಟ ನವಿಲುಗರಿಯೊಂದು
ಮತ್ತೆ ಚಿಗುರುವುದು ಪ್ರತಿ ಪುಟದ ನೆನಪಿನೊಳಗೆ…
ಹಿತವಾಗಿ ಉರಿಯುವ ನೋವುಗಳು
ನವುರಾಗಿ ಸುಖಿಸುವವು ನಿನ್ನ ನೆನಪಿನಿಂದ
ಮುಲಾಮಿಲ್ಲದೇ ನೋವು ವಾಸಿಯಾದರೂ
ಮತ್ತೆ ಮತ್ತೆ ಹಸಿಯಾಗುವುದು ನಿನ್ನ ನೆನಪುಗಳಿಂದ…
ಇರುಳು ಮರಳುವುದು
ಹಗಲಾಚೆಗಿನ ಪಾಳಿ ಸರಿದಂತೆ
ಮತ್ತೆ ಇರುಳಿನದೇ ಗಸ್ತು ನೆನಪುಗಳ ಸಂತೆಯಲ್ಲಿ…
ಇರುಳುಗಳಿಗೂ ಕಣ್ಣೆವೆ ಚಾಚದ ನಿದಿರೆ
ಬಿಟ್ಟ ಕಣ್ಣೊಳಗೆ ಚಂದ್ರ ತೇಲಿದಂತೆ…
ಇಷ್ಟಿಷ್ಟೇ ಬೆಳೆದು ಬೆಳಕಾದ ಹುಣ್ಣಿಮೆ
ಇಷ್ಟಿಷ್ಟೇ ಕರಗಿ ಕತ್ತಲಾದಂತೆ…
ಪ್ರತಿ ಸಂಜೆಯಲೂ ನೆನಪು ಅರಳಿ
ಇರುಳೆಲ್ಲಾ ಎಚ್ಚರಾಗಿ..
ಹಗಲು ಮಗ್ಗಲು ಮುರಿದು ಮತ್ತೆ ಬೆಳಕಾಗಿ…
************
ತುಂಬಾ ಚೆನ್ನಾಗಿದೆ
Super
ಧನ್ಯವಾದಗಳು ಸರ್