ಅಂಕಣ ಬರಹ ರುದ್ರಭೂಮಿಯಲೇ ಜ್ಞಾನೋದಯ             ಅಲ್ಲಮಪ್ರಭು ಭಾರತೀಯ ದಾರ್ಶನಿಕ ಚರಿತ್ರೆಯಲ್ಲಿ ಬಹಳ ದೊಡ್ಡ ಹೆಸರು. ಹನ್ನೆರಡನೆಯ ಶತಮಾನದ ಬಹುದೊಡ್ಡ ತಾತ್ವಿಕ ವಚನಕಾರ. ಇವನಷ್ಟು ನಿಖರ, ನೇರ ಮತ್ತು ಸ್ಪಷ್ಟವಾಗಿ ತಾತ್ವಿಕ ಸಂಘರ್ಷಕ್ಕೆ ನಿಲ್ಲುವ ಮತ್ತೊಬ್ಬನನ್ನು ಹುಡುಕಿದರೂ ವಚನಕಾರರಲ್ಲಿ ಸಿಕ್ಕುವುದು ಬಹಳ ಕಷ್ಟ ಮತ್ತು ವಿರಳ. ಸಾಮಾಜಿಕ ಸುಧಾರಣೆಯೇ ಪ್ರಮುಖ ಧ್ಯೇಯವಾಗಿ ನಡೆದ ಚಳುವಳಿಯ ಉಪೋತ್ಪನ್ನವಾಗಿ ಹುಟ್ಟಿದವು ವಚನಗಳು. ಕೊಂಡುಗೊಳಿ ಕೇಶಿರಾಜನಿಂದ ಕೊನೆ ಕೊನೆಯ ವಚನಕಾರನೆಂದು ಕರೆವುದಾದರೆ ಅಗ್ಘವಣಿಯ ಹಂಪಯ್ಯನವರೆಗೂ ಈ ವಚನ ಚಳುವಳಿಯ ಸಾಮಾಜಿಕ, ರಾಜಕೀಯ, […]

ಅನಾವರಣ

ಕವಿತೆ ಅನಾವರಣ ಸಂಗೀತ ರವಿರಾಜ್ ಬರೋಬ್ಬರಿ ಆರ್ವರ್ಷದಿಂದೀಚೆಗೆ ನೋಡುತ್ತಿದ್ದ ಧಾರಾವಾಹಿಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಸುಳಿವು ಸಿಗುತ್ತಿದ್ದಂತೆಹೆಂಗಳೆಯರಿಗೆ ಮುಂಗುರುಳ ಹಿಂದಕ್ಕೆ ನೀವಿಕೊಳ್ಳಲು ಮನಸ್ಸಾಗದ ಚಡಪಡಿಕೆಉರುಳಿದ ವರ್ಷಗಳು ಲೆಕ್ಕಕ್ಕೆ ಇಲ್ಲದಂತೆಉಳಿದ ದಿನಗಳ ಲೆಕ್ಕಾಚಾರದ ಸಂತೆಯಲಿ ಮುಳುಗಿದೆ ಎಣಿಕೆ! ಕಂತುಗಳ ಕಂತೆ ವರ್ಷಾನುಗಟ್ಟಲೆ ದಾಟಿದರೂಮದುವೆಯಾಗಿ ತಿಂಗಳಿಗಾದ ಮಗುವಿಗಿನ್ನು ನಾಮಕರಣವೆ ಆಗಿಲ್ಲವಲ್ಲ!ಸೌಪರ್ಣಿಕ ಡೈವೋರ್ಸ್ ಪಡೆದ ಮೇಲೆಮುಂದೇಗೆಂದು ತೋರಿಸದೆ ಹೇಗೆ ಮುಗಿಸಬಲ್ಲರು?ಇವಳು ಹೇಗೆ ಹೆರಬಲ್ಲಳು ನಾನು ನೋಡುತ್ತೇನೆಎಂದು ಕಿರುಚಾಡುವ ವಿಲನ್ ಗೆ ಶಿಕ್ಷೆಯೆ ಆಗಿಲ್ಲ ,ಆರ್ವರ್ಷದಿಂದ ಪುನರ್ವಸುವಿಗೆ ಉದ್ಯೋಗವೆ ದಕ್ಕಿಲ್ಲ…ಇದಕ್ಕೆಲ್ಲ ಇನ್ನೊಂದಷ್ಟು ವರ್ಷ […]

ಅಂದಿಗೂ- ಇಂದಿಗೂ

ಕವಿತೆ ಅಂದಿಗೂ- ಇಂದಿಗೂ ನಾಗರೇಖಾ ಗಾಂವಕರ್ ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,ಬಣ್ಣಬಣ್ಣದ ಅಂಗಿ ತೊಟ್ಟು,ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ. ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗಚೂಪುಕಲ್ಲೊಂದು ಕಾಲ ಬಗೆದಾಗಕಲ್ಲಿಗೆ ಎರಡೇಟು ಬಿಗಿದುಮತ್ತೆ ನಡೆದಾಗ ನನಗೆಭಯವಾಗಿರಲಿಲ್ಲ, ನೋವೂ.. ಅಮ್ಮನ ಕೈ ತೊಟ್ಟಿಲತೂಗಲೇ ಇಲ್ಲ.ಜೋಗುಳವ ಅವಳಿಗೆಂದೂಹಾಡಲಾಗಲೇ ಇಲ್ಲ,ಹಗಳಿರುಳು ದುಡಿದ ಮೈ ಹಾಸಿಗೆಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,ಮತ್ತೆ ಬಗಲಿಗೇರಿದ್ದು,ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿತುತ್ತಿನ ಚೀಲ ತುಂಬಬೇಕಿತ್ತಲ್ಲಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟಹುಲ್ಲಿನ ಹೊರೆ ಅವಳಿಗಾಗೇಕಾದಿರುತ್ತಿತ್ತಲ್ಲ,ಆದರವಳ ಪ್ರೀತಿಯ ಬೆಚ್ಚನೆಯ […]

ಕಿಟಕಿ-ಬಾಗಿಲು

ಕವಿತೆ ಕಿಟಕಿ-ಬಾಗಿಲು ಸ್ಮಿತಾ ಅಮೃತರಾಜ್.ಸಂಪಾಜೆ. ಮುಂಬಾಗಿಲು ಸದಾದಿಡ್ಡಿಯಾಗಿ ತೆರೆದೇಇರುತ್ತದೆ.ಬೆಳಕು ಕಂದಿದ ಮೇಲಷ್ಟೇಮುಚ್ಚಿಕೊಳ್ಳುತ್ತದೆ. ಬಾಗಿಲೆಡೆಗೆ ಮುಖವೂತೋರಿಸಲು ಬಿಡುವಿಲ್ಲದವರುಒಳಗೆ ಗಡಿಬಿಡಿಯಲ್ಲಿರುತ್ತಾರೆಅದಕ್ಕೇ ಬಾಗಿಲು ಸದಾತೆರೆದೇ ಇರುತ್ತದೆ. ಪುಣ್ಯಕ್ಕೆ ಪ್ರತೀ ಕೋಣೆಗಳಿಗೂಪುಟ್ಟ ಪುಟ್ಟ ಕಿಟಕಿಗಳಿವೆ.ಹೊರಕ್ಕೆ ನೋಡಲು ಹಾತೊರೆಯುವವರುಏನನ್ನೂ ನೋಡದೇ ಸಾಯುತ್ತಿದ್ದೇವೆ ಅಂತಹಲುಬುತ್ತಾ ಶಾಪ ಹಾಕುವಂತಿಲ್ಲ. ಗಾಳಿಯಷ್ಟೇ ಅಲ್ಲಿ ಒಳನುಗ್ಗುತ್ತಿದೆಅಂತ ಖಾತ್ರಿ ಪಡಿಸಿಕೊಂಡ ಮೇಲೂಅಗತ್ಯಕ್ಕಿಂತ ಜಾಸ್ತಿಯೇ ಸರಳುಗಳುಬಿಗಿಯಲ್ಪಟ್ಟಿವೆ. ಬೆಟ್ಟ ಗುಡ್ಡ ಹಸಿರುದೂರದಲ್ಲಿ ಹರಿಯುವತೊರೆಯ ಸದ್ದುಚಿತ್ರ ಬಿಡಿಸುತ್ತಾ ಓಡುವಮುಗಿಲುಇಷ್ಟಿಷ್ಟೇ ಕಡಲಿಗಿಳಿಯುವಹಗಲು. ಅಂಗೈಯಷ್ಟಗಲ ಕಂಡರೂಅನಂತ ಆಗಸದಗಲಹಬ್ಬುತ್ತಿದೆ ಒಳಮನೆಯೊಳಗೂಕಲ್ಪನೆಯ ಚಿತ್ತಾರ. ಕಿಟಕಿ ಅರೆ ಮುಚ್ಚಿಕ್ಕೊಂಡೇಇರುತ್ತದೆ.ಆದರೂ ಬಿಗಿದ ಸರಳುಗಳಎಡೆಯಿಂದ ಬೆಳಕು […]

ಅರಿವೇ ಗುರು

ಕವಿತೆ  ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. ************

ವಾರದ ಕವಿತೆ ಜೋಕಾಲಿ ಚೈತ್ರಾ ಶಿವಯೋಗಿಮಠ ಮೇಲೆ ಮೇಲೆ ಮ್ಯಾಗಜೂರಿ ಜೀಕಬೇಕು ನಾನುಹಳ್ಳ ಹೊಳಿ ಕಡಲು ಕಾಣಬೇಕಹಸುರ ಹೊದ್ದ ಕಾನು ಮಗುವಿನ್ಹಾಂಗ ಕ್ಯಾಕಿ ಹಾಕಿಹಾರಬೇಕ ಮ್ಯಾಲೆಕಾಣಬೇಕ ಮನಿ ಮಾಳಿಗಿಹಬ್ಬಿದ ಹೂ ಬಳ್ಳಿ ಅಲ್ಲೆ ಜೋಕಾಲಿ ಕಟ್ಟಿ ಜೀಕಿದರರೆಕ್ಕಿ ಬ್ಯಾಡ ಪುಕ್ಕಾ ಬ್ಯಾಡಬೆಳ್ಳಿ ಮುಗಲ ಅನಾಯಾಸಹಂಗ ಮುಟ್ಟಬೋದು ನೋಡ ಬರ್ರಿ, ಬೆಟ್ಟ ಕಣವಿ ಗುಡಿ ಬಯಲದಾಟಿ ಮುಂದಕ ಜೀಕೋಣುಸ್ವಚ್ಛಂದ ಆಕಾಶದಾಗ ಹಕ್ಕಿಹಂಗಹಾಡಾ ಹಾಡಿ ಸಿಳ್ಳಿ ಹಾಕೋಣು ಹಾರಿದ್ಹಂಗ ಏರಿದ್ಹಂಗ ಚಂದಗಾಳಿ ಜೋಡಿ ಮುಂಗುರುಳ ಸರಸಚಂದವದು, ಸ್ವರ್ಗದ ಬಾಗಿಲು ತಟ್ಟಿಮತ್ತ […]

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….8 ನಾನೂ ಶಾಲೆಗೆ ಸೇರಿದೆ… ಅಪ್ಪನಿಗೆ ಅಲಗೇರಿಯಿಂದ ಕುಮಟಾ ತಾಲೂಕಿನ ಹನೇಹಳ್ಳಿ ಶಾಲೆಗೆ ವರ್ಗವಾಯಿತು. ಮತ್ತೆ ನಾವು ನಮ್ಮ ತಾಯಿಯ ತೌರೂರು ನಾಡುಮಾಸ್ಕೇರಿಗೆ ಬಂದು ನೆಲೆಸಬೇಕಾಯಿತು. ನಾಡು ಮಾಸ್ಕೇರಿಯಲ್ಲಿ ಆಗ ನಮ್ಮ ಜಾತಿಯ ಜನಕ್ಕೆ ಸ್ವಂತ ಭೂಮಿಯೆಂಬುದೇ ಇರಲಿಲ್ಲ. ಕೆಲವು ಕುಟುಂಬಗಳು ನಾಡವರ ಜಮೀನಿನ ಒಂದು ಮೂಲೆಯಲ್ಲಿ ಆಶ್ರಯ ಪಡೆದು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ನಾಡುಮಾಸ್ಕೇರಿಯಲ್ಲಿ ನಾಡವರು ಇದ್ದುದರಲ್ಲಿಯೇ ಸ್ಥಿತಿವಂತರಾಗಿದ್ದರು. ಎಲ್ಲ ಕುಟುಂಬಗಳಿಗೂ ಅಲ್ಪಸ್ವಲ್ಪ ಬೇಸಾಯದ ಭೂಮಿಯೂ […]

ಶಿಶಿರ

ಕವಿತೆ ಶಿಶಿರ ಎಂ.ಆರ್. ಅನಸೂಯ ನೆನಪಿಸುತ್ತಿಲ್ಲಶಿಶಿರದಇಬ್ಬನಿ ಹನಿಮುತ್ತಿನ ಮಣಿಯಕಾಡುತ್ತಿದೆಯಲ್ಲಇಬ್ಬನಿಯಹಿಮ ಕೊರೆವ ಚಳಿಯಲ್ಲೇರಾಜಧಾನಿಯ ಬಯಲಲ್ಲೇಕೂತ ರೈತನ ಪಾಡು !ಜತೆಯಲ್ಲೇಕಲ್ಲು ಮನದ ರಾಜನೂ ! ನೆನಪಿಸುತ್ತವೆಶಿಶಿರದಬೋಳು ಮರಗಳುಭರವಸೆ ಕಾಣದಕೃಷಿಕನ ಬವಣೆಯ ಬದುಕುಲಾಠಿ ಎತ್ತಿದ ಕೈಗೂರೊಟ್ಟಿಯಿತ್ತ ಅನ್ನದಾತನ ಕೂಗುಕೇಳಿಸದುಜಾಣ ಕಿವುಡಿನ ದೊರೆಗೆ ************************

ಸಂ ‘ಕ್ರಾಂತಿ’

ಕವಿತೆ ಸಂ ‘ಕ್ರಾಂತಿ’ ತೇಜಾವತಿ ಹೆ್ಚ್.ಡಿ. ಪುರಾಣದ ನೋಟದಲಿ,ವಿಜ್ಞಾನವು ಇಣುಕಿಸಂಪ್ರದಾಯ ಮಾತನಾಡಿ,ಕೃತಜ್ಞತೆ ಕೈಹಿಡಿದನವ ಬದುಕಿನ ಸಂ’ಕ್ರಾಂತಿ’ಎಳ್ಳು-ಬೆಲ್ಲದೊಂದಿಗೆ ಕರಣದಲಿ ಕಳೆದುಹೋದಹೊಸ ಹುರುಪಿನ ಶ್ರವಣ ಪುಷ್ಯ ವೇಷ ಧರಿಸಿ ಹೊರಬರುತಿದೆ ನವಕ್ರಾಂತಿ ಧರೆ ಪರಿಭ್ರಮಿಸುವ ಗಳಿಗೆದಿನ ರಾತ್ರಿಹಗಲು ಇರುಳುಬೆಳಗು ಕತ್ತಲುಹೀಗೆ ಮಾಸ ಅಯನಗಳ ವರ್ತನೆಉತ್ತರಾಯಣ ತಿರುಗಿ ಸಂಕ್ರಮಣ ಮೂಡಿಬೆಳೆಯ ತಲೆಯ ಇಳೆಗೆ ಬಾಗಿಸುತಸೂರ್ಯರಶ್ಮಿ ಹೊಳಪು ನವಭಾವದ ಕಂಪು ಎಲ್ಲವುಗಳಂತಲ್ಲ ಈ ಹಬ್ಬ!ವರ್ಷವಿಡೀ ತನ್ನೊಡೆಯನಿಗಾಗಿ ದುಡಿದು ದಣಿದಜಾನುವಾರುಗಳ ಅಲಂಕರಿಸಿ,ಪೂಜಿಸಿಮೆರವಣಿಗೆ ಮಾಡಿ,ಕಿಚ್ಚು ಹಾಯಿಸಿಗೋವಿಗೂ ಕೃತಜ್ಞತೆಯ ಅರ್ಪಿಸುವ ಕಾಯಕಬ್ಬ ಹಾಡು ಪಾಡುಎಳ್ಳು ಬೆಲ್ಲ ಹಂಚುವನವೀನ […]

Back To Top