ಕವಿತೆ
ಅರಿವೇ ಗುರು
ವಸುಂಧರಾ ಕದಲೂರು
ದೀಪ ಆರಿಸಿಬಿಟ್ಟೆ; ಸೂರ್ಯನೂ
ಮುಳುಗಿದ. ಕತ್ತಲೆಂದರೆ- ಕತ್ತಲೀಗ
ಒಳಹೊರಗೂ..
ಮೌನಕ್ಕೆ ಶರಣಾದೆ, ಕಿವುಡುತನದಲಿ.
ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ..
ಇತಿಮಿತಿಗಳ ಅರಿವಾಯ್ತು,
ನನ್ನದೂ ಮತ್ತವರಿವರದು.
ಜಾಗರೆಂದರೆ ಜಾಗರೂಕಳೀಗ.
ಒಳಹೊರಗೂ..
ಮಮತೆಯ ಕಣ್ತೆರೆದು, ಒಲವಿನಲಿ
ನೋಡಿ ನುಡಿದೆ. ಹರುಷವೆಂದರೆ
ಹರುಷವೀಗ. ಒಳಹೊರಗೂ..
ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದು
ಬಂದ. ಬೆಳಕೆಂದರೆ ಬೆಳಕೀಗ
ಒಳಹೊರಗೂ..
************
Super mam