ಪ್ರಿಯಂವದಾ

ಪ್ರಿಯಂವದಾ

ಕವಿತೆ ಪ್ರಿಯಂವದಾ ರಘೋತ್ತಮ ಹೊ.ಬ ಗೆಳೆತಿಹೇಗಿದ್ದೀಯಇಂದು ನೀನು ಜಾರಿಗೊಂಡದಿನವಂತೆನಮ್ಮಿಬ್ಬರ ಭೇಟಿಯಮಧುರ ಕ್ಷಣವಂತೆಕ್ರಿ.ಪೂ.185ರಲ್ಲಿ ನಿನ್ನಹತ್ತಿಕ್ಕಿ ಸ್ಮೃತಿಜಾರಿಗೊಂಡಿತ್ತಂತೆಕ್ರಿ.ಶ 400ರ ಸಮಯದಲ್ಲಿನನ್ನ ವಿರುದ್ಧಅಸ್ಪೃಶ್ಯತೆಯೂಜಾರಿಗೊಂಡಿತಂತೆಅದೆಲ್ಲಿ ಅಡಗಿದ್ದೆನೀನುನಿನ್ನ ಮಧುರ ನೋಟವಚೆಲ್ಲಿಕರುಣೆಯ ಹೃದಯತುಂಬಿ ಸಮಾನತೆ, ಸ್ವಾತಂತ್ರ್ಯಸಹೋದರತೆ, ನ್ಯಾಯನಿನ್ನ ಹೃದಯದನಾಲ್ಕು ಕವಾಟಗಳಂತೆಅಲ್ಲೆಲ್ಲನನ್ನದೆ ಹೆಸರಿನಪ್ರೀತಿ ಕೆಂಬಣ್ಣವಂತೆ!ಮೂಲಭೂತ ಹಕ್ಕುಗಳಗುಲಾಬಿ ಹೂ ಹಿಡಿದುಅದೆಲ್ಲಿ ಅಡಗಿದ್ದೆಮೂಲಭೂತ ಕರ್ತವ್ಯಗಳಸವಿಜೇನ ನುಡಿಯತಅದೆಲ್ಲಿ ಕುಳಿತಿದ್ದೆಸಂಸತ್ತು, ಕಾರ್ಯಾಂಗನ್ಯಾಯಾಂಗ, ಶಾಸಕಾಂಗಏನೆಲ್ಲ ಅಂದ ನಿನ್ನಲಿ? ಮಹಿಳೆಯರು, ಮಕ್ಕಳುಪರಿಶಿಷ್ಟರು, ಬುಡಕಟ್ಟು ಮಂದಿಎಲ್ಲರಿಗೂ ಕಾನೂನಿನರಕ್ಷಣೆಯ ಬಿಂದಿದೌರ್ಜನ್ಯನಿನ್ನ ಮುಂದೆ ಚಿಂದಿಏನ ಹೇಳಿದರೂ ಕಡಿಮೆಯೇನಿನ್ನ ತಂದಜೈಭೀಮ ತಂದೆ-ಯ ಬಗ್ಗೆ ಆತಭಾರತಾಂಬೆಯ ವರಪುತ್ರಬರೆದು ಕುಳಿತನು ನಿನ್ನ ಆಶಯತಿಳಿಸುತ್ತ ನೂರಾರು […]

ಆತ್ಮ ವಿಶ್ವಾಸವಿರಲಿ…

ಲೇಖನ ಆತ್ಮ ವಿಶ್ವಾಸವಿರಲಿ… ರಶ್ಮಿ ಹೆಗಡೆ ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ  ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ. ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ […]

ಹೋದಾರೆ.. ಹೋದ್ಯಾರು..!

ಕವಿತೆ ಹೋದಾರೆ.. ಹೋದ್ಯಾರು..! ಆಶಾ ಆರ್ ಸುರಿಗೇನಹಳ್ಳಿ ಹೋದಾರೆ ಹೋದ್ಯಾರುತೊರೆದು ಹೋದವರು..ಕಣ್ಮರೆಯಾಗಿ ನಲಿವವರುಮರೆಮಾಚಿ ನಿಂತವರುಕಲ್ಲಾಗಿ ಮರೆತವರು ಹೋದಾರೆ ಹೋಗಲಿ..ಅವರವರ ಅನುಕೂಲ..ನೆನಪುಗಳ ಮೂಟೆಯೊರಿಸಿಮೌನತಳೆದು ಹೋದ್ಯಾರತ್ರಾಣವಿಲ್ಲದ ಮನವುಅಂಜುತಿದೆ ದಿನವೂ.. ಹೋದಾರೆ ಹೋದ್ಯಾರುಹೆಸರಿಲ್ಲದೆ, ಉಸಿರಿನ ಹಂಗಿಲ್ಲದೆಕಿರುನಗೆಯಲಿ ಬಿದ್ಯಾರ..ಎನಗೊಂದು ವಿಷಾದದನಗೆಯ ಉಳಿಸ್ಯಾರ..ಬೆಲೆಬಾಳುವಮುಗ್ಧನಗೆಯನೇ ಕದ್ದೊಯ್ದಾರ.. ಹೋದಾರು ಹೋದ್ಯಾರುನೆನಪುಗಳ ಹೊತ್ತೊಯ್ದುಉಪಕರಿಸಬೇಕಿತ್ತು..ಕನಸುಗಳ ಚಿವುಟಿಕ್ರೂರಿಗಳಾಗಬೇಕಿತ್ತು..ಮನಸನು ಕೊಂಚಕಲ್ಲಾಗಿಸಬೇಕಿತ್ತು..ತೊರೆದು ಮತ್ತೆ ಮತ್ತೆತೆರೆದುಕೊಳ್ಳುವುದ ಕಲಿಸಬೇಕಿತ್ತು.. ಹೋದಾರ ಹೋದ್ಯಾರುಮರೆತು ಬಾಳೋದನ್ನೇಕಲಿಸದೆ ಹೋದ್ಯಾರೆ?ಕಣ್ಣಹನಿಗಳನ್ನುಉಡುಗೊರೆಯಾಗಿ ಕೊಟ್ಯಾರಾ..!ನಗೆಯ ಪೊಳ್ಳು ಭರವಸೆಯನ್ನಮೊಗೆ ಮೊಗೆದು ಕೊಟ್ಯಾರಾ.. ಹೋದಾರೆ ಹೋಗಲಿಸುಮಧುರ ಭಾವಗಳುಗೆಜ್ಜೆಕಟ್ಟಿ ಕುಣಿದಾವಪದೇ ಪದೆಹಳೆಯ ರಾಗವ ನೆನಸುತಾಹಾಡ್ತಾವಾಮೂಕ ರಾಗದಿನೊಂದ ಮನವೂ ಕುಣಿದುಅಂತರವನ್ನ ಮರೆತಾವ..ಇರುವಿಕೆಯನ್ನೇ […]

“ದೇವರ ಪಾದ”

ಕವಿತೆ “ದೇವರ ಪಾದ” ಲೋಕೇಶ ಬೆಕ್ಕಳಲೆ ಅಂದು ನೀನು ಇಟ್ಟ ಪಾದಧರ್ಮ ರಕ್ಷಣೆಗೋ?ಸ್ವಜನ ಹಿತಕೋ?ಅಂತೂ ಬಲಿಯ ದೂಡಿತು ಪಾತಳಕೆ ಇಂದು ನಿನ್ನ ಸುಪರ್ದಿ ಪಡೆದವರುಊರುತ್ತಿರುವ ಪಾದಗಳುದೂಡುತ್ತಿವೆ ಸಾಮಾನ್ಯರಅಂಧಕಾರಕೆ ಎತ್ತ ನೋಡಿದರೂನಿನ್ನದೇ ಪಾದ!ಗೆಜ್ಜೆ ಕಟ್ಟಿದ ಶ್ರೀ ಪಾದಎದುರು ಯಾರೇ ಸಿಕ್ಕರೂ ಅವರತಲೆಯ ಮೇಲೇರಿ ಕೂರುವವಿಕ್ರಮ ಪಾದ ಇಲ್ಲಿ ನಿನ್ನ ಕಾಯುವಮುಖವಾಡ ತೊಟ್ಟಬಲಿಗಳಿಂದ ನಿತ್ಯಹಿಂಸೆ ಅನುಭವಿಸುವಶ್ರೀಸಾಮಾನ್ಯರ ಕಾಪಿಡಲುಮತ್ತೇ ಬರುವೆಯಾ?ವಾಮನನಾಗಿ? ಅದೇಕೊಎಷ್ಟೇ ತೊಳೆದರೂನಿನ್ನ ಪಾದಕ್ಕಂಟಿದಕಳಂಕ ಹೋಗುತ್ತಿಲ್ಲ!ಕ್ಷಮಿಸು ದೇವಾ ************************

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ. ನಲ್ಲ ಮನದಂಗಳ :ನಲ್ಲನ ಹೆಸರಿನ,ಹಸೆ ಮೂಡಿದೆ. ಲಜ್ಜೆ ಹಸೆಗೂ ಲಜ್ಜೆಅವನ ನೆನಪಲ್ಲಿ,ನಲ್ಲೆ ನಗಲು. ದುಂಬಿ ಹೂವಿನಮಲು.ದುಂಬಿಗೆ ಹೊಸಗಾನ,ಶೃಂಗಾರ ಕಥೆ. ತಾರೆ ಮಿಂಚಿನ ನೋಟ :ತಾರೆಗೂ ಕಚಗುಳಿ,ಮುನಿದ ಚಂದ್ರ. ನಗು ನಲ್ಲೆ ನಗುವು :ತಪ್ಪಿದ ಎದೆ ತಾಳ,ಮಧುರ ಗಾನ. ಲಾಂದ್ರ ಬಾನಂಚ ಲಾಂದ್ರ :ಹತ್ತಿದಾಗೆಲ್ಲ, ನಲ್ಲೆಮೊಗ ಕೆಂಪಗೆ. ರವಿತೇಜ ಮಧುರ ಹಾಡು :ಹಕ್ಕಿಯ ಸ್ವಾಗತವು,ರವಿತೇಜಗೆ. *****************************

ಕವಿತೆ, ಬುದ್ಧ ಮತ್ತು ನಾನು

ಕವಿತೆ ಕವಿತೆ, ಬುದ್ಧ ಮತ್ತು ನಾನು ಟಿ.ಪಿ.ಉಮೇಶ್ ಬುದ್ಧ ಕವಿತೆಯನ್ನು ಬರೆಯಲಿಲ್ಲಬದುಕೆಲ್ಲವನ್ನೂ ಕವಿತೆಯಾಗಿಸಿದಜಗದೆಲ್ಲ ಕವಿತೆಗಳನ್ನು ಬದುಕಿಸಿದಕವಿತೆಗಳಿಗೆ ಬುದ್ಧನೆಂದು ಒಲಿಯಲಿಲ್ಲಕವಿತೆಗಳೇ ಬುದ್ಧನ ತಬ್ಬಿಕೊಂಡವು ತುಂಬಿಕೊಂಡವು ತಡೆದುಕೊಂಡವುಬುದ್ಧ ಬರೆಯಬೇಕೆಂದಿದ್ದರೆಬದುಕಿನ ಕಾವ್ಯವಾಗಿ ಬಂದಂತ ಹೆಂಡತಿಯ ಬರೆಯುತ್ತಿದ್ದಬಹುಶಃ ತನ್ನ ಮೊದಲ ಜೀವಂತ ಕವಿತೆಯಾದ ಮಗನ ಬರೆಯುತ್ತಾ ಬೆಳೆಸುತ್ತಿದ್ದಅವ ನಮ್ಮಂತೆ ಕತ್ತಲ ಮಿಣುಕು ಹುಳದ ಮಿಂಚಲಿಬೆಳದಿಂಗಳ ಅಂಚಲಿ ತೇಲ್ಗಣ್ಣಲಿ ಕೂತು ಬರೆಯಲಿಲ್ಲಇರುವವರೆಗೆ ಧ್ಯಾನದಲಿಹಗಲಿರುಳುಗಳ ಮಧ್ಯವ ಮಾಡಿ ಬತ್ತದಂತ ಬೆಳಕಿನಲ್ಲಿ ಬರೆಸಿದಲೋಕವನ್ನೇ ಭಾರವಿಲ್ಲದಂತ ಬುದ್ಧ ಬದ್ಧತ್ವದ ಕವಿತೆಗಳಾಗಿಸಿದ ಅರಮನೆಯ ಬಂಧನದ ಉದ್ಯಾನದ ಪರಿಮಳಗಳ ಬರೆಯುವುದ ಬಿಟ್ಟು […]

ಮಗಳೆ ನಿನಗಾಗಿ

ಕವಿತೆ ಮಗಳೆ ನಿನಗಾಗಿ ಶಾಲಿನಿ ಆರ್. ಎದೆಗೆ ಹಾಲ ಬಿತ್ತಿಒಡಲ ಗುಡಿಯಕದವ  ತಟ್ಟಿಬಳಿಗೆ ಕರೆದುಅಂತರಂಗದಾಧುನಿಗೆ ಬೆಸೆದ  ನೀ’ಬಾಳಗೀತೆ ಮುನ್ನುಡಿ, ಪಡೆದ ಸುಖಕೆಪ್ರೀತಿ ಬೆರೆಸಿಹಡೆದ ಋಣಕೆತಾಯ್ತನದಾನಂದಬಡಿಸಿ ಬೆಸೆದ,ಸೊಬಗಿನೈಸಿರಿ ನೀ’ಬಾಳಗೀತೆ ಮುನ್ನುಡಿ, ನಿತ್ಯ ಹಸಿರಿದುಬಾಳ ನಂದನತೊದಲ ಮಾತು,ತಪ್ಪು ಹೆಜ್ಜೆಗೊಂದುಹೂಬನ ಚುಂಬನ,ನಲಿವ ಗೊಂಚಲಿನಕಿರುಗೆಜ್ಜೆ ನೀ’ಬಾಳಗೀತೆ ಮುನ್ನುಡಿ, ಬಿಡದೆ ಹನಿಸುಹೊಕ್ಕಿಹ ಮಮತೆಯನಾನಲ್ಲ ತಾಯಿಯು,ಮರುಜನ್ಮವಿತ್ತೆನೀ ಎನಗೆ ತಾಯೆಒಡಲತುಂಬಿದಹೊನಲ ಜೇನು ನೀ’ಬಾಳಗೀತೆ ಮುನ್ನುಡಿ, ಕಣ್ಣಂಚಿನ ಹನಿಯುನಿಂತಲ್ಲೆ ಕಡಲಾಯಿತುಆನಂದದಂಗಳದಿಅಮ್ಮ’ ಎನುವ ಕರೆಗೆಜಗದ ಸುಖಸೊನ್ನೆಯಾಯ್ತುತಾಯ್ತನದ ಭಾಷ್ಯ ನೀ’ಬಾಳಗೀತೆ ಮುನ್ನುಡಿ, ಕರುಳಬಳ್ಳಿ ಬೆಸೆದುಒಲವ ಕಡಲ ಸುತ್ತಿಅವನ ಪ್ರೀತಿಮೋಹ ಮಂತ್ರಕೆಓ! ಗುಟ್ಟು, […]

ತೆರೆದಿಟ್ಟ ದೀಪ

ಕಥೆ ತೆರೆದಿಟ್ಟ ದೀಪ ಯಮುನಾ.ಕಂಬಾರ ಅದು ಮಧ್ಯಾಹ್ನದ ಸಮಯ. ಸೂರ್ಯ ತನ್ನ ಕಿರಣಗಳನ್ನು ಭಗವತಿಯ ಮುಂದಿನ ಗಿಡದ ಮೇಲೆ ಚೆ ಲ್ಲಿದ್ದ. ಗಿಡದ ಮೇಲೊಂದು ಪಕ್ಷಿ ಅತ್ತ ಇತ್ತ ನೋಡುತ್ತಾ ಕುಳಿತುಕೊಂಡಿತ್ತು. ಪಕ್ಢಿಯನ್ನು ಗಿಡವನ್ನು ವೀಕ್ಷಿಸುತ್ತಾ ಇದ್ದ ಭಗವತಿಯ ಕಣ್ಣುಗಳು ಪಲ್ಲಟಗೊಂಡು   ದಾರಿಯತ್ತ ಹರಿದವು.ಅವಳು ದಾರಿಯಲ್ಲಿ ಬರುವ ಹೆಣ್ಣು ಮಗಳನ್ನು ನೋಡಿದೊಡನೆ ತನ್ನ ನೆನಪುಗಳನ್ನು ಒತ್ತಿ ನೋಡ ತೊಡಗಿದಳು. ಹೌದು ಅವಳು ಅವಳೇ……ಈಗ್ಯ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಮಾಬೂಬಿ.ಭಗವತಿಗೆ ಅವಳನ್ನು ನೋಡಿ […]

ಕ್ಷಮಿಸು ಪ್ಲೀಸ್..

ಕವಿತೆ ಕ್ಷಮಿಸು ಪ್ಲೀಸ್.. ಮಧುಸೂದನ ಮದ್ದೂರು. ನೋವಿನಾಳದ ಕಿಸರು ಗಾಯಕೆ ನಿನ್ನನೆನಪುಗಳನೊಣಗಳ ದಾಳಿಝೇಂಕಾರಒಳಗೊಳಗೇಯಾತನೆ ವೇದನೆ ಒಬ್ಬನೇ ಇದ್ದೇನೆಹಾಯಿಯಲಿಸುತ್ತಲೂ ಅಳುವಿನಉಪ್ಪುಪ್ಪು ಕಡಲುನನ್ನುಳುವಿನ ಉಪ್ಪು ಜಾರಿಕಡಲು ಹೆಪ್ಪುಗಟ್ಟುತ್ತಿದೆ..ಮುಳುಗಬೇಕೆನ್ನುವ ಹಡಗು ಮುಳುಗುತ್ತಿಲ್ಲದೂರದೆಲ್ಲೆಲ್ಲೋಮಿಣುಕುಹುಳುದಂತಹ ಬೆಳಕುಕಣ್ಣಿಗಾನಿಸುತ್ತಿದ್ದಂತೆನೀನೆನಾದರೂಅದೇ ಹಸಿರು ನೆರಿಗೆ ಲಂಗ ತೊಟ್ಟು ಬಂದೆಯಾಎಂಬ ಹುಂಬತನದ ನಿರೀಕ್ಷೆಸಾಯಲು ಬಿಡುತ್ತಿಲ್ಲಬದುಕಲು ಬಿಡುತ್ತಿಲ್ಲಪ್ರೀತಿ ಅಂದರೆ ಹೀಗೇನಾ..ಗೊತ್ತಾಗುತ್ತಿಲ್ಲಕ್ಷಮಿಸು ಪ್ಲೀಸ್.. ****************************

ಗುಂಗು

ಕವಿತೆ ಗುಂಗು ಮಾಲತಿ ಶಶಿಧರ್ ನಿನ್ನ ತೋಳಿನ ಚೌಕಟ್ಟುಬಿಟ್ಟು ಬಂದ ಮೇಲೂ ನನ್ನಕೊರಳು ಕೆನ್ನೆಗಳ ಮೂಲೆಯಲ್ಲಿನಿನ್ನ ಪರಿಮಳದ ಭಾಸ. ಬೆಚ್ಚಗಿನ ಉಣ್ಣೆ ಬಟ್ಟೆ ತೊಟ್ಟಿದ್ದರುಒಳಗೆ ಮಾಗಿ ಚಳಿಯ ಕೊರೆತನೀ ಗಿಲ್ಲಿ ಗುರುತು ಮಾಡಿದತೊಡೆಯ ಎದೆಗವುಚಿಕೊಂಡುಕಣ್ಮುಚ್ಚಿ ನಗುತ್ತೇನೆ. ಮುತ್ತನಿಟ್ಟು ಹೊತ್ತೇ ಕಳೆದುಹೋದರು ಮತ್ತು ಮಾತ್ರಹಳಸದೆ ತುಟಿಯಂಚಿನತೊಟ್ಟು ರಕ್ತದಲ್ಲಿ ಹೆಪ್ಪುಗಟ್ಟಿಕುಳಿತಿದೆ. ಅಮಾಸೆ ಹೆರಳ ಇಪ್ಪತ್ತುಬಾರಿ ಒಪ್ಪ ಮಾಡಿದರುಗಾಳಿಗೋಲಾಡೊ ಮುಂಗುರುಳಲಿನಿನ್ನದ್ದೇ ತುಂಟತನ ಕಂಡುಕನ್ನಡಿಯತ್ತ ಕೈಚಾಚುವೆಹುಚ್ಚಿಯಂತೆ.. ***************************************

Back To Top