ಕವಿತೆ
ಪ್ರಿಯಂವದಾ
ರಘೋತ್ತಮ ಹೊ.ಬ
ಗೆಳೆತಿ
ಹೇಗಿದ್ದೀಯ
ಇಂದು ನೀನು ಜಾರಿಗೊಂಡ
ದಿನವಂತೆ
ನಮ್ಮಿಬ್ಬರ ಭೇಟಿಯ
ಮಧುರ ಕ್ಷಣವಂತೆ
ಕ್ರಿ.ಪೂ.185ರಲ್ಲಿ ನಿನ್ನ
ಹತ್ತಿಕ್ಕಿ ಸ್ಮೃತಿ
ಜಾರಿಗೊಂಡಿತ್ತಂತೆ
ಕ್ರಿ.ಶ 400ರ ಸಮಯದಲ್ಲಿ
ನನ್ನ ವಿರುದ್ಧ
ಅಸ್ಪೃಶ್ಯತೆಯೂ
ಜಾರಿಗೊಂಡಿತಂತೆ
ಅದೆಲ್ಲಿ ಅಡಗಿದ್ದೆ
ನೀನು
ನಿನ್ನ ಮಧುರ ನೋಟವ
ಚೆಲ್ಲಿ
ಕರುಣೆಯ ಹೃದಯ
ತುಂಬಿ
ಸಮಾನತೆ, ಸ್ವಾತಂತ್ರ್ಯ
ಸಹೋದರತೆ, ನ್ಯಾಯ
ನಿನ್ನ ಹೃದಯದ
ನಾಲ್ಕು ಕವಾಟಗಳಂತೆ
ಅಲ್ಲೆಲ್ಲ
ನನ್ನದೆ ಹೆಸರಿನ
ಪ್ರೀತಿ ಕೆಂಬಣ್ಣವಂತೆ!
ಮೂಲಭೂತ ಹಕ್ಕುಗಳ
ಗುಲಾಬಿ ಹೂ ಹಿಡಿದು
ಅದೆಲ್ಲಿ ಅಡಗಿದ್ದೆ
ಮೂಲಭೂತ ಕರ್ತವ್ಯಗಳ
ಸವಿಜೇನ ನುಡಿಯತ
ಅದೆಲ್ಲಿ ಕುಳಿತಿದ್ದೆ
ಸಂಸತ್ತು, ಕಾರ್ಯಾಂಗ
ನ್ಯಾಯಾಂಗ, ಶಾಸಕಾಂಗ
ಏನೆಲ್ಲ ಅಂದ ನಿನ್ನಲಿ?
ಮಹಿಳೆಯರು, ಮಕ್ಕಳು
ಪರಿಶಿಷ್ಟರು, ಬುಡಕಟ್ಟು ಮಂದಿ
ಎಲ್ಲರಿಗೂ ಕಾನೂನಿನ
ರಕ್ಷಣೆಯ ಬಿಂದಿ
ದೌರ್ಜನ್ಯ
ನಿನ್ನ ಮುಂದೆ ಚಿಂದಿ
ಏನ ಹೇಳಿದರೂ ಕಡಿಮೆಯೇ
ನಿನ್ನ ತಂದ
ಜೈಭೀಮ ತಂದೆ
-ಯ ಬಗ್ಗೆ ಆತ
ಭಾರತಾಂಬೆಯ ವರಪುತ್ರ
ಬರೆದು ಕುಳಿತನು ನಿನ್ನ ಆಶಯ
ತಿಳಿಸುತ್ತ ನೂರಾರು ಜನರಿಗೆ
ಪತ್ರ ಪತ್ರ
ಕ್ಷಮಿಸು, ನಾನು ನಿನಗೆ ಬರೆದ
ಇದು
ಪ್ರೇಮ ಪತ್ರ
ನಿನ್ನ ಉತ್ತರ
ಏನೇ ಬರಲಿ ಗೆಳತಿ
ನಾಳೆ ನೀನು
ಜಾರಿಗೊಂಡ ದಿನ ಒಡತಿ
ಗೆಳತಿ
ಮರೆಯದಿರು ನಿನ್ನ
ನೆನಪಲ್ಲಿ ಆಶ್ರಯದಲ್ಲಿ
ನಾನು ಸದಾ
ಕಾಪಾಡುತಿರು ನನ್ನ
ಎಂದೆಂದಿಗೂ ಮುದ್ದು
ಪ್ರಿಯಂವದಾ…
*************************
ಬ್ಯೂಟಿಫುಲ್ ಪದ್ಯ sir
ಧನ್ಯವಾದಗಳು ತಮಗೆ
Just Loved it Sir
Hats off to you