ಕವಿತೆ
“ದೇವರ ಪಾದ”
ಲೋಕೇಶ ಬೆಕ್ಕಳಲೆ
ಅಂದು
ನೀನು ಇಟ್ಟ ಪಾದ
ಧರ್ಮ ರಕ್ಷಣೆಗೋ?
ಸ್ವಜನ ಹಿತಕೋ?
ಅಂತೂ ಬಲಿಯ ದೂಡಿತು ಪಾತಳಕೆ
ಇಂದು
ನಿನ್ನ ಸುಪರ್ದಿ ಪಡೆದವರು
ಊರುತ್ತಿರುವ ಪಾದಗಳು
ದೂಡುತ್ತಿವೆ ಸಾಮಾನ್ಯರ
ಅಂಧಕಾರಕೆ
ಎತ್ತ ನೋಡಿದರೂ
ನಿನ್ನದೇ ಪಾದ!
ಗೆಜ್ಜೆ ಕಟ್ಟಿದ ಶ್ರೀ ಪಾದ
ಎದುರು ಯಾರೇ
ಸಿಕ್ಕರೂ ಅವರ
ತಲೆಯ ಮೇಲೇರಿ ಕೂರುವ
ವಿಕ್ರಮ ಪಾದ
ಇಲ್ಲಿ
ನಿನ್ನ ಕಾಯುವ
ಮುಖವಾಡ ತೊಟ್ಟ
ಬಲಿಗಳಿಂದ ನಿತ್ಯ
ಹಿಂಸೆ ಅನುಭವಿಸುವ
ಶ್ರೀಸಾಮಾನ್ಯರ ಕಾಪಿಡಲು
ಮತ್ತೇ ಬರುವೆಯಾ?
ವಾಮನನಾಗಿ?
ಅದೇಕೊ
ಎಷ್ಟೇ ತೊಳೆದರೂ
ನಿನ್ನ ಪಾದಕ್ಕಂಟಿದ
ಕಳಂಕ ಹೋಗುತ್ತಿಲ್ಲ!
ಕ್ಷಮಿಸು ದೇವಾ
************************
ಲೋಕೇಶ್ ನಿಮ್ಮೊಳೋಗೋಬ್ಬ ಕವಿ ಇದ್ದಾನೆ.ಅವನನ್ನು ಅರಳಲು ಬಿಡಿ.ಶುಭವಾಗಲಿ
ಧನ್ಯವಾದಗಳು ಸರ್
ಉತ್ತಮ ಕವಿತೆ
ಧನ್ಯವಾದಗಳು