ಪುಸ್ತಕ ಸಂಗಾತಿ
ವಿಶ್ವಾಸ್ ಡಿ.ಗೌಡ
ನೆನಪುಗಳ ಖಾತೆ
ಡಿ.ಟಿ. ದೇವರಾಜೇಗೌಡ

ಕೃತಿ: ನೆನಪುಗಳ ಖಾತೆ
ಲೇಖಕರು: ವಿಶ್ವಾಸ್.ಡಿ. ಗೌಡ
ಪ್ರಕಾಶನ: ಯಾದವಿ ಪ್ರಕಾಶನ, ಮೈಸೂರು
ಬೆಲೆ:160 /-
ದೊರೆಯುವ ಸ್ಥಳ: ಅಕ್ಷರ ಬುಕ್ ಡಿಪೋ, ಹಾಸನ ಜಿಲ್ಲೆ.
ಸಂಪರ್ಕಿಸುವ ಮೊಬೈಲ್ ನಂ:9743636831
ವೃತ್ತಿಯಲ್ಲಿ ಶಿಕ್ಷಕರು, ಪತ್ರಕರ್ತರು, ಸಾಹಿತಿಗಳು, ಅಂಕಣಕಾರರು. ನನ್ನ ಮಗ ವಿಶ್ವಾಸ್ ಪ್ರವೃತ್ತಿಯಲ್ಲಿ ಲೇಖಕರಾಗಿ ಅವರ “ನೆನಪುಗಳ ಖಾತೆ” ಕೃತಿಯು ಅನೇಕ ಅತ್ಯುತ್ತಮ ಲೇಖನಗಳನ್ನು ಒಳಗೊಂಡಿದೆ. ಪರಿಸರ, ಹಬ್ಬ, ವೈಚಾರಿಕತೆ, ಪ್ರವಾಸೋದ್ಯಮ, ಶಿಕ್ಷಣ, ವ್ಯಕ್ತಿತ್ವ ವಿಕಾಸನ ಕುರಿತು ತುಂಬಾ ಚೆನ್ನಾಗಿ ನಿದರ್ಶನಗಳ ಸಹಿತಕಟ್ಟಿಕೊಟ್ಟಿದ್ದಾರೆ.
‘ಶಿಕ್ಷಕರ ವಿದ್ವತ್ತಿಗೆ ಇಲ್ಲದ ಸಮ್ಮಾನ’ ಲೇಖನದಲ್ಲಿ ಶಿಕ್ಷಕರು ಸಮಾಜದ ಅತ್ಯುತ್ತಮ ಜವಾಬ್ದಾರಿಯುತ ಮತ್ತು ಪ್ರಮುಖ ಸದಸ್ಯರು, ಜೊತೆಯಲ್ಲಿ ಶಿಕ್ಷಕರ ಪಾತ್ರ ಸಮಾಜ ಬದಲಾವಣೆ ಮಾಡಲು ತುಂಬಾ ಅಗತ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತುಂಬಾ ಉತ್ತಮ ಸ್ಥಾನಗಳಲ್ಲಿ ನೋಡಲು ಇಚ್ಛೆ ಪಡುತ್ತಾರೆ. ಹಾಗೂ ಅವರ ಭವಿಷ್ಯಗಳನ್ನು ಕಟ್ಟಿಕೊಡಲು ತುಂಬಾ ಶ್ರಮ ಪಡುತ್ತಾರೆ ಎಂಬ ಸಂದೇಶವನ್ನು ಬರೆದಿದ್ದಾರೆ. ಶಿಕ್ಷಕರ ಪಾತ್ರವನ್ನು ಕುರಿತು ತಮ್ಮದೇ ಆದ ಅನಿಸಿಕೆಗಳನ್ನು ಅಚ್ಚುಕಟ್ಟಾಗಿ ಬರೆಯುವುದರ ಮೂಲಕ ಶಿಕ್ಷಕರು ದೇವರಿಗೆ ಸಮ ಎಂಬುದನ್ನು ಲೇಖಕರು ಅತ್ಯುತ್ತಮವಾಗಿಯೇ ವರ್ಣಿಸಿದ್ದಾರೆ.
‘ಜನ ಸೇವೆಯೇ ಜನಾರ್ದನ ಸೇವೆ’ ಎಂದು ನಿಸ್ವಾರ್ಥ ಬದುಕು ಬಾಳಿದ ಶ್ರೀಗಳ ಈ ನುಡಿಗಟ್ಟುಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಲೇಖನದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಹೇಳಿರುವ ಅನೇಕ ಸಂದೇಶಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಜೊತೆಯಲ್ಲಿ ಅವರ ಸರಳತೆ ಹಾಗೂ ಅವರು ಮಾಡುತ್ತಿರುವ ಸೇವೆಗಳನ್ನು ತಮ್ಮ ಲೇಖನದಲ್ಲಿ ಸುಂದರವಾಗಿ ಚಿತ್ರಿಸಿ ಕೊಟ್ಟಿದ್ದಾರೆ. ಇದರ ಜೊತೆಯಲ್ಲಿ ಅವರು ಮಾಡಿರುವ ಶಿಕ್ಷಣ ಕ್ರಾಂತಿ ಮತ್ತು ದಾಸೋಹದ ಬಗ್ಗೆ ತನ್ನದೇ ಆದ ಪದಗಳಲ್ಲಿ ಲೇಖಕರು ಬರೆಯುವ ಪ್ರಯತ್ನವನ್ನು ಮಾಡಿದ್ದಾರೆ.
ನಮ್ಮೊಳಗಿನ ನಮ್ಮ ಬದಲಾವಣೆ’ ಎಂಬ ಲೇಖನದಲ್ಲಿ ಮಾನಸಿಕ. ಮನೋರೋಗ, ಮನಸ್ಸಿನ ಉತ್ಸಾಹ ಹೆಚ್ಚಾಗುವುದು, ಮನಸ್ಸಿನ ಏಕಾಗ್ರತೆ, ವ್ಯಕ್ತಿತ್ವ ವಿಕಾಸನ, ಬೌದ್ಧಿಕ ಸೇರಿದ ಹಾಗೆ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾಗಿ ಬರೆಯುವ ಪ್ರಯತ್ನದಲ್ಲಿ ಅನೇಕ ಸಂದೇಶಗಳನ್ನು ಈ ಲೇಖನ ಹೇಳುತ್ತದೆ. ಈ ಲೇಖನವೂ ಆನೇಕ ರೀತಿಯಲ್ಲಿ ನಮ್ಮ ದೇಹದ ರೋಗಗಳು ಮತ್ತು ಮಾನಸಿಕ ರೋಗದ ಬಗ್ಗೆ ನಮಗಿರುವ ಆಲೋಚನೆಗಳ ಬಗ್ಗೆ ಹೇಳುತ್ತದೆ. ಇದರಲ್ಲಿ ಯಾವ ರೀತಿ ಮನುಷ್ಯನು ತಮ್ಮ ಮನಸ್ಸನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳಬೇಕೆಂಬುದನ್ನು ತುಂಬಾ ಸರಳವಾಗಿ ಲೇಖಕರು ವರ್ಣಿಸಿದ್ದಾರೆ.
‘ಬಾಳು ಬಂಗಾರ’ ಲೇಖನದಲ್ಲಿ ಲೇಖಕರು ಮನುಷ್ಯನಿಗೆ ಯಾವ ರೀತಿಯ ಆಹಾರಗಳು ಅಗತ್ಯವಿದೆ. ಯಾವ ಆಹಾರವನ್ನು ನಾವು ಸೇವಿಸಿದರೆ ನಮ್ಮ ಆರೋಗ್ಯ ಹಾಳಾಗದ ರೀತಿಯಲ್ಲಿ ಇರುವುದು ನಾವು ದಿನೇ ದಿನೇ ಮಾಡುತ್ತಿರುವ ಪ್ರಕೃತಿ ನಾಶದಿಂದ ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಹಳೆಯ ಕಾಲದ ಆಹಾರ ಪದ್ಧತಿಯನ್ನು ನಾವು ಅನುಸರಿಸಿದರೆ ನಮ್ಮ ಆರೋಗ್ಯವು ಹೆಚ್ಚಾಗಿ ಸಮೃದ್ಧಿಯಾಗಿರುತ್ತದೆ ಎಂಬುದನ್ನು ವರ್ಣಿಸಿದ್ದಾರೆ.
‘ಭಾರತೀಯ ಸಂಪ್ರದಾಯಗಳ ಕಣ್ಣರೆ’ ಲೇಖನದಲ್ಲಿ ಭಾರತದಲ್ಲಿ ಆನೇಕ
ಸಂಪ್ರದಾಯಗಳ ಬಗ್ಗೆ ಹೇಳಿದ್ದಾರೆ. ಜೊತೆಯಲ್ಲಿ ಈಗಿನ ಯುವ ಪೀಳಿಗೆಯ ಯಾವರೀತಿ ನಮ್ಮ ಸಂಪ್ರದಾಯಗಳನ್ನು ಮರೆಯುತ್ತಿದ್ದಾರೆ, ಸಂಪ್ರದಾಯಗಳನ್ನು ನಾವು ಹೇಗೆ ಉಳಿಸಬೇಕು ಹಾಗೂ ಮುಂದಿನ ಪೀಳಿಗೆಗೆ ಯಾವ ರೀತಿ “ಸಂದೇಶ” ನೀಡಬೇಕೆಂಬುದನ್ನು ಲೇಖಕರು, ಈ ಲೇಖನದಲ್ಲಿ ಚಿತ್ರಿಸಿದ್ದಾರೆ.
‘ಗುರುಭಕ್ತಿ’ ಲೇಖನದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಗುರುವಿಗೆ ಗೌರವ ನೀಡಬೇಕು, ಗುರುವಿಲ್ಲದೆ ಯಾವುದೇ ವಿದ್ಯಾರ್ಥಿ ಗುರಿ ತಲುಪಲು ಆಗುವುದಿಲ್ಲ, ಗುರುಗೆ ನಾವು ಭಕ್ತಿ ಸಲ್ಲಿಸಿದರೆ ನಮ್ಮ ಬಾಳು ಬಂಗಾರವಾಗುತ್ತದೆ. ಗುರುವಿಗೆ ನೋವು ಮಾಡದೆ ಗುರುವಿನ ಹತ್ತಿರ ವಿದ್ಯೆ ಮತ್ತು ಬುದ್ದಿಯನ್ನು ಪಡೆದು ಉನ್ನತ ಸ್ಥಾನಗಳಿಗೆ ತಲುಪಬೇಕು. ಜೊತೆಯಲ್ಲಿ ವಿದ್ಯಾದಾನ ಮಾಡಿದ ಗುರುವನ್ನು ಎಂದಿಗೂ ಮರೆಯಬಾರದು ಎಂಬುದನ್ನು ಈ ಲೇಖನದಲ್ಲಿ ಹೇಳುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
‘ತುಳಸಿಯ ಮಹತ್ವ’ ಈ ಲೇಖನದಲ್ಲಿ ಲೇಖಕರು ತುಳಸಿ ಗಿಡದ ಬಗ್ಗೆ ತುಂಬಾ ಸರಳವಾಗಿ ವರ್ಣಿಸಿದ್ದಾರೆ. ತುಳಸಿ ಗಿಡಗಳಿಂದ ಆಗುವ ಉಪಯೋಗಗಳು ಹಾಗೂ ಮನೆಯ ಮುಂದೆ ತುಳಸಿ ಗಿಡವನ್ನು ಏಕೆ ನೀಡಬೇಕು ಎಂಬುದನ್ನು ಈ ಲೇಖನದಲ್ಲಿ ಲೇಖಕರು ಹೇಳಿದ್ದಾರೆ.
‘ದಾಂಪತ್ಯ’ ಲೇಖನದಲ್ಲಿ ಇಂದಿನ ದಿನಗಳಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ನಡೆಯುತ್ತಿರುವ ಜಗಳಗಳು ಹಾಗೂ ದೂರವಾಗುತ್ತಿರುವ ಪ್ರೀತಿಯ ಬಗ್ಗೆ ವರ್ಣಿಸಿದ್ದಾರೆ. ದಾಂಪತ್ಯದಲ್ಲಿ ಎಂದಿಗೂ ಜಗಳಗಳು ನಡೆದರೆ ಬೇಗ ಒಂದಾಗಬೇಕು. ಯಾರೇ ತಪ್ಪು ಮಾಡಿದರೂ ಹೊಂದಿಕೊಂಡು ನಡೆಯಬೇಕು. ಜಗಳಗಳು ಕೇವಲ ಕ್ಷಣಿಕವಾಗಬೇಕು ಎಂಬುದನ್ನು ಲೇಖಕರು ಹೇಳಿದ್ದಾರೆ.
‘ಕರ್ಮ ಫಲ’ ಲೇಖನದಲ್ಲಿ ಕರ್ಮಫಲ ಎಂದಿಗೂ ಮನುಷ್ಯನನ್ನು ಬಿಡುವುದಿಲ್ಲ. ನಾವು ತಪ್ಪು ಮಾಡಿದರೆ ನಮಗೆ ಕರ್ಮ ಎಂಬುದು ಎಂದಿಗೂ ಬಿಡುವುದಿಲ್ಲ. ತಪ್ಪು ಮಾಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕು. ಮಾಡಿದ ತಪ್ಪು ಅರ್ಥೈಸಿಕೊಂಡು ತೊಂದರೆ ಆದವರ ಹತ್ತಿರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕರ್ಮ ಎಂಬುದು ನಮ್ಮನ್ನು ಯಾವಾಗಲೂ ಬಿಡುವುದಿಲ್ಲ ಎಂಬುದನ್ನು ಲೇಖಕರು ಈ ಲೇಖನದಲ್ಲಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.
ಹೀಗೆ ಲೇಖಕರು ಈ ‘ನೆನಪುಗಳ ಖಾತೆ’ ಎಂಬ ಪುಸ್ತಕದಲ್ಲಿ ಸರಿಸುಮಾರು 41 ಲೇಖನಗಳನ್ನು ಬರೆದಿದ್ದಾರೆ. ಎಲ್ಲಾ ಲೇಖನದಲ್ಲೂ ಸಮಾಜದ ಅಂಕುಡೊಂಕುಗಳ ಬಗ್ಗೆ ತುಂಬಾ ಸರಳವಾಗಿ ಮತ್ತು ಸುಂದರವಾಗಿಯೇ ಚಿತ್ರಿಸಿ ಕೊಟ್ಟಿದ್ದಾರೆ. ಈ ಲೇಖನಗಳು ಯುವ ಪೀಳಿಗೆಗಳಿಗೆ ಹೊಸ ಸಂದೇಶ ಮತ್ತು ಮರೆಯುತ್ತಿರುವ ಸಂಪ್ರದಾಯಗಳನ್ನು ನೆನಪಿಸಿಕೊಳ್ಳುವ ದಾರಿಯ ಕೈಪಿಡಿಯಾಗಿದೆ. ಈ ಪುಸ್ತಕವನ್ನು ಯುವಕರು ಓದಿದರೆ ಅವರ ಸ್ಪೂರ್ತಿ ಜಗತ್ತಿಗೆ ಹೊಸ ಆಧ್ಯಯನದ ಆಸರೆಯ ಹಾದಿಯೋ ಸಿಗಬಹುದು ಎಂದು ನಾನಾದರೂ ಭಾವಿಸುತ್ತೇನೆ. ಕಥೆಗಳ ಮೂಲಕ ಲೇಖನ ಬರೆಯುವ ಪ್ರಯತ್ನ ಮಾಡಿರುವ ವಿಶ್ವಾಸ್ ಅವರು ಹೀಗೆ ಇನ್ನಷ್ಟು ಅಧ್ಯಾಯನ ಮಾಡಿ ಸುಂದರವಾದ ಲೇಖನಗಳನ್ನು ಬರೆದರೆ ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಬಹುದು. ಈ ಲೇಖನಗಳ ಮೂಲಕ ಯುವಕರಿಗೆ ಸಂದೇಶವನ್ನು ನೀಡಿ ಸಾಹಿತ್ಯದ ಗೀಳನ್ನು ಹೆಚ್ಚಿಸಬಹುದು. ಹೆಚ್ಚಿನ ಅಧ್ಯಯನ ಮಾಡಿ ಇನ್ನು ಸುಂದರವಾದ ಲೇಖನಗಳನ್ನು ವಿಶ್ವಾಸ್ ರವರು ಬರೆಯಲಿ ಎಂದು ಈ ಮೂಲಕ ಅವರಿಗೆ ಕಿವಿ ಮಾತನ್ನು ಹೇಳುತ್ತೇನೆ. ಇವರ ಈ ಪುಸ್ತಕಕ್ಕೆ ಶುಭವಾಗಲಿ ಎಂದು ಶುಭಕೋರುತ್ತಾ ಪ್ರೀತಿ ಪೂರಕ ಆಶೀರ್ವಾದವನ್ನು ನೀಡುತ್ತಿದ್ದೇನೆ. ಶುಭವಾಗಲಿ.
ಡಿ.ಟಿ. ದೇವರಾಜೇಗೌಡ
