ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ನೋವಲ್ಲು ಅರಳಿದ ನಗು

ನೋವಲ್ಲು ಅರಳಿದ ನಗು ಕಹಿ ನೆನಪುಗಳು
ಬಾಲ್ಯದಿ ಮಕ್ಕಳೊಡನೆ ಆಟವಾಡಿದ ಕ್ಷಣಗಳು
ಮರೆಯಲಾಗದ ಎಷ್ಟೋ ಮೂಕ ವೇದನೆಗಳು
ಒಡಹುಟ್ಟಿದವರ ಮಮತೆಯ ಮಡಿಲುಗಳು!!
ಸಂಸಾರ ಗೂಡು ಹೊಡೆದು ಕವಲುಗಳಾಗಿದೆ
ನಗುವಿನ ಮನೆ ಜೋಕಾಲಿ ಮಾಯವಾಗಿದೆ
ಅಂತರಳದಲ್ಲಿ ನೋವುಗಳು ಜಾಸ್ತಿಯಾಗಿದೆ
ಮನುವು ಕಾದಿರಲು ದಣಿದು ಗಾಯವಾಗಿದೆ!!
ಈ ಜೀವ ಬದುಕಬೇಕೆಂದು ಹತೋರೆದಿದೆ
ಕತ್ತಲೆ ಕೋಣೆಗೆ ಮೇಣದ ಬತ್ತಿ ಕರಗಿರಲು
ಭರವಸೆಯ ಬೆಳಕು ಕತ್ತಲೆ ಬಾಳಲ್ಲಿ ಚೆಲ್ಲಲು
ಕಷ್ಟ ಸುಖದ ಅನುಭವ ಮುಗಿಲು ಮುಟ್ಟಿದೆ!!
ಬದುಕಿನ ಬವಣೆಗಳ ಸಾಗರ ಏರುಪೇರಾಗಿದೆ
ಮೋಸದ ಮುಖವಾಡಗಳು ಕಳಚಿ ಬಿಳುತಿದೆ
ಜೀವನದಲ್ಲಿ ನಗುವಿನ ಉಯ್ಯಾಲೆ ತೂಗುತಿದೆ
ಸುಂದರ ನಗು ನಕ್ಷತ್ರದಂತೆ ಮಿನುಗುತಿದೆ!!
ನೂರು ಕಷ್ಟ ಬರಲಿ ತಾಳ್ಮೆ ಸಹನೆ ಇರಬೇಕು
ಮನುಷ್ಯನ ಬಾಳಲ್ಲಿ ಸಮಗಮ ವಿರಲೇಬೇಕು
ಎಲ್ಲರೂ ಬೆರೆತು ನಲಿವನು ಹಂಚ್ಚಿಕೊಳ್ಳಬೇಕು
ಹಾರೈಸುವ ಕೈಗಳು ನಮ್ಮ ಜೊತೆಗಿರಬೇಕು!!
ಕಾವ್ಯ ಪ್ರಸಾದ್
