ಈರಪ್ಪ ಬಿಜಲಿ.ಕೊಪ್ಪಳ ಅವರ ಗಜಲ್

ಬದುಕಿನ ಕಾವಲಿಯಲಿ ಬೆಂದು ನೊಂದ ಭಕ್ತನಿಗೆ ಸುಖ ತಂದೀತೇ ಶಿವರಾರಾತ್ರಿ
ಬಿದ್ದು ಹೋಗುವ ಮರಕ್ಕೆ ಎದ್ದು ನಿಲ್ಲಲು ನವ ಚೈತನ್ಯವ ನೀಡೀತೇ ಶಿವರಾತ್ರಿ ||೧||

ತ್ರಿಶೂಲ ಧಾರಿ ಮುಕ್ಕಣ್ಣನ ಲೀಲಾ ವಿನೋದಗಳ ಕೊಂಡಾಡುವ ಮಹಾರಾತ್ರಿ
ತ್ರಿದಲ ಬಿಲ್ವಪತ್ರೆ ಅರ್ಪಿಸೇ ತ್ರಿಜನ್ಮ ಪಾಪಗಳ ನಾಶ ಮಾಡೀತೇ ಶಿವರಾತ್ರಿ ||೨||

ದುಷ್ಟ ದಕ್ಷಬ್ರಹ್ಮನು ಕೈಲಾಸದೊಡೆಯ ಶಿವನಿಗೆ ಅವಮಾನಿಸಲು ಮುಂದಾದನೇ
ಸತಿಗೌರಿಗೆ ಪಿತನಿಗಿಂತ, ಪತಿ ವಾಕ್ಯದ ಪಾಲನೇ ಮೆಲೆಂದು ಸಾರೀತೇ ಶಿವರಾತ್ರಿ||೩||

ಹರನೊಲಿದರೆ ತಿರುಕನು ಅರಸನಾಗಿ ರಾಜ್ಯಭಾರ ಮಾಡಬಲ್ಲನಲ್ಲವೇ
ಕರಮುಗಿದು ನಿರ್ಮಲ ಭಾವದಿ ಬೇಡಲು ಮನಗಳ ಕಷ್ಟವ ನುಂಗೀತೇ ಶಿವರಾತ್ರಿ||೪||

ಜೀವನದ ಏಳು ಬೀಳುಗಳ ತಿರುವುಗಳಲ್ಲಿ ದಾರಿಕಾಣದೆ ಬಿಜಲಿ ಕಂಗೆಟ್ಟಿರುವನು
ಜ್ಯೋತಿರ್ಲಿಂಗದ ತ್ರಿನೇತ್ರನ ತೇಜಸ್ಸು ಸತ್ಸಂಗದ ಹಾದಿಯ ತೋರೀತೇ ಶಿವರಾತ್ರಿ ||೫||


Leave a Reply

Back To Top