‘ಕನ್ನಡ ನಾಡು ನುಡಿ, ಬದುಕು ಮತ್ತು ಬರಹ : ಚಿಂತನಾ ಲಹರಿ’ ಡಾ.ಯಲ್ಲಮ್ಮ .ಕೆ ಅವರಿಂದ

‘ಬದುಕನ್ನು ನೀಡಿದ ದೇವರು ಬದುಕಿನ ಅರ್ಥವನ್ನು ತಿಳಿಯಲು ಬವಣೆಯನ್ನೂ ನೀಡಿದ’ – ಈ ಬವಣೆಯನ್ನು ನೀಗಿಸುವತ್ತ ತನ್ನ ಲಕ್ಷ್ಯ ಹರಿಸಿದ ಮನುಷ್ಯ ಅರ್ಥವನ್ನು ತಿಳಿಯದೇ ಹೋದ. ಬದುಕಿನ ದಟ್ಟ ಅನುಭವಗಳನ್ನುಂಡು ನೊಂದು-ಬೆಂದು ತನ್ನೊಳಗಿನ ಬೇಗುದಿಯನ್ನು ಹೊರಗೆಡುವಲು ಹೊರದಾರಿ ಯೊಂದನ್ನು ಕಂದುಕೊಂಡ ಮೊದ್ಮೊದಲು ಕೈಸನ್ನೆ ಬಾಯ್ಸನ್ನೆ, ಕಿರುಚುತ್ತ, ಅರಚುತ್ತ ಸಾಗಿ ಮಾತು ಹೊರಹೊಮ್ಮಿತು, ಮೌಖಿಕವಾಗಿ ಹುಟ್ಟಿ-ಬೆಳೆದು ಭಾಷಾ ಮಾಧ್ಯಮ ಮುಖೇನ ಅದು ಬರಹರೂಪಕ್ಕಿಳಿದು, ಲಿಖಿತರೂಪದಿ ತನ್ನ ಅಸ್ತಿತ್ವವನ್ನು ಕಾಪಿಟ್ಟುಕೊಂಡಿತು.

ಸಾಹಿತ್ಯ ಎಂದರೇನು? ‘ಸ’ಹಿತವಾದುದ್ದನ್ನು ಸಾಹಿತ್ಯವೆಂದು ಸಾಮಾನ್ಯ ಅರ್ಥದಲ್ಲಿ ತಿಳಿಯಲಾಗಿದೆಯಾದರೂ ಹಿತವಲ್ಲದ್ದು ಸಾಹಿತ್ಯವಲ್ಲವೇ? ಎಲ್ಲರಿಗೂ ಹಿತವಾಗುವಂತೆ ಬರೆಯಲು ಸಾಧ್ಯವೇ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಹಿನ್ನಲೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಆಯಾ ಕಾಲಘಟ್ಟದ ಮನೋಧೋರಣೆಗಳು – ಮತ, ಪಂಥ, ಧರ್ಮಿಯ, ರಾಜಕೀಯ ಹಾಗೂ ಸಾಮಾಜಿಕ ಜನಜೀವನದ ಸಂಗತಿಗಳ ಅಭಿವ್ಯಕ್ತಿಗೆ ಸಾಹಿತ್ಯವು ಮುಖ್ಯ ಭೂಮಿಕೆಯಾಯಿತು.

ವೇದೋಪನಿಷತ್ ಗಳಾದಿಯಾಗಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು ಒಳಗೊಂಡಂತೆ ರಾಜಾಶ್ರಯದಿ ಕನ್ನಡದಲ್ಲಿ ಪಂಪನು ತನ್ನ ಆಶ್ರಯದಾತನಾದ ಚಾಲುಕ್ಯ ಅರಸ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ‘ವಿಕ್ರಮಾರ್ಜುನ ವಿಜಯಂ’ ಕೃತಿಯನ್ನು, ರನ್ನನು ತನ್ನ ಆಶ್ರಯದಾತನಾದ ಸತ್ಯಾಶ್ರಯ ಇರಿವ ಬೆಡಂಗನನ್ನು ಭೀಮನಿಗೆ ಸಮೀಕರಿಸಿ ‘ಗದಾಯುದ್ಧ’ವನ್ನು, ಬರೆದಿರುವುದನ್ನು ಕಾಣಬಹುದು, ಮುಂದೆ ಹನ್ನೆರಡನೆ ಶತಮಾನದಿ ಜನಸಾಮಾನ್ಯರ ಮುಖವಾಣಿಯೆಂಬಂತೆ ವಚನಸಾಹಿತ್ಯ ಬೆಳೆದು ಅರಮನೆ ಎದಿರು ಮಹಾಮನೆಯೇ ತಳೆದು ಕಲ್ಯಾಣದಿ ಕ್ರಾಂತಿಯನ್ನೇ ಹುಟ್ಟುಹಾಕುವುದರ ಮೂಲಕ ‘ಸಮತಾವಾದ’ಕ್ಕೆ ಜಾಗತಿಕ ಮನ್ನಣೆಯನ್ನು ಒದಗಿಸಿಕೊಟ್ಟಿತು ಎಂದರೆ ತಪ್ಪಾಗಲಿಕ್ಕಿಲ್ಲ, ಮುಂದೆ ಇದರ ಮುಂದುವರಿಕೆ ಎಂಬಂತೆ ದಾಸಸಾಹಿತ್ಯವು ಭಕ್ತಿಯ ಜೊತೆಗೆ ವಿಡಂಬನೆಯ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತು ಸಾಗಿತೆನ್ನಬಹುದು. ಯುರೋಪಿಯನ್ನರ ಸಾಹಸ ಪ್ರವೃತ್ತಿಯ ದೆಸೆಯಿಂದ ಭೂ-ಶೋಧನೆಗಳ ಮೂಲಕ ಹೊಸ ದೇಶಗಳ ಅನ್ವೇಷಣೆ, ಸಮುದ್ರಮಾರ್ಗವಾಗಿ ವ್ಯಾಪಾರಕ್ಕಾಗಿ ಭಾರತಕ್ಕೆ ಆಗಮನ, ಇಲ್ಲಿನ ಅರಾಜಕತೆಯ ಲಾಭಪಡೆದು ಅಧಿಪತ್ಯ ಸ್ಥಾಪಿಸಿದ್ದು ಗತಕಾಲದ ಇತಿಹಾಸ.

ಈ ಮುಖೇನ ಪಾಶ್ಯಾತ್ಯರ ಸಂಸರ್ಗದ ಪ್ರಭಾವು ಭಾರತೀಯ ಭಾಷೆಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದು, ಇದಕ್ಕೆ ಕನ್ನಡ ಭಾಷೆಯೂ ಹೊರತಾಗಿಲ್ಲ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಿ ನವೋದಯ, ಪ್ರಗತಿಶೀಲ, ನವ್ಯ, ದಲಿತ – ಬಂಡಾಯ ಹಾಗೂ ಸ್ತ್ರೀವಾದಿ ಸಾಹಿತ್ಯ ಎಂಬಿತ್ಯಾದಿ ಅಭಿವ್ಯಕ್ತಿಯ ನೆಲೆಯಲ್ಲಿ ಅಧ್ಯಯನ ಮಾಡುವುದನ್ನು ಕಾಣುತ್ತೇವೆ.

ಕಾವ್ಯ ಹುಟ್ಟುವ ಬಗೆ ;

ಕಾವ್ಯ ಅಥವಾ ಕವಿತೆ ಎಂದರೆ ಕಟ್ಟುವುದಲ್ಲ ಹುಟ್ಟುವುದು..! ಅದೆಷ್ಟು ಸ್ವಾಭಾವಿಕ ಪ್ರಕ್ರಿಯೆ ಎಂಬುದನ್ನು ನೋಡುವುದಾದರೆ –

ಕವಿತೆ ಎಂದರೆ..?

“ಮೊಸರು
ಕಡೆದು
ಮಜ್ಜಿಗೆ
ಮಾಡಿ
ಬೆಣ್ಣೆ
ತೆಗೆದು
ಕಾಸಿ-
ಸೋಸಿ
ತೆಗೆದ
ಮರಳು-
ಮರಳಾದ
ಘಮ-
ಘಮಿಸುವ
ತಿಳಿತುಪ್ಪ
ಈ –
ಕವಿತೆ”.

ರಾಜಾಶ್ರಿತ ಕವಿ ಪಂಪನು ರಾಜನ ಅಪೇಕ್ಷೆಯ ಮೆರೆಗೆ ಆರು ತಿಂಗಳಲ್ಲೊಂದು, ಮೂರು ತಿಂಗಳಲ್ಲೊಂದು ಕಾವ್ಯ ಬರೆದನೆಂದರೆ ಆತನಲ್ಲಿ ಕಾವ್ಯ ಹುಟ್ಟಿತೋ, ಕತ್ತಲ್ಪಟ್ಟಿತೋ? “ಆನು ಒಲಿದಂತೆ ಹಾಡುವೆ” ಎಂಬ ಬಸವಣ್ಣನವರ ನಿಲುವಿನ ಅಭಿವ್ಯಕ್ತಿ ಸ್ವಾತಂತ್ರ ರಾಜಾಶ್ರಿತ ಕವಿಗಳಿತ್ತೆ? ಯೋಚಿಸಬೇಕಿದೆ. ಮುಕ್ತವಾಗಿಲ್ಲದ್ದು ಸಾಹಿತ್ಯ ಹೇಗಾದೀತು..?

ಪ್ರಭಾವ ಮತ್ತು ಪ್ರೇರಣೆ ;

ಕುಮಾರವ್ಯಾಸನು ತನ್ನ ಕಾವ್ಯ ರಚನೆಯ ಕುರಿತಾಗಿ ಗದುಗಿನ ಶ್ರೀ ವೀರನಾರಾಯಣನೇ ಕವಿ, ನಾನು ಲಿಪಿಕಾರ ಎನ್ನುವಲ್ಲಿ, ಒದ್ದೆಬಟ್ಟೆ ಹಾರುತ್ತಲೇ ಬರೆವಣಿಗೆಯನ್ನು ಮೊಟುಕುಗೊಳಿಸುತ್ತಿದ್ದುದು, ರಾಷ್ಟ್ರಕವಿ ಕುವೆಂಪು ರವರು ಮಲೆನಾಡಿನ ಸೃಷ್ಟಿಯ ಸೊಬಗಿನ ನಡುವಿದ್ದು ಬರೆದದ್ದು, ತಮ್ಮ ಧರ್ಮಪತ್ನಿ ತೀರಿಹೋದಮೇಲೆ ಒಂದಕ್ಷರವು ಬರೆಯಲಾಗಲಿಲ್ಲ ಎಂಬ ಮಾತಿನಲ್ಲಿ, ಬಳ್ಳಾರಿಯಂತಹ ಕಡುಬಿಸಿಲಿನ, ಕರಿಜಾಲಿಯ ಪ್ರದೇಶದಲ್ಲಿದ್ದು ಹಾಸ್ಯ ಸಾಹಿತ್ಯವನ್ನು ಬರೆದ ಬೀಚಿ, ಇನ್ನು ದಲಿತ ಸಮುದಾಯದ ಧ್ವನಿಯಾಗಿಯೇ ಬಂಡಾಯ ಸಾಹಿತ್ಯ, ಕಾವ್ಯ ಜಗತ್ತಿಗೆ ಹೊಸ ಹಾದಿಯನ್ನು ತೋರಿದ ಸಿದ್ದಲಿಂಗಯ್ಯನವರ ಪ್ರಸಿದ್ಧ “ಹೊಲೆಮಾದಿಗರ ಹಾಡು” ಸಂಕಲನದ “ಇಕ್ರಲಾ ವದೀರ್ಲಾ ..” ಕವಿತೆಯ ಹಿಂದಿನ ಪ್ರಭಾವ, ಪ್ರೇರಣೆಯನ್ನು ನೋಡಲಾಗಿ ಕಾವ್ಯ – ಕವಿತೆ ಸಹಜವಾಗಿಯೂ ಅಸಹಜವಾಗಿಯೂ ಹುಟ್ಟಿಬಂದಿರುವುದನ್ನು ಕಾಣಬಹುದಾಗಿದೆ.

ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು, ನಿನ್ನ ಬಿಟ್ಟರೆ ನನಗಾರು ಇಲ್ಲವಯ್ಯ ಕೂಡಲಸಂಗಮದೇವಾ, ಹಾಲಲದ್ದು, ನೀರಲ್ಲದ್ದು

ಬಾಲ್ಯದಲ್ಲಿಯೇ ಪ್ರಾಖರ ವಿಚಾರವಾದಿ ಎನಿಸಿದ್ದ ಬಸವಣ್ಣ ತಂದೆ-ತಾಯಿ, ಹುಟ್ಟುಮನೆಯನ್ನು ತೊರೆದು ಹೋಗುವ ಸಂದರ್ಭದಿ ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಎಂಬಂತೆ ಈ ಮೇಲಿನ ವಚನಕ್ಕೆ ಪ್ರೇರಣೆಯಾಗಿರ ಬಹುದಾದ ಸಾಧ್ಯತೆಯನ್ನು ಗ್ರಹಿಸಬಹುದಾಗಿದೆ.
ಹಾಗೆಯೇ ಮಹಾಲಿಂಗ ರಂಗನ ಅನುಭವಾಮೃತದಲ್ಲಿ


ಸುಳಿದ ಬಾಳೆಯ ಹಣ್ಣಿನಂದದಿ
ಕೇಳಿದೆ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವು
ಗಳಿಸಿಕೊಂಡರೆ ಸಾಲದೇ ಸಂಸ್ಕೃತದಲ್ಲೇನಿದೆ?
ಎಂದು ಅರಿವಿನ ಮೂಲ ಮಾತೃಭೂಮಿಕೆಯಲ್ಲಿ ಎನ್ನುತ್ತಾನೆ.
ಕಾಣಿಕೆ : ಮೊದಲ ತಾಯಿ ಹಾಲು ಕುಡಿದು
ಲಲ್ಲೆಯಿಂದ ತೊರವಿ ನುಡಿದು
ಕೆಳಗೆ ಯಾರೊಡನೆ ಬೆಳೆದು ಬಂದ ಮಾತಾದಾವುದು
ನಲ್ಲೆಯೊಲ ತೆರೆದು ತಂದೆ ಮಾತಾದಾವುದು
ಸವಿಯ ಹಾಡು ,ಕಥ ಕಟ್ಟಿ
ಕಿವಿಯ ತೆರೆದು, ಕರುಳು ತಟ್ಟಿ
ನಿಮ್ಮ ಜನರು, ನಿಮ್ಮ ನಾಡು ಎನಿಸಿತಾವು…
——————————–

Leave a Reply

Back To Top